ಟಾಟಾ ಮೋಟರ್ಸ್ ಕಂಪನಿಯ ಮೊದಲ 'ಸ್ಟೈಲ್ ಬ್ಯಾಕ್' ಕಾರಿನ ಬಗ್ಗೆ ತಿಳಿದುಕೊಳ್ಳಿ

ವಾಹನ ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ ಹೊಚ್ಚ ಹೊಸ ಕಾಂಪ್ಯಾಕ್ಟ್ ಸೆಡಾನ್ 'ಟಿಗೋರ್ ಸ್ಟೈಲ್ ಬ್ಯಾಕ್' ಕಾರಿನ ವೈಶಿಷ್ಟ್ಯತೆಗಳನ್ನು ಬಿಡುಗಡೆಗೊಳಿಸಿದೆ.

By Girish

ಟಾಟಾ ಕಂಪನಿ ಯುವ ಜನತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಲಾಗಿರುವ ಕಾಂಪ್ಯಾಕ್ಟ್ ಸೆಡಾನ್ 'ಟಿಗೋರ್ ಸ್ಟೈಲ್ ಬ್ಯಾಕ್' ಕಾರಿನ ವೈಶಿಷ್ಟ್ಯತೆ ಮತ್ತು ಬಿಡುಗಡೆಯ ದಿನಾಂಕವನ್ನು ಬಿಡುಗಡೆಗೊಳಿಸಿದೆ

ಅಬ್ಬಾ!! ಕೊನೆಗೂ ಟಾಟಾ ಟಿಗೋರ್ ಕಾರಿನ ವೈಶಿಷ್ಟ್ಯ ಗೊತ್ತಾಯ್ತು...

ಟಾಟಾ ಮೋಟರ್ಸ್ ನ ಮೊದಲ ಸ್ಟೈಲ್ ಬ್ಯಾಕ್ ಕಾರು ಎಂಬ ಖ್ಯಾತಿಗೆ ಪಾತ್ರವಾಗಿರುವ ಟಿಗೋರ್ ಇತ್ತೀಚಿಗಷ್ಟೇ ಬಿಡುಗಡೆಗೊಂಡ 'ಟಿಯಾಗೊ' ಹ್ಯಾಚ್ ಬ್ಯಾಕ್ ಕಾರಿನಷ್ಟೇ ಹೆಚ್ಚು ಪ್ರಖ್ಯಾತಿ ಪಡೆಯಲಿದೆ ಎಂದು ವಿಮರ್ಶಕರು ಭವಿಷ್ಯ ನುಡಿದಿದ್ದಾರೆ.

ಅಬ್ಬಾ!! ಕೊನೆಗೂ ಟಾಟಾ ಟಿಗೋರ್ ಕಾರಿನ ವೈಶಿಷ್ಟ್ಯ ಗೊತ್ತಾಯ್ತು...

ಟಿಯಾಗೊ ಹ್ಯಾಚ್ ಬ್ಯಾಕ್ ಮತ್ತು ಹೆಕ್ಸಾ ಕ್ರಾಸ್ಒವರ್ ಕ್ರೀಡಾಬಳಕೆಯ ಕಾರಿನ ನಂತರ 'ಇಂಪ್ಯಾಕ್ಟ್ ಡಿಸೈನ್ ಫಿಲಾಸಫಿ ಹೊಂದಿರುವ' ಟಾಟಾದ ಮೂರನೇ ಕಾರು ಈ ಟಿಗೋರ್.

ಅಬ್ಬಾ!! ಕೊನೆಗೂ ಟಾಟಾ ಟಿಗೋರ್ ಕಾರಿನ ವೈಶಿಷ್ಟ್ಯ ಗೊತ್ತಾಯ್ತು...

