ಸ್ಕೂಟರ್ ಪ್ರೇಮಿಗಳ ಆನಂದ - ವೆಸ್ಪಾ ಎಸ್ 125 ವಿಮರ್ಶೆ

By Nagaraja

ಟೆಸ್ಟ್ ಡ್ರೈವ್ ವರದಿ: ಅಜಿಂಕ್ಯಾ ಪ್ಯಾರಲಿಕರ್ (ಉಪ ಸಂಪಾದಕರು, ಡ್ರೈವ್ ಸ್ಪಾರ್ಕ್)

ಸ್ಕೂಟರ್ ಎಂದಾಕ್ಷಣ ನಮಗೆಲ್ಲರಿಗೂ ಬಜಾಜ್ ಚೇತಕ್ ನೆನಪಾಗುತ್ತದೆ. ಆದರೆ ದೇಶದ ಜನಪ್ರಿಯ ಚೇತಕ್ ಮೂಲ ವಿನ್ಯಾಸ ಪಡೆದುಕೊಂಡಿರುವುದು ವೆಸ್ಪಾದಿಂದಲೇ ಎಂಬ ಸತ್ಯಾಂಶ ಬಯಲು ಮಾಡಿದರೆ ನಿಮ್ಮಿಂದ ನಂಬಲು ಸಾಧ್ಯವೇ?

ಬಹುನಿರೀಕ್ಷಿತ ವೆಸ್ಪಾ ಎಸ್ ಭಾರತದಲ್ಲಿ ಭರ್ಜರಿ ಲಾಂಚ್

ಹೌದು, 2012ರಲ್ಲಿ ಭಾರತಕ್ಕೆ ಭರ್ಜರಿ ರಿ ಎಂಟ್ರಿ ಕೊಟ್ಟಿರುವ ಇಟಲಿಯ ಐಕಾನಿಕ್ ವಾಹನ ತಯಾರಕ ಸಂಸ್ಥೆ ಪಿಯಾಜಿಯೊದ ಸ್ಕೂಟರ್ ಬ್ರಾಂಡ್ ಆಗಿರುವ ವೆಸ್ಪಾ ಇತ್ತೀಚೆಗಷ್ಟೇ ನೂತನ ಪ್ರೀಮಿಯಂ ಎಸ್ 125 ಮಾದರಿಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಸಿತ್ತು.

ವೆಸ್ಪಾ ನಡೆದು ಬಂದ ಹಾದಿ ವೆಸ್ಪಾಲಾಜಿ

ಈಗಾಗಲೇ ಎಲ್‌ಎಕ್ಸ್ ಹಾಗೂ ವಿಎಕ್ಸ್ 125 ಮಾದಿರಗಳನ್ನು ಪರಿಚಯಿಸಿರುವ ವೆಸ್ಪಾ, ಈ ಸಾಲಿಗೆ ಮಗದೊಂದು ಮಾದರಿ ಸೇರ್ಪಡೆಗೊಳಿಸಿದೆ. ಅಷ್ಟಕ್ಕೂ ಈ ಕ್ಲಾಸಿಕ್ ಸ್ಕೂಟರ್ ನಿಮ್ಮ ಬೇಡಿಕೆಗಳನ್ನು ಪೂರೈಸಲಿದೆಯೇ ಎಂಬುದನ್ನು ಸ್ಲೈಡರ್ ಮುಖಾಂತರ ನೋಡೋಣ ಬನ್ನಿ...

ವೆಸ್ಪಾ ಎಸ್ 125 ಸಂಪೂರ್ಣ ವಿಮರ್ಶೆ

ವೆಸ್ಪಾ ಎಸ್ 125 ವಿಮರ್ಶೆಗೂ ಮುನ್ನ ಈ ಬಹುನಿರೀಕ್ಷಿತ ಸ್ಕೂಟರ್ ಬಗೆಗಿನ ಮೂಲಭೂತ ಅಂಶಗಳ ಬಗ್ಗೆ ಮಾಹಿತಿ ನೀಡುವುದು ನಮ್ಮ ಕರ್ತವ್ಯವಾಗಿರುತ್ತದೆ.

