ದೇಶದ ಅತ್ಯುತ್ತಮ 150ಸಿಸಿ ಮೈಲೇಜ್ ಬೈಕ್‌ಗಳು

By Nagaraja

ನಾವೆಲ್ಲರೂ ನಿರ್ವಹಣಾ ಬೈಕ್‌ಗಳ ಬಗ್ಗೆ ಗಮನಹರಿಸಿದಾಗ ಅವುಗಳ ಮೈಲೇಜ್‌ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಬೈಕ್ ಆಕರ್ಷಕವಾಗಿ ಗೋಚರಿಸುತ್ತಿದೆಯೇ ಅಥವಾ ಹೆಚ್ಚಿನ ವೈಶಿಷ್ಟ್ಯಗಳೇನು ಎಂಬುದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಪ್ರಯತ್ನಿಸುತ್ತೇವೆ.

ಇನ್ನು ಭಾರತೀಯ ಗ್ರಾಹಕರ ದೃಷ್ಟಿಕೋನದಲ್ಲಿ 150ಸಿಸಿ ಪ್ರೀಮಿಯಂ ಬೈಕ್‌ಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಈ ವಿಭಾಗದಲ್ಲಿ ಅನೇಕ ಬೈಕ್‌ಗಳು ಲಭ್ಯವಿರುವುದರಿಂದ ಯಾವುದು ಶ್ರೇಷ್ಠ ಎಂಬುದನ್ನು ಆಯ್ಕೆ ಮಾಡುವುದು ಸ್ವಲ್ಪ ಕಷ್ಟಕರ.

ಇದರಂತೆ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು, ದೇಶದ ಪ್ರಯಾಣಿಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಲಭ್ಯವಿರುವ 150ಸಿಸಿ ಬೈಕ್‌ಗಳ ವೈಶಿಷ್ಟ್ಯಗಳ ಬಗ್ಗೆ ಪಟ್ಟಿ ಮಾಡಿಕೊಡಲಿದ್ದೇವೆ. ಇದು ಖಂಡಿತವಾಗಿ 150ಸಿಸಿ ಪ್ರೀಮಿಯಂ ಬೈಕ್ ವಿಭಾಗದಲ್ಲಿ ಬೈಕ್ ಖದಿಸಲು ಬಯಸುವ ಗ್ರಾಹಕರಿಗೆ ನೆರವಾಗುವ ವಿಶ್ವಾಸ ನಮಗಿದೆ. ಇಲ್ಲಿ ನಾವು ಎಂಜಿನ್, ಇಂಧನ ಟ್ಯಾಂಕ್, ಸರಾಸರಿ ಮೈಲೇಜ್, ಬೆಲೆ ಹಾಗೂ ಇತರ ವೈಶಿಷ್ಟ್ಯಗಳ ಬಗ್ಗೆ ವಿವರಣೆ ನೀಡಿದ್ದೇವೆ.

ಹಾಗಿದ್ದರೆ ನಿಮ್ಮ ಬಳಿಯಲ್ಲಿರುವ 150ಸಿಸಿ ಬೈಕ್ ಯಾವುದು? ಆ ನಿರ್ದಿಷ್ಟ ಬೈಕ್, ವೆರಿಯಂಟ್, ಮೈಲೇಜ್ ಹಾಗೂ ರೈಡಿಂಗ್ ಅನುಭವದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಉಲ್ಲೇಖಿಸಲು ಮರೆಯದಿರಿ.

ಬಜಾಜ್ ಪಲ್ಸರ್ 150 ಡಿಸಿಎಸ್‌ಐ (DTSi)

ಬಜಾಜ್ ಪಲ್ಸರ್ 150 ಡಿಸಿಎಸ್‌ಐ (DTSi)

  • ಎಂಜಿನ್: 14.85 ಅಶ್ವಶಕ್ತಿ, 12.5 ಎನ್‌ಎಂ ಟಾರ್ಕ್
  • ಸರಾಸರಿ ಮೈಲೇಜ್: 65 kmpl (ತಯಾರಕರ ಪ್ರಕಾರ), ನಗರ ಪ್ರದೇಶ 55 kmpl, ಹೆದ್ದಾರಿ 60 kmpl
  • ಇಂಧನ ಟ್ಯಾಂಕ್: 15 ಲೀಟರ್
  • ಬೆಲೆ: ರು. 68,697 ಎಕ್ಸ್ ‌ಶೋ ರೂಂ ದೆಹಲಿ
  • ಬಜಾಜ್ ಪಲ್ಸರ್ 150 ಡಿಸಿಎಸ್‌ಐ (DTSi)

