ನಿಮ್ಮ ಬಜೆಟ್ ಎಷ್ಟು? ಇಲ್ಲಿದೆ ನೋಡಿ ಅಗ್ಗದ ಬೈಕ್ಸ್
ದೇಶದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಸಾಮಾನ್ಯ ಗ್ರಾಹಕರು ಅಗ್ಗದ ಬೆಲೆಗಳಲ್ಲಿ ಉತ್ತಮ ನಿರ್ವಹಣೆ ನೀಡುವ ಸ್ಟೈಲಿಷ್ ಬೈಕ್ ಖರೀದಿಸುವ ಇರಾದೆ ಹೊಂದಿರುತ್ತಾರೆ. ಸಣ್ಣಪುಟ್ಟ ಕಚೇರಿ ಕೆಲಸಗಳಲ್ಲಿ ದಿನದೂಡುತ್ತಿರುವ ಜನರಲ್ಲಿ ಇಂತಹ ಭಾವನೆ ಮೂಡುವುದು ಸಹಜ.
ಇನ್ನು ದೇಶದ ಪ್ರಯಾಣಿಕ ಕ್ಷೇತ್ರದಲ್ಲಿ ದ್ವಿಚಕ್ರ ವಾಹನಗಳು ಬಹುದೊಡ್ಡ ಪಾತ್ರ ವಹಿಸುತ್ತದೆ. ಅಲ್ಲದೆ ಅಗ್ಗದ ದರದ ಬೈಕ್‌ಗಳು ದೇಶೆಲ್ಲೆಡೆ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದೆ. ಇಂದಿನ ಈ ಲೇಖನದ ಮೂಲಕ ದೇಶದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಅಂದರೆ 60,000 ರು.ಗಳ ಬಜೆಟ್‌ನೊಳಗೆ ಲಭ್ಯವಾಗುವ ಬೈಕ್‌ಗಳ ಬಗ್ಗೆ ವಿವರಣೆ ಕೊಡಲಿದ್ದೇವೆ.
ವಿ.ಸೂ: ಇಲ್ಲಿ ಕೊಡಲಾಗಿರುವ ಎಲ್ಲ ಬೈಕ್‌ಗಳ ದೆಹಲಿ ಎಕ್ಸ್ ಶೋ ರೂಂ ವೆರಿಯಂಟ್ ದರ ದಾಖಲಿಸಲಾಗಿದೆ. ಅಂದರೆ ಕೆಲವು ನಿರ್ದಿಷ್ಟ ಆವೃತ್ತಿಗಳಿಗೆ ತೆರಿಗೆ ಸೇರಿಸಿದರೆ 60,000 ರು. ಮೀರುವ ಸಂಭವವಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಜನಪ್ರಿಯ ಮಾಡೆಲ್‌ಗಳನ್ನು ಉಲ್ಲೇಖಿಸಲಾಗಿದೆ.

ಮುಂದಿನ ಸ್ಲೈಡರ್ ಒಂದೊಂದಾಗಿ ಕ್ಲಿಕ್ಕಿಸುತ್ತಾ 60 ಸಾವಿರ ಬಜೆಟ್‌ನೊಳಗೆ ದೇಶದಲ್ಲಿ ಲಭ್ಯವಿರುವ ಜನಪ್ರಿಯ ಬೈಕ್‌ಗಳ ಬಗ್ಗೆ ವಿವರಣೆ ಪಡೆದುಕೊಳ್ಳಿರಿ...

