ಕೈಗೆಟಕುವ ಬೆಲೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್!... ಫೆ. 9 ರಂದು ಓಲಾದಿಂದ ಮಹತ್ವದ ಘೋಷಣೆ

ಭಾರತದಲ್ಲಿ ಕಳೆದ ಎರಡು ವ‍ರ್ಷಗಳಲ್ಲಿ ಎಲ್ಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿದೆ. ಅದರಲ್ಲೂ ಸ್ಕೂಟರ್‌ಗಳು ಹೆಚ್ಚಾಗಿ ಮಾರಾಟವಾಗುತ್ತಿವೆ. ಓಲಾ, ಎಥರ್, ಟಿವಿಎಸ್ ಐಕ್ಯೂಬ್‌ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ಬೆಳವಣಿಗೆ ಸಾಧಿಸುತ್ತಿವೆ. ಇದೀಗ ಈ ಪೈಪೋಟಿಯನ್ನು ಹೆಚ್ಚಿಸಲು ಓಲಾ ಮಹತ್ವದ ಘೋಷಣೆ ಮಾಡಿದೆ.

ಪ್ರಸ್ತುತ Ola Electric Ola S1 ಏರ್, Ola S1 ಮತ್ತು Ola S1 Pro ಎಂಬ 3 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಇದರಲ್ಲಿ Ola S1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 84,999 ರೂ., Ola S1 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1,09,999 ರೂ. ಮತ್ತು Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1,39,999 ರೂ. ಇದೆ. ಇದೀಗ ಓಲಾ ಸಿಇಎ ಇದೇ ಫೆಬ್ರವರಿ 9 ರಂದು ಹೊಸ ಉತ್ಪನ್ನ ಕುರಿತು ಘೋಷನೆ ಮಾಡುವುದಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಡಿ ಕ್ಯೂ7 ಮಾಲೀಕನಿಗೆ ಸಂಪೂರ್ಣ ಹಣ ಹಿಂದಿರುಗಿಸುವಂತೆ ಕಾರು ಕಂಪನಿಗೆ ಕೋರ್ಟ್ ಆದೇಶ Read more at: https://kannada.drivespark.com/four-wheelers/2023/court-orders-car-company-to-refund-full-amount-to-audi-q7-owner-032711.html

ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಬರುತ್ತಿದೆಯೇ?
ಓಲಾ ಎಲೆಕ್ಟ್ರಿಕ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್ ಓಲಾ ಎಲೆಕ್ಟ್ರಿಕ್ ಮಹತ್ವದ ಘೋಷಣೆ ಕುರಿತ ಟ್ವೀಟ್‌ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಎಂಬುದರ ಕುರಿತು ಚರ್ಚೆಗಳು ಹೆಚ್ಚಾಗಿವೆ. ಅವರ ಪ್ರಕಟಣೆಯ ಪ್ರಕಾರ, ಓಲಾ ಎಲೆಕ್ಟ್ರಿಕ್ ಫೆಬ್ರವರಿ 9 ರಂದು ಮಧ್ಯಾಹ್ನ 2 ಗಂಟೆಗೆ ಹೊಸ ಉತ್ಪನ್ನಗಳನ್ನು ಪ್ರಕಟಿಸಲಿದೆ. ಆದರೆ ಅದು ಯಾವ ಘೋಷಣೆ? ಯಾವ ಉತ್ಪನ್ನ? ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ.

ಆದರೆ, ಭವಿಶ್ ಅಗರ್ವಾಲ್ ಈ ಟ್ವೀಟ್ ಜೊತೆಗೆ ಎಲೆಕ್ಟ್ರಿಕ್ ಸ್ಕೂಟರ್ ಫೋಟೋವನ್ನು ಪೋಸ್ಟ್ ಮಾಡಿರುವುದನ್ನು ನೋಡಿದರೆ ಓಲಾ ಎಲೆಕ್ಟ್ರಿಕ್ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಕ್ಕೆ ಪರಿಚಯಿಸಲು ತಯಾರಿ ನಡೆಸುತ್ತಿರುವುದನ್ನು ನಿರೀಕ್ಷಿಸಲಾಗಿದೆ. ಫೆಬ್ರವರಿ 9 ರಂದು ಓಲಾ ಎಲೆಕ್ಟ್ರಿಕ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದರೆ, ಅದು ಹೆಚ್ಚು ಅಗ್ಗವಾಗಬಹುದು ಎಂಬ ಲೆಕ್ಕಾಚಾರಗಳು ಈಗಾಗಲೇ ಮೊದಲಾಗಿವೆ.

