Just In
- 1 hr ago
ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಮಹೀಂದ್ರಾ ಥಾರ್ 5 ಡೋರ್ ವರ್ಷನ್
- 14 hrs ago
ಸ್ಟೈಲಿಶ್ ಲುಕ್ ಹೊಂದಿರುವ ಹೋಂಡಾ ಆಕ್ಟಿವಾ 6ಜಿ ಪ್ರೀಮಿಯಂ ಎಡಿಷನ್ ವಿಶೇಷತೆಗಳು
- 15 hrs ago
ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್ಫೀಲ್ಡ್ ಮೀಟಿಯೋರ್ 650
- 15 hrs ago
ಬಿಎಂಟಿಸಿ ಸೇರ್ಪಡೆಯಾಗಲಿವೆ 921 ಎಲೆಕ್ಟ್ರಿಕ್ ಬಸ್: ಟಾಟಾ ಮೋಟಾರ್ಸ್ ಪಾಲಾದ ಹೊಸ ಟೆಂಡರ್!
Don't Miss!
- News
ನೌಕರರ ವೇತನ ಬಾಕಿ; ಕೆಎಸ್ಆರ್ಟಿಸಿಗೆ ಹೈಕೋರ್ಟ್ ತರಾಟೆ
- Sports
IND vs ZIM: ರಾಷ್ಟ್ರಗೀತೆ ಸಂದರ್ಭದಲ್ಲಿ ರಾಹುಲ್ ಮೈದಾನದಲ್ಲಿ ನಡೆದುಕೊಂಡ ರೀತಿ; ವಿಡಿಯೋ ವೈರಲ್
- Lifestyle
ಕಾಲಿನಲ್ಲಿ ಈ 10 ಲಕ್ಷಣಗಳು ಕಂಡು ಬಂದರೆ ಹುಷಾರು! ಮಧುಮೇಹ ತುಂಬಾ ಹೆಚ್ಚಿದೆ ಎಂದು ಸೂಚಿಸುವ ಲಕ್ಷಣಗಳಿವು
- Movies
ಸಾಯಿ ಪಲ್ಲವಿ ಅಲ್ಲ, 'ಸಪ್ತಸಾಗರದಾಚೆ ಎಲ್ಲೋ' ಚಿತ್ರಕ್ಕೆ ಸಿಕ್ಕ ಹೊಸ ನಾಯಕಿ ಯಾರು?
- Technology
ಒನ್ಪ್ಲಸ್ ನಾರ್ಡ್ CE 2 ಲೈಟ್ 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!
- Finance
ಆಗಸ್ಟ್ 19: ಕಚ್ಚಾತೈಲ ಬೆಲೆ ಚೇತರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ
- Education
Entrance Exams After Class 12 : ಪಿಯು ನಂತರ ಯಾವೆಲ್ಲಾ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಬಹುದು ಗೊತ್ತಾ ?
- Travel
2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ
ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 150-160 ಸಿಸಿ ಬೈಕ್‌ಗಳಿವು..
ಭಾರತದಲ್ಲಿ ಗ್ರಾಹಕರ ಬೇಡಿಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಬೈಕ್‌ಗಳ ಆಯ್ಕೆಗಳಿವೆ. ಪ್ರತಿ ವಿಭಾಗದಲ್ಲಿಯು ಹಲವು ವಿಧದ ಆಯ್ಕೆಗಳಿವೆ. ಪ್ರತಿ ಖರೀದಿದಾರನು ವಿಭಿನ್ನ ಅವಶ್ಯಕತೆ ಮತ್ತು ಬಯಕೆಗಳನ್ನು ಹೊಂದಿರಬಹುದು. ಗ್ರಾಹಕರ ಅವಶ್ಯಕತೆ ಮತ್ತು ಬಯಕೆಗಳಿಗೆ ತಕ್ಕಂತೆ ವಿಭಿನ್ನ ಆಯ್ಕೆಗಳು ಕೂಡ ಇವೆ.

ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದ ಮತ್ತು ಅತಿ ಹೆಚ್ಚು ಮೈಲೇಜ್ ಅನ್ನು ಒದಗಿಸುವ ಬೈಕ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ಮಾಧ್ಯಮ ವರ್ಗದವರಿಗೂ ಕಡಿಮೆ ಬೆಲೆಯಲ್ಲಿ ಖರೀಸಬಹುದಾದ ಜನಪ್ರಿಯ ಬೈಕ್‌ಗಳ ಆಯ್ಕೆಗಳಿವೆ. ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ 150-160 ಸಿಸಿ ವಿಭಾಗ ಅತ್ಯುತ್ತಮ ಐದು ಬೈಕ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಹೋಂಡಾ ಯುನಿಕಾರ್ನ್
ಹೋಂಡಾ ಯುನಿಕಾರ್ನ್ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಂದಾಗಿದೆ. ಇದರ ಪ್ರಯಾಣಿಕ ಸ್ವಭಾವವು ಖರೀದಿದಾರರಿಗೆ ಸಾಕಷ್ಟು ಉಪಯುಕ್ತತೆಯನ್ನು ನೀಡುತ್ತದೆ. ಈ ಹೋಂಡಾ ಯೂನಿಕಾರ್ನ್ ಪ್ರಾಯೋಗಿಕತೆ ಮತ್ತು ಕಾರ್ಯಕ್ಷಮತೆಯನ್ನು ಪ್ಯಾಕ್ ಮಾಡುತ್ತದೆ. ಈ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋ ರೂಂ ಪ್ರಕಾರ ರೂ.1,02,533 ಆಗಿದೆ.

ಹೋಂಡಾ ಯುನಿಕಾರ್ನ್ ಬೈಕಿನಲ್ಲಿ 162.7 ಸಿಸಿ, ಸಿಂಗಲ್ ಸಿಲಿಂಡರ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 12.5 ಬಿಹೆಚ್ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 14 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೋಂಡಾ ಯೂನಿಕಾರ್ನ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ. ಇದರ ಬ್ರೇಕಿಂಗ್ ಸಿಸ್ಟಂಗಾಗಿ, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.

ಬಜಾಜ್ ಪಲ್ಸರ್ 150
ಬಜಾಜ್ ಪಲ್ಸರ್ 150 ಸಹ ದೀರ್ಘಕಾಲದವರೆಗೆ ಜನರ ನೆಚ್ಚಿನದಾಗಿದೆ. ಈ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋ ರೂಂ ಪ್ರಕಾರ ರೂ.1,03,731 ಆಗಿದೆ. ಈ ಬೈಕಿನಲ್ಲಿ 149.9 ಸಿಸಿ ಸಿಂಗಲ್ ಸಿಲಿಂಡರ್ ಮೋಟಾರ್ ಅನ್ನು ಪಡೆಯುತ್ತೀರಿ. ಈ ಎಂಜಿನ್ 13.8 ಬಿಹೆಚ್‍ಪಿ ಪವರ್ ಮತ್ತು 13.25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಬಜಾಜ್ ಪಲ್ಸರ್ 150 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಸ್ಪ್ರಿಂಗ್‌ಗಳನ್ನು ಹೊಂದಿದೆ. ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದ ಡ್ರಮ್/ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿರುತ್ತದೆ.

ಹೀರೋ ಎಕ್ಸ್‌ಟ್ರಿಮ್ 160ಆರ್
ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋ ರೂಂ ಪ್ರಕಾರ ರೂ.1,14,270 ಆಗಿದೆ. ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಕಂಪನಿಯ ಪ್ರೀಮಿಯಂ ಬೈಕ್ ಆಗಿದ್ದರೂ ಎಂಟ್ರಿ ಲೆವೆಲ್ ಮಾದರಿಯಂತೆ ಉತ್ತಮವಾಗಿ ಮಾರಾಟವಾಗುತ್ತಿದೆ.

