EV ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಜರ್ಮನಿಯ ಕಂಪನಿ ಸ್ವಾಧೀನಪಡಿಸಿಕೊಂಡ TVS

ಟಿವಿಎಸ್ ಮೋಟಾರ್ ಕಂಪನಿ ಲಿಮಿಟೆಡ್, ಅದರ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ TVSM (ಸಿಂಗಪುರ), ಜರ್ಮನಿಯ ಬಿಬಿಟಿ 35/22 ವರ್ಮೊಜೆನ್ಸ್‌ವರ್ವಾಲ್ಟಂಗ್ಸ್ ಜಿಎಂಬಿಹೆಚ್‌ನಲ್ಲಿ 100% ಪಾಲನ್ನು 25,000 ಯುರೋಗಳಿಗೆ ಸ್ವಾಧೀನಪಡಿಸಿಕೊಂಡಿದೆ. ಈ ಸಂಸ್ಥೆಯ ಹೆಸರನ್ನು ಸೆಲೆರಿಟಿ ಮೋಟಾರ್ GmbH ಆಗಿ ಬದಲಾಯಿಸಲು ತೀರ್ಮಾನ ಮಾಡಿದೆ ಎಂದು ವರದಿಯಾಗಿದೆ.

ವರ್ಮೊಜೆನ್ಸ್‌ವರ್ವಾಲ್ಟಂಗ್ಸ್ ಕಂಪನಿಯ ಸಂಶೋಧನೆ, ಅಭಿವೃದ್ಧಿ, ಎಂಜಿನಿಯರಿಂಗ್ ಹಾಗೂ ಮಾರಾಟ ಸೇರಿದಂತೆ ಎಲ್ಲ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಸಂಬಂಧಿಸಿದ ಚಟುವಟಿಕೆಗಳು ಈ ಸ್ವಾಧೀನ ಪ್ರಕ್ರಿಯೆಗೆ ಒಳಪಡಲಿವೆ. ಜಾಗತಿಕವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕಂಪನಿಯ ವಿಸ್ತರಣೆಯನ್ನು ಬಲಪಡಿಸಲು ಇದು ಸಹಾಯ ಮಾಡುತ್ತದೆ ಎಂದು BSE ಹಾಗೂ NSEಗೆ ಶುಕ್ರವಾರ ಮಾಹಿತಿ ನೀಡಿದೆ. ಆದಾಗ್ಯೂ, ಟಿವಿಎಸ್ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನ ವಿಸ್ತರಣೆ ಯೋಜನೆಗಳನ್ನು ಈವರೆಗೆ ಬಹಿರಂಗ ಪಡಿಸಿಲ್ಲ.

EV ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಜರ್ಮನಿಯ ಕಂಪನಿ ಸ್ವಾಧೀನಪಡಿಸಿಕೊಂಡ TVS

ಟಿವಿಎಸ್ ಮೋಟಾರ್ ಕಂಪನಿ ಲಿಮಿಟೆಡ್, ಹೀರೋ ಮೋಟೋಕಾರ್ಪ್ ಹಾಗೂ ಹೋಂಡಾ ಮೋಟಾರ್‌ಸೈಕಲ್ ಬಳಿಕ ಭಾರತದ ಮೂರನೇ ಅತಿ ದೊಡ್ಡ ದ್ವಿಚಕ್ರ ವಾಹನ ಕಂಪನಿಯಾಗಿದೆ. 2021-22ರಲ್ಲಿ ಒಟ್ಟು 20,000 ಕೋಟಿ ರೂ. ಆದಾಯವನ್ನು ಗಳಿಕೆ ಮಾಡಿತ್ತು. ಇದು ವಾರ್ಷಿಕ 3 ಮಿಲಿಯನ್ ಯುನಿಟ್‌ ಮಾರಾಟ ಪ್ರಮಾಣವನ್ನು ಹೊಂದಿದೆ. ವಾರ್ಷಿಕ 4.95 ಮಿಲಿಯನ್ ವಾಹನ ತಯಾರಿಕ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಟಿವಿಎಸ್ ಮೋಟಾರ್ ಕಂಪನಿ ಭಾರತದಲ್ಲಿ ಎರಡನೇ ಅತಿ ದೊಡ್ಡ ವಾಹನ ರಫ್ತುದಾರ ಕೂಡ ಆಗಿದೆ.