    ಬಜಾಜ್ ಪಲ್ಸರ್ 150 ಡಿಸಿಎಸ್‌ಐ (DTSi)

    ದೇಶದ ಹಳೆಯ ಹಾಗೂ ಜನಪ್ರಿಯ 150ಸಿಸಿ ಬೈಕ್ ಆಗಿರುವ ಬಜಾಜ್ ಪಲ್ಸರ್, ಈ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾದ ಬೈಕ್‌ಗಳಲ್ಲಿ ಒಂದಾಗಿದೆ. ಇದರ ಚೂಪಾದ ಹಾಗೂ ಮಸಲರ್ ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ.

    ಹೀರೊ ಮೊಟೊಕಾರ್ಪ್ ಇಂಪಲ್ಸ್

    ಹೀರೊ ಮೊಟೊಕಾರ್ಪ್ ಇಂಪಲ್ಸ್

    • ಎಂಜಿನ್: 13 ಅಶ್ವಶಕ್ತಿ, 13.4 ಎನ್‌ಎಂ ಟಾರ್ಕ್
    • ಸರಾಸರಿ ಮೈಲೇಜ್: 55 kmpl (ತಯಾರಕರ ಪ್ರಕಾರ), ನಗರ ಪ್ರದೇಶ 45-50 kmpl, ಹೆದ್ದಾರಿ 50 kmpl
    • ಇಂಧನ ಟ್ಯಾಂಕ್: 11.1 ಲೀಟರ್ (2.6 ಲೀಟರ್ ರಿಸರ್ವ್)
    • ಬೆಲೆ: ರು. 70,500 ಎಕ್ಸ್ ‌ಶೋ ರೂಂ ದೆಹಲಿ
    • ಹೀರೊ ಮೊಟೊಕಾರ್ಪ್ ಇಂಪಲ್ಸ್

      ಹೀರೊ ಮೊಟೊಕಾರ್ಪ್ ಇಂಪಲ್ಸ್

      ನೀವು ಆಫ್ ರೋಡ್ ರೈಡಿಂಗ್ ಇಷ್ಟಪಡುವೀರಾ? ಹಾಗಿದ್ದರೆ ಇಂದೊಂದು ಸುಲಭ ಆಯ್ಕೆಯಾಗಿರಲಿದೆ. ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಹೀರೊ ಇಂಪಲ್ಸ್ ಉತ್ತಮ ಆಫ್ ರೋಡ್ ಬೈಕಿಂಗ್ ಅನುಭವ ನೀಡಲಿದೆ.

      ಹೀರೊ ಮೊಟೊಕಾರ್ಪ್ ಎಕ್ಸ್‌ಟ್ರೀಮ್

      ಹೀರೊ ಮೊಟೊಕಾರ್ಪ್ ಎಕ್ಸ್‌ಟ್ರೀಮ್

      • ಎಂಜಿನ್: 14.21 ಅಶ್ವಶಕ್ತಿ, 12.8 ಎನ್‌ಎಂ ಟಾರ್ಕ್
      • ಸರಾಸರಿ ಮೈಲೇಜ್: 65 kmpl (ತಯಾರಕರ ಪ್ರಕಾರ), ನಗರ ಪ್ರದೇಶ 45-50 kmpl, ಹೆದ್ದಾರಿ 60 kmpl
      • ಇಂಧನ ಟ್ಯಾಂಕ್: 12.1 ಲೀಟರ್ (1.5 ಲೀಟರ್ ರಿಸರ್ವ್)
      • ಬೆಲೆ: ರು. 68,275 ಎಕ್ಸ್ ‌ಶೋ ರೂಂ ದೆಹಲಿ
      • ಹೀರೊ ಮೊಟೊಕಾರ್ಪ್ ಎಕ್ಸ್‌ಟ್ರೀಮ್

