ಎರಿಕ್ ಬ್ಯುಯೆಲ್ ರೇಸಿಂಗ್ 1190ಎಸ್‌ಎಕ್ಸ್ ಅನಾವರಣ

By Nagaraja

ದೇಶದ ನಂ.1 ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೀರೊ ಮೊಟೊಕಾರ್ಪ್ ಜೊತೆ ಪಾಲುದಾರಿಕೆ ಹೊಂದಿರುವ ಅಮೆರಿಕ ಮೂಲದ ಎರಿಕ್ ಬ್ಯುಯೆಲ್ ರೇಸಿಂಗ್, ಸ್ಟ್ರೀಟ್‌ಫೈಟರ್ ವಿಭಾಗದಲ್ಲಿ ನೂತನ ಬೈಕ್ ಅನಾವರಣಗೊಳಿಸಿದೆ.

ಇಂಡಿಯನಾಪೊಲಿಸ್ ಮೋಟಾರು ಸ್ಪೀಡ್‌ವೇದಲ್ಲಿ ನೂತನ 2015 ಎರಿಕ್ ಬ್ಯುಯೆಲ್ ರೇಸಿಂಗ್ 1190ಎಸ್‌ಎಕ್ಸ್ ಅನಾವರಣಗೊಳಿಸಲಾಗಿದೆ. ಇದು ಪ್ರಮುಖವಾಗಿಯೂ 1190ಆರ್‌ಎಕ್ಸ್ ತಲಹದಿಯಲ್ಲಿ ರೂಪುಗೊಂಡಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಎಸ್‌ಎಕ್ಸ್ ಅನಾವರಣ

1190ಆರ್‌ಎಕ್ಸ್ ನೇಕ್ಡ್ ವರ್ಷನ್ ಆಗಿರುವ 1190ಎಸ್‌ಎಕ್ಸ್, ಇತರ ಸೂಪರ್ ಬೈಕ್‌ಗಳಿಂದ ಪ್ರತ್ಯೇಕಿಸುವ ನಿಟ್ಟಿನಲ್ಲಿ ಮೆಕ್ಯಾನಿಕಲ್ ಭಾಗಗಳಲ್ಲಿ ಪರಿಷ್ಕೃತಗೊಳಿಸಲಾಗಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಎಸ್‌ಎಕ್ಸ್ ಅನಾವರಣ

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ನೂತನ 1190ಎಸ್‌ಎಕ್ಸ್ 1190 ಸಿಸಿ ವಿ ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದ್ದು, ಇದು 185 ಅಶ್ವಶಕ್ತಿ (138 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಎಸ್‌ಎಕ್ಸ್ ಅನಾವರಣ

ಅಲ್ಲದೆ ಝಡ್‌ಟಿಎಲ್ 386 ಎಂಎಂ ಡಿಸ್ಕ್ ಬ್ರೇಕ್, ಮ್ಯಾಗ್ನೇಶಿಯಂ ಸಬ್ ಫ್ರೇಮ್ ಜತೆ ಫ್ಯೂಯಲ್ ಇನ್ ಫ್ರೇಮ್ ವಿನ್ಯಾಸ ಫುಲ್ ಕಲರ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಪ್ಯಾನೆಲ್ ಮತ್ತು ಮಲ್ಟಿ ಲೆವೆಲ್ ಟ್ರಾಕ್ಷನ್ ಕಂಟ್ರೋಲ್ ಇರಲಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಎಸ್‌ಎಕ್ಸ್ ಅನಾವರಣ

ಇದರ ಎಲ್‌ಇಡಿ ಹೆಡ್‌ಲೈಟ್‌ಗಳು ಸ್ವಾಭಾವಿಕವಾಗಿ ವಿಭಿನ್ನ ವಿನ್ಯಾಸ ಪಡೆದುಕೊಂಡಿದೆ. ಹಾಗೆಯೇ ಕ್ಲಿಪ್ ಆನ್ ಹ್ಯಾಂಡಲ್‌ಬಾರ್ ಬದಲು ಹೆಚ್ಚು ಆರಾಮದಾಯಕತೆ ನೀಡುವ ಟ್ಯೂಬ್ಯೂಲರ್ ಹ್ಯಾಂಡಲ್‌ಬಾರ್ ಇರಲಿದೆ.

ಎರಿಕ್ ಬ್ಯುಯೆಲ್ ರೇಸಿಂಗ್ 1190ಎಸ್‌ಎಕ್ಸ್ ಅನಾವರಣ

ಹಾಗೆಯೇ ಹೆಚ್ಚು ಆರಾಮದಾಯಕ ಪಯಣಕ್ಕಾಗಿ ಉನ್ನತ ದರ್ಜೆಯ ಸೀಟು ಆಳವಡಿಸಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಳು ಜುಲೈ 4ರಂದು ಬಿಡುಗಡೆಯಾಗಲಿದೆ.

Most Read Articles

Kannada
English summary
Erik Buell Racing, Hero MotoCorp's partially owned U.S partner, has unveiled a new streetfighter category motorcycle based on its 1190RX superbike. The 2015 Erik Buell Racing 1190SX, as it is called, made its debut at the Indianapolis Motor Speedway.
Story first published: Friday, June 13, 2014, 10:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X