TVS Eurogrip Roadhound ರಿವ್ಯೂ: ಪರ್ಫಾಮೆನ್ಸ್ ಟೈರ್ ಲೋಕದ ಹೊಸ ದೊರೆ
ಸುಮಾರು 40 ವರ್ಷಗಳಿಂದ ಟಿವಿಎಸ್ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಬೈಕ್‌ಗಳನ್ನು ಮಾರಾಟ ಮಾಡುತ್ತಿರುವ ರೀತಿಯಲ್ಲೇ, ಟೈರ್‌ಗಳನ್ನು ಸಹ ಮಾರಾಟ ಮಾಡುತ್ತಿದೆ. ಭಾರತೀಯ ಮಾರುಕಟಗಟೆಯಲ್ಲಿ ಬೈಕ್ ಮತ್ತು ಸ್ಕೂಟರ್‌ಗಳಿಗೆ ಟೈರ್‌ಗಳನ್ನು ನಿರ್ಮಿಸುತ್ತಿದೆ. ಇದೀಗ ಟಿವಿಎಸ್ ತನ್ನ ಪ್ರಸಿದ್ದ ಟೈರ್ ಬ್ರಾಂಡ್‌ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಟಿವಿಎಸ್ ಯೂರೋ ಗ್ರಿಪ್ ಸುಮಾರು 2019 ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಚಯವಾಗಿತ್ತು. ಜಾಗತಿಕವಾಗಿ ಹೆಸರು ಮಾಡುವಲ್ಲಿ ದಾಪುಗಾಲಿಟ್ಟಿದ್ದ ಈ ಟಿವಿಎಸ್ ಯೂರೋಗ್ರಿಪ್ ಇಂದು ಭಾರತದ ರಸ್ತೆಗಳ ಲೆಕ್ಕವಿಲ್ಲದಷ್ಟು ವಾಹನದಲ್ಲಿ ಬಳಕೆಯಾಗುತ್ತಿದ್ದು, ಟೈರ್‌ಗಳ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಮೂಡಿಸಿದೆ. ಇನ್ನು ಇತ್ತೀಚೆಗಷ್ಟೇ ಟಿವಿಎಸ್ ಇದರ ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಹೊಸ ಟಿವಿಎಸ್ ಯೂರೋಗ್ರಿಪ್ ರೋಡ್‌ಹೌಂಡ್ (TVS Eurogrip Roadhound) ಟೈರ್ ಎಂದು ಇದನ್ನು ಹೆಸರಿಸಲಾಗಿದ್ದು, ಇದು ಬೈಕ್ ಪ್ರೇಮಿಗಳಿಗೆ ರೋಡ್ ಮತ್ತು ಟ್ರ್ಯಾಕ್‌ಗಳಲ್ಲಿ ಹೊಸ ಅನುಭವವನ್ನು ನೀಡಲಿದೆ ತಿಳಿದು ಬಂದಿದೆ. ಇನ್ನು ಈ ಟೈರ್‌ಗಳನ್ನು ಪರಿಶೀಲಿಸಲು ಮತ್ತು ಇದರ ಬಗ್ಗೆ ಹೆಚ್ಚು ತಿಳಿಯುವ ಅವಕಾಶ ಪಡೆದ ಡ್ರೈವ್‌ಸ್ಪಾರ್ಕ್ ತನ್ನ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತಿದೆ. ಕೋಯಂಬತ್ತೂರಿನ ಕಾರಿ ಮೋಟಾರ್ ಸ್ಪೀಡ್ ವೇನಲ್ಲಿ ಡ್ರೈವ್‌ಸ್ಪಾರ್ಕ್ ತಂಡ ಈ ಟೈರ್‌ನ ಪರಿಶೀಲನೆ ನಡೆಸಿದ್ದು, ಈ ಟೈರ್ ಜೊತೆಗಿನ ರೈಡಿಂಗ್ ಅನುಭವ ವಿಶಿಷ್ಟವಾಗಿತ್ತು.
ಟಿವಿಎಸ್ ಯೂರೋಗ್ರಿಪ್ ಒಂದು ಕ್ವಾಡ್ ಕಂಪೌಂಡ್ ರೇಡಿಯಲ್ ಟೈರ್ ವಿನ್ಯಾಸವನ್ನು ಹೊಂದಿದ್ದು ಕಾರ್ನರಿಂಗ್ ಮಾಡುವ ಸಮಯದಲ್ಲಿ ಹೆಚ್ಚಿನ ಗ್ರಿಪ್ ನೀಡಲಿದೆ. ಕ್ವಾಡ್ ಕಂಪೌಂಡ್‌ಗಳ ಸಹಯಾದಿಂದ ಈ ಟೈರ್ ಹೆಚ್ಚಿನ ರೋಡ್‌ಗ್ರಿಪ್, ದೀರ್ಘ ಬಾಳಿಕೆ ಮತ್ತು ಉತ್ತಮ ವಿನ್ಯಾಸವನ್ನು ಹೊಂದಿದ್ದು, ಇದು ರಸ್ತೆ ಅಥವಾ ಟ್ರ್ಯಾಕ್ ಈ ಎರಡೂ ಕಡೆ ಬೈಕ್ ಸವಾರಿಯ ವೇಳೆ ಕಾರ್ನರಿಂಗ್ ಮಾಡುವ ಬೈಕ್ ಸವಾರರಿಗೆ ವರದಾನವಾಗಿ ಪರಿಣಮಿಸಲಿದೆ ಎಂದು ತಿಳಿದು ಬಂದಿದೆ.