ಹೀರೊ ಎಚ್‌ಎಫ್ ಡಾನ್ 97ಸಿಸಿ
ದರ: ರು. 37,350
ಕ್ಲಾಸಿಕ್ ವಿನ್ಯಾಸವನ್ನು ಕಾಯ್ದುಕೊಳ್ಳುವಲ್ಲಿ ಹೀರೊ ಎಚ್‌ಎಫ್ ಡಾನ್ 97ಸಿಸಿ ಯಶಸ್ವಿಯಾಗಿದೆ. ಇದೇ ವಿಭಾಗದಲ್ಲಿ ಕಾಣಿಸಿಕೊಂಡಿರುವ ಇನ್ನೊಂದು ಬೈಕ್‌ವೆಂದರೆ ಅದುವೇ ಹೀರೊ ಎಚ್‌ಎಫ್ ಡಿಲಕ್ಸ್ 97ಸಿಸಿ. ಇದರ ಬೆಲೆ 39,000 ರು.ಗಳಾಗಿವೆ.

ಯಮಹಾ ಕ್ರೂಕ್ಸ್ 106ಸಿಸಿ
ದರ: ರು. 38,455
ಹೀರೊದ ಎಚ್‌ಎಫ್ ಡಾನ್ ಪ್ರತಿಸ್ಪರ್ಧಿ ಪಟ್ಟಿಯಲ್ಲಿ ಯಮಹಾ ಕ್ರೂಸ್ ಕಾಣಿಸಿಕೊಳ್ಳುತ್ತದೆ. ಇದು ಸಹ ಸಿಂಪಲ್ ಹಾಗೂ ಕ್ಲಾಸಿಕ್ ವಿನ್ಯಾಸ ಪಡೆದುಕೊಂಡಿದೆ.
ಇವನ್ನೂ ಪರಿಗಣಿಸಿ: ಯಮಹಾ ವೈಬಿಆರ್ 110- ದರ 45,455 ರು. ಹಾಗೂ ಯಮಹಾ ವೈಬಿಆರ್ 125- ದರ 51,555 ರು.

ಬಜಾಜ್ ಪ್ಲಾಟಿನಾ 100ಸಿಸಿ
ದರ: ರು. 40,346
ಬಜಾಜ್‌ನಿಂದ ಲಭ್ಯವಿರುವ ಅಗ್ಗದ ಬೈಕ್ ಪ್ಲಾಟಿನಾ 100ಸಿಸಿ ಆಗಿದೆ. ಇದು ಬಜಾಜ್‌ನ ಸಾಂಪ್ರದಾಯಿಕ ವಿನ್ಯಾಸವನ್ನು ಕಾಪಾಡಿಕೊಂಡು ಬಂದಿದೆ. ಹಾಗಿದ್ದರೂ ಇದರಲ್ಲಿ ಎಲೆಕ್ಟ್ರಿಕ್ ಸ್ಟಾರ್ಟ್ ಹಾಗೂ ಡಿಸ್ಕ್ ಬ್ರೇಕ್ ಸೌಲಭ್ಯವಿರುವುದಿಲ್ಲ.

ಹೋಂಡಾ ಡ್ರೀಮ್ ನಿಯೋ 100ಸಿಸಿ
ದರ: ರು. 43,150
ಇದು ಬೇಸ್ ವೆರಿಯಂಟ್‌ನಲ್ಲಿ ಲಭ್ಯವಿರುವ ಹೋಂಡಾದ ಅಚ್ಚುಮೆಚ್ಚಿನ ಬೈಕಾಗಿದೆ. ಈ ಮೂಲಕ ಹೀರೊ ನಂಬರ್ ವನ್ ಸ್ಥಾನ ಕಸಿದುಕೊಳ್ಳುವ ಬೃಹತ್ ಯೋಜನೆಯನ್ನು ಹೋಂಡಾ ಹೊಂದಿತ್ತು. ಹೆಚ್ಚು ಸ್ಟೈಲಿಷ್ ಹಾಗೂ ಕಲರ್‌ಫುಲ್ ಎನಿಸಿಕೊಂಡಿರುವ ಡ್ರೀಮ್ ನಿಯೋ ಉತ್ತಮ ಮೈಲೇಜ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇವನ್ನೂ ಪರಿಗಣಿಸಿ: ಹೋಂಡಾ ಡ್ರೀಮ್ ಯುಗಾ 110ಸಿಸಿ ದರ ರು. 46,670

