Just In
Don't Miss!
- Sports
Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್
- Movies
ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ಬಂದ ಆಮಿರ್ ಖಾನ್: 25 ಲಕ್ಷ ರೂ. ದೇಣಿಗೆ!
- News
ಮೊಟ್ಟೆ ಕೊಡಲು ಕಾಸಿಲ್ಲ, ಶಿಕ್ಷಣ ಸಚಿವರ ಜಾಲತಾಣಕ್ಕೆ ಇದೆಯೇ?: ಕಾಂಗ್ರೆಸ್ ಟೀಕೆ
- Finance
ಜೂ.28ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Lifestyle
ಆಷಾಢ ಮಾಸ 2022: ಆಷಾಢದಲ್ಲಿ ಗರ್ಭವತಿಯಾದರೆ ಅಶುಭ ಎನ್ನಲು ವೈಜ್ಞಾನಿಕ ಕಾರಣ ಇದೇ ನೋಡಿ
- Technology
Reliance Jio: ಮುಖೇಶ್ ಅಂಬಾನಿ ರಾಜೀನಾಮೆ; ಆಕಾಶ್ ಅಂಬಾನಿ ನೂತನ ಸಾರಥಿ!
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಸೆಲ್ಫ್ ಸ್ಟಾರ್ಟ್, ಕಿಕ್ಕರ್ ಇಲ್ಲದೇ ಬೈಕ್ ಅನ್ನು ಸುಲಭವಾಗಿ ಸ್ಟಾರ್ಟ್ ಮಾಡುವುದು ಹೇಗೆ?
ದ್ವಿಚಕ್ರ ವಾಹನಗಳನ್ನು ಸ್ಟಾರ್ಟ್ ಮಾಡಲು ವಾಹನ ತಯಾರಕರು ಮೊದಲಿನಿಂದಲೂ ಕಿಕ್ಕರ್ ಅನ್ನು ಪ್ರಮುಖ ಸಾಧನವನ್ನಾಗಿ ನೀಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಸೆಲ್ಫ್ ಸ್ಟಾರ್ಟ್ ಎಂಬ ವೈಶಿಷ್ಟ್ಯವು ದ್ವಿಚಕ್ರ ವಾಹನ ವಿಭಾಗದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿತು. ಇದೀಗ ಪ್ರತಿ ವಾಹನದಲ್ಲೂ ಸೆಲ್ಫ ಸ್ಟಾರ್ಟ್ ಎಂಬುದು ಅನಿವಾರ್ಯ ಆಯ್ಕೆಯಾಗಿದೆ.

ಕಿಕ್ಕರ್ ಹಾಗೂ ಸೆಲ್ಫ್ ಸ್ಟಾರ್ಟ್ ಇಲ್ಲದೇ ವಾಹನಗಳು ಸ್ಟಾರ್ಟ್ ಆಗುವುದಿಲ್ಲ. ಈ ಎರಡು ವೈಶಿಷ್ಟ್ಯಗಳು ವಾಹನಗಳಿಗೆ ಹೃದಯವಿದ್ದಂತೆ ಹಾಗಾಗಿ ಸವಾರರಿಗೆ ಒಂದಿಲ್ಲದೇ ಮತ್ತೊಂದು ಆಯ್ಕೆ ಎಂಬಂತೆ ವಾಹನ ನಿಂತಾಗ ಯಾವುದೇ ಸಮಸ್ಯೆ ಇಲ್ಲದೇ ಪ್ರಯಾಣವನ್ನು ಮುನ್ನಡೆಸುತ್ತಾರೆ. ಒಂದು ವೇಳೆ ಈ ಎರಡು ಕೆಟ್ಟು ನಿಂತರೆ ವಾಹನವನ್ನು ಬದಿಗೆ ನಿಲ್ಲಿಸುವುದೊಂದೇ ದಾರಿ.

ಇಂದು ಹೆಚ್ಚಿನ ಬೈಕ್‌ಗಳು ಸೆಲ್ಫ್ ಸ್ಟಾರ್ಟ್ ವೈಶಿಷ್ಟ್ಯವನ್ನು ಹೊಂದಿವೆ. ಆದರೆ ಕೆಲವು ವರ್ಷಗಳ ಹಿಂದೆ ಸೆಲ್ಫ್ ಸ್ಟಾರ್ಟ್ ಸೌಲಭ್ಯಗಳು ಇರಲಿಲ್ಲ. ಆದರೆ ಈಗ ಒಂದು ಬಟನ್ ಒತ್ತುವ ಮೂಲಕ ವಾಹನವನ್ನು ಸ್ಟಾರ್ಟ್ ಮಾಡಬಹುದು. ಕೆಲವು ಬೈಕುಗಳಿಗೆ ಕಿಕ್ಕರ್ ವೈಶಿಷ್ಟ್ಯವನ್ನು ಮಾತ್ರ ಹೊಂದಿರುತ್ತವೆ. ಅಂತೆಯೇ ಕೆಲವು ಬೈಕ್‌ಗಳಲ್ಲಿ ಸೆಲ್ಫ್ ಮಾತ್ರ ಇರುತ್ತದೆ.

