ಹರ್ಲಿ ಅಗ್ಗದ ಬೈಕ್ ಭಾರತಕ್ಕೆ; ಕೌಂಟ್ ಡೌನ್ ಶುರು

By Nagaraja

ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದು, ಸಂಪೂರ್ಣ ಸ್ವದೇಶಿ ರೂಪ ಪಡೆದುಕೊಂಡಿರುವ ಐಕಾನಿಕ್ ಹರ್ಲಿ ಡೇವಿಡ್ಸನ್ ಬೈಕ್ ಭಾರತದ ಮಾರುಕಟ್ಟೆಗೆ ಅಪ್ಪಳಿಸಲು ಕೌಂಟ್ ಡೌನ್ ಶುರು ಆಗಿದೆ.

ಇದಕ್ಕೆ ಮುನ್ನಡಿಯಂತೆ ಪ್ರತಿಷ್ಠಿತ ಮಿಲಾನ್ ಮೋಟಾರ್ ಶೋದಲ್ಲಿ (EICMA) ಬಹುನಿರೀಕ್ಷಿತ ಹರ್ಲಿ ಡೇವಿಡ್ಸನ್ 500ಸಿಸಿ ಹಾಗೂ 750 ಸಿಸಿ ಬೈಕ್‌ಗಳು ಭರ್ಜರಿ ಅನಾವರಣ ಕಂಡಿದೆ.

ಮೋಟಾರ್ ಸೈಕಲ್ ಇತಿಹಾಸದಲ್ಲಿ ಅತಿಶ್ರೇಷ್ಠ ಬೈಕ್‌ಗಳಲ್ಲಿ ಗುರುತಿಸಿಕೊಂಡಿರುವ ಹರ್ಲಿ ಗರಿಷ್ಠ ನಿರ್ವಹಣೆಯ ಬೈಕ್‌ಗಳನ್ನು ತಮ್ಮದಾಗಿಸುವುದು ಭಾರತೀಯರ ಪಾಲಿಗೆ ಕನಸಿನ ಮಾತಾಗಿತ್ತು. ಆದರೆ ಇದೀಗ ಕಡಿಮೆ ಸಿಸಿ ಬೈಕ್‌ಗಳ ಎಂಟ್ರಿಯೊಂದಿಗೆ ಈ ಸಮಸ್ಯೆ ದೂರವಾಗಲಿದೆ. ಅಂದರೆ ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿ ದೇಶದ ಗ್ರಾಹಕರನ್ನು ಹರ್ಲಿ ಬೈಕ್‌ಗಳನ್ನು ತಮ್ಮದಾಗಿಸಬಹುದಾಗಿದೆ.

ಹರ್ಲಿ ಡೇವಿಡ್ಸನ್ ಸ್ಟ್ರೀಟ್ 500 ಮತ್ತು ಸ್ಟ್ರೀಟ್ 750

ಕಳೆದ 13 ವರ್ಷಗಳಲ್ಲೇ ನೂತನ ಫ್ಲ್ಯಾಟ್‌ಫಾರ್ಮ್‌ವೊಂದರಲ್ಲಿ ಹರ್ಲಿ ಡೇವಿಡ್ಸನ್ ಸ್ಟ್ರೀಟ್ 500 ಹಾಗೂ 750 ಬೈಕ್‌ಗಳು ನಿರ್ಮಾಣವಾಗಲಿದೆ.

ಹರ್ಲಿ ಡೇವಿಡ್ಸನ್ ಸ್ಟ್ರೀಟ್ 500 ಮತ್ತು ಸ್ಟ್ರೀಟ್ 750

ಪ್ರಮುಖವಾಗಿಯೂ ನಗರ ಪ್ರದೇಶದ ಉತ್ಸಾಹಿ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಈ ಕ್ರೂಸರ್ ಬೈಕ್‌ಗಳನ್ನು ತಯಾರಿಸಲಾಗುತ್ತಿದೆ.

ಹರ್ಲಿ ಡೇವಿಡ್ಸನ್ ಸ್ಟ್ರೀಟ್ 500 ಮತ್ತು ಸ್ಟ್ರೀಟ್ 750

ಈ ಎರಡು ಬೈಕ್‌ಗಳು ಲಿಕ್ವಿಡ್ ಕೂಲ್ಡ್ ರಿವೊಲ್ಯೂಷನ್ ಎಕ್ಸ್ (ವಿ-ಟ್ವಿನ್) ಎಂಜಿನ್ ಹೊಂದಿರಲಿದೆ. ಇದು ಹೆಚ್ಚಿನ ಗ್ರೌಂಡ್ ಕ್ಲಿಯರನ್ಸ್ ಹೊಂದಿರಲಿದೆ.