        ಹೀರೊ ಮೊಟೊಕಾರ್ಪ್ ಎಕ್ಸ್‌ಟ್ರೀಮ್

        150ಸಿಸಿ ವಿಭಾಗದಲ್ಲಿ ಹೀರೊದಿಂದ ಮಾರಾಟವಾಗುತ್ತಿರುವ ಇನ್ನೊಂದು ಬೈಕ್ ಎಕ್ಸ್‌ಟ್ರೀಮ್. ತನ್ನದೇ ಆದ ವಿಶಿಷ್ಟ ವಿನ್ಯಾಸ ಹೊಂದಿರುವ ಎಕ್ಸ್‌ಟ್ರೀಮ್ ಹೆಚ್ಚು ಆಕರ್ಷಕವೆನಿಸಿದೆ.

        ಹೀರೊ ಮೊಟೊಕಾರ್ಪ್ ಹಂಕ್

        ಹೀರೊ ಮೊಟೊಕಾರ್ಪ್ ಹಂಕ್

        • ಎಂಜಿನ್: 14.21 ಅಶ್ವಶಕ್ತಿ, 12.80 ಎನ್‌ಎಂ ಟಾರ್ಕ್
        • ಸರಾಸರಿ ಮೈಲೇಜ್: 65.1 kmpl (ತಯಾರಕರ ಪ್ರಕಾರ), ನಗರ ಪ್ರದೇಶ 50 kmpl, ಹೆದ್ದಾರಿ 60 kmpl
        • ಇಂಧನ ಟ್ಯಾಂಕ್: 12.4 ಲೀಟರ್ (2.2 ಲೀಟರ್ ರಿಸರ್ವ್)
        • ಬೆಲೆ: ರು. 67,125 ಎಕ್ಸ್ ‌ಶೋ ರೂಂ ದೆಹಲಿ
        • ಹೀರೊ ಮೊಟೊಕಾರ್ಪ್ ಹಂಕ್

          ಹೀರೊ ಮೊಟೊಕಾರ್ಪ್ ಹಂಕ್

          ಎಕ್ಸ್‌ಟ್ರೀಮ್ ಜತೆ ಎಂಜಿನ್ ಹಂಚಿಕೊಂಡಿರುವ ಹೀರೊ ಹಂಕ್ ಆಕ್ರಮಣಕಾರಿ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗಿದ್ದರೂ ನೂತನ ಪ್ರತಿಸ್ಪರ್ಧಿಗಳನ್ನು ಪರಿಗಣಿಸಿದಾಗ ಹೆಚ್ಚಿನ ವೈಶಿಷ್ಟ್ಯ ಕಂಡುಕೊಳ್ಳುವಲ್ಲಿ ಹಂಕ್ ವಿಫಲತೆಯನ್ನು ಕಂಡಿದೆ.

          ಹೀರೊ ಮೊಟೊಕಾರ್ಪ್ ಆಚೀವರ್

          ಹೀರೊ ಮೊಟೊಕಾರ್ಪ್ ಆಚೀವರ್

          • ಎಂಜಿನ್: 13.4 ಅಶ್ವಶಕ್ತಿ, 12.80 ಎನ್‌ಎಂ ಟಾರ್ಕ್
          • ಸರಾಸರಿ ಮೈಲೇಜ್: 68 kmpl (ತಯಾರಕರ ಪ್ರಕಾರ), ನಗರ ಪ್ರದೇಶ 50-55 kmpl, ಹೆದ್ದಾರಿ 60 kmpl
          • ಇಂಧನ ಟ್ಯಾಂಕ್: 12.5 ಲೀಟರ್ (2.3 ಲೀಟರ್ ರಿಸರ್ವ್)
          • ಬೆಲೆ: ರು. 59,125 ಎಕ್ಸ್ ‌ಶೋ ರೂಂ ದೆಹಲಿ
          • ಹೀರೊ ಮೊಟೊಕಾರ್ಪ್ ಆಚೀವರ್

            ಹೀರೊ ಮೊಟೊಕಾರ್ಪ್ ಆಚೀವರ್

            ಹೀರೊ ಮೊಟೊಕಾರ್ಪ್ ಆಚೀವರ್ ಹಳೆ ವಿನ್ಯಾಸವನ್ನು ಹೊಂದಿದೆ. ಇತರ 150ಸಿಸಿ ಬೈಕ್‌ಗಳಿಗಿಂತ ಹೊರತಾಗಿ ಇದು ಪ್ರಯಾಣಿಕ ಮಾದರಿಯ ವಿನ್ಯಾಸವನ್ನು ಪಡೆದುಕೊಂಡಿದೆ. ಪ್ರಸ್ತುತ ಆಚೀವರ್ ಮಾರುಕಟ್ಟೆಯಲ್ಲಿ ಔಟ್ ಡೇಟಡ್ ಮಾಡೆಲ್ ಎನಿಸಿಕೊಂಡಿದೆ.

