ಓಲಾ ಎಲೆಕ್ಟ್ರಿಕ್ ಘೋಷಣೆ: ಮುಂದಿನ ವಾರವೇ ಆರಂಭ!

ದೇಶದ ಪ್ರಮುಖ ಕಂಪನಿಯಾಗಿರುವ ಓಲಾ, ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಮುಂದಿನ ವಾರ ಸೇವಾ ಚಂದಾದಾರಿಕೆ (service subscriptions) ಪ್ರಾರಂಭಿಸಲು ಯೋಜಿಸುತ್ತಿದೆ. ಈ ಬಗ್ಗೆ ಸಿಇಒ ಭವಿಶ್ ಅಗರ್ವಾಲ್ ಅವರು ಟ್ವೀಟ್ ಮಾಡಿದ್ದಾರೆ. ಆದರೆ, ಸದ್ಯಕ್ಕೆ ಈ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

'ಮುಂದಿನ ವಾರ ಸೇವಾ ಚಂದಾದಾರಿಕೆ ಯೋಜನೆಗಳನ್ನು ಪ್ರಾರಂಭಿಸಲಾಗುವುದು. ಪ್ಲಾನ್‌ಗಳಲ್ಲಿ ನೀವು ಯಾವ ಪ್ರಯೋಜನಗಳನ್ನು ನೋಡಲು ಬಯಸುತ್ತೀರಿ?' ಎಂದು ಓಲಾ ಎಲೆಕ್ಟ್ರಿಕ್‌ನ ಸಿಇಒ ಭವಿಶ್ ಅಗರ್ವಾಲ್ ಕೇಳಿದ್ದಾರೆ. ಇದಕ್ಕೆ ಕೆಲವು ಓಲಾ ಗ್ರಾಹಕರು ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ. ಕಂಪನಿಯ ವಾರ್ಷಿಕ ಯೋಜನೆಯಲ್ಲಿ ಬಿಡಿ ಭಾಗಗಳು, ಬ್ಯಾಟರಿ, ಸಾಫ್ಟ್‌ವೇರ್ ನವೀಕರಣಗಳನ್ನು ಮತ್ತು ಹೆಚ್ಚಿನದನ್ನು ಬದಲಾಯಿಸಬೇಕು ಎಂದು ಸೂಚಿಸಿದ್ದಾರೆ. ಓಲಾ, ಸದ್ಯ ಭಾರತದಲ್ಲಿ ಜನಪ್ರಿಯ ಸ್ಕೂಟರ್‌ ಕಂಪನಿಯಾಗಿ ಬೆಳೆಯುತ್ತಿದೆ.

ಓಲಾ ಎಲೆಕ್ಟ್ರಿಕ್ ಘೋಷಣೆ: ಮುಂದಿನ ವಾರವೇ ಆರಂಭ

ಇವಿ ತಯಾರಕ ಕಂಪನಿಯಾಗಿರುವ ಓಲಾ, ಪ್ರಸ್ತುತ ಭಾರತದಲ್ಲಿ ಆರು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ತರಲು ಯೋಜಿಸುತ್ತಿದೆ. ಎಂದು ಕಂಪನಿಯ ಸಂಸ್ಥಾಪಕರು ಬಹಿರಂಗಪಡಿಸಿದ್ದರು. ಓಲಾ ಎಲೆಕ್ಟ್ರಿಕ್‌ನ ಸಂಸ್ಥಾಪಕ ಭವಿಶ್ ಅಗರ್ವಾಲ್, ಕಂಪನಿಯು ಮುಂದಿನ ದಿನಗಳಲ್ಲಿ ಈ ವಾಹನಗಳನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ ಎಂದು ಹೇಳಿದ್ದಾರೆ. ಯೋಜನೆಯ ಭಾಗವಾಗಿ ಓಲಾ 2023ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೀಡಲು ರೆಡಿಯಾಗಿದೆ. ಇದು ಸುಮಾರು 70,000 ರೂ.ಗಳ ಸಾಮಾನ್ಯ ಬೆಲೆಯೊಂದಿಗೆ ಬರಬಹುದು.

2024ರಲ್ಲಿ ಓಲಾ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಕಂಪನಿಯು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ನಂತರ, ಪ್ರೀಮಿಯಂ ಪ್ರಯಾಣಿಕ ಖರೀದಿದಾರರಿಗೆ ಪ್ರೀಮಿಯಂ ಮೋಟಾರ್‌ಸೈಕಲ್ ಲಾಂಚ್ ಮಾಡಲು ಯೋಜಿಸುತ್ತಿದೆ. 2025ರಲ್ಲಿ ಪ್ರೀಮಿಯಂ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ. ಆ ಬಳಿಕ, ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ. ಅಂತಿಮವಾಗಿ, 2026ಕ್ಕೆ ಎಲೆಕ್ಟ್ರಿಕ್ ಕಾರ್ ವಿಭಾಗಕ್ಕೆ ಓಲಾ ಅದ್ದೂರಿಯಾಗಿ ಎಂಟ್ರಿಕೊಡಲಿದೆಯಂತೆ. ಈ ಮೂಲಕ ಭಾರತದಲ್ಲಿ ತನ್ನದೇ ಆದ ಬ್ರ್ಯಾಂಡ್ ಸೃಷ್ಟಿಸಲು ಓಲಾ ಮುಂದಾಗಿದೆ.