2014 ಪಿಯಾಜಿಯೊ ವೆಸ್ಪಾ ಎಸ್ 125 ಸಿಸಿ

ಲಾಂಚ್ ದಿನಾಂಕ: ಮಾರ್ಚ್ 5, 2014

ದರ ಮಾಹಿತಿ: 76,495 ರು. (ಮುಂಬೈ)

ಟೆಸ್ಟ್ ಡ್ರೈವ್: 100 ಕೀ.ಮೀ.ಗಳಷ್ಟು

ಪ್ರದೇಶ: ಬಾಂದ್ರಾ (ಮುಂಬೈ)

ಟೆಸ್ಟ್ ಡ್ರೈವ್ ಮಾಡಿದವರು: ಅಜಿಂಕ್ಯಾ ಪ್ಯಾರಲಿಕರ್, ಉಪ-ಸಂಪಾದಕ (ಡ್ರೈವ್ ಸ್ಪಾರ್ಕ್)

ಎಂಜಿನ್ ಮಾನದಂಡ

ಎಂಜಿನ್ ಮಾನದಂಡ

ತಾಂತ್ರಿಕತೆ: 125 ಸಿಸಿ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, ಕರ್ಬ್ಯೂರೇಟಡ್, ತ್ರಿ ವಾಲ್ವೆ ಎಂಜಿನ್ ಆಳವಡಿಕೆ, 9.9 ಬಿಎಚ್‌ಪಿ (7500), 10.59 ಎನ್‌ಎಂ ಟಾರ್ಕ್ (6000)

ಮೈಲೇಜ್

ಮೈಲೇಜ್

ಕಂಪನಿಯ ಪ್ರಕಾರ ಪ್ರತಿ ಲೀಟರ್‌ಗೆ 60 ಕೀ.ಮೀ.ಗಿಂತಲೂ ಹೆಚ್ಚಿನ ಮೈಲೇಜ್ ನೀಡಲಿದೆ ಎಂದು ವಾದಿಸುತ್ತದೆ. ಆದರೆ ನೈಜ ರಸ್ತೆ ಪರಿಸ್ಥಿತಿಯಲ್ಲಿ ಇಧು ಪ್ರತಿ ಲೀಟರ್‌ಗೆ 45ರಿಂದ 50 ಕೀ.ಮೀ. ವರೆಗೆ ಮೈಲೇಜ್ ನೀಡಲಿದೆ. ಅಂದರೆ ಸಾಮಾನ್ಯ ಸ್ಕೂಟರ್‌ಗಳನ್ನು ಪರಿಗಣಿಸಿದರೆ ಇದು ಅತ್ಯುತ್ತಮ ಇಂಧನ ಕ್ಷಮತೆ ಹೊಂದಿದೆ.

ವೆಸ್ಪಾ ಎಸ್ ಬಣ್ಣಗಳು

ವೆಸ್ಪಾ ಎಸ್ ಬಣ್ಣಗಳು

ವೆಸ್ಪಾ ಎಸ್ ವಿವಿಧ ಬಣ್ಣಗಳಲ್ಲಿ ಲಭ್ಯವಿರಲಿದೆ.

ನಿರೊ ಮ್ಯಾಟ್ (ಮ್ಯಾಟ್ ಬ್ಲ್ಯಾಕ್),

ಏರನ್ಸಿಯೊ ಟರೊಮಿನಾ (ಬ್ರೈಟ್ ಓರೆಂಜ್)

ರೂಸ್ಸೊ ಡ್ರಾಗನ್ (ಕೆಂಪು)

ಮಾಂಟೆ ಬಿಯಾಂಕೊ (ಬಿಳಿ)

ವಿನ್ಯಾಸ

ವಿನ್ಯಾಸ

ಈ ಮೊದಲೇ ತಿಳಿಸಿರುವಂತೆಯೇ ಕ್ಲಾಸಿಕ್ ವಿನ್ಯಾಸವನ್ನು ಕಾಪಾಡಿಕೊಳ್ಳುವಲ್ಲಿ ವೆಸ್ಪಾ ಎಸ್ ಯಶಸ್ವಿಯಾಗಿದೆ. ಮೊದಲ ವೆಸ್ಪಾ ಸ್ಕೂಟರ್ 68 ವರ್ಷಗಳ ಹಿಂದೆ ಲಾಂಚ್ ಆಗಿದ್ದರೂ ಈಗಲೂ ಅದೇ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವೆಸ್ಪಾ ಎಸ್ 125 ಸಂಪೂರ್ಣ ವಿಮರ್ಶೆ

ಎಲ್ಲ ಕೋನದಿಂದಲೂ ನೂತನ ವೆಸ್ಪಾ ಎಸ್ ಆಕರ್ಷಕ ವಿನ್ಯಾಸ ಕಾಪಾಡಿಕೊಂಡಿದೆ. ಇದು ಆಯತಾಕಾರದ ಮಿರರ್ ಪಡೆದುಕೊಂಡಿದೆ.

