ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!

ಭಾರತದ ಮಾರುಕಟ್ಟೆಯಲ್ಲಿ ಅಬ್ಬರಿಸಲು ಹೀರೋ ಮೋಟೋಕಾರ್ಪ್ ರೆಡಿಯಾಗಿದೆ. ಈ ವರ್ಷದ ತನ್ನ ಮೊದಲ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಹೊಚ್ಚ ಹೊಸ ಸ್ಕೂಟರ್ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರ ಅತಿ ಕಡಿಮೆ ಬೆಲೆಯು ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಬಹುನೀರಿಕ್ಷಿತ ಹೀರೋ ಕ್ಸೂಮ್ 110 (Hero Xoom 110) ಸ್ಕೂಟರ್ ಲಾಂಚ್ ಆಗಿದ್ದು, ರೂ.68,599 (ಎಕ್ಸ್ ಶೋರೂಂ ದೆಹಲಿ) ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಒಟ್ಟು ಮೂರು ರೂಪಾಂತರಗಳಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದ್ದು, ಅವುಗಳೆಂದರೆ, LX, VX ಮತ್ತು ZX. ಇವುಗಳು ವಿಭಿನ್ನ ಬೆಲೆಯನ್ನು ಹೊಂದಿವೆ. LX ರೂಪಾಂತರದ ಬೆಲೆ ರೂ.68,599 ಇದ್ದರೆ, VX ರೂಪಾಂತರದ ದರ ರೂ.71,799 ಹಾಗೂ ZX ರೂಪಾಂತರವು ರೂ.76,699 ಬೆಲೆಯನ್ನು ಹೊಂದಿದೆ.

ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್

ದೇಶದ ಮಾರುಕಟ್ಟೆಗೆ ಬಂದಿರುವ ಈ ಹೊಸ ಹೀರೋ Xoom ವಿನ್ಯಾಸದಲ್ಲೂ ಕೊಂಚ ಮಟ್ಟಿಗೆ ಬದಲಾಗಿದ್ದು, ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಬ್ರೈಟ್ ಎಲ್ಇಡಿ ಹೆಡ್‌ಲೈಟ್‌, ಹೆಚ್ - ಆಕಾರದ ಎಲ್ಇಡಿ ಟೈಲ್ ಲೈಟ್ ಅನ್ನು ಹೊಂದಿದ್ದು, ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಜೊತೆಗೆ 12 ಇಂಚಿನ ಅಲಾಯ್ ವೀಲ್ಸ್ ಅನ್ನು ಪಡೆದೊಂಡಿದೆ. ಇಷ್ಟೇಅಲ್ಲದೆ, ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್ ಅನ್ನು ಹೊಂದಿದೆ ಎಂದು ಹೇಳಬಹುದು.

ಇಲ್ಲಿ ಕಾಲರ್ ಐಡಿ, ಇನ್-ಕಮಿಂಗ್ ಕಾಲ್, ಮೆಸೇಜ್, ಮಿಸ್ಡ್ ಕಾಲ್ ಹಾಗೂ ಫೋನ್ ಬ್ಯಾಟರಿ ಲೆವೆಲ್ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ತೋರಿಸಲಾಗುತ್ತದೆ. ಫ್ರಂಟ್, ಸ್ಟೋರೇಜ್ ಸೆಕ್ಷನ್ ಮತ್ತು USB ಚಾರ್ಜಿಂಗ್ ಪೋರ್ಟ್ ಹೊಂದಿದ್ದು, ಸೀಟಿನ ಕೆಳಗೆ ದೊಡ್ಡದಾದ ಸ್ಟೋರೇಜ್ ಸ್ಪೇಸ್ ಅನ್ನು ಪಡೆದುಕೊಂಡಿದೆ. ಜೊತೆಗೆ ವಿಶಾಲವಾದ ಸೀಟ್ ಇದ್ದು, ಹಿಂಬದಿಯ ಸವಾರರ ಅನುಕೂಲಕ್ಕಾಗಿ ಸಿಂಗಲ್ ಪೀಸ್ ಗ್ರಾಬ್ ಹ್ಯಾಂಡಲ್ ಕೂಡ ನೀಡಲಾಗಿದೆ. ಇವು ಗ್ರಾಹಕರಿಗೆ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ.

ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್

ಹೊಸ ಹೀರೋ Xoom ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಮಾತನಾಡುವುದಾದರೆ, ಇದು 110 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 7,250 rpmನಲ್ಲಿ 8.05 bhp ಗರಿಷ್ಠ ಪವರ್ ಹಾಗೂ 5,750 rpm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ i3S ಐಡಲ್ ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನವನ್ನು ಹೊಂದಿದೆ ಎಂದು ಹೇಳಬಹುದು. ಅಲ್ಲದೆ, ಈ ಸ್ಕೂಟರ್ ಗ್ರಾಹಕರಿಗೆ ಐದು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಅವುಗಳೆಂದರೆ, ಪೋಲೆಸ್ಟಾರ್ ಬ್ಲೂ, ಸ್ಪೋರ್ಟ್ಸ್ ರೆಡ್, ಮ್ಯಾಟ್ ಅಬ್ರಾಕ್ಸ್ ಆರೆಂಜ್, ಪರ್ಲ್ ಸಿಲ್ವರ್ ವೈಟ್ ಮತ್ತು ಬ್ಲ್ಯಾಕ್.

