ಡೀಸೆಲ್ ಹೈಬ್ರಿಡ್ ಸ್ಕೂಟರ್ ಜತೆಗೆ ಹೀರೊದಿಂದ 5 ಜಾದೂ!

By Nagaraja

ಭಾರತ ವಾಹನೋದ್ಯಮದ ಇತಿಹಾಸದಲ್ಲೇ ಕ್ರಾಂತಿಕಾರಿ ಬದಲಾವಣೆ ಎಂದೇ ವಿಶ್ಲೇಷಿಸಬಹುದಾದ ವಿಚಾರವೊಂದರಲ್ಲಿ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಪ್ರಪ್ರಥಮ ಡೀಸೆಲ್ ಹೈಬ್ರಿಡ್ ಸ್ಕೂಟರ್ ಜತೆಗೆ ಒಟ್ಟು ಐದು ಮಾದರಿಗಳನ್ನು ಅನಾವರಣಗೊಳಿಸಿದೆ.

ಹೀರೊ ಫೈವ್ ಸ್ಟಾರ್ ಮ್ಯಾಜಿಕ್ ಯಾವುವು?

  • ಡ್ಯಾಶ್ (Dash) - 110ಸಿಸಿ ಸ್ಕೂಟರ್
  • ಆರ್‌ಎನ್‌ಟಿ - 150 ಸಿಸಿ ಡೀಸೆಲ್ ಹೈಬ್ರಿಡ್ ಸ್ಕೂಟರ್ (ಹೈಬ್ರಿಡ್)
  • ಲೀಪ್ (Leap) - 124 ಸಿಸಿ ಹೈಬ್ರಿಡ್ ಸ್ಕೂಟರ್
  • ಎಕ್ಸ್‌ಟ್ರೀಮ್ (Xtreme) - 150 ಸಿಸಿ ಸ್ಪೋರ್ಟ್ಸ್ ಬೈಕ್
  • ಎಚ್‌ಎಕ್ಸ್250ಆರ್ - 250 ಸಿಸಿ ಸ್ಪೋರ್ಟ್ಸ್ ಬೈಕ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಸಾಮಾನ್ಯವಾಗಿ ದ್ವಿಚಕ್ರ ವಾಹನಗಳು ಪೆಟ್ರೋಲ್ ಇಂಧನದಿಂದ ಚಲಿಸುತ್ತದೆ. ಆದರೆ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಹೊಸ ಹೊಸ ಅವಿಷ್ಕಾರದೊಂದಿಗೆ ಮುಂದೆ ಬಂದಿರುವ ಹೀರೊ, ತನ್ನ ನೂತನ ಅವತಾರದೊಂದಿಗೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಆರ್‌ಎನ್‌ಟಿ - 150 ಸಿಸಿ ಡೀಸೆಲ್ ಹೈಬ್ರಿಡ್ ಸ್ಕೂಟರ್ (ಹೈಬ್ರಿಡ್)

ಆರ್‌ಎನ್‌ಟಿ - 150 ಸಿಸಿ ಡೀಸೆಲ್ ಹೈಬ್ರಿಡ್ ಸ್ಕೂಟರ್ (ಹೈಬ್ರಿಡ್)

ಪ್ರಸ್ತುತ ಇಡೀ ದೇಶದ ದ್ವಚಕ್ರ ವಾಹನಗಳ ಚುಕ್ಕಾಣಿ ಹಿಡಿದಿರುವ ಹೀರೊ ನೂತನ ಆರ್‌ಎನ್‌ಟಿ ಡೀಸೆಲ್ ಹೈಬ್ರಿಡ್ ಸ್ಕೂಟರ್ ಪ್ರದರ್ಶಿಸಿದೆ. ಸಾಮಾನ್ಯ ಸ್ಕೂಟರ್‌ಗಿಂತಲೂ ಭಿನ್ನವಾಗಿರಲಿರುವ ನೂತನ ಸ್ಕೂಟರ್ ಲಿಕ್ವಿಡ್ ಕೂಲ್ಡ್ 4 ಸ್ಟ್ರೋಕ್ ಡೈರಕ್ಟ್ ಇಂಜೆಕ್ಷನ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

ಆರ್‌ಎನ್‌ಟಿ

ಆರ್‌ಎನ್‌ಟಿ

ಈ 150ಸಿಸಿ ಹೀರೊ ಆರ್‌ಎನ್‌ಟಿ, ಪ್ರಭಾವಿ 13.5 ಬಿಎಚ್‌ಪಿ (35 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಗರಿಷ್ಠ ಇಂಧನ ಕ್ಷಮತೆ ನೀಡುವುದರೊಂದಿಗೆ ಭಾರದ ವಸ್ತುಗಳನ್ನು ಸಾಗಿಸುವಲ್ಲಿಯೂ ಸಕ್ಷಮವಾಗಿರಲಿದೆ. 136 ಕೆ.ಜಿ ತೂಕ ಹೊಂದಿರುವ ಈ ಬೈಕ್ ಆರು ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಇದು ಕೇವಲ 5 ಸೆಕೆಂಡುಗಳಲ್ಲಿ 0-60 ಕೀ.ಮೀ. ವೇಗವರ್ಧಿಸುವ ಹಾಗೂ ಗಂಟೆಗೆ 70 ಕೀ.ಮೀ. ಗರಿಷ್ಠ ವೇಗದಲ್ಲಿ ಸಂಚರಿಸಲಿದೆ. ಇದು ಲಿಥಿಯಂ ಇಯಾನ್ ಬ್ಯಾಟರಿ ಜತೆಗೆ 8 ಕೆಡಬ್ಲ್ಯು ಎಲೆಕ್ಟ್ರಿಕ್ ಟ್ರಾಕ್ಷನ್ ಮೋಟಾರಿನಿಂದಲೂ ನಿಯಂತ್ರಿಸಲ್ಪಡಲಿದೆ.

