ಹೊಸ ವರ್ಷದಿಂದ 'Tork Kratos' ಬೈಕ್‌ಗಳು ದುಬಾರಿ: ಕಾರಣವೇನು?

ಅನೇಕ ದೇಶೀ, ವಿದೇಶಿ ಆಟೋಮೊಬೈಲ್ ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಜನವರಿ 01, 2023ರಿಂದ ಹೆಚ್ಚಿಸುವುದಾಗಿ ಈಗಾಗಲೇ ಘೋಷಣೆ ಮಾಡಿವೆ. ಇದೀಗ ಈ ಪಟ್ಟಿಗೆ ಪ್ರಸಿದ್ಧ ಎಲೆಕ್ಟ್ರಿಕ್ ಬೈಕ್ ತಯಾರಿಕಾ ಕಂಪನಿ 'ಟಾರ್ಕ್ ಮೋಟಾರ್ಸ್' ಕೂಡ ಸೇರಿಕೊಂಡಿದೆ. ಈ ಬಗ್ಗೆ ಇಲ್ಲಿ ಹೆಚ್ಚಿನ ವಿವರಗಳನ್ನು ತಿಳಿಸಿಕೊಡಲಾಗಿದೆ.

ಹೊಸ ವರ್ಷದಲ್ಲಿ, ಟಾರ್ಕ್ ಮೋಟಾರ್ಸ್ ತನ್ನ ಎರಡು ಎಲೆಕ್ಟ್ರಿಕ್ ಬೈಕ್‌ಗಳಾದ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೆಲೆಯನ್ನು ರೂ.10,000 ಹೆಚ್ಚಿಸಲಿದೆ. ಬೆಲೆ ಏರಿಕೆಯ ನಂತರ ರೂ. ಕ್ರಾಟೋಸ್ ಬೆಲೆ ರೂ.1,32,499 ಮತ್ತು ಕ್ರಾಟೋಸ್ ದರ ರೂ.1,47,499 ಆಗಲಿದೆ (ಇದು ಆಯಾ ರಾಜ್ಯದ ಸಬ್ಸಿಡಿ ಹಾಗೂ ಎಕ್ಸ್ ಶೋ ರೂಂ ದರವನ್ನು ಅವಲಂಭಿಸಿರಲಿದೆ). ಈ ನೂತನ ಬೆಲೆ ಜನವರಿ 01, 2023 ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.

ಹೊಸ ವರ್ಷದಿಂದ Tork Kratos ಬೈಕ್‌ಗಳು ದುಬಾರಿ: ಕಾರಣವೇನು?

ವಾಸ್ತವವಾಗಿ, ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗ, ಈ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೆಲೆ ರೂ.1,07,999 ಮತ್ತು ರೂ. 1,22,999 (ಎಕ್ಸ್ ಶೋ ರೂಂ ಪ್ರಕಾರ) ಇತ್ತು. ಆದರೆ, ಮುಂದಿನ ದಿನಗಳಲ್ಲಿ ಈ ಬೆಲೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿವೆ ಎಂಬುದು ಈಗ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಅತಿ ಕಡಿಮೆ ಅವಧಿಯಲ್ಲಿ ಈ ಬೈಕ್‌ಗಳು ತುಂಬಾ ಜನಪ್ರಿಯತೆ ಪಡೆಯುವ ಮೂಲಕ ಭಾರೀ ಪ್ರಮಾಣದಲ್ಲಿ ಬೆಳವಣಿಗೆಯನ್ನು ಕಂಡಿವೆ ಎಂದು ಹೇಳಬಹುದು.

ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಏರುತ್ತಿರುವ ಇನ್ ಪುಟ್ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದು ತಿಳಿದುಬಂದಿದೆ. ಆದರೆ, ಈ ವರ್ಷದೊಳಗೆ ಅಂದರೆ ಡಿಸೆಂಬರ್ 2022ರವರಿಗೆ ಹೊಸ ಬೈಕುಗಳನ್ನು ಖರೀದಿಸುವವರಿಗೆ ಮಾತ್ರ ಪ್ರಸ್ತುತ ಬೆಲೆ ಅನ್ವಯವಾಗಲಿದೆ. ಆ ನಂತರ ಹೊಸ ಬೆಲೆಗಳು ಜನವರಿ 01 ರಿಂದ ಜಾರಿಗೆ ಬರಲಿದೆ. ನಂತರ ಈ ಬೈಕಿನ ಬೆಲೆಗಳು ಆ ಹೊಸ ಬೆಲೆಗಳಲ್ಲಿ ಮಾತ್ರ ಗ್ರಾಹಕರಿಗೆ ಖರೀದಿಗೆ ಲಭ್ಯವಿರುತ್ತವೆ.

