ವಾಹನ ಜಾತ್ರೆಯಲ್ಲಿ ಹೃದಯದ ಬಡಿತ ಹೆಚ್ಚಿಸಿದ ಬೀಟಲ್
ಜರ್ಮನಿಯ ವಾಹನ ತಯಾರಿಕಾ ಕಂಪನಿ ಫೋಕ್ಸ್ ವ್ಯಾಗನ್ ದೆಹಲಿಯ ವಾಹನ ಪ್ರದರ್ಶನದಲ್ಲಿ ಎರಡು ಸೂಪರ್ಬ್ ಕಾರುಗಳನ್ನು ಅನಾವರಣ ಮಾಡಿದೆ. ಕಂಪನಿಯು ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಟೂರಗ್ ನ್ನು ಬಿಡುಗಡೆ ಮಾಡಿದೆ. ಜೊತೆಗೆ 2012ರ ಬೀಟಲ್ ಮತ್ತು ಎಕ್ಸ್ಎಲ್1 ಕಾನ್ಸೆಪ್ಟ್ ಕಾರುಗಳನ್ನು ಅನಾವರಣ ಮಾಡಿದೆ.

ದೆಹಲಿ ವಾಹನ ಪ್ರದರ್ಶನದಲ್ಲಿ ಕಂಪನಿಯು ಪರಿಸರ ಸ್ನೇಹಿ ಮಂತ್ರ ಪಠಿಸಿದೆ. ಇಲ್ಲಿ ಕಂಪನಿಯ ಥಿಂಕ್ ಬ್ಲೂ ಅಭಿಯಾನ ಹೆಚ್ಚು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ವಾಹನ ಪ್ರದರ್ಶನ ಸ್ಟಾಲ್ ಗಳಲ್ಲಿ ಫೋಕ್ಸ್ ವ್ಯಾಗನ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ "ಟೂರಗ್" ಗಮನ ಸೆಳೆಯುವಂತ್ತಿತ್ತು. ಈ ಎಸ್ ಯುವಿ ದೇಶದ ವಾಹನ ಮಾರುಕಟ್ಟೆಗೆ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಆಗಮಿಸಲಿದೆ. ಟೂರಗ್ ಎಸ್ ಯುವಿ 3.0 ಲೀಟರಿನ ವಿ6 ಟಿಡಿಐ ಎಂಜಿನ್ ಹೊಂದಿದೆ.
ಕ್ಯೂಟ್ ವಿನ್ಯಾಸದ ನೂತನ 2012 ಬೀಟಲ್ ಕಾರನ್ನು ಹೆಚ್ಚು ಜನರು ಕುತೂಹಲದಿಂದ ನೋಡುತ್ತಿದ್ದರು. ಇದು ಹಳೆಯ ಬೀಟಲಿಗಿಂತ ಕೊಂಚ ಉದ್ದವಾಗಿದ್ದು, ಹೆಚ್ಚು ಆಕರ್ಷಕವಾಗಿದೆ. ಈ ಬೀಟಲ್ 1.2 ಲೀಟರ್ ಮತ್ತು 1.4 ಲೀಟರ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ.
ವಾಹನ ಪ್ರದರ್ಶನದಲ್ಲಿದ್ದ ಫೋಕ್ಸ್ ವ್ಯಾಗನ್ ಇನ್ನೊಂದು ಕಾರು ಎಕ್ಸ್ ಎಲ್1 ಕಾನ್ಸೆಪ್ಟ್. ಇದು ಅತ್ಯಧಿಕ ಇಂಧನ ದಕ್ಷತೆಯ ಕಾರೆಂದು ಕಂಪನಿ ಹೇಳಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಈ ಕಾರಿನ ಮೈಲೇಜ್ ಪ್ರತಿಲೀಟರಿಗೆ 100 ಕಿ.ಮೀ.ಯಂತೆ!
ವಾಹನ ಜಾತ್ರೆ ವಿಶೇಷ


Click it and Unblock the Notifications








