India
YouTube

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

ಕೆಲ ದಿನಗಳಿಂದ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ವಿವಾದಕ್ಕೆ ಗುರಿಯಾಗಿ ಕಂಪನಿಯು ಭಾರೀ ಹಿನ್ನಡೆ ಅನಿಭವಿಸಿದೆ. ಈ ನಡುವೆ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಅಚ್ಚರಿಯ ಮಾಹಿತಿ ಹೊರಬಿದ್ದಿದ್ದು, ಎಲ್ಲರ ಗಮನ ಸೆಳೆದಿದೆ. ಅದೇನೆಂದರೆ ಓಲಾ ಮಾರಾಟ ಮಾಡುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದು ಫುಲ್ ಚಾರ್ಜ್‌ನಲ್ಲಿ 200 ಕಿ.ಮೀ ಪ್ರಯಾಣಿಸಿದೆ ಎಂದು ವರದಿಯಾಗಿದೆ.

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

Ola S1 Pro ಮಾಲೀಕರಾದ ಕಾರ್ತಿಕ್ ಎಂಬುವರು ಹೊಸ OS ನವೀಕರಣದ ನಂತರ, ಅವರ ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಚಾರ್ಜ್‌ನಲ್ಲಿ 200 ಕಿಮೀ ವರೆಗೆ ಪ್ರಯಾಣಿಸಿದೆ ಎಂದು ಬಹಿರಂಗಪಡಿಸಿದ್ದಾರೆ. ಈ ಮಾಹಿತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

ಓಲಾ ಎಲೆಕ್ಟ್ರಿಕ್ ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ನವೀಕರಣವನ್ನು ಘೋಷಿಸಿದೆ. ಎಲೆಕ್ಟ್ರಿಕ್ ಸ್ಕೂಟರ್‌ನ ಕಾರ್ಯಕ್ಷಮತೆ ಮತ್ತು ಶ್ರೇಣಿಯನ್ನು ಸುಧಾರಿಸಲು ಈ ನವೀಕರಣವನ್ನು ಮಾಡಲಾಗಿದೆ. ಕಾರ್ತಿಕ್ ಪ್ರಕಾರ, ಇತ್ತೀಚಿನ ಸಾಫ್ಟ್‌ವೇರ್ ನವೀಕರಣದ ನಂತರ ಅವರ ಎಲೆಕ್ಟ್ರಿಕ್ ಸ್ಕೂಟರ್ 202 ಕಿಮೀ ಪ್ರಯಾಣಿಸಿದೆ ಎಂದು ತಿಳಿಸಿದ್ದಾರೆ.

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

ಈ ಕುರಿತು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಗುರಿ ತಲುಪಿದೆ. ನನ್ನ ಸ್ಕೂಟರ್ ಒಂದೇ ಬಾರಿ ಫುಲ್ ಚಾರ್ಜ್ ನಲ್ಲಿ 202 ಕಿ.ಮೀ ಕ್ರಮಿಸಿದೆ. ಇಕೊ ಮೋಡ್ ನಲ್ಲಿ ಶೇ.50 ಟ್ರಾಫಿಕ್ ಮತ್ತು ಶೇ.50 ಹೆದ್ದಾರಿ ಪ್ರಯಾಣವಿದೆ ಎಂದು ಕಂಪನಿಯ ಸಿಇಒ ಭವೀಶ್ ಅಗರ್ವಾಲ್ ಮತ್ತು ಓಲಾ ಎಲೆಕ್ಟ್ರಿಕ್ ಅವರನ್ನು ಟ್ಯಾಗ್ ಮಾಡಿದ್ದಾನೆ.

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

ಸದ್ಯ ಈ ಪೋಸ್ಟ್‌ಗೆ ಭವೀಶ್ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ. ಓಲಾ ಎಸ್1 ಸ್ಕೂಟರ್ ನಲ್ಲಿ ಕಾರ್ತಿಕ್ 200 ಕಿ.ಮೀ ಪ್ರಯಾಣಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಭರವಸೆ ನೀಡಿದಂತೆ ನಾವು ಗೆರುವಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಚಿತವಾಗಿ ನೀಡುತ್ತೇವೆ ಎಂದು ಕಂಪನಿ ಹೇಳಿದೆ.

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

ಅಷ್ಟೇ ಅಲ್ಲ, ಶೀಘ್ರದಲ್ಲೇ ಪೆಟ್ರೋಲ್ ದ್ವಿಚಕ್ರ ವಾಹನಗಳು ಇತಿಹಾಸದಲ್ಲಿ ಉಳಿಯಲಿವೆ ಎಂದು ಹೇಳಿದರು. ಅಂದರೆ ಜಗತ್ತನ್ನು ಎಲೆಕ್ಟ್ರಿಕ್ ವಾಹನಗಳು ಆಳುತ್ತಿವೆ. ಜನರು ಪೆಟ್ರೋಲ್ ಚಾಲಿತ ವಾಹನಗಳನ್ನು ಬಿಟ್ಟು ಎಲೆಕ್ಟ್ರಿಕ್ ಜಗತ್ತಿಗೆ ಮರಳಲಿದ್ದಾರೆ ಎಂದು ಸಿಇಒ ಭವೀಶ್ ಅಗರ್ವಾಲ್ ಹೇಳಿದರು.

