2015 ಇಂಡಿಯಾ ಬೈಕ್ ವೀಕ್; ನೀವು ಮಿಸ್ ಮಾಡಿಕೊಳ್ಳಲೇಬಾರದ ಕ್ಷಣಗಳು

Posted By:

2015ನೇ ಸಾಲಿನ ಇಂಡಿಯಾ ಬೈಕ್ ವೀಕ್ ಈ ಹಿಂದಿಂದಿಗಿಂತಲೂ ಹೆಚ್ಚು ಅಚ್ಚುಕಟ್ಟಾಗಿ ಅದೇ ಸಮಯಕ್ಕೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದರಂತೆ ಇಂಡಿಯಾ ಬೈಕ್ ವೀಕ್‌ ವರದಿಗಾಗಿ ತೆರಳಿರುವ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಸಂಗ್ರಹಿಸಿರುವ ಎಕ್ಸ್‌ಕ್ಲೂಸಿವ್ ಚಿತ್ರಗಳನ್ನು ಓದುಗರ ಮುಂದಿಡಲು ಬಯಸುತ್ತಿದ್ದೇವೆ.

ಲೇಟ್ ಆದರೂ ಪರವಾಗಿಲ್ಲ ಲೇಟೆಸ್ಟಾಗಿ ಬರಬೇಕು ಎಂಬುದು ನಮ್ಮಧ್ಯೇಯವಾಗಿದೆ. ಇದರಂತೆ ಇದೇ ತಿಂಗಳ 20 ಹಾಗೂ 21ರಂದು ಗೋವಾದಲ್ಲಿ ಆಯೋಜನೆಯಾದ 2015 ಇಂಡಿಯಾ ಬೈಕ್ ವೀಕ್‌ನ ಕೆಲವೊಂದು ಮಹತ್ವದ ಕ್ಷಣಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲಿದ್ದೇವೆ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇಂಡಿಯಾ ಬೈಕ್ ವೀಕ್‌ನಲ್ಲಿ ಭಾಗವಹಿಸುವುದಕ್ಕಾಗಿ ಹಾರ್ಲೆ ಡೇವಿಡ್ಸ್‌ನ 2,000 ಮಾಲಿಕರು ಒಟ್ಟು ಸೇರಿದ್ದರು. ಇದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತುಂಬಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಸಾಮಾನ್ಯವಾಗಿ ಇಂಡಿಯಾ ಬೈಕ್ ವೀಕ್‌ನಲ್ಲಿ ದ್ವಿಚಕ್ರ ವಾಹನಗಳ ಅಧಿಪತ್ಯ ಕಂಡುಬರುತ್ತಿದೆ. ಆದರೆ ಇದಕ್ಕಿಂತಲೂ ವಿಭಿನ್ನವಾಗಿ ನಮ್ಮ ತಂಡದ ಸದಸ್ಯರು ಬೆಂಗಳೂರಿನಿಂದ ಗೋವಾಗೆ ತೆರಳಲು ಮಹೀಂದ್ರ ಬೊಲೆರೊ ವಾಹನವನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಮೂಲಕ ಸಂಪೂರ್ಣ ಸಾಹಸಮಯ ಯಾತ್ರೆ ಹಮ್ಮಿಕೊಂಡಿದ್ದರು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ವಾಹನ ವಿಮರ್ಶಕರ ಪ್ರಕಾರ ಮೂರನೇ ಆವೃತ್ತಿಯ ಇಂಡಿಯಾ ಬೈಕ್ ವೀಕ್ ಹೆಚ್ಚು ಅಚ್ಚುಕಟ್ಟಾಗಿ ಆಯೋಜನೆಯಾಗಿತ್ತು. ಇದಕ್ಕೆ ಇಲ್ಲಿಗೆ ಆಗಮಿಸಿದ್ದ ವಾಹನ ಪ್ರೇಮಿಗಳೇ ಸಾಕ್ಷಿಯಾಗಿದ್ದಾರೆ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಇದುವರೆಗೆ ಇಂಡಿಯಾ ಬೈಕ್ ವೀಕ್‌ ಪ್ರಮುಖ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಹಾರ್ಲೆ ಡೇವಿಡ್ಸನ್ ಬೈಕ್‌ಗಳ ಅಧಿಪತ್ಯ ಕಾಣಸಿಗುತ್ತಿದ್ದವು. ಇದರಂತೆ ದೇಶದ್ಯಾಂತ ಪಯಣ ಹಮ್ಮಿಕೊಂಡಿದ್ದ 2000ದಷ್ಟು ಹಾರ್ಲೆ ಮಾಲಿಕರು ಗೋವಾ ಪ್ರವೇಶಿಸಿದ್ದರು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಕಳೆದ ವರ್ಷದ ವರೆಗೆ ಹಾರ್ಲೆ ತಮ್ಮ ಪ್ರಭಾವ ಬೀರಿದ್ದರೆ ಈ ಬಾರಿ ಬೆನೆಲ್ಲಿಯಿಂದ ಇತರ ಸೂಪರ್ ಬೈಕ್‌ಗಳು ತಮ್ಮ ತಾಕತ್ತನ್ನು ಮೆರೆದಿದ್ದವು. ಬೆನೆಲ್ಲಿ ಬೈಕ್‌ಗಳನ್ನು ದೇಶಕ್ಕೆ ಪರಿಚಯಿಸಲು ಡಿಎಸ್‌ಕೆ ಪ್ರಮುಖ ಪಾತ್ರ ವಹಿಸಿದ್ದವು.