ಡ್ಯಾಶ್ - 110ಸಿಸಿ ಸ್ಕೂಟರ್

ಡ್ಯಾಶ್ - 110ಸಿಸಿ ಸ್ಕೂಟರ್

ಇದೇ ಸಂದರ್ಭದಲ್ಲಿ ಡ್ಯಾಶ್ 110ಸಿಸಿ ಸ್ಕೂಟರ್ ಕೂಡಾ ಪ್ರದರ್ಶಿಸಲಾಗಿತ್ತು. ಇದು ಫೋರ್ಸ್ಡ್ ಏರ್ ಕೂಲ್ಡ್, 4 ಸ್ಟ್ರೋಕ್ ಸಿಲಿಂಡರ್ ಒಎಚ್‌ಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಸೈಡ್ ಸ್ಟಾಂಡ್ ಇಂಡಿಕೇಟರ್, ಯುಎಸ್‌ಬಿ ಮೊಬೈಲ್ ಚಾರ್ಜರ್, ಸರ್ವೀಸ್ ಡ್ಯೂ ಇಂಡಿಕೇಟರ್, ಬೂಟ್ ಲೈಟ್, ಕಿ ಜತೆ ಇಕೋಡ್, ಫ್ಯೂಯಲ್ ಲಿಡ್, ಡ್ಯುಯಲ್ ಮೌಲ್ಡಿಂಗ್ ಕೀ, ಅನಾಲಾಗ್ ಡಿಜಿಟಲ್ ಮೀಟರ್ ಮತ್ತು ಎಲ್‌ಇಡಿ ಟೈಲ್ ಲೈಟ್ ಇತರ ಫೀಚರ್‌ಗಳಾಗಿವೆ.

ಎಕ್ಸ್‌ಟ್ರೀಮ್ - 150 ಸಿಸಿ ಸ್ಪೋರ್ಟ್ಸ್ ಬೈಕ್

ಎಕ್ಸ್‌ಟ್ರೀಮ್ - 150 ಸಿಸಿ ಸ್ಪೋರ್ಟ್ಸ್ ಬೈಕ್

ಬೈಕ್ ಪ್ರೇಮಿಗಳಿಗೆ ಇನ್ನಷ್ಟು ಸಂತಸ ತರುವ ನಿಟ್ಟಿನಲ್ಲಿ ನೂತನ 150ಸಿಸಿ ಎಕ್ಸ್‌ಟ್ರೀಮ್ ಬೈಕ್ ಸಹ ಅನಾವರಣಗೊಳಿಸಲಾಗಿತ್ತು.

ಲೀಪ್ - 124 ಸಿಸಿ ಹೈಬ್ರಿಡ್ ಸ್ಕೂಟರ್

ಲೀಪ್ - 124 ಸಿಸಿ ಹೈಬ್ರಿಡ್ ಸ್ಕೂಟರ್

ಇಲ್ಲಿಗೂ ಹೋಂಡಾ ತಂತ್ರಗಾರಿಕೆ ಕೊನೆಗೊಳ್ಳುವುದಿಲ್ಲ. ದೇಶದಲ್ಲಿ ಇದೇ ಮೊದಲ ಬಾರಿಯೆಂಬಂತೆ ಎಲೆಕ್ಟ್ರಿಕ್ ಸರಣಿಯ ಹೈಬ್ರಿಡ್ 'ಲೀಪ್' ಸ್ಕೂಟರ್ ಸಹ ಹೋಂಡಾ ಪ್ರದರ್ಶಿಸಲಾಗಿತ್ತು. ಹೀರೊದ ಜಾಗತಿಕ ಮಾರುಕಟ್ಟೆಯನ್ನು ಗುರಿಯಾರಿಸಿಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ.

ಎಕ್ಸ್‌ಎಕ್ಸ್250ಆರ್ ಸ್ಪೋರ್ಟ್ಸ್ ಬೈಕ್

ಎಕ್ಸ್‌ಎಕ್ಸ್250ಆರ್ ಸ್ಪೋರ್ಟ್ಸ್ ಬೈಕ್

ಅಂತಿಮವಾಗಿ ಹೋಂಡಾ ವಿಶ್ವದರ್ಜೆಯ ಎಚ್‌ಎಖ್ಸ್250ಆರ್ ಕ್ರೀಡಾ ಬೈಕ್ ಸಹ ಪ್ರದರ್ಶಿಸಿದೆ. ಇದರಲ್ಲಿ ಲೇಟೆಸ್ಟ್ ಎಬಿಎಸ್ ತಂತ್ರಜ್ಞಾನ ಕೂಡಾ ಆಳವಡಿಸಲಾಗಿದೆ.

Most Read Articles

Kannada
Story first published: Wednesday, January 29, 2014, 16:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X