ಉದಾಹರಣೆಗೆ 200 ಸಿಸಿಗಿಂತ ಹೆಚ್ಚಿನ ಬೈಕ್‌ಗಳಲ್ಲಿ ಕಿಕ್ಕರ್ ಕಾಣಿಸುವುದಿಲ್ಲ. ಸೆಲ್ಫ್ ಸ್ಟಾರ್ಟ್ ಏಕೈಕ ಆಯ್ಕೆಯಾಗಿರುತ್ತದೆ. ಬ್ಯಾಟರಿ ಸಮಸ್ಯೆಯಿಂದ ರಸ್ತೆಯ ಮಧ್ಯದಲ್ಲಿ ಇವು ನಿಂತರೆ ಬೈಕ್‌ಗಳನ್ನು ಎಂದಿಗೂ ಸ್ಟಾರ್ಟ್ ಮಾಡಲಾಗುವುದಿಲ್ಲ. ಈ ಸಮಸ್ಯೆ ಅನೇಕರಿಗೆ ಅನುಭವ ಕೂಡ ಆಗಿರುತ್ತದೆ.

ಹಲವರು ಬೈಕ್ ಅನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಅಥವಾ ಬ್ಯಾಟರಿಯ ಬಗ್ಗೆ ಕಾಳಜಿ ವಹಿಸದಿದ್ದರೆ ಈ ಸಮಸ್ಯೆ ಉಂಟಾಗುತ್ತದೆ. ಇಂತಹ ಸಮಸ್ಯೆ ಎದುರಾದಾಗ ಬೈಕ್ ಸ್ಟಾರ್ಟ್ ಮಾಡುವುದು ಹೇಗೆ ಎಂದು ತಿಳಿಯದೆ ನಡು ರಸ್ತೆಯಲ್ಲೇ ಗೊಂದಲಕ್ಕೊಳಗಾಗುತ್ತಾರೆ. ಇಂತಹ ಸಂದರ್ಭ ಬಂದರೆ ಹಲವರು ಬೈಕ್ ತಳ್ಳಿಕೊಂಡು ಹೋಗುತ್ತಾರೆ.

ಇಲ್ಲವೇ ಕೆಲ ಬುದ್ಧಿವಂತರು ಇಳಿಜಾರು ಪ್ರದೇಶಕ್ಕೆ ಕೊಂಡೊಯ್ದು ಬೈಕನ್ನು ಇಳಿಜಾರಿನ ಮೂಲಕ ತಂದು ಗೇರ್ ಹಾಕಿ ಸ್ಟಾರ್ಟ್ ಮಾಡುತ್ತಾರೆ. ಇದು ಕೆಲವೊಮ್ಮೆ ವೇಗ ಹೆಚ್ಚಿದ್ದಾಗ ಕ್ಲಚ್ ಒಮ್ಮೆಲೆ ಬಿಟ್ಟರೆ ವಾಹನದ ಗೇರ್‌ಬಾಕ್ಸ್‌ಗೆ ಸಮಸ್ಯೆಯಾಗಬಹುದು. ಹಾಗಾಗಿ ಬೈಕ್ ಅನ್ನು ನಿಂತಲ್ಲಿಯೇ ನಿಲ್ಲಿಸಿ ಸ್ಟಾರ್ಟ್ ಮಾಡುವುದು ಹೇಗೆ ಎಂಬುದನ್ನು ಈಗ ತಿಳಿಯೋಣ.

ವಿಷಯಕ್ಕೆ ಬರುವುದಾದರೆ ನಿಮ್ಮ ಬೈಕ್‌ನಲ್ಲಿ ಸೆಲ್ಫ್ ಸ್ಟಾರ್ಟ್ ಕೆಲಸ ಮಾಡದೇ ಇದ್ದಾಗ, ಬೈಕ್‌ನಲ್ಲಿ ಕಿಕ್ಕರ್ ಕೂಡ ಇಲ್ಲದೇ ಇದ್ದಾಗ ಬೈಕ್ ಅನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಟೆಕ್ನಿಕ್ ಇದೆ. ಈ ತಂತ್ರವು ತುಂಬಾ ಸರಳವಾದದ್ದು. ಇದಕ್ಕಾಗಿ ನೀವು ದೊಡ್ಡದಾಗಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ.