ಇನ್ನು ಟಿವಿಎಸ್ ಯೂರೋಗ್ರಿಪ್ ರೋಡ್‌ಹೌಂಡ್ ಮುಂಭಾಗದಲ್ಲಿ ಒಂದು ಸೈಜ್ ಆಯ್ಕೆ ಮತ್ತು ಹಿಂಭಾಗದಲ್ಲಿ ಎರಡು ಸೈಜ್‌ನ ಆಯ್ಕೆಯಲ್ಲಿ ಬರುತ್ತವೆ. ಈ ಟೈರ್‌ನ ಬೆಲೆಯನ್ನು ಗಮನಿಸುವುದಾದರೆ 120/70 ಸೈಜ್‌ನ ಟೈರ್‌ಗೆ 12,999 ರೂಪಾಯಿಗಳು, 160/60 ಸೈಜ್‌ನ ಟೈರ್‌ನ ಬೆಲೆ ಸುಮಾರು 14,999 ಮತ್ತು 180/55 ಸೈಜ್‌ನ ಟೈರ್ ಬೆಲೆ ಸುಮಾರು 16,999 ರೂಪಾಯಿಗಳು.
ಈ ಟಿವಿಎಸ್ ಯೂರೋಗ್ರಿಪ್ ರೋಡ್‌ಹೌಂಡ್ ಟೈರ್‌ನ್ನು ತಮಿಳುನಾಡಿನ ಮಧುರೈನಲ್ಲಿರುವ ಉತ್ಪಾದನಾ ಘಟಕದಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿ ಡ್ರೈವ್‌ಸ್ಪಾರ್ಕ್ ತಂಡಕ್ಕೆ ಈ ಟೈರ್‌ನ ಸಂಪೂರ್ಣ ಪ್ರಕ್ರಿಯೆಯನ್ನು ವೀಕ್ಷಿಸುವ ಅವಕಾಶ ದೊರಕಿದ್ದು, ಆರಂಭದ ಹಂತದಿದಂದ ಕೊನೆಯ ಹಂತದ ವರೆಗೆ ಟೈರ್ ನಿರ್ಮಿಸುವ ಘಟ್ಟಗಳನ್ನು ವೀಕ್ಷಿಸಿದೆ. ಇನ್ನು ಕೋಯಂಬತ್ತೂರಿನ ಕಾರಿ ಮೋಟಾರ್ ಸ್ಪೀಡ್ ವೇ ನಲ್ಲಿ ಟಿವಿಎಸ್ ಯೂರೋಗ್ರಿಪ್ ರೋಡ್‌ಹೌಂಡ್ ಟೈರನ್ನು ಅಳವಡಿಸಿದ್ದ ಬೆನೆಲ್ಲಿ, ಕವಾಸಕಿ. ಹೋಂಡಾ ಮತ್ತು ಹಾರ್ಲೆ ಡೇವಿಡ್‌ಸನ್ ಬೈಕ್‌ಗಳನ್ನು ಇಡಲಾಗಿತ್ತು.

ಇದನ್ನು ಪರೀಕ್ಷಿಸಿದ ನಮ್ಮ ತಂಡ ಟೈರ್‌ನ ಗುಣಮಟ್ಟ, ಪರ್ಫಾಮೆನ್ಸ್ ಮತ್ತು ಇದರ ಇತರ ಗುಣಗಳನ್ನು ತಿಳಿದುಕೊಂಡಿದ್ದೇವೆ. ಈ ಟೈರ್ ಅನ್ನು ಯಾವುದೇ ಬೈಕ್‌ನಲ್ಲಿ ಹಾಕಿ ಪರೀಕ್ಷಿಸಿದಾಗಲೂ ನಾವು ಗಮನಿಸಿದ ಪ್ರಮುಖ ಅಂಶವೇನೆಂದರೆ ಇದು ಎಲ್ಲಾ ಬೈಕ್‌ಗಳಲ್ಲೂ ಏಕ ರೀತಿಯ ಪರ್ಫಾಮೆನ್ಸ್ ಅನ್ನು ನೀಡಿತ್ತು ಎಂಬುದು. ಈ ಟೈರ್‌ಗಳು ಬೇಗನೇ ವಾತಾವರಣಕ್ಕೆ ಒಗ್ಗಿಕೊಂಡು ಉತ್ತಮ ರೀತಿಯಲ್ಲಿ ಪರ್ಫಾಮೆನ್ಸ್ ಅನ್ನು ನೀಡುತ್ತದೆ.
