Hero Mavrick 440: ಹೀರೋ ಮಾವ್ರಿಕ್ 440 ಬೈಕ್ ರಿವ್ಯೂ.. ರಸ್ತೆಯಲ್ಲಿ ರಾಜ ಗುರು!

ಭಾರತದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೀರೋ (Hero) ಗುರುತಿಸಿಕೊಂಡಿದೆ. ಇತ್ತೀಚೆಗೆ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಮಾವ್ರಿಕ್ 440 (Mavrick 440) ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಿತ್ತು. ಇದರ ಎಂಟ್ರಿ ಲೆವೆಲ್ ವೇರಿಯಂಟ್ ರೂ.1.99 ಲಕ್ಷ, ಟಾಪ್ ಎಂಡ್ ವೇರಿಯಂಟ್ ರೂ.2.24 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ.

ಈ ಬೈಕ್ ತನ್ನ ವಿನ್ಯಾಸದಿಂದ ಮಾತ್ರವಲ್ಲದೇ ಅದರ ಎಂಜಿನ್‌ನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರನ್ನು ಸೆಳೆದಿದೆ. ಹೊಸ 'ಮಾವ್ರಿಕ್ 440' ಮೋಟಾರ್‌ಸೈಕಲ್‌ನ್ನು ಟೆಸ್ಟ್ ರೈಡ್ ಮಾಡಲು ಗುಜರಾತ್‌ನ ರಾನ್ ಆಫ್ ಕಚ್ (Rann of Katch)ಗೆ ಹೀರೋ ಕಂಪನಿಯು ನಮ್ಮ ಡ್ರೈವ್ ಸ್ಪಾರ್ಕ್ ತಂಡವನ್ನು ಆಹ್ವಾನಿಸಿತ್ತು. ಬನ್ನಿ.. ಮಾವ್ರಿಕ್ 440 ಬೈಕ್ ಹೇಗೆ ಕಾರ್ಯನಿರ್ವಹಿಸುತ್ತದೆ. ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ತಿಳಿಯೋಣ.

Hero Mavrick 440 Review

ಹೀರೋ ಮಾವ್ರಿಕ್ 440 ಮೋಟಾರ್‌ಸೈಕಲ್ ವಿನ್ಯಾಸ & ವೈಶಿಷ್ಟ್ಯಗಳು: ಈ ಬೈಕ್ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ನೋಡುಗರನ್ನು ಸೆಳೆಯುತ್ತದೆ. ಚಾಚಿಕೊಂಡಿರುವ ಎಂಜಿನ್ (Exposed Engine) ಹೆಚ್ಚು ಅತ್ಯಾಧುನಿಕವಾಗಿದ್ದು, ಮುಸ್ಕ್ಯುಲರ್ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ. ಬೈಕ್ ಸ್ವಲ್ಪ ಗಟ್ಟಿಮುಟ್ಟಾಗಿದ್ದು, ಉದ್ದವಿವಾದ ವೀಲ್ ಬೇಸ್ (Wheelbase) ಒಳಗೊಂಡಿದೆ. ಹಾಗೆಯೇ ದಪ್ಪನಾದ ಚಕ್ರ (Wheels)ಗಳನ್ನು ಹೊಂದಿದೆ. ಇವೆಲ್ಲವೂ ಸೇರಿ ಮಾವ್ರಿಕ್ 440 ಮೋಟಾರ್‌ಸೈಕಲ್‌ಗೆ ಪ್ರೀಮಿಯಂ ಲುಕ್ ಒದಗಿಸುತ್ತವೆ.

ಮಾವ್ರಿಕ್ 440 ಬೈಕ್ ಮುಂಭಾಗ (Front) ಸಾಕಷ್ಟು ಅತ್ಯುತ್ತಮವಾಗಿದ್ದು, ಒಮ್ಮೆಲೇ ಕಣ್ಣಾರೆ ಕಂಡ ಕೂಡಲೇ ಮನಸ್ಸಿಗೆ ಏನೋ ಆನಂದವಾದ ರೀತಿಯಲ್ಲಿ ಅನ್ನಿಸುತ್ತದೆ. ರೌಂಡ್ ಹೆಡ್‌ಲೈಟ್, 'ಹೆಚ್' ಆಕಾರದ ಡಿಆರ್‌ಎಲ್‌ ಉತ್ತಮವಾಗಿದೆ. ವಿಶೇಷವಾಗಿ ಹೆಡ್‌ಲ್ಯಾಂಪ್ ಫ್ರಂಟ್ ಫಾಸಿಯಾ (Front Fascia)ದಲ್ಲಿ ಪಾರುಪತ್ಯವನ್ನು ಮೆರೆಯುತ್ತಿದ್ದು, ಮೋಟಾರ್‌ಸೈಕಲ್‌ಗೆ ರೆಟ್ರೋ ಲುಕ್ ಅನ್ನು ನೀಡುತ್ತದೆ. ಈ ಬೈಕ್‌ನ ಅಂದವನ್ನು ಮತ್ತಷ್ಟು ಹೆಚ್ಚಿಸಲು ಅಗತ್ಯವಿದ್ದರೆ ವಿಂಡ್‌ಶೀಲ್ಡ್ ಅಳವಡಿಸಿಕೊಳ್ಳಬಹುದು.

Hero Mavrick 440 Review

ಹೀರೋ ಮಾವ್ರಿಕ್ 440 ಮೋಟಾರ್‌ಸೈಕಲ್‌ನ ಫ್ಯುಯೆಲ್ (ಇಂಧನ) ಟ್ಯಾಂಕ್‌ನ ಎರಡು ಬದಿಯಲ್ಲಿ 3ಡಿ 'MAVRICK' ಬ್ಯಾಡ್ಜಿಂಗ್ (ಲೋಗೋ) ಅನ್ನು ಕಾಣಬಹುದು. ಜೊತೆಗೆ ಟ್ಯಾಂಕ್‌ನ ಮಧ್ಯಭಾಗದಲ್ಲಿರುವ ಫ್ಯುಯೆಲ್ ಕ್ಯಾಪ್‌ನ ಕೆಳಭಾಗದಲ್ಲಿಯೂ 'ಮಾವ್ರಿಕ್ 440' ಬ್ಯಾಡ್ಜಿಂಗ್ ನೋಡಬಹುದಾಗಿದ್ದು, ಫ್ಯುಯೆಲ್ ಕ್ಯಾಪ್‌ ಮೇಲ್ಭಾಗದಲ್ಲಿ ಮೊಬೈಲ್ ಚಾರ್ಜ್ ಮಾಡಲು ಯುಎಸ್‌‍ಬಿ ಪೋರ್ಟ್ ಇದೆ.

ಈ ಬೈಕ್ ಹ್ಯಾಂಡಲ್‌ಬಾರ್‌ಗಳು ಸವಾರರ ಸ್ನೇಹಿಯಾಗಿದ್ದು, ರಸ್ತೆಯಲ್ಲಿ ಉತ್ತಮ ಹಿಡಿತ ಲಭ್ಯವಾಗುವಂತೆ ಮಾಡುತ್ತದೆ. ಆಸನವು (ಸೀಟ್) ಒಳ್ಳೆಯ ರೀತಿಯಲ್ಲಿ ಇದ್ದು, ಆರಾಮದಾಯಕವಾಗಿ ಪ್ರಯಾಣಿಸಬಹುದು. ವೃತ್ತಾಕಾರದ ಕನ್ನಡಿ (Circular Mirrors)ಗಳು ಸೀದಾ ನಮಗೆ 80-90ರ ದಶಕವನ್ನು ನೆನಪಿಸುತ್ತವೆ. ಇವುಗಳಿಂದ ಹಿಂಭಾಗ ಬರುತ್ತಿರುವ ವಾಹನಗಳನ್ನು ಗಮನಿಸಿ ಸುರಕ್ಷಿತವಾಗಿ ಪ್ರಯಾಣ ಮಾಡಬಹುದು.

Hero Mavrick 440 Review

ನೂತನ ಹೀರೋ ಮಾವ್ರಿಕ್ 440 ಮೋಟಾರ್‌ಸೈಕಲ್‌ ಹಿಂಭಾಗ (Rear)ದ ವಿನ್ಯಾಸವು ಅತ್ಯಾಧುನಿಕವಾಗಿದ್ದು, ಬಲವಾದ ಗ್ರ್ಯಾಬ್ ರೈಲ್ (ಹಿಡಿಕೆ) ಒಳಗೊಂಡಿದೆ. ಹೆಚ್ ಆಕಾರದ ಬ್ರೇಕ್ ಲೈಟ್ ಸಹ ಇದ್ದು, ಮುಂಭಾಗದಲ್ಲಿರುವಂತೆ ಇಲ್ಲಿಯೂ ರೌಂಡ್ ಇಂಡಿಕೇಟರ್ ಅನ್ನು ಹೊಂದಿದ್ದು, ಯುವ ಖರೀದಿದಾರನ್ನು ಸೆಳೆಯುವ ವಿವಿಧ ಬಣ್ಣಗಳೊಂದಿಗೂ ಈ ಬೈಕ್ ಸಿಗುತ್ತದೆ.