ವೆಸ್ಪಾ ಎಸ್ 125 ಸಂಪೂರ್ಣ ವಿಮರ್ಶೆ

ಇನ್ನು ಸ್ಕೂಟರ್‌ಗೆ ಪ್ರೀಮಿಯಂ ಟಚ್ ನೀಡುವ ಹಿನ್ನಲೆಯಲ್ಲಿ ಸೈಲನ್ಸರ್ ಮಫ್ಲರ್‌ಗೆ ಕ್ರೋಮ್ ಟಚ್ ನೀಡಲಾಗಿದೆ. ಅಲ್ಲದೆ ವೆಸ್ಪಾದ ಆಕರ್ಷಕ ಲೊಗೊ ಕೂಡಾ ಕಾಣಸಿಗಬಹುದು.

ವೆಸ್ಪಾ ಎಸ್ 125 ಸಂಪೂರ್ಣ ವಿಮರ್ಶೆ

ಪಿಯಾಜಿಯೊ ಸ್ಕೂಟರ್‌ನ ಟ್ರೇಡ್ ಮಾರ್ಡ್ ಎಂದೇ ಹೇಳಬಹುದಾದ ಬಾತುಕೋಳಿ ಶೈಲಿಯ ವಿನ್ಯಾಸವನ್ನು ನೀವಿಲ್ಲಿ ನೋಡಬಹುದು.

ವೆಸ್ಪಾ ಎಸ್ 125 ಸಂಪೂರ್ಣ ವಿಮರ್ಶೆ

ಇನ್ನು ಆಸನ ವ್ಯವಸ್ಥೆಯ ಬಗ್ಗೆ ಮಾತನಾಡುವುದಾದ್ದಲ್ಲಿ, ಹಿಂಬದಿಯ ಸವಾರರಿಗೆ ಸ್ವಲ್ಪ ಇಕ್ಕಟ್ಟಾದ ಅನುಭವ ಉಂಟಾಗಲಿದೆ. ಅಲ್ಲದೆ ಫೂಟ್‌ರೆಸ್ಟ್ ಸ್ಥಾನಪಲ್ಲಟವಾದಂತೆ ಭಾಸವಾಗುತ್ತಿದೆ.

ಚಾಲನಾ ಗುಣಮಟ್ಟತೆ

ಚಾಲನಾ ಗುಣಮಟ್ಟತೆ

ಭಾರತೀಯ ರಸ್ತೆಗೆ ಅನುಗುಣವಾಗಿ ವೆಸ್ಪಾ ಎಸ್ ಚಾಲನಾ ಗುಣಮಟ್ಟ ಹೊಂದಿದೆ. ಇದು ರಸ್ತೆಗಳಲ್ಲಿರುವ ಸಣ್ಣ ಪುಟ್ಟ ಹಳ್ಳ, ಗುಂಡಿಗಳನ್ನು ನಿಭಾಯಿಸಬಲ್ಲದು. ಇನ್ನು ಎತ್ತರದ ಪ್ರಯಾಣಿಕರಿಗೆ ಹೊಂದಿಕೆಯಾಗುವ ರೀತಿಯಲ್ಲಿ ಹ್ಯಾಂಡಲ್ ಬಾರ್ ರಚಿಸಲಾಗಿದೆ.

ವೆಸ್ಪಾ ಎಸ್ 125 ಸಂಪೂರ್ಣ ವಿಮರ್ಶೆ

ಹಾಗಿದ್ದರೂ ನಿಧಾನವಾಗಿ ಚಲಿಸುವಾಗ ಸ್ವಲ್ಪ ಅಸಮತೋಲನ ಕಂಡುಬರುತ್ತಿದ್ದು, ಇದರಲ್ಲಿ ಕಂಡುಬರುವ ವೈಬ್ರೇಷನ್ ಸ್ವಲ್ಪ ಅಸಂತುಷ್ಟಿ ಎಡೆಮಾಡುತ್ತದೆ. ಒಟ್ಟಿನಲ್ಲಿ ಚಾಲನಾ ಗುಣಮಟ್ಟತೆಯ ವಿಚಾರದಲ್ಲಿ ಶ್ರೇಷ್ಠತೆಯನ್ನು ಕಾಯ್ದುಕೊಂಡಿದೆ.

ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್

ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್

ಇತರ ವೆಸ್ಪಾ ಮಾದರಿಗಳಂತೆಯೇ ಎಸ್ 125 ಸಿಸಿ ಸ್ಕೂಟರನ್ನು ಹ್ಯಾಂಡಲ್ ಮಾಡುವುದು ಬಹಳ ಸುಲಭ. ಇದು ಹೆಣ್ಮಕ್ಕಳಿಗೆ ಸಹಕಾರಿಯಾಗಲಿದೆ. ಇನ್ನು ಬ್ರೇಕಿಂಗ್ ಬಗ್ಗೆ ಮಾತನಾಡುವುದಾದ್ದಲ್ಲಿ ಇದರಲ್ಲಿರುವ ಎಂಆರ್‌ಎಫ್ ಜಾಪ್ಪರ್ ಟ್ಯೂಬ್‌ಲೆಸ್ ಚಕ್ರ ಉತ್ತಮ ಗ್ರಿಪ್ ಒದಗಿಸಲಿದೆ.

ವೆಸ್ಪಾ ಎಸ್ 125 ಸಂಪೂರ್ಣ ವಿಮರ್ಶೆ

ಇದು ಮುಂದುಗಡೆ ಸಿಂಗಲ್ ಕ್ಯಾಲಿಪರ್ ಡಿಸ್ಕ್ ಬ್ರೇಕ್ ಅಂತೆಯೇ ಹಿಂದುಗಡೆ ಡ್ರಮ್ ಬ್ರೇಕ್ ಪಡೆದುಕೊಂಡಿದೆ. ಸ್ಕೂಟರಿಗಿದು ಸಾಕಾಷ್ಟಾದರೂ ಮುಂಭಾಗದಲ್ಲಿ ಫ್ರಂಟ್ ಡಿಸ್ಕ್ ಬ್ರೇಕ್ ನೀಡುತ್ತಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

ವಿಶಿಷ್ಟತೆಗಳು

ವಿಶಿಷ್ಟತೆಗಳು

ಇತರ ವೆಸ್ಪಾ ಸ್ಕೂಟರ್‌ಗಿಂತ ವಿಭಿನ್ನವಾಗಿ ಎಸ್ ಆವೃತ್ತಿಯು ಆಯತಾಕಾರದ ಹೆಡ್ ಲೈಟ್ ಪಡೆದುಕೊಂಡಿದೆ. ಹಾಗೆಯೇ ಬ್ರೇಕ್ ಲಿವರ್ ಕ್ರೋಮ್ ಟಚ್ ಪಡೆದುಕೊಂಡಿದೆ.

ವೆಸ್ಪಾ ಎಸ್ 125 ಸಂಪೂರ್ಣ ವಿಮರ್ಶೆ

ಹಿಂದುಗಡೆ ದೊಡ್ಡದಾಗಿ ಗೋಚರಿಸುವಂತಹ ಟೈಲ್ ಲ್ಯಾಂಪ್ ಹಾಗೂ ಇದಕ್ಕೆ ಹೊಂದಿಕೊಂಡು ಇಂಡಿಕೇಟರ್ ಮತ್ತು ಇದರ ಮೇಲ್ಮುಖವಾಗಿ ವೆಸ್ಪಾ ಲೊಗೊ ಲಗತ್ತಿಸಲಾಗಿದೆ.

ವೆಸ್ಪಾ ಎಸ್ 125 ಸಂಪೂರ್ಣ ವಿಮರ್ಶೆ

ಇದರಲ್ಲಿ ಪರಿಷ್ಕೃತ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಕೊಡಲಾಗಿದೆ. ಇದು ತನ್ನದೇ ಆದ ವಿಶಿಷ್ಟತೆಯನ್ನು ಪಡೆದುಕೊಂಡಿದೆ ಅಂದರೆ ತಪ್ಪಾಗಲಾರದು. ಇನ್ನು ಸುಲಭವಾಗಿ ಗೋಚರಿಸಬಲ್ಲ ಡಿಜಿಟಲ್ ಗಡಿಯಾರವನ್ನು ಹೊಂದಿದೆ.

ವೆಸ್ಪಾ ಎಸ್ 125 ಸಂಪೂರ್ಣ ವಿಮರ್ಶೆ

ಅಂತೆಯೇ ಸ್ವಿಚ್ ತಯಾರಿಕೆಯಲ್ಲೂ ಗುಣಮಟ್ಟತೆಯನ್ನು ಕಾಯ್ದುಕೊಳ್ಳಲಾಗಿದೆ. ಆದರೆ ಚಾಲನೆ ವೇಳೆ ತಿರುವು ಸ್ವಿಚ್ ಬಳಕೆ ಮಾಡುವುದು ಸ್ವಲ್ಪ ಕಷ್ಟವೆನಿಸುತ್ತದೆ. ಇಲ್ಲೂ ಸಹ ವೆಸ್ಪಾ ವಿಶಿಷ್ಟತೆಯನ್ನು ಕಾಪಾಡಿಕೊಂಡಿದ್ದು, ಇಂತಹ ಮಾದರಿ ನಿಮಗೆ ಇತರ ಸ್ಕೂಟರ್‌ಗಳಲ್ಲಿ ಕಾಣಸಿಗಲಾರದು.