ಬೈಕ್ ರೈಡ್‌ನ ಆರಂಭದಿಂದಲೂ ಕೊನೆಯವರೆಗೂ ಇದು ಉತ್ತಮ ರೋಡ್ ಗ್ರಿಪ್‌ನ್ನು ಒದಗಿಸುತ್ತಿದ್ದು, ಇದರಿಂದ ಯಾವುದೇ ಆತಂಕವಿಲ್ಲದೇ ಬೈಕ್ ಓಡಿಸಲು ಸಹಕಾರಿಯಾಗುವುದು ಮಾತ್ರವಲ್ಲದೇ ಬೈಕ್ ಸವಾರನ ಆತ್ಮ ವಿಶ್ವಾಸವನ್ನು ಸಹ ಹೆಚ್ಚಿಸುತ್ತದೆ. ವೇಗದಲ್ಲಿ ಚಲಿಸುವ ಸಂಧರ್ಭದಲ್ಲಿ ಎಮೆರ್ಜೆನ್ಸಿ ಬ್ರೇಕ್ ಹಾಕಿದರೂ ಸಹ ವೇಗವನ್ನು ಅಷ್ಟೇ ಸುಲಭವಾಗಿ ಮಿತಗೊಳಿಸಿ ಆತಂಕವನ್ನು ಕಡಿಮೆ ಮಾಡುತ್ತದೆ.

ಈ ಟೈರ್ ಬಳಸಿಕೊಂಡು ಟ್ರ್ಯಾಕ್ ಅಥವಾ ರಸ್ತೆಯಲ್ಲಿ ಕಾರ್ನರಿಂಗ್ ಮಾಡಲು ಸಹ ಈ ಟೈರ್ ಬೆಂಬಲ ನೀಡುತ್ತಿದ್ದು, ನೀವು ಕಾರ್ನರಿಂಗ್ ಮಾಡುವ ಸಮಯದಲ್ಲಿ ಅದು ಯಾವುದೇ ರೀತಿಯಲ್ಲೂ ಸ್ಲಿಪ್ ಆಗದಂತೆ ಈ ಟೈರ್ ನೋಡಿಕೊಳ್ಳುತ್ತದೆ. ಇನ್ನು ಈ ಬೈಕ್‌ನಲ್ಲಿ ಟ್ರೇಲ್ ಬ್ರೇಕಿಂಗ್ ಮಾಡುವ ಸಂಧರ್ಭದಲ್ಲೂ ಬೈಕ್ ರಸ್ತೆಯನ್ನು ಕಚ್ಚಿ ನಿಂತಂತೆ ಭಾಸವಾಗುತ್ತಿತ್ತು.
ಇನ್ನು ನೀವು ಬೈಕ್ ಅನ್ನು ತಿರುವಿನಲ್ಲಿ ಓಡಿಸುವಾಗಲೂ ಸಹ ನಿಮಗೆ ಇದು ಉತ್ತಮ ಆತ್ಮ ವಿಶ್ವಾಸವನ್ನು ನೀಡುತ್ತದೆ. ಬೈಕನ್ನು ಅಧಿಕ ವೇಗದಲ್ಲಿ ತಿರುವಿನಲ್ಲಿ ಚಲಿಸುವಾಗಲೂ ಟೈರ್ ಮತ್ತು ರಸ್ತೆಗೆ ಇರುವ ಸಂಭಂಧ ಎಳ್ಳಷ್ಟೂ ತಪ್ಪುವುದಿಲ್ಲ. ಬದಲಿಗೆ ನೀವು ಇನ್ನಷ್ಟು ಆಕ್ಸಿಲರೇಟರ್ ಕೊಡುವಂತೆ ಪ್ರೇರೇಪಿಸುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಟಿವಿಎಸ್ ಯೂರೋಗ್ರಿಪ್ ಟೈರ್‌ಗಳಲ್ಲಿ ಈ ಯೂರೋಗ್ರಿಪ್ ರೋಡ್‌ಹೌಂಡ್ ಪರ್ಫಾಮೆನ್ಸ್ ಟೈರ್‌ಗಳಲ್ಲಿ ಮುಂಚೂಣಿಯಲ್ಲಿದೆ ಎಂದರೆ ತಪ್ಪಾಗಲಾರದು. ಇನ್ನು ಈ ಟೈರ್‌ನ ಆನ್ ರೋಡ್ ಪರ್ಫಾಮೆನ್ಸ್ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲವಾದರೂ ಕಾರಿ ಮೋಟಾರ್ ಸ್ಪೀಡ್ ವೇ ನಲ್ಲಿ ಸಮಗೆ ಸಿಕ್ಕ ಸಮಯದಲ್ಲಿ ಈ ಟೈರ್‌ಗಳನ್ನು ಹಲವಾರು ಬೈಕ್‌ಗಳಲ್ಲಿ ಪರಿಶೀಲಿಸಿದ್ದು, ಟ್ರ್ಯಾಕ್‌ನಲ್ಲಿ ಇದು ನೀಡಿದ ಅನುಭವ ಮತ್ತು ಪರ್ಫಾಮೆನ್ಸ್ ನಿಜಕ್ಕೂ ಅವಿಸ್ಮರಣೀಯ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