            ಹೋಂಡಾ ಸಿಬಿ ಯೂನಿಕಾರ್ನ್

            ಹೋಂಡಾ ಸಿಬಿ ಯೂನಿಕಾರ್ನ್

            • ಎಂಜಿನ್: 9.92 ಕೆಡಬ್ಲ್ಯು, 1.3 ಕೆಜಿ-ಎಂ
            • ಸರಾಸರಿ ಮೈಲೇಜ್: 60 kmpl (ತಯಾರಕರ ಪ್ರಕಾರ), ನಗರ ಪ್ರದೇಶ 50 kmpl, ಹೆದ್ದಾರಿ 50 kmpl
            • ಇಂಧನ ಟ್ಯಾಂಕ್: 13 ಲೀಟರ್ (1.3 ಲೀಟರ್ ರಿಸರ್ವ್)
            • ಬೆಲೆ: ರು. 72,240 ಆನ್ ರೋಡ್ ದೆಹಲಿ
            • ಹೋಂಡಾ ಸಿಬಿ ಯೂನಿಕಾರ್ನ್

              ಹೋಂಡಾ ಸಿಬಿ ಯೂನಿಕಾರ್ನ್

              ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ 150ಸಿಸಿ ಬೈಕ್‌ಗಳಲ್ಲಿ ಯೂನಿಕಾರ್ನ್ ಕೂಡಾ ಒಂದು. ಇದು ಹೆಚ್ಚು ಗ್ರಾಹಕ ಸ್ನೇಹಿ ಎಂದೆನಿಸಿಕೊಂಡಿದೆ.

              ಹೋಂಡಾ ಸಿಬಿ ಟ್ರಿಗರ್

              ಹೋಂಡಾ ಸಿಬಿ ಟ್ರಿಗರ್

              • ಎಂಜಿನ್: 13.30 ಅಶ್ವಶಕ್ತಿ, 12.5 ಎನ್‌ಎಂ ಟಾರ್ಕ್
              • ಸರಾಸರಿ ಮೈಲೇಜ್: 60 kmpl (ತಯಾರಕರ ಪ್ರಕಾರ), ನಗರ ಪ್ರದೇಶ 50 kmpl, ಹೆದ್ದಾರಿ 60 kmpl
              • ಇಂಧನ ಟ್ಯಾಂಕ್: 12 ಲೀಟರ್
              • ಬೆಲೆ: ರು. 74,882 ಆನ್ ರೋಡ್ ದೆಹಲಿ
              • ಹೋಂಡಾ ಸಿಬಿ ಟ್ರಿಗರ್

                ಹೋಂಡಾ ಸಿಬಿ ಟ್ರಿಗರ್

                ಯೂನಿಕಾರ್ನ್‌ಗೆ ಹೋಲಿಸಿದಾಗ ಹೋಂಡಾದ ಈ ಬೈಕ್ ವಿನ್ಯಾಸ ಪರಿಗಣಿಸಿದಾಗ ಸ್ವಲ್ಪ ಕಳೆಗುಂದಿದೆ. ಇದು ಬಜಾಜ್ ಪಲ್ಸರ್ ಹಾಗೂ ಯಮಹಾ ಎಫ್‌ಝಡ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

                ಹೋಂಡಾ ಸಿಬಿಆರ್ 150ಆರ್

                ಹೋಂಡಾ ಸಿಬಿಆರ್ 150ಆರ್

                • ಎಂಜಿನ್: 17.56 ಅಶ್ವಶಕ್ತಿ, 12.66 ಎನ್‌ಎಂ ಟಾರ್ಕ್
                • ಸರಾಸರಿ ಮೈಲೇಜ್: ನಗರ ಪ್ರದೇಶ 35-40 kmpl, ಹೆದ್ದಾರಿ 45-48 kmpl
                • ಇಂಧನ ಟ್ಯಾಂಕ್: 13 ಲೀಟರ್
                • ಬೆಲೆ: ರು. 1,33,282 ಆನ್ ರೋಡ್ ದೆಹಲಿ
                • ಹೋಂಡಾ ಸಿಬಿಆರ್ 150ಆರ್