ನೂತನ ಕ್ರಾಟೋಸ್ ಬೈಕಿನಲ್ಲಿ 7.5kW ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದ್ದು, ಇದು 4 kWh ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಲಿದೆ. ಇದು 10 bhp ಪವರ್ ಮತ್ತು 28 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಬೈಕ್ ಫುಲ್ ಚಾರ್ಜ್‌ ಮಾಡಿದರೆ ಗರಿಷ್ಠ 120 ಕಿಲೋಮೀಟರ್‌ಗಳವರೆಗೆ ಮೈಲೇಜ್ ನೀಡುತ್ತದೆ. ಇದು ಕೇವಲ 4 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯುತ್ತದೆ ಮತ್ತು 100 kmph ಟಾಪ್ ಸ್ವೀಡ್ ಅನ್ನು ಹೊಂದಿದೆ.

ಟಾರ್ಕ್ ಕ್ರಾಟೋಸ್ ಆರ್ ಬೈಕ್‌ನ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಇದು 9kW ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದ್ದು, ಇದು 12 bhp ಪವರ್ ಮತ್ತು 38 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 105 ಕಿಲೋಮೀಟರ್ ಇದ್ದು, ಸದ್ಯ ಮಾರುಕಟ್ಟೆಯಲ್ಲಿ ಈ ರೂಪಾಂತರವು ವೇಗದ ಚಾರ್ಜಿಂಗ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಹಾಗಾಗಿ, ಇದು ಕೇವಲ 60 ನಿಮಿಷಗಳಲ್ಲಿ ಶೇಕಡ 80 ರಷ್ಟು ಪೂರ್ತಿ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ.

ಟಾರ್ಕ್ ಮೋಟಾರ್ಸ್‌ನ ಕ್ರಾಟೋಸ್ ಮತ್ತು ಕ್ರಾಟೋಸ್-ಆರ್ ಎರಡರಲ್ಲೂ ಇಕೋ, ಸಿಟಿ ಮತ್ತು ಸ್ಪೋರ್ಟ್ಸ್ ಎಂಬ 3 ರೈಡಿಂಗ್ ಮೋಡ್‌ಗಳಿವೆ. ಈ ಎಲೆಕ್ಟ್ರಿಕ್ ಬೈಕ್‌ಗಳು ರಿವರ್ಸ್ ಮೋಡ್ ಅನ್ನು ಸಹ ಹೊಂದಿದ್ದು,. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಮೂಲಕ ಸಸ್ಪೆನ್ಶನ್ ಅನ್ನು ನಿರ್ವಹಿಸಲಾಗುತ್ತದೆ. ಕ್ರಾಟೋಸ್‌ನ ಎರಡಡು ತುದಿಗಳಲ್ಲಿಯು ಡಿಸ್ಕ್ ಬ್ರೇಕ್‌ಗಳು ಲಭ್ಯವಿದೆ. ಕೆಂಪು, ಬಿಳಿ, ನೀಲಿ ಮತ್ತು ಕಪ್ಪು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.

ಇಷ್ಟೇ ಅಲ್ಲದೆ, ಟಾರ್ಕ್ ಮೋಟಾರ್ಸ್ ತನ್ನ ಕ್ರಾಟೋಸ್ ತನ್ನ ವಾಹನಗಳಿಗೆ ಇರುವ ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಶೀಘ್ರದಲ್ಲೇ ಮಹಾರಾಷ್ಟ್ರದ ಚಕ್ಕನ್‌ನಲ್ಲಿ ಹೊಸ ಉತ್ಪಾದನಾ ಘಟಕ ತೆರಳಲು ಸಿದ್ಧವಾಗಿದೆ. ತಿಂಗಳಿಗೆ ಸರಾಸರಿ 4,000-5,000 ಯುನಿಟ್‌ ಎಲೆಕ್ಟ್ರಿಕ್ ಬೈಕುಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಈ ಹೊಸ ಬೈಕುಗಳು ಅಟಿಫೀಶಿಯಲ್ ಇಂಟಲಿಜೆನ್ಸ್ ಆಧಾರಿತ ಟಾರ್ಕ್ ಇನ್ಶೂಟಿವ್ ರೆಸ್ಪಾನ್ಸ್ ಆಪರೇಟಿಂಗ್ ಸಿಸ್ಟಂ- ಟಿ‍‍ಐಆರ್‍ಒ‍ಎಸ್ ಎಂಬ ಡ್ರೈವ್ ಟ್ರೇನ್ ಟೆಕ್ನಾಲಜಿಯನ್ನು ಹೊಂದಿವೆ.

Most Read Articles

Kannada
English summary
Tork kratos bikes expensive from new year
Story first published: Tuesday, December 13, 2022, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X