ಕಾಂಟಿನೆಂಟಲ್ ಜಿಟಿಯಲ್ಲೊಂದು ರಾಯಲ್ ಪಯಣ

By Nagaraja

2013ನೇ ವರ್ಷ ಅಂತ್ಯವಾಗುತ್ತಿರುವಂತೆಯೇ ಎಲ್ಲರೂ ಹೊಸ ವರ್ಷ ಬರಮಾಡಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಈ ನಡುವೆ ದೀರ್ಘ ಅವಧಿಯ ಬಳಿಕ ಬುಲೆಟ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ನೂತನ ಕಾಂಟಿನೆಂಟಲ್ ಜಿಟಿ ಕೆಫೆ ರೇಸರ್ ಬೈಕನ್ನು ದೇಶದ ರಸ್ತೆಗೆ ಪರಿಚಯಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ವಿಶೇಷವೆಂದರೆ 60 ವರ್ಷಗಳ ಬಳಿಕ ಕಾಂಟಿನೆಂಟಲ್ ಜಿಟಿ ದೇಶದ ರಸ್ತೆಗೆ ರಿ ಎಂಟ್ರಿ ಪಡೆದಿದೆದೆ. ಇದರಿಂದಲೇ ಸಹಜವಾಗಿಯೇ ಬೈಕ್ ಪ್ರೇಮಿಗಳೂ ಅತೀವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಇದೇ ನಿರೀಕ್ಷೆಯೊಂದಿಗೆ ನಮ್ಮ ಡ್ರೈವ್ ಸ್ಪಾರ್ಕ್ ತಂಡದ ಸಹ ಲಾಂಚ್ ಹಾಗೂ ಟೆಸ್ಟ್ ಡ್ರೈವ್‌ಗಾಗಿ ಗೋವಾ ಪಯಣವನ್ನು ಬೆಳೆಸಿತ್ತು. ಈ ಮೊದಲೇ ತಿಳಿಸಿರುವಂತೆಯೇ ಈ ಹಗುರ ಭಾರದ ಬೈಕ್ ಅತಿ ಹೆಚ್ಚು ನಿರ್ವಹಣೆಯನ್ನು ನೀಡಲು ಸಕ್ಷಮವಾಗಿದೆ. ಒಟ್ಟಿನಲ್ಲಿ ಎನ್‌ಫೀಲ್ಡ್ ಪೈಕಿ ಹೈ ಪವರ್ ಬೈಕ್ ಇದಾಗಿದೆ.

ಕಾಂಟಿನೆಂಟಲ್ ಜಿಟಿಯಲ್ಲೊಂದು ರಾಯಲ್ ಪಯಣ

ಗೋವಾದಲ್ಲಿ ನಡೆದ ಎರಡು ದಿನಗಳ ರಾಲಿಯಲ್ಲಿ ಒಟ್ಟು 350 ಕೀ.ಮೀ. ಓಡಾಟ ನಡೆಸಿತ್ತು. ಇದರ ಅನುಭವನ್ನು ಇಲ್ಲಿ ಹಂಚಲಾಗಿದೆ. ಒಂದು ಕಾಲದಲ್ಲಿ ರೇಸರುಗಳ ಫೇವರಿಟ್ ಎನಿಸಿಕೊಂಡಿದ್ದ ಕೆಫೆ ರೇಸರ್ ಈಗಲೂ ತನ್ನ ಆವೇಗವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಾಂಟಿನೆಂಟಲ್ ಜಿಟಿಯಲ್ಲೊಂದು ರಾಯಲ್ ಪಯಣ

ಈ 535ಸಿಸಿ ಬುಲೆಟ್, ಆಧುನಿಕತೆಯ ಅಗತ್ಯಗಳಿನುಸಾರವಾಗಿ ರಸ್ತೆ ಪ್ರವೇಶಿಸಿದೆ. ಇನ್ನು ದೇಶದ ಕ್ರೂಸರ್ ಬೈಕ್‌ಗಳನ್ನು ಪರಿಗಣಿಸಿದಾಗ ರಾಯಲ್ ಎನ್‌ಫೀಲ್ಡ್‌ ಬೈಕನ್ನು ಮೀರಿಸುವವರು ಯಾರು ಇಲ್ಲ. ಅತಿ ವೇಗದ ಹಾಗೂ ಶಕ್ತಿಶಾಲಿ ಕಾಂಟಿನೆಂಟಲ್ ಜಿಟಿ ದೆಹಲಿ ಆನ್ ರೋಡ್ ದರ 2.05 ಲಕ್ಷ ರು.ಗಳಿಗೆ ನಿಮ್ಮ ಕೈಸೇರಲಿದೆ.

ವಿನ್ಯಾಸ

ವಿನ್ಯಾಸ

ಬ್ರಿಟನ್ ಮೂಲದ ಕ್ಸೆನೋಪ್ಯಾ ಡಿಸೈನ್ (Xenophya Design) ಹೊಸ ತಲೆಮಾರಿನ ಕೆಫೆ ರೇಸರ್ ಸೂತ್ರಧಾರಿಯಾಗಿದೆ. ಇಲ್ಲಿಯೂ ಕ್ಲಾಸಿಕ್ ಕೆಫೆ ರೇಸರ್ ಅನುಭವವನ್ನು ಪಡೆಯಬಹುದಾಗಿದೆ. ಇದುವೇ ಕೆಫೆ ರೇಸರ್ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.

ಎಂಜಿನ್

ಎಂಜಿನ್

ಎಂಜಿನ್ ಭಾಗವನ್ನು ಗಮನಿಸಿದರೆ ಇದು 535 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದಿದ್ದು, ಇದು 29.1 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಬಹುಶ: ಇದನ್ನು ಫೈನ್ ಟ್ಯೂನ್ ಮಾಡಿದ್ದರೆ ಇನ್ನಷ್ಟು ಹೆಚ್ಚಿನ ನಿರ್ವಹಣೆ ಪಡೆಯಬಹುದಾಗಿತ್ತು.

ಫಿಟ್ ಆಂಡ್ ಫಿನಿಶ್

ಫಿಟ್ ಆಂಡ್ ಫಿನಿಶ್

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಫಿಟ್ ಆಂಡ್ ಫಿನಿಶ್ ಗುಣಮಟ್ಟತೆ ಮೇಲ್ದರ್ಜೆಯಲ್ಲಿದೆ. ಇನ್ನು ಸೂಕ್ಷ್ಮವಾಗಿ ಗಮನನಿಸಿದ್ದಲ್ಲಿ ಇದರಲ್ಲಿ ಕ್ರೋಮ್ ಫಿನಿಶ್ ಜಾಸ್ತಿ ಬಳಕೆ ಮಾಡಲಾಗಿದೆ ಎಂಬುದು ತಿಳಿದು ಬರುತ್ತದೆ.

ಟಾರ್ಕ್ ಅತ್ಯುತ್ತಮ

ಟಾರ್ಕ್ ಅತ್ಯುತ್ತಮ

ಇತರ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಿಂತಲೂ ಭಿನ್ನವಾಗಿ ವಿಭಿನ್ನ ಪಾರ್ಟ್ಸ್‌ಗಳನ್ನು ಕಾಂಟಿನೆಂಟಲ್ ಜಿಟಿಯಲ್ಲಿ ಬಳಸಲಾಗಿದೆ. ಇದು 4000 ಆರ್ ಪಿಎಂನಲ್ಲಿ ಗರಿಷ್ಠ 44 ಎನ್‌ಎಂ ಟಾರ್ಕ್ ಬರಲು ನೆರವಾಗುತ್ತದೆ. ಅಲ್ಲದೆ ಪ್ರಾರಂಭಿಕ ವೇಗವರ್ಧನೆ ಅತ್ಯುತ್ತಮವಾಗಿದೆ.

ಕಾಂಟಿನೆಂಟಲ್ ಜಿಟಿಯಲ್ಲೊಂದು ರಾಯಲ್ ಪಯಣ

ಇನ್ನೊಂದು ಪ್ರಮಖ ಅಂಶವೆಂದರೆ ಇದರಲ್ಲಿ ಫೈವ್ ಸ್ಪೀಡ್ ಕಾಸ್ಟಂಟ್ ಮೆಶ್ ಗೇರ್ ಬಾಕ್ಸ್ ಆಳವಡಿಸಲಾಗಿದೆ. ಅಲ್ಲದೆ ಎಂಜಿನ್ ವೈಬ್ರೇಷನ್ ಕಡಿಮೆಯಿರುವುದರಿಂದ ಕ್ರೂಸಿಂಗ್ ಮಾಡಲು ಉತ್ತಮವಾಗಿರಲಿದೆ. ಅಂದರೆ ಇದರ ಆರ್‌ಪಿಎಂ 2500ರಿಂದ 4500 ಆಗಿರಲಿದೆ. ಈ ಮೂಲಕ ಇತರ ಸ್ಪೋರ್ಟ್ಸ್ ಬೈಕ್ ಕೊರತೆಗಳನ್ನು ನೀಗಿಸಲಾಗಿದೆ.

ಹ್ಯಾಂಡ್ಲಿಂಗ್

ಹ್ಯಾಂಡ್ಲಿಂಗ್

ನುರಿತ ತಜ್ಞರ ಪ್ರಕಾರ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಹ್ಯಾಂಡ್ಲಿಂಗ್ ಅತ್ಯುತ್ತಮವಾಗಿದೆ. ಹಾಗಿದ್ದರೂ ದೂರದ ಪ್ರಯಾಣಕ್ಕೆ ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಯಾಕೆಂದರೆ ಇದು ಬೆನ್ನು ನೋವಿನಂತಹ ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡಲಿದೆ. ಅಷ್ಟಕ್ಕೂ ನೀವು ನೀಳಕಾಯದ ವ್ಯಕ್ತಿಯಾದ್ದಲ್ಲಿ ಇಂತಹ ಯಾವುದೇ ಸಮಸ್ಯೆ ಎದುರಾಗಲ್ಲ ಬಿಡಿ. ಅಂದರೆ ಹ್ಯಾಂಡಲ್ ಬಾರ್ ಸ್ವಲ್ಪ ಸಮಸ್ಯೆ ಸೃಷ್ಟಿಸಿದಂತಿದೆ.