ಜಿಕ್ಯೂ ಜೆಂಟಲ್‌ಮ್ಯಾನ್ಸ್ ರೈಡ್

ಜಿಕ್ಯೂ ಜೆಂಟಲ್‌ಮ್ಯಾನ್ಸ್ ರೈಡ್

ಐಬಿಡಬ್ಲ್ಯು ಹಾಗೂ ಜಿಕ್ಯೂ ಜಂಟಿಯಾಗಿ ಮ್ಯಾಜಿಕ್ ಬಸ್ ಮುಖಾಂತರ ಜೆಂಟಲ್‌ಮ್ಯಾನ್ಸ್ ರೈಡ್ ಆಯೋಜಿಸಿತ್ತು. ಇಲ್ಲಿ ಸಂಗ್ರಹವಾದ ಮೊತ್ತವನ್ನು ದೇಶದ್ಯಾಂತ ಐದು ಲಕ್ಷದಷ್ಟು ಬಡ ಮಕ್ಕಳಿಗಾಗಿ ನೆರವು ಮಾಡಲಾಗುತ್ತದೆ. ಇಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಂದ ಆರಂಭವಾಗಿ ಗೌರವ್ ಗಿಲ್ (ಇಂಡಿಯಾ ರಾಲಿ ಚಾಂಪಿಯನ್), ಅರ್ಜುನ್ ಖನ್ನಾ, ಅನೂಪ್ ಪ್ರಕಾಶ್ (ಭಾರತದ ಹಾರ್ಲೆ ಡೇವಿಡ್ಸನ್ ನಿರ್ದೇಶಕ) ಮುಂತಾದವರು ನಿಧಿ ಸಂಗ್ರಹಕ್ಕಾಗಿ ಭಾಗವಹಿಸಿದ್ದರು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಇದೇ ಸಂದರ್ಭದಲ್ಲಿ ಡಾಗ್ ಡ್ರಾಗ್ ರೇಸ್ ಕೂಡಾ ಆಯೋಜನೆಯಾಗಿತ್ತು. ಇಲ್ಲಿ ಟು ಸ್ಟ್ರೋಕ್, ಫೋರ್ ಸ್ಟ್ರೋಕ್ ಎಲ್ಲ ಗಾಡಿಗಳು ತಮ್ಮ ಅದೃಷ್ಟು ಪರೀಕ್ಷೆ ನಡೆಸಿದ್ದವು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಅಷ್ಟೇ ಯಾಕೆ ವೆಸ್ಪಾ ಹಾಗೂ ಟಿವಿಎಸ್‌ಗಳಂತಹ ಸಂಸ್ಥೆಗಳು ಸ್ಟಂಟ್ ಶೋ ಕೂಡಾ ಆಯೋಜಿಸಿದ್ದವು. ಇದು ನೆರೆದಿದ್ದವರಲ್ಲಿ ಹೆಚ್ಚಿನ ರೋಚಕತೆ ಸೃಷ್ಟಿಮಾಡಿದ್ದವು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಅಲ್ಲದೆ ಅತ್ಯುತ್ತಮ ಸ್ಟಂಟ್ ಚಾಲಕರಿಗೆ 50,000 ರು.ಗಳ ನಗದು ಬಹುಮಾನವನ್ನು ನೀಡಲಾಗಿತ್ತು. ಅಂತೆಯೇ 2015ನೇ ಸಾಲಿನ ನ್ಯಾಷನಲ್ ಸ್ಟಂಟ್ ಚಾಂಪಿಯನ್ ಆಗಿ ಥ್ರಾಟ್ಟಲ್ಲರ್ಸ್ ಮೂಡಿ ಬಂದಿದೆ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ವಿಶೇಷವೆಂದರೆ ಈ ಬಾರಿ ಆಯೋಜಕರೆ ವಿಶೇಷ ಟೆಂಟ್‌ಗಳನ್ನು ನಿರ್ಮಿಸುವ ಮೂಲಕ ಇಲ್ಲಿಗೆ ಬರುವವರಿಗೆ ವಿನೂತನ ಅನುಭವ ಒದಗಿಸಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಇಂಡಿಯಾ ಬೈಕ್ ವೀಕ್ ಆಯೋಜಕರಾದ ಮಾರ್ಟಿನ್ ಡೆ ಕೋಸ್ಟಾ ಜೊತೆ ಡ್ರೈವ್ ಸ್ಪಾರ್ಕ್ ಪ್ರಧಾನ ಸಂಪಾದಕರಾದ ಜೊಬೊ ಕುರುವಿಲ್ಲಾ ಹಾಗೂ ಉಪ ಸಂಪಾದಕ ಅಜಿಂಕ್ಯಾ ಪ್ಯಾರಾಲಿಕರ್.