ಟಿವಿಎಸ್ ಸ್ಪೋರ್ಟ್
ದರ: ರು. 44,155
ಕ್ರೀಡಾತ್ಮಕ ಲುಕ್ ಕಾಪಾಡಿಕೊಂಡಿರುವುದು ಟಿವಿಎಸ್ ಸ್ಪೋರ್ಟ್ ಪ್ರಮುಖ ವೈಶಿಷ್ಟ್ಯವಾಗಿದೆ.
ಇವನ್ನೂ ಪರಿಗಣಿಸಿ: ಟಿವಿಎಸ್ ಸ್ಟಾರ್ ಸಿಟಿ 110ಸಿಸಿ ರು. 46,575

ಬಜಾಜ್ ಡಿಸ್ಕವರ್ 100
ದರ: ರು. 44,498
100ಸಿಸಿಯಿಂದ ಆರಂಭಿಸಿ 125 ಸಿಸಿ ಎಸ್‌ಟಿ ವೆರಿಯಂಟ್ ವರೆಗೆ ಬಜಾಜ್ ಆರು ಬೈಕ್‌ಗಳ ಆಯ್ಕೆಯನ್ನು ಒದಗಿಸುತ್ತಿವೆ. ಈ ಪೈಕಿ ಬಜಾಜ್ ಡಿಸ್ಕವರ್ ಅತ್ಯಂತ ಹೆಚ್ಚು ಮಾರಾಟವನ್ನು ಪಡೆದುಕೊಂಡಿದೆ.
ಇವನ್ನೂ ಪರಿಗಣಿಸಿ: ಬಜಾಜ್ ಡಿಸ್ಕವರ್ 100ಎಂ ದರ ರು. 46,000, ಬಜಾಜ್ ಡಿಸ್ಕವರ್ 100ಟಿ ರು. 49,000 ರು. ಮತ್ತು ಬಜಾಜ್ ಡಿಸ್ಕವರ್ 125ಟಿ ರು. 53,547

ಸುಜುಕಿ ಹಯಾಟೆ
ದರ: ರು. 45,903
112ಸಿಸಿ ಮೂಲಕ ಸುಜುಕಿ ತನ್ನ ನೂತನ ಹಯಾಟೆ ಪರಿಚಯಿಸಿತ್ತು. ಅಲ್ಲದೆ ಇದರ ಪ್ರಚಾರಕ್ಕಾಗಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನೆರವನ್ನು ಪಡೆದುಕೊಂಡಿತ್ತು.
ಇವನ್ನೂ ಪರಿಗಣಿಸಿ: ಸುಜುಕಿ ಸ್ಲಿಂಗ್‌ಶಾಟ್ 125ಸಿಸಿ ರು. 55,911

ಹೀರೊ ಸ್ಲ್ಪೆಂಡರ್ ಪ್ಲಸ್
ದರ: ರು. 45,865
ದೇಶದ ಪ್ರಯಾಣಿಕ ಬೈಕ್‌ಗಳ ರಾಜ ಎಂದೇ ಪರಿಗಣಿಸಲ್ಪಟ್ಟಿರುವ ಹೀರೊ ಸ್ಲ್ಪೆಂಡರ್ ಬಗ್ಗೆ ಹೆಚ್ಚು ವರ್ಣಿಸುವ ಅಗತ್ಯವಿಲ್ಲ. ಈ ಐಕಾನಿಕ್ ಬೈಕ್‌ನ ಅಪ್‌ಗ್ರೇಡ್ ವರ್ಷನ್ ಸ್ಲ್ಪೆಂಡರ್ ಐಸ್ಟಾರ್ಟ್ ಇತ್ತೀಚೆಗಷ್ಟೇ ಲಾಂಚ್ ಆಗಿತ್ತು. ಇದು ಸ್ಟಾರ್ಟ್/ಸ್ಟಾರ್ಟ್ ಸೌಲಭ್ಯವನ್ನು ಹೊಂದಿದೆ.


Click it and Unblock the Notifications