ವರ್ಷನ್

ವರ್ಷನ್

ಹಿಂದುಗೆಡೆ ಹೆಸರಾಂತ ಪಯೋಲಿ ಸಸ್ಪೆಷನ್ ಬಳಕೆ ಮಾಡಲಾಗಿದೆ. ಇದು ಗುಣಮಟ್ಟತೆ ಹೆಚ್ಚಿಸಿದೆ. ಹಾಗೆಯೇ ಕೆಂಪು ಹಾಗೂ ಹಳದಿ ಬಣ್ಣಗಳಲ್ಲಿ ಎನ್‌ಫೀಲ್ಡ್ ಆಗಮನವಾಗಿದೆ.

ಮೈಲೇಜ್

ಮೈಲೇಜ್

ಇದರಲ್ಲಿ 13.5 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಆಳವಡಿಸಲಾಗಿದ್ದು, ಕೆಹಿನ್ ಎಲೆಕ್ಟ್ರಿಕ್ ಪ್ಯೂಯಲ್ ಇಂಜೆಕ್ಷನ್ ಮುಖಾಂತರ ಇಂಧನ ವಿತರಣೆಯಾಗುತ್ತದೆ. ಅಲ್ಲದೆ 20ರಿಂದ 25 ಕೀ.ಮೀ. ವರೆಗೂ ಮೈಲೇಜ್ ನೀಡುವಷ್ಟು ಸಕ್ಷಮವಾಗಿದೆ.

ಕಾಂಟಿನೆಂಟಲ್ ಜಿಟಿಯಲ್ಲೊಂದು ರಾಯಲ್ ಪಯಣ

ಇನ್ನು ಹ್ಯಾಂಡಲ್ ಬಾರ್‌ನಲ್ಲೇ ರಿಯರ್ ವ್ಯೂ ಮಿರರ್ ವ್ಯವಸ್ಥೆಯಿದೆ. ಇದು ನೋಡಲು ಸ್ಟೈಲಿಷ್ ಆಗಿದ್ದರೂ ನಮ್ಮ ದೇಶದಲ್ಲಿ ಕಾನೂನು ತೊಡಕು ಎದುರಾಗಬಹದು. ಹಾಗಾಗಿ ಉತ್ಪನ್ನ ವರ್ಷನ್‌ನಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆಯಿದೆ.

ವರ್ಷನ್

ವರ್ಷನ್

ಈ ಮೊದಲು ತಿಳಿಸಿದರ ವಿರುದ್ಧವಾಗಿ ಎರಡು ಸೀಟುಗಳ ವ್ಯವಸ್ಥೆಯಲ್ಲೂ ಎನ್‌ಫೀಲ್ಡ್ ಆಗಮನವಾಗಲಿದೆ. ಇದರಲ್ಲಿ ಜೋಡಿಸಲಾಗಿರುವ ಫೂಟ್ ರೆಸ್ಟ್ ಇದನ್ನು ಸಾಬೀತುಪಡಿಸುತ್ತದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಒಟ್ಟಿನಲ್ಲಿ ರಾಯಲ್ ಎನ್‌ಫೀಲ್ಡ್ ಎಲ್ಲ ಹಂತದಲ್ಲೂ ಭಾರತೀಯ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಗರಿಷ್ಠ ಎಂಜಿನ್ ಕ್ಷಮತೆಯಲ್ಲೂ ಕಾಂಟಿನೆಂಟಲ್ ಜಿಟಿ ದೇಶಕ್ಕೆ ಪರಿಚಯಿಸಿದೆ. ಸ್ಟೈಲ್ ಇಷ್ಟಪಡುವ ಎಲ್ಲ ವಾಹನ ಪ್ರೇಮಿಗಳಿಗೂ ಇಂದೊಂದು ಉತ್ತಮ ಆಯ್ಕೆಯಾಗಿರಲಿದೆ.

ಕಾಂಟಿನೆಂಟಲ್ ಜಿಟಿಯಲ್ಲೊಂದು ರಾಯಲ್ ಪಯಣ

ಟೆಸ್ಟ್ ಡ್ರೈವ್: ಜೊಬೊ ಕುರುವಿಲಾ (ಪ್ರಧಾನ ಸಂಪಾದಕರು, ಡ್ರೈವ್ ಸ್ಪಾರ್ಕ್)

More from DriveSpark

Article Published On: Thursday, December 5, 2013, 16:54 [IST]
English summary
As the year draws to a close, Royal Enfield is looking to set ablaze the Indian roads with the all-new 535cc Cafe Racer ‘Continental GT'. My first impression of this red thumper was how it's one of the best versions of a perfectly tailored modern bike with an antique-like appeal. Very regal, indeed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+