                  ಹೋಂಡಾ ಸಿಬಿಆರ್ 150ಆರ್

                  ದೇಶದಲ್ಲಿ ಲಭ್ಯವಿರುವ ಪೈಕಿ ಅತಿ ದುಬಾರಿ 150ಸಿಸಿ ಬೈಕ್‌ವೆಂಬ ಖ್ಯಾತಿಗೆ ಹೋಂಡಾ ಸಿಬಿಆರ್ ಪಾತ್ರವಾಗಿದೆ. ಹಾಗೆಯೇ ಇದು ಈ ಸೆಗ್ಮೆಂಟ್‌ನಲ್ಲಿ ಲಭ್ಯವಿರುವ ಹೆಚ್ಚು ಶಕ್ತಿಶಾಲಿ ಅಂತೆಯೇ ಗರಿಷ್ಠ ನಿರ್ವಹಣಾ ಬೈಕಾಗಿದೆ. ಇಲ್ಲಿ ಸಿಬಿಆರ್ ಪ್ರತಿಸ್ಪರ್ಧಇಯಾಗಿ ಯಮಹಾ ಆರ್15 ಕೂಡಾ ಪರಿಗಣಿಸಬಹುದಾಗಿದೆ.

                  ಟಿವಿಎಸ್ ಅಪಾಚೆ ಆರ್‌ಟಿಆರ್ 160

                  ಟಿವಿಎಸ್ ಅಪಾಚೆ ಆರ್‌ಟಿಆರ್ 160

                  • ಎಂಜಿನ್: 15 ಅಶ್ವಶಕ್ತಿ, 13.1 ಎನ್‌ಎಂ ಟಾರ್ಕ್
                  • ಸರಾಸರಿ ಮೈಲೇಜ್: 54 kmpl (ತಯಾರಕರ ಪ್ರಕಾರ)
                  • ಇಂಧನ ಟ್ಯಾಂಕ್: 16 ಲೀಟರ್ (1.7 ಲೀಟರ್)
                  • ಬೆಲೆ: ರು. 69,795 ಆನ್ ರೋಡ್ ದೆಹಲಿ
                  • ಟಿವಿಎಸ್ ಅಪಾಚೆ ಆರ್‌ಟಿಆರ್ 160

                    ಟಿವಿಎಸ್ ಅಪಾಚೆ ಆರ್‌ಟಿಆರ್ 160

                    ಬೈಕ್ ಪ್ರೇಮಿಗಳಿಗೆ ಹೆಚ್ಚು ಪರಿಚಿತವಾಗಿರುವ ಟಿವಿಎಸ್ ಅಪಾಚೆ ಈ ಸೆಗ್ಮೆಂಟ್‌ನಲ್ಲಿ ಸ್ಮರ್ಧಾತ್ಮಕ ದರಗಳೊಂದಿಗೆ ಆಗಮನವಾಗಿರುವ ಪವರ್‌ಫುಲ್ 150ಸಿಸಿ ಬೈಕಾಗಿದೆ. ಇದು ಚಾಲಕರಿಗೆ ಹೆಚ್ಚು ಸ್ಥಿರತೆಯ ರೈಡಿಂಗ್ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ.

                    ಯಮಹಾ ವೈಎಫ್‌ಝಡ್ ಆರ್15

                    ಯಮಹಾ ವೈಎಫ್‌ಝಡ್ ಆರ್15

                    • ಎಂಜಿನ್: 16.76 ಅಶ್ವಶಕ್ತಿ, 15 ಎನ್‌ಎಂ ಟಾರ್ಕ್
                    • ಸರಾಸರಿ ಮೈಲೇಜ್: 47 kmpl (ತಯಾರಕರ ಪ್ರಕಾರ), 35-40 kmpl (ನಗರ ಪ್ರದೇಶ), 40 kmpl (ಹೆದ್ದಾರಿ)
                    • ಇಂಧನ ಟ್ಯಾಂಕ್: 12 ಲೀಟರ್
                    • ಬೆಲೆ: ರು. 1,12,450 ಎಕ್ಸ್‌ ಶೋ ರೂಂ ದೆಹಲಿ
                    • ಯಮಹಾ ವೈಎಫ್‌ಝಡ್ ಆರ್‌‍15