ಹರ್ಲಿ ಡೇವಿಡ್ಸನ್ ಸ್ಟ್ರೀಟ್ 500 ಮತ್ತು ಸ್ಟ್ರೀಟ್ 750

ಜಗತ್ತಿನಾದ್ಯಂತ ಯುವ ಗ್ರಾಹಕರಿಂದ ದೊರಕಿರುವ ಪ್ರತ್ರಿಕ್ರಿಯೆಯ ಆಧಾರದಲ್ಲಿ ಈ ಬೈಕ್ ವಿನ್ಯಾಸಗೊಳಿಸಲಾಗಿದೆ. ಇದು ಪ್ರಮುಖವಾಗಿಯೂ ಏಷ್ಯಾ ಹಾಗೂ ಯುರೋಪ್ ರಾಷ್ಟ್ರಗಳನ್ನು ಗುರಿಯಾಗಿರಿಸಲಿದೆ.

ಹರ್ಲಿ ಡೇವಿಡ್ಸನ್ ಸ್ಟ್ರೀಟ್ 500 ಮತ್ತು ಸ್ಟ್ರೀಟ್ 750

ಇಂದೊಂದು ಬ್ಲ್ಯಾಕ್ ಕಸ್ಟಮ್ ಬೈಕ್ ಎನಿಸಿಕೊಳ್ಳಲಿದೆ. ಅಂದರೆ ಬಾಡಿ ವಿನ್ಯಾಸದಿಂದ ತೊಡಗಿ ಹ್ಯಾಂಡಲ್ ಬಾರ್ ಎಲ್ಲವೂ ಕಪ್ಪು ವರ್ಣಮಯವಾಗಿದೆ.

ಹರ್ಲಿ ಡೇವಿಡ್ಸನ್ ಸ್ಟ್ರೀಟ್ 500 ಮತ್ತು ಸ್ಟ್ರೀಟ್ 750

ಹಾಗಿದ್ದರೂ ಬೈಕ್‌ನ ತಾಂತ್ರಿಕತೆ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಂದಿಲ್ಲ. ಇದನ್ನು ಸದ್ಯದಲ್ಲೇ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ಹರ್ಲಿ ಡೇವಿಡ್ಸನ್ ಸ್ಟ್ರೀಟ್ 500 ಮತ್ತು ಸ್ಟ್ರೀಟ್ 750

ಹಿಂದುಗಡೆಯ ಚಕ್ರಗಳು 6 ಟ್ರಾನ್ಸ್‌ಮಿಷನ್ ಬೆಲ್ಟ್ ಡ್ರೈವ್ ಸಿದ್ಧಾಂತದ ಮುಖಾಂತರ ಚಲಿಸಲಿದೆ. ಭಾರತದಂತಹ ರಾಷ್ಟ್ರಗಳಲ್ಲಿ ಇದು ಹೆಚ್ಚು ಹೊಂದಿಕೆಯಾಗಲಿದೆ.

ಹರ್ಲಿ ಡೇವಿಡ್ಸನ್ ಸ್ಟ್ರೀಟ್ 500 ಮತ್ತು ಸ್ಟ್ರೀಟ್ 750

ಹರ್ಲಿ ಡೇವಿಡ್ಸನ್ ಬೈಕ್‌ಗಳು 2013 ವರ್ಷಾರಂಭದಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

ಹರ್ಲಿ ಡೇವಿಡ್ಸನ್ ಸ್ಟ್ರೀಟ್ 500 ಮತ್ತು ಸ್ಟ್ರೀಟ್ 750

ಹರಿಯಾಣದ ಬವಾಲ್ ಘಟಕದಲ್ಲಿ ಉತ್ಪಾದನೆಯಾಗಲಿರುವ ಸ್ಟ್ರೀಟ್ ಬೈಕ್‌ಗಳು ಬಳಿಕ ವಿದೇಶಕ್ಕೂ ರಫ್ತಾಗಲಿದೆ.

ಹರ್ಲಿ ಡೇವಿಡ್ಸನ್ ಸ್ಟ್ರೀಟ್ 500 ಮತ್ತು ಸ್ಟ್ರೀಟ್ 750

ಬೆಲೆ ಬಗ್ಗೆ ಈ ವರೆಗೂ ಸ್ಪಷ್ಟ ಮಾಹಿತಿ ಬಂದಿಲ್ಲ. ಮೂಲಗಳ ಪ್ರಕಾರ ಹರ್ಲಿ 500ಸಿಸಿ ಬೈಕ್ 4 ಲಕ್ಷ ರು. ಹಾಗೂ 750 ಸಿಸಿ ಬೈಕ್ 5 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

More from DriveSpark

Article Published On: Wednesday, November 6, 2013, 10:05 [IST]
English summary
Harley Davidson has taken a huge step forward with the launch of two of its smallest bikes ever. Street 750 and Street 500. The bikes were revealed at the ongoing EICMA show in Milan, Italy and they will head to India early next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+