ಅಮೆರಿಕ ಹೃದಯ ಭಾಗದಿಂದ ಇನ್ನೊಂದು ಸ್ಪೋರ್ಟ್ಸ್ ಬೈಕ್

By Nagaraja

ಅಮೆರಿಕದ ಒರ್ಲ್ಯಾಂಡೊದಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಅಮೆರಿಕನ್ ಇಂಟರ್‌ನ್ಯಾಷನಲ್ ಮೋಟಾರ್ ಸೈಕಲ್ ಎಕ್ಸ್‌ಪೋದಲ್ಲಿ ಎರಿಕ್ ಬ್ಯುಯೆಲ್ ರೇಸಿಂಗ್ ತನ್ನ ನೂತನ ಇಬಿಆರ್ 1190ಆರ್‌ಎಕ್ಸ್ ಸೂಪರ್ ಬೈಕ್‌ನೊಂದಿಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಇದು 1190ಆರ್‌ಎಸ್ ಆವೃತ್ತಿಯ ಪ್ರೀಮಿಯಂ ವರ್ಷನ್ ಆಗಿದ್ದು, ಇದು ಪ್ರಮುಖವಾಗಿಯೂ ಯುರೋಪ್ ಹಾಗೂ ಜಪಾನ್ ಆವೃತ್ತಿಗಳಾದ ಡುಕಾಟಿ 1190 ಪೈನಿಗಲೆ ಹಾಗೂ ಕವಾಸಕಿ ನಿಂಜಾ ಸೂಪರ್ ಬೈಕ್‌ಗಳಿಗೆ ಪೈಪೋಟಿ ಒಡ್ಡಲಿದೆ.

ಒಟ್ಟಿನಲ್ಲಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಇನ್ನೊಂದು ಸೂಪರ್ ಬೈಕ್ ಅಮೆರಿಕದ ಹೃದಯ ಭಾಗದಿಂದ ಹೊರಹೊಮ್ಮಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಆರ್‌ಎಕ್ಸ್

ಇನ್ನು ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಆಗಮಿಸಿರುವುದು ಎರಿಕ್ ಬ್ಯುಯೆಲ್‌ಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿಲಿದೆ. ನೂತನ 1190ಆರ್ ಎಕ್ಸ್ 12 ಲಕ್ಷ ರು.ಗಳ ಅಸುಪಾಸಿನಲ್ಲಿ ದೊರಕಲಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಆರ್‌ಎಕ್ಸ್

ನಿಮ್ಮ ಮಾಹಿತಿಗಾಗಿ, ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲೂ ಎರಿಕ್ ಬ್ಯುಯಲ್ ರೇಸಿಂಗ್ ತಂಡ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಆರ್‌ಎಕ್ಸ್

ನೂತನ ಸೂಪರ್ ಬೈಕ್ 1190 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 185 ಅಶ್ವಶಕ್ತಿ (137.8 ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಆರ್‌ಎಕ್ಸ್

ಇನ್ನು ಇತರ ಆವೃತ್ತಿಗಳಿಗೆ ಹೋಲಿಸಿದರೆ ಇಬಿಆರ್ 1190ಆರ್‌ಎಕ್ಸ್ ಕಡಿಮೆ ಭಾರವನ್ನು (419 lbs/190 kg) ಹೊಂದಿರಲಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಆರ್‌ಎಕ್ಸ್

ಇದು ಡುಕಾಟಿ ಶೈಲಿ ಪಡೆದುಕೊಂಡಿರುವುದು ನೇರ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ. ಹಾಗೆಯೇ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಡಿಸ್ಲೇ ಹಾಗೂ ಎಲ್‌ಇಡಿ ಹೆಡ್ ಲೈಟ್ ಕೂಡಾ ಅಂದತೆಯನ್ನು ಹೆಚ್ಚಿಸಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಆರ್‌ಎಕ್ಸ್

ಸ್ಟ್ರೈಕ್ ಯಲ್ಲೊ, ರೇಸಿಂಗ್ ರೆಡ್ ಹಾಗೂ ಗ್ಯಾಲಕ್ಟಿಕ್ ಬ್ಲ್ಯಾಕ್ ಕಲರ್ ವೆರಿಯಂಟ್‌ಗಳಲ್ಲಿ ಇಬಿಆರ್ 1190ಆರ್‌ಎಕ್ಸ್ ಲಭ್ಯವಿರಲಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಆರ್‌ಎಕ್ಸ್

30 ವರ್ಷಕ್ಕೂ ಹೆಚ್ಚು ರೇಸಿಂಗ್, ಎಂಜಿನಿಯರಿಂಗ್ ಹಾಗೂ ತಯಾರಕ ಅನುಭವ ಹೊಂದಿರುವ ಎರಿಕ್ ಬ್ಯುಯೆಲ್ ರೇಸಿಂಗ್, ತನ್ನೆಲ್ಲ ಮಾದರಿಗಳಲ್ಲೂ ಗರಿಷ್ಠ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಆರ್‌ಎಕ್ಸ್

ಪ್ರಸ್ತುತ ಅಮೆರಿಕದ ಹೃದಯ ಭಾಗದಿಂದ ಬಂದಿರುವ 2014 ಇಬಿಆರ್ 11090ಆರ್‌ಎಕ್ಸ್ ಇನ್ನೊಂದು ವಿಶ್ವದರ್ಜೆಯ ಸ್ಪೋರ್ಟ್ಸ್ ಬೈಕಾಗಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಆರ್‌ಎಕ್ಸ್

ಅಮೆರಿಕನ್ ಇಂಟರ್ ನ್ಯಾಷನಲ್ ಮೋಟಾರ್ ಸೈಕಲ್ ಎಕ್ಸ್ ಪೋ (ಎಐಎಂಎಕ್ಸ್‌ಪೋ) ಅಕ್ಟೋಬರ್ 16ರಂದು ಆರಂಭವಾಗಿದ್ದು 20ರ ವರೆಗೆ ಸಾಗಲಿದೆ.

More from DriveSpark

Article Published On: Friday, October 18, 2013, 10:37 [IST]
English summary
Erik Buell Racing unveiled its new EBR 1190RX superbike at the 2013 AIMExpo in Orlando, U.S.A on October 16. The 1190RX is a long awaited and affordable version of the premium limited production 1190RS.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+