ಟಾಟಾ ಕಂಪನಿ ಬಿಡುಗಡೆಗೊಳಿಸಿರುವ ಈ ಕಾರು ಹೊಸ ವಿನ್ಯಾಸ ಪಡೆದುಕೊಂಡಿದ್ದು, ತನ್ನ ಮೊದಲ ಸ್ಟೈಲ್ ಬ್ಯಾಕ್ ಕಾರು ಎಂದು ಗುರುತಿಸುವ ಮೂಲಕ ಸ್ಟೈಲ್ ಬ್ಯಾಕ್ ಸರಣಿಗೆ ಮುನ್ನುಡಿ ಬರೆದಿದೆ.

ಅಬ್ಬಾ!! ಕೊನೆಗೂ ಟಾಟಾ ಟಿಗೋರ್ ಕಾರಿನ ವೈಶಿಷ್ಟ್ಯ ಗೊತ್ತಾಯ್ತು...

ಕಾರಿನ ವಿನ್ಯಾಸ ಹಳೆ ಕಾಲದ 'ನಾಚ್ ಬ್ಯಾಕ್ ಕಾರನ್ನು ಮತ್ತೆ ನೆನಪಿಸುವಂತಿದ್ದು, ಈ ಕಾರಣಕ್ಕೆ ಈ ಕಾರಿಗೆ ಸ್ಟೈಲ್ ಬ್ಯಾಕ್ ಎಂದು ಹೆಸರಿಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಅಬ್ಬಾ!! ಕೊನೆಗೂ ಟಾಟಾ ಟಿಗೋರ್ ಕಾರಿನ ವೈಶಿಷ್ಟ್ಯ ಗೊತ್ತಾಯ್ತು...

ಇದೇ ತಿಂಗಳು 29 ರಂದು ಬಿಡುಗಡೆಗೊಳ್ಳುತ್ತಿರುವ ಈ ಕಾರು ಡೀಸೆಲ್ ಮತ್ತು ಪೆಟ್ರೋಲ್ ಎರಡೂ ಮಾದರಿಗಳಲ್ಲಿ ಲಭ್ಯವಿರಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಟಿಗೋರ್ ಕಾರು 1.2 ಪೆಟ್ರೋಲ್ ಮತ್ತು 1.05 ಡೀಸೆಲ್ ಇಂಜಿನ್ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಲು ಕಂಪನಿ ಸಜ್ಜಾಗಿದೆ.

ಅಬ್ಬಾ!! ಕೊನೆಗೂ ಟಾಟಾ ಟಿಗೋರ್ ಕಾರಿನ ವೈಶಿಷ್ಟ್ಯ ಗೊತ್ತಾಯ್ತು...

ಬಾಗಿದ ರೂಫ್ ಹೊಂದಿರುವ ಕಾರು ಇದಾಗಿದ್ದು, ಮೂರು ಸಿಲಿಂಡರ್ ಹೊಂದಿರುವ 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಹೊಂದಿದ್ದು, ಎನ್ಎಂ ತಿರುಗುಬಲದಲ್ಲಿ 83 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಬ್ಬಾ!! ಕೊನೆಗೂ ಟಾಟಾ ಟಿಗೋರ್ ಕಾರಿನ ವೈಶಿಷ್ಟ್ಯ ಗೊತ್ತಾಯ್ತು...

ಇನ್ನು, ಡೀಸೆಲ್ ಕಾರು ಮೂರು ಸಿಲಿಂಡರ್ ರೆವೊಟೊರ್ಕ್ 1.05-ಲೀಟರ್ ಎಂಜಿನ್ ಹೊಂದಿರುವ ಕಾರು 140 ಎನ್ಎಂ ತಿರುಗುಬಲದಲ್ಲಿ 69 ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಬಲಿಷ್ಠವಾಗಿದೆ.

ಅಬ್ಬಾ!! ಕೊನೆಗೂ ಟಾಟಾ ಟಿಗೋರ್ ಕಾರಿನ ವೈಶಿಷ್ಟ್ಯ ಗೊತ್ತಾಯ್ತು...