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಹಾಗೆ ಮುಂದಕ್ಕೆ ಸಾಗುತ್ತಿರುವಾಗ ದೈತ್ಯಕಾರಾದ ಬೈಕ್ ವೊಂದು ನಮ್ಮ ಸ್ವಾಗತಕ್ಕೆ ನಿಂತಿತ್ತು. ಅದುವೇ ಹ್ಯೂಬರ್ಟ್.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಪ್ರತಿಯೊಂದು ಆಟೋ ಶೋದ ಯಶಸ್ಸಿನಲ್ಲಿ ಮಾಡೆಲ್‌ಗಳ ಮೈಮಾಟ ನಿರ್ಣಾಯಣಕವೆನಿಸುತ್ತದೆ. ಇಲ್ಲಿಯೂ ದೇಶ ವಿದೇಶದ ಚೆಲುವೆಯರು ಎಕ್ಸ್‌ಕ್ಲೂಸಿವ್ ಬೈಕ್‌ಗಳಿಗೆ ತಮ್ಮ ಮೆರಗು ತುಂಬಿದ್ದರು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ರೆಡ್ ಬಸ್ ಟೂರಿಂಗ್ ಬಸ್ ಮೇಲ್ಗಡೆ ಡ್ಯಾನ್ಸ್ ಮೇಳ ಇನ್ನಷ್ಟು ಕುತೂಹಲವೆನಿಸಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಇನ್ನು ತುರ್ತು ಪರಿಸ್ಥಿತಿಗಾಗಿ ವಿಶೇಷ ಸಜ್ಜೀಕರಣದ ಆಂಬುಲೆನ್ಸ್ ಸೇವೆಯನ್ನು ಏರ್ಪಡಿಸಲಾಗಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಇಂಡಿಯನ್ ಸ್ಕೌಟ್ ಕ್ರೂಸರ್ ಬೈಕ್‌ನಲ್ಲಿ ಲಕಲಕ ಮಿಂಚುತ್ತಿರುವ ಚೆಲುವೆ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಇನ್ನು ಇಂಡಿಯಾ ಬೈಕ್ ವೀಕ್‌ನಲ್ಲಿ ಪಾಪ್ ಸಂಗೀತಕ್ಕೆ ಕಡಿಯೇನಿರಲಿಲ್ಲ. ಇದು ಪರಿಪೂರ್ಣ ಮನರಂಜನೆಗೆ ಕಾರಣವಾಗಿದೆ ಅಂದರೆ ತಪ್ಪಾಗಲಾರದು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ದೈತ್ಯಾಕಾರಾದ ಇಂಡಿಯನ್ ಮೋಟಾರ್‌ಸೈಕಲ್‌ನಲ್ಲಿ ಫೋಸ್ ನೀಡುತ್ತಿರುವ ಮಾದಕ ಚೆಲುವೆ

2015 ಇಂಡಿಯಾ ಬೈಕ್ ವೀಕ್ ಹಬ್ಬ

ಇಂಡಿಯಾ ಬೈಕ್ ವೀಕ್‌ನಲ್ಲಿ ಬಿಕಿನಿ ಬೈಕ್ ಶೋ ಮಗದೊಂದು ಆಕರ್ಷಣೆಯಾಗಿತ್ತು. ಆದರೆ ಇದು ಹಿಂದಿನಷ್ಟು ಅಚ್ಚುಕಟ್ಟಾಗಿ ಆಯೋಜನೆಯಾಗಿರಲಿಲ್ಲ. ಇದಕ್ಕೆ ಬಿಕಿನಿಯವರ ಕೊರತೆ ಕಾಡಿತೇ ಎಂಬುದು ದೇವರು ಬಲ್ಲ!

2015 ಇಂಡಿಯಾ ಬೈಕ್ ವೀಕ್ ಹಬ್ಬ

ಏತನ್ಮಧ್ಯೆ ಇಂಡಿಯಾ ಬೈಕ್ ವೀಕ್‌ನಲ್ಲಿ ಭಾಗವಹಿಸಿದ್ದ ದೇಶದ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ನೆರೆದಿದ್ದವರನ್ನು ಹುರಿದುಂಬಿಸಿದ್ದರು. ಇದು ಹೆಚ್ಚಿನ ಉತ್ತೇಜನಕ್ಕೆ ಕಾರಣವಾಗಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ವಿಶೇಷ ವಿನ್ಯಾಸಿದ ಎಲಿಯನ್ ಬೈಕ್ ಶೋ ವಾಹನ ಪ್ರೇಮಿಗಳಲ್ಲಿ ಸ್ವಲ್ಪ ಹೊತ್ತು ರೋಚಕತೆ ಸೃಷ್ಟಿ ಮಾಡುವುದರಲ್ಲಿ ಯಶಸ್ವಿಯಾಗಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಇಂತಹ ಹೆಲ್ಮೆಟ್ ಎಲ್ಲಿಂದ ಸಿಗುತ್ತೋ ಗೊತ್ತಿಲ್ಲ. ಈ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿದ್ದರೆ ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಪ್ರತಿಕ್ರಿಯಿಸಿರಿ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಹಾಗೆ ನಾವು ಚಿಂತಿಸುತ್ತಿರಬೇಕಾದರೆ ಅಲ್ಲಿಂದ ಬಂದ ಓರ್ವ ಹುಡುಗನ ತಲೆ ಮೇಲಿರುವ ವಿಶಿಷ್ಟ ಹೆಲ್ಮೆಟ್ ನಮ್ಮ ಕುತೂಹಲ ಇನ್ನಷ್ಟು ಕಾಡುವಂತೆ ಮಾಡಿತ್ತು. ಮಕ್ಕಳಂತೂ ಸಂಪೂರ್ಣ ಮನರಂಜನೆಯನ್ನು ಸವಿದಿದ್ದರು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ರೇಸ್ ಪ್ರಿಯರು ಈ ಬೈಕ್ ಅನ್ನು ಸುಲಭವಾಗಿ ಗುರುತಿಸಬಲ್ಲರು. ಇದುವೇ ಎಪ್ರಿಲಿಯಾ ಆರ್‌ಎಸ್‌ವಿ4. ಇದನ್ನು ಮ್ಯಾಕ್ಸ್ ಬಿಯಗ್ಗಿ ಎಂಬವನ್ನು ಅಭಿವೃದ್ಧಿಪಡಿಸಿದ್ದಾರೆ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಚೆಲುವಿನ ಚಿತ್ತಾರವಾಡಿದ ಬಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 302.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಆದರೆ ಅಲ್ಲಿ ಸೇರಿರುವ ಏಕ ಮಾತ್ರ ಗುರಿ ಯುವರಾಜ್ ಸಿಂಗ್ ಅವರ ಬೈಕ್ ಹುಡುಕಾಡುವುದಾಗಿತ್ತು. ಕೊನೆಗೂ ನಾವಿದ್ದರಲ್ಲಿ ಯಶಸ್ವಿ ಕಂಡೆವು. ಆಟೋಲೊಗ್‌ನಿಂದ ವಿನ್ಯಾಸಿತ ಈ ವಿಶೇಷ ಬೈಕ್ ಅನ್ನು ಹರಾಜಿಗಿಡಲಾಗಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಯುವಿ ಅವರ ಕೆಟಿಎಂ ಎಕ್ಸ್ 12 ಬೈಕ್‌ನ ಇನ್ನೊಂದು ನೋಟ ಇಲ್ಲಿದೆ ನೋಡಿ. ಹರಾಜಿನಿಂದ ಸಂಗ್ರಹವಾದ ನಿಧಿಯನ್ನು ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕಾಗಿ ಬಳಸಲಾಗುತ್ತದೆ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಹಾಗಿರುವಾಗ ಎರಡು ಕವಾಸಕಿ ಬೈಕ್‌ಗಳ ನಡುವೆ ರುಯಿಂ ರುಯಿಂ ಸ್ಪರ್ಧೆ ಜೋರಾಗಿಯೇ ಕೇಳಿ ಬರುತ್ತಿತ್ತು. ರೇಸ್ ಡೈನಾಮಿಕ್ಸ್ ಆಯೋಜಿಸಿದ್ದ ಡೈನೊ ವಾರ್‌ನಲ್ಲಿ ಕೊನೆಗೂ ನಿಂಜಾ ಝಡ್‌ಎಕ್ಸ್10ಆರ್ ಮಾದರಿಗೆ ಝಡ್‌ಎಕ್ಸ್14ಆರ್ ಮಣಿದಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಪ್ರತಿ ವರ್ಷದಂತೆ ಈ ಬಾರಿಯೂ ಕಸ್ಟಮ್ ಬೈಕ್ ಪ್ರಮುಖ ಆಕರ್ಷಣೆಯಾಗಿದ್ದವು. ಇದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ವಿಶೇಷ ಮಾರ್ಪಾಡುಗೊಂಡ ದ್ವಿಚಕ್ರ ವಾಹನಗಳು ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿದೆ. ಇದು ಚಾಲಕರಿಗೆ ಆರಾಮದಾಯಕ ಚಾಲನೆ ನೀಡುವುದೋ ಗೊತ್ತಿಲ್ಲ. ಆದರೆ ನೋಡುಗರಿಗಂತೂ ರಸದೌತಣ ನೀಡಿರುವುದಂತೂ ಗ್ಯಾರಂಟಿ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಟ್ರೈಕ್ ಬೈಕ್ ವಿದೇಶಗಳಲ್ಲಿ ಹೆಚ್ಚಿನ ಜನಪ್ರಿಯತೆ ಕಾಯ್ದುಕೊಂಡಿದೆ. ವಿಶೇಷ ಬಣ್ಣಗಳಿಂದ ಆಲಂಕೃತ ಈ ಬೈಕ್ ನೋಡುವುದೇ ಒಂಥರ ಖುಷಿ ನೀಡುತ್ತದೆ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಯಾರು ಹೇಳಿದರು ಕಸ್ಟಮ್ ಬೈಕ್ ದೈತ್ಯಕಾರಾದ ವಿನ್ಯಾಸವನ್ನು ಹೊಂದಿರಬೇಕಂತ? ಇದಕ್ಕೆ ತದ್ವಿರುದ್ಧವಾದ ಬೈಕ್ ಇಲ್ಲಿದೆ ನೋಡಿ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ರಿಯಾ ಹುಸೇನ್ ಮಗದೊಮ್ಮೆ ಬೈಕ್ ವೀಕ್ ಬೈಕರ್ ಬಿಲ್ಡ್ ಬಹುಮಾನ ಗೆದ್ದರು. ತದಾ ಬೆನ್ನಲ್ಲೇ ಇವರ ಈ ಕಸ್ಟಮ್ ಬೈಕ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು ಓರ್ವ ಅಜ್ಞಾತ 32 ಲಕ್ಷ ರು. ನೀಡುವುದಾಗಿ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇಂಡಿಯಾ ಬೈಕ್ ವೀಕ್‌ಗೆ ಆಗಮಿಸಿದ ಮಹಿಳೆಯರ ಸಂಖ್ಯೆಯಲ್ಲೂ ವೃದ್ಧಿ ಕಂಡುಬಂದಿತ್ತು. ಇವರಲ್ಲಿ ಸಮೀಕ್ಷಾ ಬಾಲಿ ಕೂಡಾ ಓರ್ವಾಕೆಯಾಗಿದ್ದಾರೆ.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಮಕ್ಕಳಿಗೂ ವಿನೂತನ ಶೈಲಿಯ ಬೈಕ್‌ಗಳು ಮರೆಯಲಾಗದ ಅನುಭವವಾಗಿತ್ತು. ತಮ್ಮ ಕುಟುಂಬದ ಜೊತೆ ಬಂದವರಿಗೆ ಇಂಡಿಯಾ ಬೈಕ್ ವೀಕ್ ಅದ್ಭುತ ಅನುಭವ ನೀಡಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಕೇವಲ ಭಾರತೀಯರಷ್ಟೇ ಅಲ್ಲದೆ ವಿದೇಶಿಗರೂ ಇಂಡಿಯಾ ಬೈಕ್ ವೀಕ್‌ನಲ್ಲಿ ಭಾಗವಹಿಸುವುದಕ್ಕಾಗಿ ತಮ್ಮ ಸಮಯವನ್ನು ಮೀಸಲಿಟ್ಟಿದ್ದರು. ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ಅಮೆರಿಕ ದೇಶದಿಂದಲೂ ದ್ವಿಚಕ್ರ ಪ್ರೇಮಿಗಳು ದೇಶದ ನೆಚ್ಚಿನ ಪ್ರವಾಸಿ ತಾಣಕ್ಕೆ ದೌಡಾಯಿಸಿದ್ದರು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಏಸ್ ಕೆಫೆ ಲಂಡನ್ ಸವಾರರಿಗಾಗಿ ವಿಶೇಷ ಸ್ಟಾಲ್ ಕೂಡಾ ತೆರೆದಿತ್ತು. ಇಲ್ಲಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಹಾರ್ಲೆ ಡೇವಿಡನ್ಸ್ ಹಾಗೂ ರಾಜಪೂತನಾ ಕಸ್ಟಮ್ಸ್ ಸಹ ತಮ್ಮ ಸಾಮರ್ಥ್ಯ ತೋರ್ಪಡಿಸಲು ಇಂದೊಂದು ಉತ್ತಮ ವೇದಿಕೆಯಾಗಿತ್ತು ಅಂದರೆ ತಪ್ಪಾಗಲಾರದು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಒಟ್ಟಿನಲ್ಲಿ ಇಂಡಿಯಾ ಬೈಕ್ ವೀಕ್ ಎಂಬುದು ಬೈಕ್ ಪ್ರೇಮಿ ಹಾಗೂ ಉತ್ಸಾಹಿಗಳಿಗೆ ನಿಜಕ್ಕೂ ಹಬ್ಬದ ಅನುಭವವಾಗಿತ್ತು. ಇಲ್ಲಿ ದೇಶದ ಹಲವಾರು ಪ್ರತಿಷ್ಠಿತ ಬೈಕ್ ಕ್ಲಬ್‌ಗಳು ಭಾಗವಹಿಸಿದ್ದವು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಇನ್ನು ಆಯಾಸಗೊಂಡವರಿಗಾಗಿ ರೆಡ್ ಬುಲ್ ಎನರ್ಜಿ ತಂಪು ಪಾನೀಯಗಳನ್ನು ಏರ್ಪಡಿಸಲಾಗಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ರಾತ್ರಿ ವೇಳೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಂಗೀತ ರಸಮಂಜರಿ, ಡ್ಯಾನ್ಸ್ ಹಾಗೂ ಇನ್ನಿತರ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಈ ಬಾರಿ ಡಿಜೆ ನುಕ್ಲೆಯಾ ನೆರೆದಿದ್ದವರನ್ನು ನಿರಾಸೆಗೊಳಿಸಲ್ಲ. ಒಟ್ಟಾರೆಯಾಗಿ ಒಂದು ಕಂಪ್ಲೀಟ್ ಶೋದ ಅನುಭವ ನೀಡಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

'ದಿನಕ್ಕೊಂದು ಆಪಲ್ ಸೇವಿಸಿದರೆ ವೈದ್ಯರನ್ನು ದೂರವಿಡಬಹುದಂತೆ'. ಆದರೆ ಇಂಡಿಯಾ ಬೈಕ್ ವೀಕ್ ಪಾಲಿಗಿದು 'ದೈನಂದಿನ ಬೈಕ್ ಸವಾರಿ ಮಾಡಿ ಎಲ್ಲ ಸಮಸ್ಯೆಗಳಿಂತ ದೂರವಿರಿ' ಎಂಬುದು ಧ್ಯೇಯವಾಕ್ಯವಾಗಿತ್ತು.

2015 ಇಂಡಿಯಾ ಬೈಕ್ ವೀಕ್ ಹಬ್ಬ

ಈಗ ಇಂಡಿಯಾ ಬೈಕ್ ವೀಕ್ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

English summary
The event was held on the 20th and 21st of this month in Goa. A place where parties can carry on for days, or sometimes never end. Let's take a look at some of the big moments you missed from this year's edition of the extremely popular event..

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark