ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಭಾರತದಲ್ಲಿ ಸದ್ಯ ಮಧ್ಯಮ ಗಾತ್ರದ ವೈಶಿಷ್ಟ್ಯತೆಗೊಳೊಂದಿಗೆ ಕೈಗೆಟುವ ಬೆಲೆಗಳಲ್ಲಿ ಲಭ್ಯವಿರುವ ಉತ್ತಮ ಮಾದರಿಯ ಸೆಡಾನ್‌ಗಳಲ್ಲಿ ಹೋಂಡಾ ಸಿಟಿ, ಮಾರುತಿ ಸಿಯಾಜ್, ಹ್ಯುಂಡೈ ವೆರ್ನಾ, ಸ್ಕೋಡಾ ರ‍್ಯಾಪಿಡ್ ಸೆಡಾನ್ ಕಾರುಗಳು ಅತಿಹೆಚ್ಚು ಜನಪ್ರಿಯಗೊಂಡಿದ್ದು, ಇದೀಗ ಅದೇ ಸಾಲಿನಲ್ಲಿ ಮತ್ತೊಂದು ಹೊಸ ಕಾರು ಸೇರ್ಪಡೆಯಾಗಿದೆ. ಅದುವೇ ಟೊಯೊಟಾ ನಿರ್ಮಾಣದ ಹೊಚ್ಚ ಹೊಸ ಯಾರಿಸ್ ಕಾರು.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿದ್ದ ಟೊಯೊಟಾ ಯಾರಿಸ್ ಕಾರುಗಳು ಕಳೆದ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಯಾರಿಸ್ ಕಾರುಗಳು ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳಲ್ಲೇ ವಿಶೇಷ ಎನ್ನಿಸುತ್ತದೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಟೊಯೊಟೊ ಸಂಸ್ಥೆಯ ಆಹ್ವಾನದ ಮೇರೆ ಡ್ರೈವ್‌ಸ್ಪಾರ್ಕ್ ತಂಡವು ಹೊಸ ಯಾರಿಸ್ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಟೆಸ್ಟ್ ಡ್ರೈವ್ ನಡೆಸಿತ್ತು. ಈ ವೇಳೆ ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ಯಾರಿಸ್ ಕಾರುಗಳು ಸಿ ಸೆಗ್ಮೆಂಟ್ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು ಮಾತ್ರ ಸುಳ್ಳಲ್ಲ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಟೊಯೊಟಾ ಯಾರಿಸ್ ಆವೃತ್ತಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮ್ಯಾನುವಲ್ ಮತ್ತು ಸಿವಿಟಿ ಗೇರ್‌ಬಾಕ್ಸ್ ಪ್ರೇರಿತ ವೆರಿಯೆಂಟ್‌ಗಳನ್ನು ಬಿಡುಗಡೆ ಮಾಡಿದ್ದು, ಸಿವಿಟಿ ಕಾರುಗಳನ್ನು ವಿಮರ್ಶೆಗಾಗಿ ಬಳಕೆ ಮಾಡಿಕೊಳ್ಳಲಾಗಿತ್ತು.