                      ಯಮಹಾ ವೈಎಫ್‌ಝಡ್ ಆರ್‌‍15

                      ನಿರ್ವಹಣೆ, ಹ್ಯಾಂಡ್ಲಿಂಗ್ ವಿಚಾರಗಳಲ್ಲಿ ಯಮಹಾ ವೈಎಫ್‌ಝಡ್ ಆರ್ 15 ಹಾಗೂ ಸಿಬಿಆರ್ ಸಾಮತ್ಯೆಯನ್ನು ಪಡೆದುಕೊಂಡಿದೆ. ಇದು ನಿಮಗೆ ಕ್ರೂಸಿಂಗ್ ಬೈಕ್‌ಗಳ ಅನುಭವ ನೀಡಲಿದೆ.

                      ಯಮಹಾ ಎಫ್‌ಝಡ್-ಎಸ್/16

                      ಯಮಹಾ ಎಫ್‌ಝಡ್-ಎಸ್/16

                      • ಎಂಜಿನ್: 13.80 ಅಶ್ವಶಕ್ತಿ, 13.6 ಎನ್‌ಎಂ ಟಾರ್ಕ್
                      • ಸರಾಸರಿ ಮೈಲೇಜ್: 50.81 kmpl (ತಯಾರಕರ ಪ್ರಕಾರ), 35 kmpl (ನಗರ ಪ್ರದೇಶ), 50 kmpl (ಹೆದ್ದಾರಿ)
                      • ಇಂಧನ ಟ್ಯಾಂಕ್: 12 ಲೀಟರ್
                      • ಬೆಲೆ: ರು. 70,855 ಎಕ್ಸ್‌ ಶೋ ರೂಂ ದೆಹಲಿ
                      • ಯಮಹಾ ಎಫ್‌ಝಡ್-ಎಸ್/16

                        ಯಮಹಾ ಎಫ್‌ಝಡ್-ಎಸ್/16

                        ಕಲರ್‌ಫುಲ್ ಗ್ರಾಫಿಕ್ಸ್ ವಿನ್ಯಾಸ ಪಡೆದುಕೊಂಡಿರುವ ಎಫ್‌ಝಡ್-ಎಸ್/16 ಯಮಹಾದಿಂದ ಲಭ್ಯವಿರುವ ಇನ್ನೊಂದು ಆಕರ್ಷಕ 150ಸಿಸಿ ಪ್ರೀಮಿಯಂ ಬೈಕಾಗಿದೆ.

                        ಯಮಹಾ ಫೇಜರ್

                        ಯಮಹಾ ಫೇಜರ್

                        • ಎಂಜಿನ್: 13.80 ಅಶ್ವಶಕ್ತಿ, 13.6 ಎನ್‌ಎಂ ಟಾರ್ಕ್
                        • ಸರಾಸರಿ ಮೈಲೇಜ್: 50.81 kmpl (ತಯಾರಕರ ಪ್ರಕಾರ), 35 kmpl (ನಗರ ಪ್ರದೇಶ), 50 kmpl (ಹೆದ್ದಾರಿ)
                        • ಇಂಧನ ಟ್ಯಾಂಕ್: 12 ಲೀಟರ್
                        • ಬೆಲೆ: ರು. 78,385 ಎಕ್ಸ್‌ ಶೋ ರೂಂ ದೆಹಲಿ
                        • ಯಮಹಾ ಫೇಜರ್

                          ಯಮಹಾ ಫೇಜರ್

                          ಯಮಹಾ ಫೇಜರ್, ಎಫ್‌ಝಡ್-16 ವಿನ್ಯಾಸದ ತಲಹದಿಯಲ್ಲಿ ರೂಪಿತವಾಗಿರುವ ಬಜೆಟ್ ಬೈಕಾಗಿದೆ. ಇದು ಒಂದು ರೀತಿಯಲ್ಲಿ ಎಫ್‌ಝಡ್-16 ತದ್ರೂಪ ಎನಿಸಿಕೊಂಡಿದೆ.

