ಅಂಡಮಾನ್‌ ಸಮುದ್ರ ಅಲೆಯ ನಡುವೆ ಮುಗ್ಧ ಕಾರಿನ ಮುಗ್ಧತೆ

Written By:

ನಿಸ್ಸಾನ್‌ನಿಂದ ನಮಗೆ ಲಭಿಸಿದ ವಿಶೇಷ ಮೀಡಿಯಾ ಡ್ರೈವ್ ಆಹ್ವಾನದಂತೆ ನಮ್ಮ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಭಾರತದ ಅವಿಭಾಜ್ಯ ಅಂಗವಾಗಿರುವ ಅಂಡಮಾನ್ ನಿಕೋಬರ್ ದ್ವೀಪಕ್ಕೆ ಪಯಣ ಬೆಳೆಸಿದ್ದರು.

ಜಪಾನ್‌ನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್, ಪೋರ್ಟ್ ಬ್ಲೇರ್‌ನಲ್ಲಿ ತನ್ನ ನೂತನ 2014 ಸನ್ನಿ ಫೇಸ್‌ಲಿಫ್ಟ್ ಮಾದರಿಯನ್ನು ಮಾಧ್ಯಮ ಮಿತ್ರರಿಗೆ ಪರಿಚಯಿಸಿದೆ. ಇದರಂತೆ ವಿಶ್ವದ ಅತ್ಯುತ್ತಮ ಮನೋಹರ ಪ್ರವಾಸಿ ತಾಣವಾದ ಅಂಡಮಾನ್‌ನಲ್ಲಿ ಮೀಡಿಯಾ ಡ್ರೈವ್‌ ಹಮ್ಮಿಕೊಳ್ಳಲಾಗಿತ್ತು.

2014 ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್

ಮುಗ್ಧ ಕಾರಿನ ಮುಗ್ಧತೆಯಂತೆ ಹೊಸ ನಿಸ್ಸಾನ್ ಸನ್ನಿ ಪ್ರಕೃತಿ ಸೌಂದರ್ಯದೊಂದಿಗೆ ದೃಶ್ಯ ವೈಭವನ್ನು ನೀಡಿತ್ತು. ತಾಂತ್ರಿಕವಾಗಿಯೂ ಯಾವುದೇ ಬದಲಾವಣೆ ತರಲಾಗದಿದ್ದರೂ 2014 ನಿಸ್ಸಾನ್ ಸನ್ನಿ, ತನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡಿದೆ.

2014 ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್

ನಿಸ್ಸಾನ್ ಮುಂಭಾಗವಂತೂ ಹೆಚ್ಚು ಭವ್ಯವಾಗಿ ಗೋಚರವಾಗಿತ್ತು. ಇದು ದೊಡ್ಡದಾದ ಪರಿಷ್ಕೃತ ಕ್ರೋಮ್ ಫ್ರಂಟ್ ಗ್ರಿಲ್ ಪಡೆದುಕೊಂಡಿತ್ತು. ಹೊಸತಾದ ಹೆಡ್‌ಲೈಟ್ ಇನ್ನಷ್ಟು ಆಕರ್ಷಣೆ ತುಂಬಿತ್ತು. ಜೊತೆಗೆ ಟಾಪ್ ಎಂಡ್ ಎಕ್ಸ್‌ವಿ ಮಾದರಿಯು ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಮಿರರ್ ಹಾಗೂ ಸಮಗ್ರವಾದ ಟರ್ನ್ ಇಂಡಿಕೇಟರ್ ಸಹ ಗಿಟ್ಟಿಸಿಕೊಂಡಿದ್ದು, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆ ಹೊಂದಿದೆ.

2014 ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್

ಅಂತೆಯೇ ಕಾರಿನ ಹಿಂಭಾಗವು ಹೆಚ್ಚು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಾಗಿದ್ದರೂ ಸೈಡ್ ಬಾಡಿ ಪ್ಯಾನೆಲ್‌ನಲ್ಲಿ ಹೆಚ್ಚಿನ ಬದಲಾವಣೆ ತರಲಾಗಿಲ್ಲ. ಬದಲಾಗಿ ಅಲಾಯ್ ವೀಲ್ ಹೊಸ ವಿನ್ಯಾಸ ಪಡೆಯಲಿದೆ. ಒಟ್ಟಿನಲ್ಲಿ ಮೂರು ವರ್ಷದ ಹಿಂದಿನ ಮಾದರಿಗೆ ಪರಿಗಣಿಸಿದಾಗ ಹೊಸ ನಿಸ್ಸಾನ್ ಸನ್ನಿ ಸಂಪೂರ್ಣ ಹೊಸತನವನ್ನು ನೀಡುತ್ತದೆ. ಇದು ಹೋಂಡಾ ಸಿಟಿ ಆವೃತ್ತಿಗೆ ಪೈಪೋಟಿ ಒಡ್ಡಲು ತೊಡೆ ತಟ್ಟಿ ನಿಂತಿದೆ.

