ಜಿನೆವಾದತ್ತ ಬೆಂಝ್ ಎಸ್‌ಎಲ್65 ಸವಾರಿ
ಜಿನೆವಾ ಆಟೋ ಶೋ ಹತ್ತಿರ ಬಂದಿರುವಂತೆಯೇ ಪ್ರತಿಷ್ಠಿತ ಕಂಪನಿಗಳಿಂದ ಅನೇಕ ಕಾರುಗಳು ಅನಾವರಣಗೊಳ್ಳಲು ಸಜ್ಜಾಗಿ ನಿಂತಿದೆ. ಜರ್ಮನಿಯ ಮುಂಚೂಣಿಯ ಕಂಪನಿ ಮರ್ಸಿಡಿಸ್ ಬೆಂಝ್ ಕೂಡಾ ಎಸ್‌ಎಲ್65 ಎಎಂಜಿ ಪ್ರದರ್ಶಿಸಲಿದೆ.
ಈ ರೊಡ್‌ಸ್ಟರ್ ಎಡಿಷನ್ ಬೆಂಝ್ ಕಾರು ಡ್ರೈವಿಂಗ್ ಮಾಡಬೇಕೆಂಬುದು ಪ್ರತಿಯೊಬ್ಬರ ಹಂಬಲವಾಗಿರುತ್ತದೆ. ಬ್ರಬಾಸ್ ಟ್ಯೂನಿಂಗ್ ಹೌಸ್ ಈ ನೂತನ ಮರ್ಸಿಡಿಸ್ 800 ಟ್ಯೂನ್ ಮಾಡಿದೆ.
ಅಂದರೆ 800 ಹಾರ್ಸ್ ಪವರ್ ಉತ್ಪಾದಿಸುವ ಈ ಕಾರು ಕೇವಲ 3.7 ಸೆಕೆಂಡುಗಳಲ್ಲಿ 0-62 ಮೈಲ್ ವೇಗ ವರ್ಧಿಸುವ ಸಾಮರ್ಥ್ಯ ಹೊಂದಿದೆ.
ಇದರ ಕಾರ್ಬನ್ ಫೈಬಲ್ ಫೇಸ್‌ಲಿಫ್ಟ್ ಗರಿಷ್ಠ ನಿರ್ವಹಣೆಯನ್ನು ಖಾತ್ರಿಪಡಿಸುತ್ತಿದೆ. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಹೆಚ್ಚಿನ ಮಾಹಿತಿ ಪಡೆಯೋಣವೇ...

ಮರ್ಸಿಡಿಸ್ ಬೆಂಝ್ ಎಸ್‌ಎಲ್65 ರೊಡ್‌ಸ್ಟರ್‌ನಲ್ಲಿ ಗರಿಷ್ಠ ನಿರ್ವಹಣೆಯ 6.0 ಲೀಟರ್ ವಿ12 ಎಂಜಿನ್ ಆಳವಡಿಸಲಾಗಿದೆ.

ಬ್ರಬಾಸ್ 800 ರೊಡ್‌ಸ್ಟರ್ 5,500 ಆರ್‌ಪಿಎಂನಲ್ಲಿ 800 ಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಕೇವಲ 3.7 ಸೆಕೆಂಡುಗಳಲ್ಲಿ 100 ಕೀ. ಮೀ ವೇಗತೆಯನ್ನು ಪಡೆದುಕೊಡಲಿದೆ. ಹಾಗೆಯೇ ಕಾರಿನ ವೇಗತೆ ಗಂಟೆಗೆ 350 ಕೀ.ಮೀ. ಆಗಿದೆ.

ಕಾರ್ಬಲ್ ಫೈಬರ್ ವುಡ್ ಸ್ಕೂಪ್ ಬಾಡಿ ಎಂಜಿನ್ ಕೂಲ್ ಮಾಡಲು ನೆರವಾಗಲಿದೆ.






Click it and Unblock the Notifications








