140 ಕಿ.ಮೀ ಪ್ರಯಾಣಿಸಲು 3 ರೂ. ವೆಚ್ಚ: ಹೆಚ್ಚಾಯ್ತು ಬೇಡಿಕೆ, ಒಂದೇ ದಿನದಲ್ಲಿ 200 ಇವಿಗಳ ಡೆಲಿವರಿ

ದಿನಕ್ಕೆ ಕೇವಲ 3 ರೂ. ಖರ್ಚು ಎಂದು ಹೇಳಲಾಗುವ ಎಲೆಕ್ಟ್ರಿಕ್ ಸ್ಕೂಟರ್‌ನ ಗ್ರಾಂಡ್ ಡೆಲಿವರಿ ನಡೆದಿದೆ. ಒಂದೇ ದಿನದಲ್ಲಿ ಬರೋಬ್ಬರಿ 200 ಇವಿಗಳ ಡೆಲಿವರಿ ನೀಡಲಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಟಿವಿಎಸ್ ಐಕ್ಯೂಬ್ ಕೂಡ ಒಂದು. ಟಿವಿಎಸ್ ಈ ಎಲೆಕ್ಟ್ರಿಕ್ ಸ್ಕೂಟರ್‌ನ ನವೀಕರಿಸಿದ 2022 ಮಾದರಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

140 ಕಿ.ಮೀ ಪ್ರಯಾಣಿಸಲು 3 ರೂ. ವೆಚ್ಚ: ಹೆಚ್ಚಾಯ್ತು ಬೇಡಿಕೆ, ಒಂದೇ ದಿನದಲ್ಲಿ 200 ಇವಿಗಳ ಡೆಲಿವರಿ

2022 ರ ಮಾದರಿಯನ್ನು ಐಕ್ಯೂಬ್, ಐಕ್ಯೂಬ್-S ಮತ್ತು ಐಕ್ಯೂಬ್-ST ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ, ಐಕ್ಯೂಬ್ ಮತ್ತು ಐಕ್ಯೂಬ್-S ರೂಪಾಂತರಗಳು 3.4 kWh ಬ್ಯಾಟರಿಯೊಂದಿಗೆ ಸಜ್ಜುಗೊಂಡಿವೆ. ಈ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ಪ್ರಯಾಣಿಸಬಹುದು.

ಮತ್ತೊಂದೆಡೆ, ಐಕ್ಯೂಬ್-ST ರೂಪಾಂತರವು 5.1 kWh ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 140 ಕಿಲೋಮೀಟರ್ ಪ್ರಯಾಣಿಸಬಹುದು. ಇದರಲ್ಲಿ ಐಕ್ಯೂಬ್ ರೂಪಾಂತರದ ಬೆಲೆ 99,130 ​​ರೂ. ಮತ್ತೊಂದೆಡೆ, ಐಕ್ಯೂಬ್-S ರೂಪಾಂತರದ ಬೆಲೆ 1,04,123 ರೂ. ಇದು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಮಾರಾಟವಾಗುವ ಆನ್-ರೋಡ್ ಬೆಲೆಯಾಗಿದೆ.

140 ಕಿ.ಮೀ ಪ್ರಯಾಣಿಸಲು 3 ರೂ. ವೆಚ್ಚ: ಹೆಚ್ಚಾಯ್ತು ಬೇಡಿಕೆ, ಒಂದೇ ದಿನದಲ್ಲಿ 200 ಇವಿಗಳ ಡೆಲಿವರಿ

ಇವು FAME-2 ಮತ್ತು ರಾಜ್ಯ ಸರ್ಕಾರದ ಸಬ್ಸಿಡಿಗಳ ನಂತರದ ಬೆಲೆಗಳಾಗಿವೆ ಎಂಬುದು ಗಮನಿಸಬೇಕಾದ ಸಂಗತಿ. ಆದರೆ TVS ಇನ್ನೂ ಐಕ್ಯೂಬ್-ST ರೂಪಾಂತರದ ಬೆಲೆಯನ್ನು ಪ್ರಕಟಿಸಿಲ್ಲ. ಐಕ್ಯೂಬ್-ST ರೂಪಾಂತರವನ್ನು ಈಗ 999 ರೂ.ಗಳನ್ನು ಮುಂಗಡವಾಗಿ ಪಾವತಿಸುವ ಮೂಲಕ ಬುಕ್ ಮಾಡಬಹುದು.