ಬೈಕ್ ಅನ್ನು ಒಂದು ಸ್ಥಳದಲ್ಲಿ ನಿಲ್ಲಿಸುವ ಮೂಲಕ ಸ್ಟಾರ್ಟ್ ಮಾಡಬಹುದು. ಬೈಕ್ ತಳ್ಳುವುದಕ್ಕಿಂತ ಈ ರೀತಿಯ ಟೆಕ್ನಿಕ್ ಮಾಡಿದರೆ ಬೈಕ್ ವೇಗವಾಗಿ ಸ್ಟಾರ್ಟ್ ಆಗುತ್ತದೆ. ಅನಿವಾರ್ಯ ಸಮಯದಲ್ಲಿ ಬಳಸಲು ಮಾತ್ರ ಈ ಟೆಕ್ನಿಕ್ ಅನ್ನು ಒದಗಿಸುತ್ತಿದ್ದೇವೆ. ಇದನ್ನು ದುರ್ಬಳಕೆ ಮಾಡಿಕೊಳ್ಳದಿರಿ.

ಕಿಕ್ಕರ್ ಇಲ್ಲದ ಸಂದರ್ಭದಲ್ಲಿ ಬೈಕ್ ಸ್ಟಾರ್ಟ್ ಮಾಡಬೇಕೆಂದರೆ ಬೈಕ್ ಅನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಬೇಕು. ಬೈಕ್ ಸೆಂಟರ್ ಸ್ಟ್ಯಾಂಡ್ ಹಾಕಿ. ಬೈಕ್ ನ ಹಿಂಬದಿಯ ಚಕ್ರ ನೆಲಕ್ಕೆ ತಾಗದಂತೆ ನಿಲ್ಲಿಸಬೇಕು. ಆಗ ಬೈಕ್ ಚಾಲನೆಯಲ್ಲಿದ್ದಾಗ ಚಕ್ರ ಎಷ್ಟು ವೇಗವಾಗಿ ತಿರುಗುತ್ತದೋ ಅಷ್ಟು ವೇಗವಾಗಿ ತಿರುಗಿಸಬೇಕು.

ನಂತರ ಬೈಕ್‌ನ ಕ್ಲಚ್ ಹಿಡಿದು ಬೈಕ್ ಅನ್ನು ಟಾಪ್ ಗೇರ್‌ನಲ್ಲಿ ಇರಿಸಿ. ನಂತರ ಕೇವಲ ಕ್ಲಚ್ ಅನ್ನು ಹಿಡಿದುಕೊಳ್ಳಿ ಮತ್ತು ಬೈಕಿನ ಹಿಂದಿನ ಚಕ್ರವನ್ನು ತಿರುಗಿಸಿ. ಇದನ್ನು ಮಾಡಲು ಇಬ್ಬರು ಇದ್ದರೆ ಕೆಲಸ ಸುಲಭವಾಗುತ್ತದೆ. ಬೈಕ್ ಚಕ್ರವು ವೇಗವಾಗಿ ತಿರುಗುವುದರಿಂದ ಕ್ಲಚ್ ನಿಧಾನವಾಗಿ ಬಿಡುಗಡೆಯಾಗಬೇಕು. ಆಗ ಬೈಕ್ ಸ್ಟಾರ್ಟ್ ಆಗುತ್ತದೆ.

ಈ ಪ್ರಕ್ರಿಯೆಯಲ್ಲಿ ನಾವು ಗಮನಿಸಬೇಕಾದ ಒಂದು ಅಂಶವಿದೆ. ಬೈಕಿನ ಚಕ್ರವನ್ನು ತಿರುಗಿಸುವಾಗ, ಬೈಕಿನ ಚೈನ್ ಬೈಕಿನ ಜೊತೆಗೆ ತಿರುಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದೇ ಸಮಯದಲ್ಲಿ ಬೈಕ್ ಟಾಪ್ ಗೇರ್‌ನಲ್ಲಿದ್ದರೆ ಮಾತ್ರ ಬೈಕ್ ಸ್ಟಾರ್ಟ್ ಮಾಡುವುದು ಸುಲಭ. ಗೇರ್ ಕಡಿಮೆಯಿದ್ದರೆ, ಚಕ್ರವು ವೇಗವಾಗಿ ತಿರುಗುತ್ತದೆ.