ಬ್ರ್ಯಾಂಡ್‌ನಿಂದ ಪ್ರೀಮಿಯಂ 160 ಸಿಸಿ ಬಿಎಸ್ 6 ಎಂಜಿನ್ ಅನ್ನು ಈ ಬೈಕಿನಲ್ಲಿ ಅಳವಡಿಸಲಾಗಿದೆ. ಹೊಸ ಬೈಕಿಗೆ ಈ ಎಂಜಿನ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನಲ್ಲಿ 163 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಆಳವಡಿಸಿಸಲಾಗಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 15 ಬಿಹೆಚ್ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 14 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಎಂಜಿನ್ ನಲ್ಲಿ ಹೀರೋನ ಪ್ರೋಗ್ರಾಮ್ ಮಾಡಲಾದ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಸಹ ಹೊಂದಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚಿನ ದಕ್ಷತೆಯನ್ನು ಒದಗಿಸುತ್ತದೆ. ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಬೈಕ್ ಹಲವಾರು ಹೊಸ ಪ್ರೀಮಿಯಂ ಫೀಚರುಗಳನ್ನು ಹೊಂದಿದೆ. ಈ ಬೈಕಿನಲ್ಲಿ ಎಲ್‌ಇಡಿ ಹೆಡ್ ಲ್ಯಾಂಪ್, ಡಿಆರ್‌ಎಲ್ ಇಂಡೀಕೆಟರ್ ಮತ್ತು ಟೇಲ್ ಲೈಟ್ ಮತ್ತು ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಟಿವಿಎಸ್ ಅಪಾಚೆ RTR 160 4ವಿ
ಪ್ರಾಯಶಃ ಪಟ್ಟಿಯಲ್ಲಿರುವ ಅತ್ಯಂತ ವೈಶಿಷ್ಟ್ಯಪೂರ್ಣ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ ಈ ಅಪಾಚೆ RTR 160 4ವಿ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋ ರೂಂ ಪ್ರಕಾರ ರೂ.1,11,590 ಆಗಿದೆ.

ಈ ಬೈಕಿನಲ್ಲಿ 159.7 ಸಿಸಿ ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ ನಾಲ್ಕು-ವಾಲ್ವ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 17.39 ಬಿಹೆಚ್‍ಪಿ ಪವರ್ ಮತ್ತು 14.73 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವೈಶಿಷ್ಟ್ಯದ ಪಟ್ಟಿಯಲ್ಲಿ, LED DRL, ಗೇರ್ ಶಿಫ್ಟ್ ಸೂಚಕ ಮತ್ತು ಮೂರು ರೈಡ್ ಮೋಡ್‌ಗಳನ್ನು ಪಡೆಯುತ್ತೀರಿ ವಿಶೇಷ ಆವೃತ್ತಿಯ ರೂಪಾಂತರವು ಟಿವಿಎಸ್ ಸ್ಮಾರ್ಟ್‌ಎಕ್ಸನೆಕ್ಟ್ ವೈಶಿಷ್ಟ್ಯ, ಹೊಂದಾಣಿಕೆ ಕ್ಲಚ್ ಮತ್ತು ಮುಂಭಾಗದ ಬ್ರೇಕ್ ಲಿವರ್‌ನೊಂದಿಗೆ ಬರುತ್ತದೆ.

ಯಮಹಾ ಎಫ್‌ಜೆಡ್ ಎಸ್
ಈ ಯಮಹಾ ಎಫ್‌ಜೆಡ್ ಎಸ್ ಬೈಕಿನಲ್ಲಿ ದೆಹಲಿ ಎಕ್ಸ್ ಶೋ ರೂಂ ಪ್ರಕಾರ ರೂ.1,19,400 ಆಗಿದೆ. ಈ ಬೈಕಿನಲ್ಲಿ 149 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 12.2 ಬಿಹೆಚ್‍ಪಿ ಪವರ್ ಮತ್ತು 13.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,