ಟಿವಿಎಸ್ ಫೀನಿಕ್ಸ್ ನೀಡಲಿದೆಯಂತೆ 67 ಕಿ.ಮೀ ಮೈಲೇಜ್?
ಎರಡು ತಿಂಗಳ ಹಿಂದೆ ಅಂದರೆ 2012 ಸೆಪ್ಟೆಂಬರ್ ತಿಂಗಳಲ್ಲಿ ಟಿವಿಎಸ್ ದ್ವಿಚಕ್ರ ತಯಾರಕ ಕಂಪನಿಯ ಬಹುನಿರೀಕ್ಷಿತ ಫೀನಿಕ್ಸ್ 125 ಮಾರುಕಟ್ಟೆಗೆ ಪರಿಚಯವಾಗಿತ್ತು. ಪ್ರೀಮಿಯಂ ಮೋಟಾರ್‌ಸೈಕಲ್ ಎಂದೆನಿಸಿಕೊಂಡಿರುವ ಟಿವಿಎಸ್‌ನ ಫೀನಿಕ್ಸ್ ಹಲವು ವಿಚಾರಗಳಲ್ಲಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಅಂದ ಹಾಗೆ ಟಿವಿಎಸ್ ಫೀನಿಕ್ಸ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು? ನಿಮ್ಮಲ್ಲಿ ಅನೇಕರಲ್ಲಿ ಈ ವಿಚಾರ ಗಾಬರಿಯನ್ನುಂಟು ಮಾಡಬಹುದು. ಯಾಕೆಂದರೆ ಟಿವಿಎಸ್ ಫೀನಿಕ್ಸ್‌ನ 125 ಸಿಸಿ ಇಕೊಥ್ರಸ್ಟ್ ಎಂಜಿನ್ ಪ್ರತಿ ಲೀಟರ್‌ಗೆ ಗರಿಷ್ಠ 67 ಕಿಲೋ ಮೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಇದರ ಡಿಜಿಟಲ್ ತಂತ್ರಗಾರಿಕೆಯ ಇಗ್ನಿಷನ್ ಸಿಸ್ಟಂನಿಂದಾಗಿ ಹೊಸಸೂಸುವ ಹೊಗೆಯ ಪ್ರಮಾಣವು ಗಣನೀಯವಾಗಿ ಇಳಿಕೆ ಕಾಣಲಿದೆ.
ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್, ಪ್ರೀಮಿಯಂ ಅಂಬರಿನಲ್ಲಿ ಬ್ಯಾಕ್ಲಿಟ್, ಡಿಜಿಟಲ್ ಫ್ಯೂಯಲ್ ಗೇಜ್, ಲೊ ಬ್ಯಾಟರಿ ರಿಮೈಂಡರ್, ಟ್ರಿಪ್ ಮೀಟರ್, ಸರ್ವಿಸ್ ರಿಮೈಂಡರ್, ಮೃದುವಾದ ಮೇಲ್ಮೈ ಹಿಡಿತ ಹಾಗೂ ಸಾಫ್ಟ್ ಟಚ್ ಸ್ವಿಚ್‌ಗಳಂತಹ ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದೆ.

ಫೀನಿಕ್ಸ್ 125 ಟಿವಿಎಸ್‍ನಿಂದ ಬಿಡುಗಡೆಯಾದ ಅತಿ ನೂತನ ಬೈಕ್. ಇದು ಪ್ರತಿ ಲೀಟರ್‌ಗೆ ಗರಿಷ್ಠ 67 ಕಿಲೋ ಮೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಡ್ಯುಯಲ್ ಟೋನ್ ಗ್ರಾಫಿಕ್ಸ್
ಡ್ಯುಯಲ್ ಟೋನ್ ಕಲರ್ ಸ್ಕೀಮ್ ಟಿವಿಎಸ್ ಫೀನಿಕ್ಸ್‌ಗೆ ಮತ್ತಷ್ಟು ಆಕರ್ಷಕ ಲುಕ್ ನೀಡಿದೆ.

ಎಲ್‌ಇಡಿ ಪೈಲಟ್ ಲ್ಯಾಂಪ್
ಇದರ ಎಲ್‌ಇಡಿ ಪೈಲಟ್ ಲ್ಯಾಂಪ್‌ಗಳು ದಿನ ರಾತ್ರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.

ಪರಿಸರ ಸ್ನೇಹಿ ಎಂಜಿನ್
ಟಿವಿಎಸ್ ಫೀನಿಕ್ಸ್ 125 ಸಿಸಿ ಬೈಕ್‌ನಲ್ಲಿ ಪರಿಸರ ಸ್ನೇಹಿ ಇಕೊಥ್ರಸ್ಟ್ ಎಂಜಿನ್ ಆಳವಡಿಸಲಾಗಿದೆ. ಇದರಿಂದ ಕಡಿಮೆ ಹೊಗೆ ಹೊರಸೂಸುವುದರೊಂದಿಗೆ ಜತೆಗೆ ಉತ್ತಮ ಇಂಧನ ಕ್ಷಮತೆ ಸಿಗಲಿದೆ.

ಹಜಾರ್ಡ್ ಲೈಟ್
ಸಾಮಾನ್ಯವಾಗಿ ಹಜಾರ್ಡ್ ಲೈಟ್ (ಅಪಾಯ ದೀಪ) ಕಾರಿನಲ್ಲಿ ಮಾತ್ರ ಆಳವಡಿಸಲಾಗುತ್ತದೆ. ಆದರೆ ಹಜಾರ್ಡ್ ಲೈಟ್ ಹೊಂದಿದ ಮೊದಲ ಬೈಕೆಂಬ ಹಿರಿಮೆಗೆ ಫೀನಿಕ್ಸ್ ಪಾತ್ರವಾಗಿದೆ.

ಡಿಜಿಟಲ್ ಮೀಟರ್
ಟಿವಿಎಸ್ ಆವೃತ್ತಿಗಳಲ್ಲಿ ಸಂಪೂರ್ಣವಾಗಿ ಡಿಜಿಟಲ್ ಸ್ಪಿಡೋಮೀಟರ್ ಹೊಂದಿದ ಬೈಕೆಂಬ ಖ್ಯಾತಿಯನ್ನು ಫಿನಿಕ್ಸ್ ಪಡೆದಿದೆ.

ಸುರಕ್ಷತೆ
ಟಿವಿಎಸ್ ಫೀನಿಕ್ಸ್ ಬೈಕ್‌ನಲ್ಲಿ ಸುರಕ್ಷತೆಗಾಗಿ ಅತಿ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಈ ಮೂಲಕ ಬೈಕ್ ವಿನ್ಯಾಸವನ್ನು ಅಭಿವೃದ್ಧಿಪಡಿಸಾಗಿದೆ.

ಕಲರ್ ವೆರಿಯಂಟ್
ಒಟ್ಟು ಐದು ಕಲರ್ ವೆರಿಯಂಟ್‌ಗಳಲ್ಲಿ ಟಿವಿಎಸ್ ಫೀನಿಕ್ಸ್ ಆಗಮನವಾಗಿದೆ.
Moroccan Red,
Alaskan Green,
Belgian Black Red,
Helsinki Black Silver
Oxford Grey


Click it and Unblock the Notifications








