ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

ಪ್ರಪಂಚದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಒಂದು. ಅಪಘಾತ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದರೂ ಪ್ರಾಣ ನಷ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ ಅಪಘಾತ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ.

 ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯವು ರಸ್ತೆ ಅಪಘಾತಗಳಿಗೆ ಸಂಬಂಧಿಸಿದ ಆಘಾತಕಾರಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಸಚಿವಾಲಯದ ಪ್ರಕಾರ 2020 ರಲ್ಲಿ ಒಟ್ಟು 1,20,806 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಈ ಅಪಘಾತಗಳಿಗೆ ಬಲಿಯಾದವರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದಾರೆ.

ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

ಒಟ್ಟು ರಸ್ತೆ ಅಪಘಾತಗಳಲ್ಲಿ 43,412 (35.9%) ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದರೆ, 30,171 (25%) ಅಪಘಾತಗಳು ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸಿವೆ ಎಂದು ವರದಿ ಹೇಳಿದೆ. ಇತರ ರಸ್ತೆಗಳಲ್ಲಿ 47,223 (39.1%) ಅಪಘಾತಗಳು ಸಂಭವಿಸಿವೆ.

ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

2020 ರಲ್ಲಿ ಮಾರಣಾಂತಿಕ ರಸ್ತೆ ಅಪಘಾತಗಳ ಸಂಖ್ಯೆ 2019ರ ಅಂಕಿಅಂಶಗಳಿಗೆ ಹೋಲಿಸಿದರೆ ಶೇ 12.23 ರಷ್ಟು ಕಡಿಮೆಯಾಗಿದೆ. 2019 ರಲ್ಲಿ ರಸ್ತೆ ಅಪಘಾತಗಳಲ್ಲಿ 1,37,689 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವರದಿಯ ಪ್ರಕಾರ, 2020 ರಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ರಸ್ತೆ ಅಪಘಾತಗಳ ಸಂಖ್ಯೆ 3,66,138 ಇದ್ದು, ಇದರಲ್ಲಿ 1,31,714 ಜನರು ಸಾವನ್ನಪ್ಪಿದರೆ, 3,48,279 ಜನರು ಗಾಯಗೊಂಡಿದ್ದಾರೆ.

ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

ವರದಿಯ ಪ್ರಕಾರ, ಈ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ ಗರಿಷ್ಠ ಸಂಖ್ಯೆಯ ಜನರು 18-45 ವರ್ಷ ವಯಸ್ಸಿನವರು. ಈ ವಯಸ್ಸಿನ ಶೇ 70 ರಷ್ಟು ಜನರು 2020 ರಲ್ಲಿ ರಸ್ತೆ ಅಪಘಾತಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದೇ ಸಮಯದಲ್ಲಿ, ಮರಣ ಹೊಂದಿದ 18-60 ವಯಸ್ಸಿನ ಶೇ87.4 ರಷ್ಟು ಜನರು ಕೆಲಸ ಮಾಡುತ್ತಿದ್ದವರು ಎಂದು ವರದಿ ಹೇಳಿದೆ.

ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳಿವೆ ಎಂದು ವರದಿ ಹೇಳಿದೆ. ಆದರೆ ಲಘು ವಾಹನಗಳಾದ ಕಾರು, ಜೀಪ್ ಮತ್ತು ಟ್ಯಾಕ್ಸಿಗಳು ಒಟ್ಟಾಗಿ ಎರಡನೇ ಸ್ಥಾನದಲ್ಲಿವೆ. ಒಟ್ಟು ಸಾವುಗಳಲ್ಲಿ ದ್ವಿಚಕ್ರ ವಾಹನ ಸವಾರರ ಪಾಲು 2020 ರಲ್ಲಿ ಅತಿ ಹೆಚ್ಚು (43.5%) ಆಗಿತ್ತು. ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ ಶೇ17.8 ರಷ್ಟು ಪಾದಚಾರಿಗಳಿದ್ದಾರೆ.

ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

2020ರ ರಸ್ತೆ ಅಪಘಾತಗಳ ವರದಿಯಲ್ಲಿ ಅತಿವೇಗವು ಅಪಘಾತಗಳಿಗೆ ಮುಖ್ಯ ಕಾರಣವೆಂದು ಉಲ್ಲೇಖಿಸಲಾಗಿದೆ. ಮಿತಿಮೀರಿದ ವೇಗವು ಶೇ69.3% ರಷ್ಟು ಅಪಘಾತಗಳಿಗೆ ಕಾರಣವಾಗಿದೆ, ಇದರಲ್ಲಿ ರಸ್ತೆಯ ತಪ್ಪು ಭಾಗದಲ್ಲಿ ಚಾಲನೆ ಮಾಡುವುದು ಶೇ 5.6 ರಷ್ಟು ಅಪಘಾತಗಳಿಗೆ ಕಾರಣವಾಗಿದೆ.

ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

ರಸ್ತೆಯ ಪ್ರಕಾರಕ್ಕೆ ಸಂಬಂಧಿಸಿದಂತೆ ಶೇ 65 ರಷ್ಟು ಅಪಘಾತಗಳು ನೇರ ರಸ್ತೆಗಳಲ್ಲಿ ಸಂಭವಿಸಿದರೆ, 15.2% ರಷ್ಟು ಅಂಕುಡೊಂಕಾದ ರಸ್ತೆಗಳು, ಹೊಂಡಗಳು ಮತ್ತು ರಸ್ತೆಗಳಲ್ಲಿನ ಅಕ್ರಮ ನಿರ್ಮಾಣಗಳಿಂದಾಗಿ ಸಂಭವಿಸಿವೆ. ಶೇ72 ರಸ್ತೆ ಅಪಘಾತಗಳು ಮತ್ತು ಶೇ 67 ರಷ್ಟು ಸಾವುಗಳು ಸ್ಪಷ್ಟ ಹವಾಮಾನದಲ್ಲಿ ಸಂಭವಿಸಿವೆ ಎಂದು ವರದಿ ಹೇಳಿದೆ.

ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

2020 ರಲ್ಲಿ ತಮಿಳುನಾಡು ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ಹೊಂದಿತ್ತು, ಆದರೆ ಉತ್ತರ ಪ್ರದೇಶವು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಹೆಚ್ಚು. ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕೇರಳ ಪ್ರಮುಖ ರಾಜ್ಯಗಳಲ್ಲಿ ರಸ್ತೆ ಅಪಘಾತ ಸಾವುಗಳಲ್ಲಿ ಗಣನೀಯ ಇಳಿಕೆಯಾಗಿದೆ.

ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

ಸಾರಿಗೆ ಸಚಿವಾಲಯದ ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 4.50 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ, ಇದರಲ್ಲಿ 1.50 ಲಕ್ಷ ಜನರು ಸಾವನ್ನಪ್ಪುತ್ತಾರೆ. ಈ ಅಂಕಿ-ಅಂಶವು ಪ್ರಪಂಚದ ಇತರ ಯಾವುದೇ ದೇಶಗಳಲ್ಲೂ ಕಂಡುಬರುವುದಿಲ್ಲ. ರಸ್ತೆ ಅಪಘಾತಗಳು ಭಾರತದಲ್ಲಿ ಅಂಗವೈಕಲ್ಯಕ್ಕೆ ಮುಖ್ಯ ಕಾರಣವೆಂದು ಉಲ್ಲೇಖಿಸಲಾಗಿದೆ.

ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಪ್ರತಿ ಗಂಟೆಗೆ 53 ರಸ್ತೆ ಅಪಘಾತಗಳು ನಡೆಯುತ್ತಿವೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಹೆಚ್ಚಿನ ರಸ್ತೆ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ (NHs) ಸಂಭವಿಸುತ್ತವೆ. ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಾವುಗಳು ದ್ವಿಚಕ್ರ ವಾಹನ ಚಾಲಕರದ್ದಾಗಿದೆ.

ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

ಚಾಲಕರ ಸುರಕ್ಷತೆ ಹೆಚ್ಚಿಸಲು ಕ್ರಮ

ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲಕರ ಸುರಕ್ಷತೆಯನ್ನು ಹೆಚ್ಚಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗ 150 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ಸ್ಟ್ಯಾಂಡರ್ಡ್ ಫಿಟ್ಮೆಂಟ್ ಆಗಿ ಎಬಿಎಸ್ ಬ್ರೇಕಿಂಗ್ ಕಡ್ಡಾಯ ಮಾಡಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ

ಇನ್ನು 125 ಸಿಸಿ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಕಾಂಬಿ ಬ್ರೇಕ್ ಸಿಸ್ಟಮ್ (ಸಿಬಿಎಸ್) ಅನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ದಂಡವನ್ನು ಹೆಚ್ಚಿಸಿದೆ.

Most Read Articles

Kannada
English summary
Road accidents victims largely young people in 2020 details
Story first published: Thursday, May 26, 2022, 18:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X