ಪೆಟ್ರೋಲ್ ಸ್ಕೂಟರ್‌ಗಳಿಗೆ ಸಂಕಷ್ಟ!
ಪ್ರಸ್ತುತ, ಓಲಾ ಎಲೆಕ್ಟ್ರಿಕ್‌ನ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅಗ್ಗವಾಗಿದೆ. ಓಲಾ ಎಲೆಕ್ಟ್ರಿಕ್ ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದರೊಂದಿಗೆ, ಓಲಾ ಎಲೆಕ್ಟ್ರಿಕ್ ಪೆಟ್ರೋಲ್ ಸ್ಕೂಟರ್‌ಗಳಿಗೆ ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸಲು ಪ್ರಯತ್ನಿಸಬಹುದು. ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೀವು ಪ್ರಸ್ತುತ ಪೆಟ್ರೋಲ್ ಸ್ಕೂಟರ್‌ನೊಂದಿಗೆ ಹೋಲಿಕೆ ಮಾಡಿದರೆ, ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಹೆಚ್ಚಾಗಿದೆ.

ಈ ಪರಿಸ್ಥಿತಿಯನ್ನು ಬದಲಾಯಿಸಲು ಓಲಾ ಎಲೆಕ್ಟ್ರಿಕ್ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಓಲಾ ಎಲೆಕ್ಟ್ರಿಕ್ ಫೆಬ್ರವರಿ 9 ರಂದು ಅತ್ಯಂತ ಕಡಿಮೆ ಬೆಲೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಬಹುದು. ಹಾಗಾದರೆ ಫೆಬ್ರವರಿ 9 ರಂದು ಓಲಾ ಎಲೆಕ್ಟ್ರಿಕ್ ಏನು ಘೋಷಣೆ ಮಾಡಲಿದೆ? ಕ್ಷೇತ್ರದಲ್ಲಿ ಯಾವ ಉತ್ಪನ್ನವನ್ನು ಕೈಬಿಡಲಾಗುವುದು? ಎಂಬ ನಿರೀಕ್ಷೆ ಗ್ರಾಹಕರಲ್ಲಿ ಮೂಡಿದೆ. ಒಂದು ವೇಳೆ ಕಡಿಮೆ ಬೆಲೆಯಲ್ಲಿ ಲಭ್ಯವಾದರೆ ಇವಿ ವಲಯದಲ್ಲಿ ಪೈಪೋಟಿ ತೀರ್ವತೆ ಹೆಚ್ಚಾಗಲಿದೆ.

ಭವಿಷ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಮತ್ತು ಎಲೆಕ್ಟ್ರಿಕ್ ಕಾರ್ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಓಲಾ ಎಲೆಕ್ಟ್ರಿಕ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಯೋಜಿಸುತ್ತಿದೆ. ಮೊದಲು ಭಾರತೀಯ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೋಡುವುದು ಅಪರೂಪವಾಗಿತ್ತು. ಆದರೆ ಈಗ ಅನೇಕ ಎಲೆಕ್ಟ್ರಿಕ್ ಸ್ಕೂಟರ್‌ಗಳು ಎಲ್ಲೆಡೆ ಕಂಡುಬರುತ್ತವೆ. ಅದರಲ್ಲೂ ಓಲಾ ಎಲೆಕ್ಟ್ರಿಕ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಕಾಣಸಿಗುತ್ತವೆ.

ಆದ್ದರಿಂದ, ಓಲಾ ಎಲೆಕ್ಟ್ರಿಕ್ ಭಾರತದ ಎಲೆಕ್ಟ್ರಿಕ್ ಬೈಕ್ ಮತ್ತು ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ಸಾಧ್ಯತೆಗಳು ತುಂಬಾ ಪ್ರಕಾಶಮಾನವಾಗಿವೆ ಎಂದು ಆಟೋಮೊಬೈಲ್ ಉದ್ಯಮದ ತಜ್ಞರು ಹೇಳುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಟಾಟಾ ಮೋಟಾರ್ಸ್ ಸಂಪೂರ್ಣವಾಗಿ ನಿಯಂತ್ರಿಸಿರುವುದು ಇಲ್ಲಿ ಗಮನಿಸಬೇಕು. ಮುಂಬರುವ ದಿನಗಳಲ್ಲಿ ಓಲಾ ಕೂಡ ಇವಿ ಕಾರನ್ನು ಪರಿಚಯಿಸಲಿದ್ದು, ಟಾಟಾ ಮೋಟಾರ್ಸ್‌ನಂತಹ ದೈತ್ಯ ಕಂಪನಿಗಳೊಂದಿಗೆ ಸ್ಫರ್ಧಿಸಲಿದೆ.

Most Read Articles

Kannada
English summary
Important announcement from ola on 9th
Story first published: Thursday, February 2, 2023, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X