ವೆಸ್ಪಾ ಎಸ್ 125 ಸಂಪೂರ್ಣ ವಿಮರ್ಶೆ

ಇನ್ನು ಸೀಟು ಕೆಳಗಡೆ ಹೆಲ್ಮೆಟ್ ಇಡಲು ಸ್ಟೋರೆಜ್ ಜಾಗ ನೀಡಲಾಗಿದೆ. ಆದರೆ ಇತರೆ ಸ್ಕೂಟರ್‌ಗಳಂತೆ ಹೆಚ್ಚು ವಸ್ತುಗಳನ್ನು ಸಾಗಿಸುವುದು ಸ್ವಲ್ಪ ಕಷ್ಟಕರ ಎಂದೇ ಹೇಳಬಹುದು.

ಅಂತಿಮ ತೀರ್ಪು

ಅಂತಿಮ ತೀರ್ಪು

ಯಾಕೆ ಬೇಕು?

ಧನಾತ್ಮಕ ಚಾಲನೆ,

ಆರಾಮದಾಯಕ,

ಫಿನಿಶಿಂಗ್ ಪರಿಪೂರ್ಣತೆ,

ಗುಣಮಟ್ಟತೆ,

ಉನ್ನತ ಮಟ್ಟದ ಎಂಆರ್‌ಎಫ್ ಚಕ್ರ,

ಬಣ್ಣದ ಆಯ್ಕೆ

ಹಿನ್ನಡೆ ಏನು?

ಹಿನ್ನಡೆ ಏನು?

ಸಹ ಪ್ರಯಾಣಿಕರಿಗೆ ಕುಳಿತುಕೊಳ್ಳುವಾಗ ಹೊಂದಾಣಿಕೆಯ ಕೊರತೆ,

ಕಡಿಮೆ ವೇಗದಲ್ಲಿ ಚಲಿಸುವಾಗ ವೈಬ್ರೇಷನ್ ಅನುಭವ,

ಫೂಟ್‌ರೆಸ್ಟ್ ಸ್ಥಾನ ಸರಿಯಾಗಿಲ್ಲ,

ಬ್ರೇಕ್ ಲಾಕ್ ಕೊರತೆ

ವೆಸ್ಪಾ ಎಸ್ 125 ಸಂಪೂರ್ಣ ವಿಮರ್ಶೆ

ಹೊಸ ಎಂಜಿನ್ ಜತೆ ಗತಕಾಲದ ಚಾಲನಾ ಅನುಭವ

ಹಣದ ಮೌಲ್ಯ: 3/5

ವೆಸ್ಪಾ ವಿಸ್ಮಯ

ವೆಸ್ಪಾ ವಿಸ್ಮಯ

ಚರಿತ್ರೆಯ ಪುಟಗಳನ್ನು ಮೆಲುಕು ಹಾಕಿದಾದ, ಬಜಾಜ್ ಆಟೋ ಹಾಗೂ ಎಲ್‌ಎಂಎಲ್ ಜತೆಗಿನ ಪಾಲುದಾರಿಕೆಯು ವೆಸ್ಪಾಗೆ ನಿರೀಕ್ಷಿಸಿದಷ್ಟು ಯಶ ತಂದು ಕೊಟ್ಟಿಲ್ಲ. ಆದರೆ 2012ರಲ್ಲಿ ಪಿಯಾಜಿಯೊ ಮಾಡಿರುವ ರಿ ಎಂಟ್ರಿ ಅಕ್ಷರಶ: ಶುಭಕರವಾಗಿ ಪರಿಣಮಿಸುತ್ತಿದ್ದು, ಹೋಂಡಾ, ಯಮಹಾ, ಟಿವಿಎಸ್ ಹಾಗೂ ಮಹೀಂದ್ರ ಬ್ರಾಂಡ್‌ಗಳಿಗಿಂತ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

More from DriveSpark

Article Published On: Wednesday, March 19, 2014, 6:01 [IST]
English summary
Vespa scooters transport you into a time you wish you were a part of. Do you believe that retro-styled scooters give you character or are they just not your thing? While you mull over this thought, we scrutinize the 2014 Vespa 125cc for the Indian soil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+