ನವೀನ ಮಾದರಿಯ ಟಿಗೋರ್ ಕಾರು 3992 ಎಂಎಂ ಉದ್ದ ಇದ್ದು, 1677ಎಂಎಂ ಅಗಲ ಹೊಂದಿದೆ. ಇನ್ನು ಈ ಕಾರು 1537ಎಂಎಂ ಎತ್ತರ ಹೊಂದಿದ್ದು, ಎಂದಿನಂತೆ 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಹೊಂದಿರುವ ಕಾರು ಇದಾಗಿದೆ.

ಅಬ್ಬಾ!! ಕೊನೆಗೂ ಟಾಟಾ ಟಿಗೋರ್ ಕಾರಿನ ವೈಶಿಷ್ಟ್ಯ ಗೊತ್ತಾಯ್ತು...

ಸ್ವೀಪ್ಟ್-ಬ್ಯಾಕ್ ಹೆಡ್ ಲ್ಯಾಂಪ್ ಹೊಂದಿರುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕಾರು, ಎಲ್ಇಡಿ ದೀಪಗಳನ್ನು ಹೊಂದಿದೆ.ಪ್ರೆಟ್ರೋಲ್ ಮಾದರಿಯ ಟಿಗೋರ್ ಕಾರು 1062 ಕೆ.ಜಿ ತೂಕ ಹೊಂದಿದ್ದು, ಡೀಸೆಲ್ ಕಾರು 1130 ಕೆ.ಜಿ ತೂಕ ಹೊಂದಿದೆ.

ಅಬ್ಬಾ!! ಕೊನೆಗೂ ಟಾಟಾ ಟಿಗೋರ್ ಕಾರಿನ ವೈಶಿಷ್ಟ್ಯ ಗೊತ್ತಾಯ್ತು...

ಈ ಸೆಡಾನ್ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಫೋರ್ಡ್ ಕಂಪನಿಯ ಆಸ್ಪೈರ್, ಹೋಂಡಾ ಕಂಪನಿಯ ಅಮೇಜ್, ಮತ್ತು ಹ್ಯುಂಡೈ ಕಂಪನಿಯ ಎಕ್ಸ್‌ಸೆಂಟ್ ಕಾರುಗಳೊಂದಿಗೆ ಸೆಣೆಸಲಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ...

ಡ್ರೈವ್‌ಸ್ಪಾರ್ಕ್‌

ಸಾಯುವವರನ್ನು ಸೇವ್ ಮಾಡ್ತಿದೆ ಈ ಸುಪ್ರೀಂ ಕೋರ್ಟ್ ಆದೇಶ !!

ಡ್ರೈವ್‌ಸ್ಪಾರ್ಕ್‌

ಕ್ಯಾಶ್‌ಲೆಸ್‌ ವ್ಯವಹಾರಕ್ಕೂ ಮುನ್ನ ಎಚ್ಚರ..!! ಟೋಲ್ ಬೂತ್‌ನಲ್ಲಿ 4 ಲಕ್ಷ ಕಳೆದುಕೊಂಡ ಮೈಸೂರಿನ ವೈದ್ಯ..!!

ಡ್ರೈವ್‌ಸ್ಪಾರ್ಕ್‌

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

ಡ್ರೈವ್‌ಸ್ಪಾರ್ಕ್‌

ಶಾಪಿಂಗ್ ಮಾಡೋ ಭರಾಟೆಗೆ ಟ್ಯಾಕ್ಸಿಯಲ್ಲೇ ಮಗು ಮರೆತು ಹೋದ ಮಹಿಳೆ..!!

ಡ್ರೈವ್‌ಸ್ಪಾರ್ಕ್‌ನಲ್ಲಿ ನೋಡಬೇಕಾದ ಫೋಟೋ ಗ್ಯಾಲರಿ

ಟಿಗೋರ್ ಸ್ಟೈಲ್ ಬ್ಯಾಕ್

ಹೋಂಡಾ WR-V

Most Read Articles

Kannada
English summary
[read in kananda] The much anticipated Tata Tigor subcompact sedan is all set to go on sale on March 29, 2017. Specs, Features, Dimensions + Photos Revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X