ಜಾಗತಿಕವಾಗಿ ಹೆಸರಾಂತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರಿವ ಟಿವಿಎಸ್ ಮೋಟಾರ್ ಕಂಪನಿಯು, ಭಾರತದ ತಮಿಳುನಾಡಿನ ಹೊಸೂರು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು, ನಲಗಢ ಮತ್ತು ಇಂಡೋನೇಷ್ಯಾದ ಕರವಾಂಗ್‌ನಲ್ಲಿ ನಾಲ್ಕು ಉತ್ಪಾದನಾ ಘಟಕಗಳನ್ನು ಹೊಂದಿದೆ. ಸದ್ಯ ಕಂಪನಿ ನಿವ್ವಳ ಲಾಭವು 59.5% ರಷ್ಟು ಜಿಗಿದು 386.31 ಕೋಟಿ ರೂ.ಗೆ ಏರಿಕೆಯಾಗಿದೆ. ಬಿಎಸ್‌ಇಯಲ್ಲಿ ಸ್ಕ್ರಿಪ್ 0.42% ಏರಿಕೆಯಾಗಿ 1029.65 ರೂ.ಗೆ ತಲುಪಿದೆ ಎಂದು ಹೇಳಬಹುದು.

ಟಿವಿಎಸ್ ಮೋಟಾರ್ ಕಂಪನಿ ತನ್ನ ದ್ವಿಚಕ್ರ ವಾಹನಗಳ 1,91,730 ಯುನಿಟ್‌ಗಳನ್ನು ನವೆಂಬರ್ ತಿಂಗಳಲ್ಲಿ ಮಾರಾಟ ಮಾಡುವ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನದಲ್ಲಿಯೇ ಮುಂದುವರಿದ್ದು, ಬಜಾಜ್ ಮೋಟಾರ್‌ಸೈಕಲ್ಸ್ ಅನ್ನು ಮತ್ತೊಮ್ಮೆ ಹಿಂದೆ ಹಾಕಿದೆ. ಕಂಪನಿಯು ಒಟ್ಟು 1,91,730 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ನವೆಂಬರ್ ತಿಂಗಳಲ್ಲಿ ಮಾರಾಟ ಮಾಡಲು ಹಾಕಿಕೊಂಡಿದ್ದ ಗುರಿಗಿಂತ ಶೇಕಡ 9 ರಷ್ಟು ಹೆಚ್ಚು. ಆದರೆ, ತಿಂಗಳಿನಿಂದ ತಿಂಗಳ ಮಾರಾಟವು ಶೇಕಡ 30ಕ್ಕಿಂತ ಕಡಿಮೆಯಾಗಿದೆ.

ಟಿವಿಎಸ್ ಮೋಟಾರ್ ಕಂಪನಿಯು ಪ್ರಸ್ತುತ ಒಂದೇ ಒಂದು ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಅದರ ಹೆಸರು 'iQube'. ಇದು ಮೂರು ರೂಪಾಂತರಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೇ ಸ್ಟ್ಯಾಂಡರ್ಡ್, iQube S, ಮತ್ತು iQube ST. ಇವುಗಳ ಉನ್ನತ ವೇಗ ಮತ್ತು ಬ್ಯಾಟರಿ ಸಾಮರ್ಥ್ಯ ಬೇರೆ-ಬೇರೆಯಾಗಿದೆ ಎಂದು ಹೇಳಬಹುದು. ಈ ಇವಿಗಳು ಭಾರತೀಯ ಮಾರುಕಟ್ಟೆಯಲ್ಲಿ Ather 450X ಮತ್ತು Ola S1 ಸರಣಿಗಳಿಗೆ ಭಾರೀ ಪೈಪೋಟಿಯನ್ನು ನೀಡುತ್ತಿವೆ.

ಪೆಟ್ರೋಲ್ ದರ ಹೆಚ್ಚಾಗುತ್ತಿರುವ ಹಿನ್ನೆಲೆ, EV ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಟಿವಿಎಸ್ ಎಂಟ್ರಿ ಲೆವೆಲ್ iQube ರೂಪಾಂತರಗಳಿಗೆ ಅನುಗುಣವಾಗಿ 98,564 ರೂ. ಮತ್ತು 108,690 ರೂ. (ಆನ್-ರೋಡ್ ದೆಹಲಿ) ನಡುವೆ ಬೆಲೆಯಿದೆ. ಹೊಸ iQube ದೇಶದ 33 ನಗರಗಳಲ್ಲಿ ಖರೀದಿಗೆ ಲಭ್ಯವಿದ್ದು, ಅದನ್ನು ಮತ್ತೆ 52 ನಗರಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ. ಅಲ್ಲದೆ, iQube LED ಲೈಟ್ಸ್ ಮತ್ತು 12-ಇಂಚಿನ ವೀಲ್ ಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
German company acquires tvs to crack ev market
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X