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

ಯುವಕ ಕಾರ್ತಿಕ್ ಪೋಸ್ಟ್ ಪ್ರಕಾರ, ಅವರು ಗಂಟೆಗೆ 27 ಕಿ.ಮೀ ನಿಂದ 48 ಕಿ.ಮೀ ವರೆಗೆ ಇಕೊ ಮೋಡ್‌ನಲ್ಲಿ ಪ್ರಯಾಣಿಸುತ್ತಿದ್ದರು, ಈ ಮೂಲಕ ಒಂದೇ ಫುಲ್ ಚಾರ್ಜ್ ನಲ್ಲಿ 202 ಕಿ.ಮೀ ದೂರ ಕ್ರಮಿಸಲು ಸಾಧ್ಯವಾಯಿತು. ಇನ್ನೂ ಅನೇಕ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಳಕೆದಾರರು ಈ ರೀತಿಯ ಹೆಚ್ಚಿನ ಶ್ರೇಣಿಯನ್ನು ಪಡೆಯುತ್ತಿದ್ದಾರೆ.

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

ಕಂಪನಿಯ ದೋಷಯುಕ್ತ ಉತ್ಪನ್ನದಿಂದಾಗಿ ಅನೇಕರು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅದರಂತೆ ಇತ್ತೀಚೆಗಷ್ಟೇ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನದಿಯ ಮೇಲೆ ಅತಿವೇಗದಲ್ಲಿ ಹರಿದ ಪರಿಣಾಮ ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಮುಂಜಾನೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅಪಘಾತಕ್ಕೀಡಾಗಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದ.

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

ಹೀಗಾಗಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅವಲಂಬಿಸಿ ಸ್ವಾಗತಾರ್ಹ ಮತ್ತು ವ್ಯತಿರಿಕ್ತ ಮಾಹಿತಿಗಳೆರಡೂ ಸೋರಿಕೆಯಾಗುತ್ತಿವೆ. ಅದೇ ಸಮಯದಲ್ಲಿ, ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದನ್ನು ಬದಿಗೊತ್ತಿ ಹೀರೋ ಎಲೆಕ್ಟ್ರಿಕ್‌ಗೆ ಜನರು ಉತ್ತಮ ಬೇಡಿಕೆಯನ್ನು ಸೃಷ್ಟಿಸಿದ್ದಾರೆ.

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

ಮಾರ್ಚ್ 2022 ರಲ್ಲಿ, ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕೇವಲ 6,570 ಯುನಿಟ್‌ಗಳನ್ನು ಮಾರಾಟ ಮಾಡಿತು. ಆದಾಗ್ಯೂ, ಓಲಾ ಎಲೆಕ್ಟ್ರಿಕ್ ದೇಶಾದ್ಯಂತ 12,683 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇಲ್ಲಿಯವರೆಗೆ, ಕಂಪನಿಯು ಒಂದೇ ಒಂದು ಔಟ್ಲೆಟ್ ಅನ್ನು ಸ್ಥಾಪಿಸಿಲ್ಲ.

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

ಹೌದು, ಓಲಾ ಎಲೆಕ್ಟ್ರಿಕ್ ತನ್ನ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ನೀಡುವ ಸಲುವಾಗಿ ಶೋರೂಂಗಳ ಅನುಪಸ್ಥಿತಿಯಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಜನರಿಗೆ ನೇರವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸುತ್ತಿದೆ. ಹಾಗಿದ್ದರೂ ಸಹ, ಸಾಮಾನ್ಯ ವ್ಯಕ್ತಿಗೆ ಇದು ಇನ್ನೂ ಅಸಾಧ್ಯವಾಗಿದೆ.

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

Ola ಎಲೆಕ್ಟ್ರಿಕ್ ಎರಡು ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡುತ್ತದ್ದು, S1 ಮತ್ತು S1 Pro ದೇಶದಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದರಲ್ಲಿ ರೂ. 99,999 ಬೆಲೆಯ S1 Pro ಬೆಲೆ ರೂ. 1.29 ಲಕ್ಷ ಕೂಡ ನಿಗದಿ ಮಾಡಲಾಗಿದೆ. ಕಂಪನಿಯ ಅಧಿಕೃತ ಮಾಹಿತಿಯ ಪ್ರಕಾರ, S1 ಪೂರ್ಣ ಚಾರ್ಜ್‌ನಲ್ಲಿ 121 ಕಿ.ಮೀ. S1 Pro 135 km - 181 km ವ್ಯಾಪ್ತಿಯನ್ನು ನೀಡುತ್ತದೆ.

ವಿವಾದಗಳ ನಡುವೆ ಓಲಾಗೆ ನೆಮ್ಮದಿಯ ಸುದ್ದಿ: 200 ಕಿ.ಮೀ ಮೈಲೇಜ್ ಕೊಟ್ಟ S1 Pro ಸ್ಕೂಟರ್

ಕಳೆದ ಕೆಲವು ದಿನಗಳಿಂದ ಓಲಾ ಸೇರಿದಂತೆ ಹಲವು ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಕೇಂದ್ರ ಸರ್ಕಾರ ಕೂಡ ಇವಿ ತಯಾರಕರಿಗೆ ಘಟನೆಗಳ ಕುರಿತು ಸಭೆ ನಡೆಸಿ ಎಚ್ಚರಿಕೆ ನೀಡಿದ್ದರು. ಆ ವೇಳೆ ಹಲವು ಕಂಪನಿಗಳು ತಮ್ಮ ವಾಹನಗಳನ್ನು ಹಿಂಪಡೆದಿದ್ದವು.

Most Read Articles

Kannada
English summary
Ola s1 owner reaches 200 kms with a single charge here is full details
Story first published: Wednesday, May 18, 2022, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X