ಚೆನ್ನೈ ಮೆಗಾ ಕಾರು ಎಕ್ಸ್‌ಪೋಗೆ ಭೇಟಿ ಕೊಡಿರಿ
ಚೆನ್ನೈನ ರಾಯ್‌ಪೇಟೆನಲ್ಲಿ ಎರಡು ದಿನಗಳ ಪರ್ಯಂತ ಸಾಗಲಿರುವ ಈ ಮೆಗಾ ಕಾರು ಎಕ್ಸ್‌ಪೋ ಮೇಳದಲ್ಲಿ ಜಾಗತಿಕ ಕಾರು ಬ್ರಾಂಡ್‌ಗಳು ಪ್ರದರ್ಶನವಾಗಲಿದೆ. ಸಂಸದ ಎನ್. ಬಾಲಗಂಗ ಹಾಗೂ ರೈಲ್ವೇ ಐಜಿ ಆರ್. ಅರುಮುಗಂ ಮೆಗಾ ಕಾರು ಎಕ್ಸ್‌ಪೋ ಉದ್ಘಾಟಿಸಲಿದ್ದಾರೆ.
ಇದು ದೇಶದ ಮೊದಲ ವೃತ್ತಿಪರ ನಿರ್ವಹಣೆಯ, ಪರಿಕಲ್ಪನೆ ಆಧಾರಿತ ಮೆಗಾ ಕಾರು ಮೇಳವಾಗಿದೆ. ಇಲ್ಲಿ ಕಾರು ಬಿಡಿಭಾಗಗಳಿಂದ ಹಿಡಿದು ಹಣಕಾಸು ವರೆಗಿನ ಸೇವೆಗಳು ಒಂದೇ ಕಡೆ ಲಭಿಸಲಿದೆ. ಪ್ರದರ್ಶನವು ಬೆಳಗ್ಗೆ 9ಕ್ಕೆ ಆರಂಭವಾಗಿ ರಾತ್ರಿ 9ರ ವರೆಗೆ ಸಾಗಲಿರುವುದು.
ಮೆಗಾ ಕಾರು ಎಕ್ಸ್‌ಪೋ ಮೂಲಕ ಗ್ರಾಹಕರು ತಾವು ಬಯಸುವ ಎಲ್ಲ ಕಾರು ಸಂಬಂಧಿ ಉತ್ಪನ್ನ ಹಾಗೂ ಮಾಹಿತಿಗಳು ಲಭಿಸಲಿದೆ ಎಂದು ರನ್ ಟ್ರಾಕ್ ಸಿಇಒ ಸೆಂಥಿಲ್‌ನಾಥನ್ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಅಗ್ರ ಕಾರು ತಯಾರಕರಿಂದ ಶೇಕಡಾ 80ರಿಂದ 100ರ ತನಕ ಕಾರು ವಿಮೆ, ಉಚಿತ ಚಿನ್ನದ ನಾಣ್ಯ, ಟಾಬ್ಲೆಟ್, ಐಪ್ಯಾಡ್‌ಗಳಂತ ಕೊಡುಗೆಗಳು ಲಭ್ಯವಾಗಲಿದೆ. ಇದರ ಜತೆಗೆ ವಾರಂತ್ಯದಲ್ಲಿ ಭೇಟಿ ನೀಡುವ ಕುಟುಂಬಗಳಿಗೆ ವಿನೋದ ಆಟ, ರಂಗೋಲಿ ಹಾಗೂ ಆಹಾರ ಉತ್ಸವ ಆಯೋಜಿಸಲಾಗಿದೆ.
ಈ ಮೆಗಾ ಕಾರು ಮೇಳದಲ್ಲಿ ಎಲ್ಲ ಕಾರು ಬ್ರಾಂಡ್ ಡೀಲರುಗಳು, ಸೆಕೆಂಡ್ ಹ್ಯಾಂಡ್ ಕಾರು ಡೀಲರ್, ಕಾರು ಆಕ್ಸೆಸರಿ ಕಂಪನಿ, ಕಾರು ವಿಮಾ ಕಂಪನಿ, ಹಣಕಾಸು ಕಂಪನಿ, ಬ್ಯಾಂಕ್, ಮುಂಚೂಣಿಯ ಟೈರ್ ಉತ್ಪಾದಕರು, ಟ್ಯಾಕ್ಸಿ ಮೀಟರ್ ಕಂಪನಿ, ಗ್ರಾಫಿಕ್ ಹಾಗೂ ಇಂಟಿರಿಯರ್ ಡಿಸೈನರ್, ಹೆಸರಾಂತ ಕಂಪನಿ, ಕಾರು ಸೇವೆ ಒದಗಿಸುವವರು, ಜಿಪಿಎಸ್ ಸಿಸ್ಟಂ, ನೇವಿಗೇಟರ್, ಕಾಲ್ ಟ್ಯಾಕ್ಸಿ ಕಂಪನಿ, ಸ್ಪೇರ್ ಪಾರ್ಟ್ ಡೀಲರ್, ಕಾರು ಆಡಿಯೋ ಹಾಗೂ ಬ್ಯಾಟರಿ ಕಂಪನಿ ವಿಭಾಗಗಳು ಭಾಗವಹಿಸಲಿದ್ದು, ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲಿದೆ.
ಎಲ್ಲರಿಗೂ ಉಚಿತ ಪ್ರವೇಶ..!


Click it and Unblock the Notifications









