ಇನ್ನು ದೇಶದ ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ ಅಬ್ಬರ

Written By:

ದೇಶದ ದ್ವಿಚಕ್ರ ಸವಾರರಿಗೆ ಸಿಹಿ ಸುದ್ದಿಯೆಂಬಂತೆ ನೂತನ ಕೆಟಿಎಂ ಡ್ಯೂಕ್ 390 ಭಾರತ ಪ್ರವೇಶ ಮಾಡಿದೆ. ಕಳೆದ ವಾರವೇ ಲಾಂಚ್ ಆಗಿರುವ ಕೆಟಿಎಂ ಡ್ಯೂಕ್ ಪ್ರಾರಂಭಿಕ ಎಕ್ಸ್ ಶೋ ರೂಂ ದರ 1.8 ಲಕ್ಷಗಳಾಗಿರುವುದು ಬೈಕ್ ಪ್ರಿಯರ ಸಂತಸವನ್ನು ಇಮ್ಮಡಿಗೊಳಿಸಿದೆ.

ಅಂದರೆ ನಮ್ಮ ಬೆಂಗಳೂರಿನಲ್ಲಿ 2 ಲಕ್ಷ ಅಸುಪಾಸಿನಲ್ಲಿ ಬಹುನಿರೀಕ್ಷಿತ ಕೆಟಿಎಂ ಡ್ಯೂಕ್ 390 ಬೈಕ್ ರಸ್ತೆಗಿಳಿಸುವ ಎಲ್ಲ ಸಾಧ್ಯತೆಯು ಕಂಡುಬರುತ್ತಿದೆ. ಕೆಟಿಎಂನಲ್ಲಿ ಎಬಿಎಸ್ ತಂತ್ರಜ್ಞಾನವಿರುವುದು ಇನ್ನಷ್ಟು ಆಕರ್ಷಕಣೆಗೆ ಕಾರಣವಾಗಿದೆ.

ಕೆಟಿಎಂ ಡ್ಯೂಕ್ ನಿರ್ವಹಣೆ ಬಗ್ಗೆ ಯಾವುದೇ ಸಂದೇಹಗಳಿಲ್ಲ. ದೇಶದಲ್ಲಿ ಬಜಾಜ್ ಜತೆ ಪಾಲುದಾರಿಕೆ ಹೊಂದಿರುವ ಕೆಟಿಎಂ ತನ್ನ ಆವೃತ್ತಿಗಳಿಗೆ ಗರಿಷ್ಠ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

KTM Duke 390

ನೂತನ ಕೆಟಿಎಂ ಡ್ಯೂಕ್ 390 373.3 ಸಿಸಿ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್, ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 9000 ಆರ್‌ಪಿಎಂನಲ್ಲಿ 43.3 ಪಿಎಸ್ ಪವರ್ ಹಾಗೂ 7000 ಆರ್‌ಪಿಎಂನಲ್ಲಿ 35 ಎನ್‌ಎಂ ಟರ್ಕ್ಯೂ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

KTM Duke 390

ಹೊಸ ಕೆಟಿಎಂ ಡ್ಯೂಕ್ 390 ಕೇವಲ ಏಳು ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ 170 ಕೀ.ಮೀ. ಗರಿಷ್ಠ ವೇಗವನ್ನು ಪಡೆಯಲಿದೆ.

KTM Duke 390

ಕೆಟಿಎಂ ಡ್ಯೂಕ್ ಬೈಕ್ ಬಹುತೇಕ ಸ್ಥಳೀಯವಾಗಿ ನಿರ್ಮಿಸಿರುವುದರಿಂದ ಸ್ಮರ್ಧಾತ್ಮಕ ದರಗಳಲ್ಲಿ ಆಗಮಿಸಲು ನೆರವಾಗಿದೆ. ಬಜಾಜ್ ಆಟೋ ನೇತೃತ್ವದಲ್ಲಿ ತಯಾರಿಸಲಾಗುತ್ತಿರುವ ಕೆಟಿಎಂ ಡ್ಯೂಕ್ ವಿದೇಶಗಳಿಗೂ ರವಾನೆಯಾಗಲಿದೆ.

KTM Duke 390

ನೂತನ ಕೆಟಿಎಂ ಡ್ಯೂಕ್ 390 ಎಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಪಡೆದುಕೊಂಡಿದೆ. ಇದು ಬೈಕ್‌ನ ಪ್ರಮುಖ ವೈಶಿಷ್ಟ್ಯವಾಗಿದೆ.

KTM Duke 390

ನಿಮ್ಮ ಮಾಹಿತಿಗಾಗಿ ಕೆಟಿಎಂ ಡ್ಯೂಕ್ 390 ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.

KTM Duke 390

ಆಕರ್ಷಕ ಲುಕ್

KTM Duke 390

ಆಕರ್ಷಕ ಲುಕ್

ಕೆಟಿಎಂ ಡ್ಯೂಕ್ 390

ಕೆಟಿಎಂ ಡ್ಯೂಕ್ 390

English summary
Perhaps the most anticipated performance bike launch in India, KTM Duke 390 has at last officially arrived. KTM has managed to not to disappoint the Indian biking enthusiasts by keeping the price of the Duke 390 extremely competitive.
Story first published: Tuesday, July 2, 2013, 11:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark