ವರ್ಣಮಯ ಪಲ್ಸರ್ ನಿಮ್ಮ ಮನ ಸೆಳೆಯಿತೇ?

Posted By:

ಇದುವರೆಗೆ ಏಕರೂಪದ ಬಣ್ಣಗಳ ಪಲ್ಸರ್ ಬೈಕ್‌ಗಳನ್ನು ನೀವು ನೋಡಿರುವಿರಿ. ಆದರೆ ಇನ್ನು ಮುಂದೆ ಪಲ್ಸರ್ ಇನ್ನು ಹೆಚ್ಚು ವರ್ಣಮಯವಾಗಲಿದೆ. ಅದು ಹೇಗೆ ಅಂತೀರಾ? ನೂತನ ಪಲ್ಸರ್‌ಗೆ ಡ್ಯುಯಲ್ ಟೋನ್ ಬಣ್ಣಗಳ ಸ್ಪರ್ಶ ನೀಡಲಾಗುತ್ತಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇದು ಪಲ್ಸರನ್ನು ಇನ್ನು ಹೆಚ್ಚು ಆಕರ್ಷಕವಾಗಿ ಗೋಚರಿಸುವಂತೆಯೇ ಮಾಡಲಿದೆ. ಬಜಾಜ್ ಪಲ್ಸರ್ 200ಎನ್‌ಎಸ್ ಆವೃತ್ತಿಯಲ್ಲಿ ಈ ಡ್ಯುಯಲ್ ಟೋನ್ ಕಲರ್ ವೆರಿಯಂಟ್ ಲಭ್ಯವಿರಲಿದೆ.

To Follow DriveSpark On Facebook, Click The Like Button
ವರ್ಣಮಯ ಪಲ್ಸರ್ ನಿಮ್ಮ ಮನ ಸೆಳೆಯಿತೇ?

ಒಟ್ಟು ಮೂರು ವಿಭಿನ್ನ ಡ್ಯುಯಲ್ ಟೋನ್ ಕಲರ್ ವೆರಿಯಂಟ್‌ಗಳನ್ನು ಪಲ್ಸರ್ ಗ್ರಾಹಕರಿಗೆ ಪರಿಚಯಿಸುತ್ತಿದೆ. ಪಲ್ಸರ್ 200ಎನ್‌ಎಸ್ 2014 ಆವೃತ್ತಿಯಲ್ಲಿ ಇದನ್ನು ನೋಡಬಹುದಾಗಿದೆ.

ಪಲ್ಸರ್ ಹೊಸ ಕಲರ್ ವೆರಿಯಂಟ್

ಪಲ್ಸರ್ ಹೊಸ ಕಲರ್ ವೆರಿಯಂಟ್

  • Safire Blue & Ebony Black
  • Passion Red & Ebony Black
  • Metallic White & Ebony Black.
ವರ್ಣಮಯ ಪಲ್ಸರ್ ನಿಮ್ಮ ಮನ ಸೆಳೆಯಿತೇ?

ಅಂದ ಹಾಗೆ ಬಜಾಜ್ ಪಲ್ಸರ್ ಎನ್‌ಎಸ್ ದೆಹಲಿ ಎಕ್ಸ್ ಶೋ ರೂಂ ದರ 87,794 ರು.ಗಳಾಗಿವೆ. ಹಾಗಿದ್ದರೂ ದೇಶದ ಬಹುತೇಕ ನಗರಗಳಲ್ಲಿ ಒಂದು ಲಕ್ಷ ರು.ಗಳ ಒಳಗಡೆ ಆನ್ ರೋಡ್ ದರಗಳಲ್ಲಿ ದೊರಕುತ್ತಿದೆ.

ವರ್ಣಮಯ ಪಲ್ಸರ್ ನಿಮ್ಮ ಮನ ಸೆಳೆಯಿತೇ?

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಜಾಜ್ ಉನ್ನತಾಧಿಕಾರಿಗಳು, ನೂತನ ಬೈಕ್ ಹೆಚ್ಚು ಕ್ರೀಡಾತ್ಮಕ ವಿನ್ಯಾಸ ಪಡೆದುಕೊಳ್ಳಲಿದೆ ಎಂದಿದ್ದಾರೆ. ಈ ಕಾಸ್ಮೆಟಿಕ್ ಬದಲಾವಣೆ ಬೈಕ್‌ಗೆ ಹೆಚ್ಚು ಅಂದತೆಯನ್ನು ಪ್ರದಾನ ಮಾಡಲಿದೆ.

ವರ್ಣಮಯ ಪಲ್ಸರ್ ನಿಮ್ಮ ಮನ ಸೆಳೆಯಿತೇ?

ಒಟ್ಟಿನಲ್ಲಿ 23.5 ಪಿಎಸ್ ಪವರ್ ಉತ್ಪಾದಿಸಲು ಸಾಮರ್ಥ್ಯವುಳ್ಳ (18.3 ಎನ್‌ಎಂ ಟಾರ್ಕ್) 6 ಸ್ಪೀಡ್ ಟ್ರಾನ್ಸ್‌ಮಿಷನ್‌ನ 200ಸಿಸಿ ಬಜಾಜ್ ಪಲ್ಸರ್, ದೀರ್ಘಾವಧಿಯ ವರೆಗೂ ದೇಶದ ನಂ.1 ಸ್ಪೋರ್ಟ್ಸ್ ಬೈಕ್ ಸ್ಥಾನವನ್ನು ಭದ್ರವಾಗಿರಿಸಿಕೊಳ್ಳುವ ಯೋಜನೆ ಹೊಂದಿದೆ.

English summary
The Pulsar 200NS, Bajaj's flagship motorcycle will soon be available in brand new dual tone colour schemes. Bajaj had earlier revealed a couple of the new dual tone colours on Facebook, but has now followed up with an official announcement.
Story first published: Tuesday, December 10, 2013, 16:57 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark