ಹೋಂಡಾ ಸಿವಿಕ್ ಟೂರರ್ ಜತೆ ನಿಮ್ಮ ಪ್ರವಾಸ ಆರಾಮ

ವಿನೋದ ಯಾತ್ರೆಗಳನ್ನು ಇಷ್ಟಪಡದವರು ಯಾರು ತಾನೇ ಇದ್ದಾರೆ ಹೇಳಿ ನೋಡೋಣ? ಪ್ರತಿಯೊಬ್ಬರು ದೂರದ ಪ್ರವಾಸ ಕೇಂದ್ರಗಳಿಗೆ ಸಂಚರಿಸಿ ಕುಟುಂಬದ ಜತೆ ರಜಾ ದಿನಗಳನ್ನು ಕಳೆಯಲು ಬಯಸುತ್ತಾರೆ.

ಹಾಗಿರುವಾಗ ತಮ್ಮದೇ ಆದ ಕಾರು ಇರುತ್ತಿದ್ದರೆ ಅದರ ಮಜಾನೇ ಜಾಸ್ತಿ. ಕೆಲವು ಕುಟುಂಬಗಳು ತಮ್ಮ ವಿನೋದ ಯಾತ್ರೆಗಳಿಗಾಗಿ ಬಾಡಿಗೆ ಕಾರನ್ನು ಬಳಸುತ್ತಾರೆ. ಆದರೆ ಶ್ರೀಮಂತ ವ್ಯಕ್ತಿಗಳು ತಮ್ಮ ಸ್ವಂತ ಕಾರಿನಲ್ಲೇ ಜಾಲಿ ರೈಡ್ ಹೊಡೆಯಲು ಬಯಸುತ್ತಾರೆ.

ಈ ಬಗ್ಗೆ ಮಾತನಾಡುವಾಗ, ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, ನೂತನ ಸಿವಿಕ್ ಟೂರರ್ ಕಾರನ್ನು ಪ್ರದರ್ಶನಗೊಳಿಸಿದೆ. ಮುಂಬರುವ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಅನಾವರಣಗೊಳ್ಳಲಿರುವ ಹೋಂಡಾ ಸಿವಿಕ್ ಟೂರರ್ ಮುಂದಿನ ವರ್ಷ ಯುರೋಪ್ ರಸ್ತೆಗಿಳಿಯಲಿದೆ.

ಐದು ಡೋರ್

ಐದು ಡೋರ್

ಐದು ಡೋರಿನ ಹೋಂಡಾ ಸಿವಿಕ್ ಟೂರರ್ ಕಾರನ್ನು ಹೋಂಡಾದ ಯುರೋಪಿಯನ್ ಸ್ಟುಡಿಯೋದಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಲಾಗಿದೆ.

ಎಂಜಿನ್

ಎಂಜಿನ್

ಇದರಲ್ಲಿ ಅರ್ಥ್ ಡ್ರೀಮ್ಸ್ ತಂತ್ರಗಾರಿಕೆಯ 1.6 ಐಡಿಟೆಕ್ ಡೀಸೆಲ್ ಹಾಗೂ 1.8 ಐವಿಟೆಕ್ ಪೆಟ್ರೋಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಹಾಗೆಯೇ ಮ್ಯಾನುವಲ್ ಜತೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಯುರೋಪ್ ಮಾರುಕಟ್ಟೆ

ಯುರೋಪ್ ಮಾರುಕಟ್ಟೆ

2014ರ ಆರಂಭದಲ್ಲಿ ಯುರೋಪ್ ಮಾರುಕಟ್ಟೆಯನ್ನು ಹೋಂಡಾ ಸಿವಿಕ್ ಟೂರರ್ ಪ್ರವೇಶಿಸಲಿದೆ.

ಸುಖಕರ ಪ್ರಯಾಣ

ಸುಖಕರ ಪ್ರಯಾಣ

ಇನ್ನು ಕಾರಿನೊಳಗೆ ಹೆಚ್ಚಿನ ಸ್ಥಳಾವಕಾಶವನ್ನು ಲಗತ್ತಿಸಲಾಗಿದೆ. ಇದರ ಲಗ್ಗೇಜ್ ಸ್ಪೇಸ್ 1378/1668 ಲೀಟರ್ ಆಗಿದೆ. ಇದು ದೊಡ್ಡ ಕುಟುಂಬಗಳಿಗೂ ಸುಖಕರ ಪ್ರಯಾಣದ ಅನುಭವ ನೀಡಲಿದೆ.

ಎಡಿಎಸ್ ತಂತ್ರಜ್ಞಾನ

ಎಡಿಎಸ್ ತಂತ್ರಜ್ಞಾನ

ಇದೇ ಮೊದಲ ಬಾರಿಗೆ ಹೋಂಡಾ ಕಾರಿನಲ್ಲಿ ಅಡಾಪ್ಟಿವ್ ಡ್ಯಾಂಪರ್ ಸಿಸ್ಟಂ (ಎಡಿಎಸ್) ಆಳವಡಿಸಲಾಗಿದೆ. ಹಾಗೆಯೇ ಕಂಫರ್ಟ್, ನಾರ್ಮಲ್ ಹಾಗೂ ಡೈನಾಮಿಕ್‌ಗಳೆಂಬ ಮೂರು ಸೆಟ್ಟಿಂಗ್‌ಗಳಿವೆ. ಇದನ್ನು ಡ್ರೈವಿಂಗ್ ಸ್ಥಿತಿಗಾನುಸಾರವಾಗಿ ಬದಲಾಯಿಸಿಕೊಳ್ಳಬಹುದಾಗಿದೆ.

ಸುರಕ್ಷತೆ

ಸುರಕ್ಷತೆ

ಹಾಗೆಯೇ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಅನುಸರಿಸಲಾಗಿದ್ದು, ಚಾಲಕನ ಭದ್ರತೆ ಸೇರಿದಂತೆ, ಪ್ರಯಾಣಿಕರ, ಪಾದಚಾರಿಗಳ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ದರ ಮಾಹಿತಿ

ದರ ಮಾಹಿತಿ

ಅಂತಿಮವಾಗಿ ದರ ಇತ್ಯಾದಿ ಹೆಚ್ಚಿನ ಮಾಹಿತಿಗಳನ್ನು ಮುಂಬರುವ ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಬಹಿರಂಗಪಡಿಸುವ ಸಾಧ್ಯತೆಗಳಿವೆ.

More from DriveSpark

Article Published On: Tuesday, August 13, 2013, 9:28 [IST]
English summary
The new Honda Civic Tourer that will be appearing at the Frankfurt Motor Show next month and that will go on sale in Europe early next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+