ನೀವು ನಗರ ಪ್ರದೇಶಗಳಲ್ಲಿ ನಿಯಮಿತವಾಗಿ ಚಾಲನೆ ಮಾಡುತ್ತಿದ್ದರೆ, ಟಿವಿಎಸ್ ಪ್ರಕಾರ, iCube ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿಯನ್ನು ದಿನಕ್ಕೆ 3 ರೂ.(ರನ್ನಿಂಗ್ ಕಾಸ್ಟ್) ಚಾರ್ಜ್ ಮಾಡಲು ವೆಚ್ಚವಾಗುತ್ತದೆ. ಆದರೆ ನಾವು ಎಷ್ಟು ದೂರ ಓಡಿಸುತ್ತೀರ? ಹೇಗೆ ಓಡಿಸುತ್ತೀರ? ಎಂಬುದರ ಮೇಲೆ ಎಲ್ಲವನ್ನೂ ಅವಲಂಬಿಸಿ ವೆಚ್ಚ ಬದಲಾಗುವ ಸಾಧ್ಯತೆಯಿದೆ.

ಹೇಗೇ ನೋಡಿಕೊಂಡರು ಪೆಟ್ರೋಲ್ ಚಾಲಿತ ವಾಹನಗಳಿಗೆ ಹೋಲಿಸಿಕೊಂಡರು iCube ಎಲೆಕ್ಟ್ರಿಕ್ ಸ್ಕೂಟರ್ ಉತ್ತಮವೆನಿಸಿಕೊಂಡಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಟಿವಿಎಸ್ ಇದೀಗ ದೆಹಲಿಯ 200ಕ್ಕೂ ಹೆಚ್ಚು ಗ್ರಾಹಕರಿಗೆ ಒಂದೇ ದಿನದಲ್ಲಿ ಹೊಸ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ವಿತರಿಸಿದೆ.

ಈ ಮಹಾ ವಿತರಣಾ ಕಾರ್ಯಕ್ರಮವು ನವೆಂಬರ್ 13 ರಂದು (ನಿನ್ನೆ) ನಡೆಯಿತು. ಪ್ರಾರಂಭವಾದಾಗಿನಿಂದ ಈ ವರೆಗೆ ಟಿವಿಎಸ್ ದೆಹಲಿಯೊಂದರಲ್ಲೇ 2,000 ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಿತರಿಸಿದೆ. ಇದು TVS iCube ಮತ್ತು iCube S ರೂಪಾಂತರಗಳನ್ನು ಒಳಗೊಂಡಿದೆ.

TVS iCube ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಚೇತಕ್, Ola S1 Pro ಮತ್ತು Ather 450X ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸುತ್ತಿದೆ. ಸದ್ಯ ಇನ್ನಷ್ಟು ಹೊಸ ಕಂಪನಿಗಳ ಇವಿಗಳು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಪೈಪೋಟಿ ಹೆಚ್ಚಾಗಬಹುದು.

ಇದರ ಜೊತೆಗೆ ಪ್ರಮುಖ ಜನಪ್ರಿಯ ಕಂಪನಿಗಳು ಕೂಡ ವಿವಿಧ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಯೋಜಿಸುತ್ತಿವೆ. ಈಗ ಹೋಂಡಾ ಮತ್ತು ಯಮಹಾ ಕಂಪನಿಗಳು ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಲು ಸಜ್ಜಾಗುತ್ತಿವೆ.

Most Read Articles

Kannada
English summary
Increased demand delivery of 200 evs in one day
Story first published: Tuesday, November 15, 2022, 13:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X