ಓಲಾ, ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಮೂವ್ ಓಎಸ್ 3.0 ಸಾಫ್ಟ್‌ವೇರ್ ಅಪ್‌ಡೇಟ್ ಪರಿಚಯ ಮಾಡಿತ್ತು. ಈ OTA ಅಪ್‌ಡೇಟ್ S1 ಮತ್ತು S1 Pro ಸ್ಕೂಟರ್‌ಗಳಲ್ಲಿ ಹೈಪರ್ ಚಾರ್ಜಿಂಗ್, ಬ್ಲೂಟೂತ್ ಕಾಲಿಂಗ್, ಪಾರ್ಟಿ ಮೋಡ್, ರೈಡಿಂಗ್ ಮೂಡ್‌ಗಳು, ಅಡ್ವಾನ್ಸ್ಡ್ ರೀ- ಜನರೇಷನ್, ಪ್ರಾಕ್ಸಿಮಿಟಿ ಲಾಕ್, ಅನ್‌ಲಾಕ್, ಹಿಲ್ - ಹೋಲ್ಡ್ ಕಂಟ್ರೋಲ್ ಸೇರಿದಂತೆ ಹತ್ತು, ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರಿಂದ ಮಾರುಕಟ್ಟೆಯಲ್ಲಿ ದೇಶದ ಹೊಸ ಗ್ರಾಹಕರನ್ನು ಓಲಾ ತನ್ನತ್ತ ಸೆಳೆಯಬಹುದು.

ಕೆಲದಿನಗಳ ಹಿಂದಷ್ಟೇ, ಓಲಾ ಡಿಸೆಂಬರ್‌ ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿತ್ತು. ಕಂಪನಿಯು 25 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿರುವುದು ಸದ್ಯ ವರದಿಯಾಗಿದೆ. ಇದರೊಂದಿಗೆ, ಓಲಾ ಎಲೆಕ್ಟ್ರಿಕ್ 2022 ರಲ್ಲಿ ಬರೋಬ್ಬರಿ 1.50 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸೇಲ್ ಮಾಡಿ, ತನ್ನದೇ ದಾಖಲೆ ನಿರ್ಮಾಣ ಮಾಡಿದೆ. ಡಿಸೆಂಬರ್ ತಿಂಗಳೊಂದರಲ್ಲೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಓಲಾ ಎಲೆಕ್ಟ್ರಿಕ್‌ನ ಮಾರುಕಟ್ಟೆ ಪಾಲು ಬರೋಬ್ಬರಿ 30% ಇದೆ.

ಓಲಾ ಎಲೆಕ್ಟ್ರಿಕ್, ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸೇಲ್ ಮಾಡುತ್ತಿದೆ. ಅವುಗಳೆಂದರೆ, ಓಲಾ S1 ಮತ್ತು ಓಲಾ S1 Pro. ಅಲ್ಲದೆ, ಓಲಾ ಎಸ್1 ಏರ್ ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೆಲ ತಿಂಗಳ ಹಿಂದೆ ಬಿಡುಗಡೆ ಮಾಡಿತ್ತು. ಆದರೆ, ವಿತರಣೆ ಈವರೆಗೆ ಆರಂಭವಾಗಿಲ್ಲ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಏಪ್ರಿಲ್ ತಿಂಗಳ ಪ್ರಾರಂಭದಲ್ಲಿ ಗ್ರಾಹಕರಿಗೆ ತಲುಪಿಸಬಹುದು ಎಂದು ಹೇಳಲಾಗಿದೆ.

S1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ ದೇಶದಲ್ಲಿ ಓಲಾಗೆ ಮತ್ತಷ್ಟು ಖ್ಯಾತಿ ತಂದುಕೊಡಲಿದೆ. ಇದಕ್ಕೆ ಕಾರಣ, Ola S1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ತುಂಬಾ ಕಡಿಮೆ. ಓಲಾ S1 Pro ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಪ್ರಸ್ತುತ 1.40 ಲಕ್ಷ ರೂ. ಇದ್ದು, ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ 1 ಲಕ್ಷ ರೂ. ಇದೆ.
ಆದರೆ, ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕೇವಲ 80 ಸಾವಿರ ರೂ. ಇದ್ದು, ಬಹುತೇಕ ಗ್ರಾಹಕರಿಗೆ ಕೈಗೆಟುವ ದರವಾಗಿದೆ. ಇದರಿಂದ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಸಿಜಿದ್ದಾರೆ.

Most Read Articles

Kannada
English summary
Ola electric announcement launch next week
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X