                          ಯಮಹಾ ಎಸ್‌ಝಡ್-ಎಸ್/ಆರ್‌ಆರ್

                          ಯಮಹಾ ಎಸ್‌ಝಡ್-ಎಸ್/ಆರ್‌ಆರ್

                          • ಎಂಜಿನ್: 11.93 ಅಶ್ವಶಕ್ತಿ, 12.8 ಎನ್‌ಎಂ ಟಾರ್ಕ್
                          • ಸರಾಸರಿ ಮೈಲೇಜ್: 62.4 kmpl (ತಯಾರಕರ ಪ್ರಕಾರ), 45-50 kmpl (ನಗರ ಪ್ರದೇಶ), 55 kmpl (ಹೆದ್ದಾರಿ)
                          • ಇಂಧನ ಟ್ಯಾಂಕ್: 14 ಲೀಟರ್
                          • ಬೆಲೆ: ರು. 55,050 ಎಕ್ಸ್‌ ಶೋ ರೂಂ ದೆಹಲಿ
                          • ಯಮಹಾ ಎಸ್‌ಝಡ್-ಎಸ್/ಆರ್‌ಆರ್

                            ಯಮಹಾ ಎಸ್‌ಝಡ್-ಎಸ್/ಆರ್‌ಆರ್

                            ಯಮಹಾ ಎಸ್‌ಝಡ್-ಎಸ್/ಆರ್‌ಆರ್ ಸ್ಟೈಲಿಷ್ ಬೈಕಾಗಿದೆ. ಇದು ಹೀರೊ ಆಚೀವರ್ ತರಹನೇ ಪ್ರಯಾಣಿಕ ವಿಭಾಗದಲ್ಲಿ ಕಾಣಿಸಿಕೊಂಡಿದೆ.

                            ಸುಜುಕಿ ಜಿಎಸ್150ಆರ್

                            ಸುಜುಕಿ ಜಿಎಸ್150ಆರ್

                            • ಎಂಜಿನ್: 13.8 ಅಶ್ವಶಕ್ತಿ, 13.4 ಎನ್‌ಎಂ ಟಾರ್ಕ್
                            • ಸರಾಸರಿ ಮೈಲೇಜ್: 55.7 kmpl (ತಯಾರಕರ ಪ್ರಕಾರ), 45-50 kmpl (ನಗರ ಪ್ರದೇಶ), 55 kmpl (ಹೆದ್ದಾರಿ)
                            • ಇಂಧನ ಟ್ಯಾಂಕ್: 15.5 ಲೀಟರ್
                            • ಬೆಲೆ: ರು. 75,998 ಎಕ್ಸ್‌ ಶೋ ರೂಂ ದೆಹಲಿ
                            • ಸುಜುಕಿ ಜಿಎಸ್150ಆರ್

                              ಸುಜುಕಿ ಜಿಎಸ್150ಆರ್

                              150ಸಿಸಿ ಬೈಕ್‌ನಲ್ಲಿ ಕಾಣಿಸಿಕೊಂಡಿರುವ ಕೊನೆಯ ಬೈಕ್‌ವೆಂದರೆ ಅದುವೇ ಸುಜುಕಿ ಜಿಎಸ್‌150ಆರ್. ಮೊದಲ ನೋಟದಲ್ಲಿ ಹೋಂಡಾ ಯೂನಿಕಾರ್ನ್ ವಿನ್ಯಾಸ ಪಡೆದುಕೊಂಡಿರುವ ಸುಜುಕಿ ಜಿಎಸ್150ಆರ್, ಪ್ರಯಾಣಿಕ ಬೈಕ್ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಸಹ ಪ್ರಯಾಣಿಕರಿಗೂ ಆರಾಮದಾಯಕ ರೈಡಿಂಗ್ ಖಾತ್ರಿಪಡಿಸುತ್ತದೆ.

More from DriveSpark

Article Published On: Tuesday, October 15, 2013, 10:29 [IST]
English summary
The 150cc segment in India is considered a premium commuter bike segment. Bikes in this segment provide a balance between fuel economy, performance & features. For those looking to purchase a 150cc bikes it is a tough choice to make considering there are over a dozen bikes to choose from.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+