2014 ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್

ಇನ್ನು ಕಾರಿನೊಳಗೂ ಬದಲಾವಣೆಗಳನ್ನು ಗುರುತಿಸಬಹುದು. ಹೊಸತಾದ ಸ್ಟೀರಿಂಗ್ ವೀಲ್‌ನಲ್ಲೇ ಮ್ಯೂಸಿಕ್ ಸಿಸ್ಟಂ ಮತ್ತು ಬ್ಲೂಟೂತ್ ನಿಯಂತ್ರಿಸಬಹುದಾಗಿದೆ. ಪಿಯಾನೊ ಬ್ಲ್ಯಾಕ್ ಸೆಂಟ್ರಲ್ ಕನ್ಸೋಲ್, ರಿವರ್ಸ್ ಕ್ಯಾಮೆರಾ ಪರದೆ ಮುಂತಾದ ಸೌಲಭ್ಯಗಳು ಇದರಲ್ಲಿದೆ. ಇನ್ನು ಟಾಪ್ ಎಂಡ್ ಡೀಸೆಲ್ ವೆರಿಯಂಟ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ರಿಯರ್ ಎಸಿ ವೆಂಟ್ಸ್, ರಿಯರ್ ರೀಡಿಂಗ್ ಲ್ಯಾಂಪ್, ಲೆಥರ್ ಅಪ್‌ಹೋಲ್‌ಸ್ಟ್ರೇ ಮತ್ತು ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್ ಪಡೆದುಕೊಳ್ಳಲಿದೆ. ಗರಿಷ್ಠ ಸ್ಥಳಾವಕಾಶವನ್ನು ಹೊಂದಿರುವ ಇದರ ಕ್ಯಾಬಿನ್, ಹೋಂಡಾ ಸಿಟಿ ಜತೆಗೆ ಟೊಯೊಟಾ ಎಟಿಯೋಸ್‌ ಮಾದರಿಗೂ ಸವಾಲಾಗಿ ಪರಿಣಮಿಸಲಿದೆ.

2014 ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್

ಒಂದೆಡೆ ಸಮುದ್ರ ಅಲೆಯ ಅಬ್ಬರ. ಇನ್ನೊಂದೆಡೆ ನಿಸ್ಸಾನ್ ಮುಗ್ಧ ಕಾರಿನ ಮುಗ್ಧತೆಯು ನಮಗೆ ಭಾಸವಾಯಿತು. ಸಂಸ್ಥೆಯ ಪ್ರಕಾರ ನೂತನ ಸನ್ನಿ ಶಬ್ದ ಹಾಗೂ ವೈಬ್ರೇಷನ್ ಒರಟುತನದ (ಎನ್‌ವಿಎಚ್ ಲೆವೆಲ್) ವಿಚಾರದಲ್ಲಿ ಗಣನೀಯವಾದ ಸುಧಾರಣೆ ತರಲಾಗಿದೆ.

2014 ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್

ಅಂಡಮಾನ್ ದ್ವೀಪದ ದಕ್ಷಿಣಕ್ಕೆ ಸ್ಥಿತಗೊಂಡಿರುವ ಚಿಡಿಯಾ ತಾಪು ಪ್ರದೇಶಕ್ಕೂ ನಮ್ಮ ಪ್ರತಿನಿಧಿಗಳು ನಿಸ್ಸಾನ್ ಕಾರಿನಲ್ಲಿ ಪಯಣ ಬೆಳೆಸಿದರು. ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ನಿಸ್ಸಾನ್ ಅದ್ಭುತ ಚಾಲನಾ ಅನುಭವ ಗಿಟ್ಟಿಸಿಕೊಳ್ಳಲು ನೆರವಾಯಿತು.

2014 ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್

ಒಟ್ಟಿನಲ್ಲಿ ನೂತನ ನಿಸ್ಸಾನ್ ಸನ್ನಿ ಆರಾಮದಾಯಕ, ಸುಲಭ ಚಾಲನೆ ಹೆಚ್ಚು ಸ್ಥಳಾವಕಾಶವನ್ನು ಹೊಂದಿದೆ. ಮುಂದಿನ ತಿಂಗಳಲ್ಲಿ ಲಾಂಚ್ ಆಗಲಿರುವ ಈ ಬಹುನಿರೀಕ್ಷಿತ ಕಾರು ಹಿಂದಿನ ಮಾದರಿಗಿಂತಲೂ 40ರಿಂದ 50,000 ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ವೆರಿಯಂಟ್- ಎಕ್ಸ್‌ಇ, ಎಕ್ಸ್‌ಇ ಡಿ, ಎಕ್ಸ್‌ಎಲ್, ಎಕ್ಸ್‌ಎಲ್ ಸಿವಿಟಿ, ಎಕ್ಸ್‌ಎಲ್ ಡಿ, ಎಕ್ಸ್‌ವಿ ಡಿ, ಎಕ್ಸ್‌ವಿ ಪ್ರೀಮಿಯಂ ಪ್ಯಾಕ್ 1 ಮತ್ತು ಎಕ್ಸ್‌ವಿ ಪ್ರೀಮಿಯಂ ಪ್ಯಾಕ್ 2 ಆಗಿದೆ.

ಕಾರು ಹೋಲಿಸಿ

ನಿಸ್ಸಾನ್ ಸನ್ನಿ
ನಿಸ್ಸಾನ್ ಸನ್ನಿ ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
Story first published: Wednesday, June 18, 2014, 14:16 [IST]
Please Wait while comments are loading...

Latest Photos