'ಹೀರೋ Xoom' ಸಸ್ಪೆನ್ಷನ್ ಬಗ್ಗೆ ಮಾತನಾಡುವುದರೆ, ಫ್ರಂಟ್ ಸ್ಪೋರ್ಟ್ಸ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ರೇರ್ ಮೊನೊಶಾಕ್ ಸೆಟಪ್ ಹೊಂದಿದೆ. ಈ ಸ್ಕೂಟರ್ MRF ನೈಲೋಗ್ರಿಪ್ ಟೈರ್‌ಗಳನ್ನು ಪಡೆದಿದ್ದು, 12-ಇಂಚಿನ ಅಲಾಯ್ ವೀಲ್ಸ್ ನೊಂದಿಗೆ ಖರೀದಿಗೆ ಲಭ್ಯವಿದೆ. ಬ್ರೇಕಿಂಗ್ ವ್ಯವಸ್ಥೆ ಬಗ್ಗೆ ಹೇಳುವುದಾದರೆ, ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ರೇರ್ ಡ್ರಮ್ ಬ್ರೇಕ್ ಪಡೆದಿದೆ. ಅಲ್ಲದೆ, ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್‌ ಅನ್ನು ಹೊಂದಿದೆ ಎಂದು ಹೇಳಬಹುದು.

ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್

ಹೊಸ 'ಹೀರೋ Xoom' ಸ್ಕೂಟರ್ ಬಿಡುಗಡೆ ಬಗ್ಗೆ ಮಾತನಾಡಿರುವ ಹೀರೊ ಮೋಟೊಕಾರ್ಪ್‌ನ ಚೀಫ್ ಗ್ರೋಥ್ ಆಫೀಸರ್ (ಸಿಜಿಒ) ರಂಜಿವ್‌ಜಿತ್ ಸಿಂಗ್ ಅವರು, 'ಭಾರತದ ಮಾರುಕಟ್ಟೆಯಲ್ಲಿ ಗ್ರಾಹಕರು ಇಷ್ಟಪಡುವ ಹಲವು ದ್ವಿಚಕ್ರ ವಾಹನಗಳನ್ನು ಕಂಪನಿ ಲಾಂಚ್ ಮಾಡಿದೆ. ಇದೀಗ ಹೀರೋ Xoom ಸ್ಕೂಟರ್ ಬಿಡುಗಡೆ ಮಾಡಿದ್ದು, ಅದರ ಕಾರ್ಯಕ್ಷಮತೆ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ ಎಂಬುದು ನಮ್ಮ ಬಲವಾದ ನಂಬಿಕೆಯಾಗಿದೆ. ಉತ್ತಮ ಸ್ಕೂಟರ್ ಖರೀದಿ ಮಾಡಬೇಕೆಂಬ ಆಸೆಯನ್ನು ಹೊಂದಿರುವವರಿಗೆ ಇದು ಒಳ್ಳೆಯ ಆಯ್ಕೆಯಾಗಲಿದೆ' ಎಂದು ಹೇಳಿದ್ದಾರೆ.

ದೇಶದ ಮಾರುಕಟ್ಟೆಯಲ್ಲಿ ಹೋಂಡಾದ ಆಕ್ಟಿವಾ ಸ್ಕೂಟರ್ ಅತಿಹೆಚ್ಚಿನ ಗ್ರಾಹಕರನ್ನು ಹೊಂದಿದ್ದು, ಇದಕ್ಕೆ ಸರಿಸಾಟಿಯಾಗಿ ಬೇರೆ ಯಾವುದೇ ಕಂಪನಿಯ ಸ್ಕೂಟರ್ ಗಳು ಇಲ್ಲವೆಂದೇ ಹೇಳಬಹುದು. ಇದೀಗ ಹೀರೋ Xoom ಲಾಂಚ್ ಆಗಿದ್ದು, ಆಕ್ಟಿವಾಗೆ ಪ್ರಬಲ ಪೈಪೋಟಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಇದರ ಕೈಗೆಟುಕುವ ಬೆಲೆ ಹಾಗೂ ಆಕರ್ಷಕ ವೈಶಿಷ್ಟ್ಯಗಳು ಗ್ರಾಹಕರಿಗೆ ಖಂಡಿತ ಇಷ್ಟವಾಗಲಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ಪ್ರಗತಿ ಸಾಧಿಸಲು ಕಂಪನಿ ಯೋಜಿಸಿದೆ ಎಂದು ಹೇಳಬಹುದು.

Most Read Articles

Kannada
English summary
Sporty hero xoom launched at rs 68599 details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X