ಹೀರೋ ಮಾವ್ರಿಕ್ 440 ಮೋಟಾರ್‌ಸೈಕಲ್‌ ಕಾರ್ಯಕ್ಷಮತೆ, ಸುತ್ತಳತೆ: ಈ ಬೈಕ್ 440 ಸಿಸಿ ಆಯಿಲ್/ ಏರ್ - ಕೋಲ್ಡ್ ಎಂಜಿನ್ ಹೊಂದಿದ್ದು, 26 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 37 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 6 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

Hero Mavrick 440 Review

ಹೊಸ ಹೀರೋ ಮಾವ್ರಿಕ್ 440 ಬೈಕ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಮುಂಭಾಗ (ಫ್ರಂಟ್) 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌, ಹಿಂಭಾಗ (ರೇರ್) 7 - ಸ್ಟೆಪ್ ಅಡ್ಜಸ್ಟ್ಏಬಲ್ ಟ್ವಿನ್ ಶಾಕ್ ಸೆಟಪ್ ಅನ್ನು ಹೊಂದಿದೆ. ಆಸನ (ಸೀಟ್) ಎತ್ತರ 803 ಎಂಎಂ ಇದೆ. ವೀಲ್‌ಬೇಸ್ 1388 ಎಂಎಂ, ಗ್ರೌಂಡ್ ಕ್ಲಿಯರೆನ್ಸ್‌ 175 ಎಂಎಂ ಅಳತೆಯಲ್ಲಿದ್ದು, ಈ ಬೈಕ್ 191 ಕೆಜಿ ತೂಕವಿದೆ.

ರೈಡಿಂಗ್ ಇಂಪ್ರೆಷನ್: ಗುಜರಾತಿನ ಭುಜ್‌ನಿಂದ ರಾನ್ ಆಫ್ ಕಚ್ ನಲ್ಲಿರುವ ಟೆಂಟ್ ಸಿಟಿವರೆಗೆ 100 ಕಿ.ಮೀ ಈ ಹೀರೋ ಮಾವ್ರಿಕ್ 440 ಮೋಟಾರ್‌ಸೈಕಲ್‌ನ್ನು ಚಲಾಯಿಸಲು ಅವಕಾಶ ದೊರೆಯಿತು. ಈ ಮೂಲಕ ಇದರ ಕಾರ್ಯಕ್ಷಮತೆಯನ್ನು ಅರಿಯಲು ಸಾಧ್ಯವಾಯಿತು. ಮಾವ್ರಿಕ್ 440 ಬೈಕ್ ಸವಾರಿ ವೇಳೆ ಅದ್ಬುತ ಅನುಭವವನ್ನು ನೀಡಿತು. ಅಗಲ (wide)ವಾದ ಹ್ಯಾಂಡಲ್‌ಬಾರ್‌ ರಸ್ತೆಯ ಮೇಲೆ ಬಿಗಿಯ ಹಿಡಿತವನ್ನು ಕೊಡುತ್ತದೆ.

Hero Mavrick 440 Review

ಸಸ್ಪೆನ್ಷನ್ ಸೆಟಪ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದು, ರಸ್ತೆ ತಿರುವುಗಳಲ್ಲಿ ಸವಾರಿಗೆ ನೆರವಾಗುತ್ತದೆ. ಆದಾಗ್ಯೂ, ಕೊಂಚ ಸಮಸ್ಯೆ ತರುತ್ತದೆ. ಬೈಕ್‌ನ್ನು ತಿರುಗಿಸುವಾಗ ಫುಟ್‌ಪೆಗ್‌ ಅಲ್ಪ-ಸ್ವಲ್ಪ ರಸ್ತೆಗೆ ಉಜ್ಜಬಹುದು. ಎಂಜಿನ್ ಕಾರ್ಯಕ್ಷಮತೆ ಕೂಡ ಅತ್ಯುತ್ತಮವಾಗಿದ್ದು, ಒಂದಷ್ಟು ಮಟ್ಟಿಗೆ ಮಂದವಾದಂತೆ ಭಾಸವಾಗುತ್ತದೆ. ಬ್ರೇಕ್‌ಗಳು ಸಹ ಸಂದರ್ಭಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಉಪಯುಕ್ತ ಮಾಹಿತಿ ಒದಗಿಸುತ್ತಿರುವಾಗ ಅಸ್ಪಷ್ಟ ಆರ್‌ಪಿಎಂ ಮೀಟರ್ ನ್ಯೂನತೆ ಎನ್ನಿಸಬಹುದು.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಹೊಸ ಹೀರೋ ಮಾವ್ರಿಕ್ 440 ಮೋಟಾರ್‌ಸೈಕಲ್‌ನ್ನು ಸವಾರಿ ಮಾಡುವಾಗ ನಿಜಕ್ಕೂ ಭರ್ಜರಿ ಅನುಭವ ನೀಡಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬೆಲೆಯು ಸಹ ಕೈಗೆಟುವಂತೆ ಇದ್ದು, ಆಕರ್ಷಕ ನೋಟವನ್ನು ಹೊಂದಿರುವ ಬೈಕ್ ಹುಡುಕುತ್ತಿರುವವರಿಗೆ ನಿಜಕ್ಕೂ ಉತ್ತಮ ಆಯ್ಕೆಯಬಹುದು. ಮುಂಬರುವ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರುವುದರಿಂದ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Hero Mavrick 440 Review

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, February 19, 2024, 11:00 [IST]
English summary
Hero mavrick 440 review specs riding impressions design features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+