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಬಿಡುಗಡೆ ನಂತರ ಇದುವರೆಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿರುವ ಯಾರಿಸ್ ಕಾರುಗಳು ಮಧ್ಯಮ ವರ್ಗದ ಗ್ರಾಹಕರನ್ನು ಅಷ್ಟೇ ಅಲ್ಲದೇ ಐಷಾರಾಮಿ ಕಾರು ಪ್ರಿಯರನ್ನು ಸಹ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಿ ಸೆಗ್ಮೆಂಟ್ ಹೊಸ ಪೈಪೋಟಿಗೆ ಕಾರಣವಾಗಿದೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಯಾರಿಸ್ ಕಾರುಗಳು ಭಾರತೀಯ ಮಾರುಕಟ್ಟೆಗೆ ಹೊಸ ಕಾರು ಉತ್ಪನ್ನವಾದರೂ ಈಗಾಗಲೇ ಮುಂದುವರಿದ ಕೆಲ ರಾಷ್ಟ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಸೆಡಾನ್ ಆವೃತ್ತಿಯಾಗಿದೆ. ಇದೇ ಕಾರಣಕ್ಕೆ ಟೊಯೊಟಾ ಸಂಸ್ಥೆಯು ಭಾರತದಲ್ಲೂ ಯಾರಿಸ್ ಕಾರುಗಳನ್ನು ಬಿಡುಗಡೆ ಮಾಡಲಾಗಿದೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಕಾರಿನ ಡಿಸೈನ್‌ಗಳು

ಸೆಡಾನ್ ಮಾದರಿಗಳಲ್ಲೇ ವಿಭಿನ್ನ ಡಿಸೈನ್ ಲಾಂಗ್ವೆಜ್ ಹೊಂದಿರುವ ಯಾರಿಸ್ ಕಾರುಗಳು ಭಾರತೀಯ ಗ್ರಾಹಕರನ್ನು ಸೆಳೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಸದ್ಯಕ್ಕೆ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಯಾರಿಸ್ ಕಾರುಗಳನ್ನು ಖರೀದಿಸಬಹುದಾಗಿದೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಇನ್ನು ಕಾರಿನ ಮುಂಭಾಗದಲ್ಲಿ ಬಹಳಷ್ಟು ಗ್ರಿಲ್ ರಚನೆಗಳು ಇದ್ದರೂ, ಟೊಯೊಟಾ ಯಾರಿಸ್ ಕಾರಿನ ಬಂಪರ್‌ನಲ್ಲಿ ದೊಡ್ಡದಾದ ಟ್ರ್ಯಾಪ್ ಜೈಡಾಲ್ ಗ್ರಿಲ್‌ನಿಂದ ಪ್ರಭಾವಿತವಾಗಿದೆ. ಹಾಗೆಯೇ ಕಾರಿನ ಮಧ್ಯ ಭಾಗದಲ್ಲಿ ಕಲರ್ ಗಾರ್ನಿಷ್ ಬಳಕೆ ಮಾಡಲಾಗಿದ್ದು, ಬಂಪರ್‌ನ ಎರಡು ಬದಿಯಲ್ಲೂ ಫಾಗ್ ಲ್ಯಾಂಪ್ ಬಳಕೆ ಮಾಡಲಾಗಿದೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಹತ್ತಿರದಿಂದ ನೋಡಿದಾಗ ಹೆಡ್‌ಲ್ಯಾಂಪ್‌ಗಳ ಅಡಿಯಲ್ಲಿ ಬಳಕೆ ಮಾಡಿರುವ ನಯವಾದ ಎಲ್ಇಡಿ ಡಿಆರ್‌ಎಸ್‌ಗಳನ್ನು ಕಾಣಬಹುದಾಗಿದ್ದು, ಉದ್ದನೆಯ ಮಾದರಿಯ ಹೆಡ್‌ಲ್ಯಾಂಪ್ ವಿನ್ಯಾಸಗಳು ಟೊಯೊಟಾ ಚಿಹ್ನೆಯನ್ನು ಸುತ್ತುವರಿದಿವೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಸೈಡ್ ಪ್ರೊಫೈಲ್ ಬಗೆಗೆ ಹೇಳುವುದಾದರೇ ಯಾರಿಸ್ ಕಾರುಗಳಲ್ಲಿ 15-ಇಂಚಿನ ಸಿಕ್ಸ್ ಸ್ಪೋಕ್ ಅಲಾಯ್ ಚಕ್ರಗಳನ್ನು ಬಳಕೆ ಮಾಡಲಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಬಳಕೆ ಮಾಡಲಾಗುವ ತಂತ್ರಜ್ಞಾನಗಳಲ್ಲೇ ದೇಶಿಯ ಯಾರಿಸ್‌ನಲ್ಲೂ ಅಳವಡಿಸಲಾಗಿದೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಇದರಲ್ಲಿ ಟೈಲ್ ಸೆಕ್ಷನ್ ಕೂಡಾ ಆಕರ್ಷಕವಾಗಿದ್ದು, ಕರ್ವ್ ಮಾದರಿಯ ಸೆಮಿ-ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹೆಚ್ಚಿನ ಗುಣಮಟ್ಟದ ಬೆಳಕನ್ನು ಹರಿಸಲು ಸಹಕಾರಿಯಾಗಲಿವೆ. ಈ ಮೂಲಕ ಇತರೆ ಸೆಡಾನ್ ಆವೃತ್ತಿಗಳಿಂತ ಹೆಚ್ಚಿನ ಔಟರ್ ಲುಕ್ ತನ್ನದಾಗಿಸಿಕೊಂಡಿದೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಕಾರಿನ ಇಂಟಿರಿಯರ್

ವಿಶೇಷ ಮಾದರಿಯ ಕ್ಯಾಬಿನ್ ಸೌಲಭ್ಯ ಹೊಂದಿರುವ ಟೊಯೊಟಾ ಯಾರಿಸ್ ಕಾರುಗಳು ಸ್ಮಾರ್ಟ್ ಕನೆಕ್ವಿಟಿ ಜೊತೆಗೆ ಅತ್ಯುತ್ತಮ ತಂತ್ರಜ್ಞಾನ ಪ್ರೇರಿತ ಡ್ಯಾಶ್‌ಬೋರ್ಡ್ ಹೊಂದಿಕೊಂಡಿರುವುದು ಆರಾಮದಾಯಕ ಪ್ರಯಾಣಕ್ಕೆ ಅನೂಕಲಕರವಾಗಲಿವೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್‌ಗಳು ಕಾರಿನ ಒಳಅಂದಕ್ಕೆ ಮೆರಗು ತಂದಿದ್ದು, ಸಾಫ್ಟ್ ಟಚ್ ಕ್ಲೈಮೆಟ್ ಕಂಟ್ರೊಲರ್ ಬಟನ್‌ಗಳು, ವಾಟರ್ ಫಾಲ್ ಮಾದರಿಯ ಸೆಂಟರ್ ಕನ್‌ಸೊಲ್ ಡಿಸೈನ್‌ಗಳು ಸೆಡಾನ್ ಮಾದರಿಯ ಮತ್ತೊಂದು ವೈಶಿಷ್ಟ್ಯತೆಯಾಗಿದೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಹಾಗೆಯೇ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಕೂಡಾ ಇದ್ದು, ಸಂಜ್ಞೆಯ ಮೂಲಕವೇ ಕಾರಿನ ಸ್ಮಾರ್ಟ್ ಕನೆಕ್ಟಿವಿಟಿಗಳನ್ನು ನಿಯಂತ್ರಿಸಬಹುದಾಗಿದೆ. ಅದಾಗ್ಯೂ ಯಾರಿಸ್ ಕಾರುಗಳಲ್ಲಿ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಜೋಡಣೆ ಹೊಂದಿಲ್ಲ ಎನ್ನುವುದು ಮುಖ್ಯ ವಿಚಾರ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಇನ್ನು ಮ್ಯಾನುವಲ್ ಕಾರುಗಳ ಗೇರ್ ಸ್ಟೀಕ್‌ಗಳು ಪ್ರಿಮಿಯಂ ಬ್ಲ್ಯಾಕ್ ಲೆದರ್ ವ್ಯಾರ್ಪ್ಡ್ ಹೊಂದಿರಲಿದ್ದು, ಆಟೋಮ್ಯಾಟಿಕ್ ಗೇರ್ ಸ್ಟಿಕ್‌ಗಳು ಸಹ ಮೆಟಲ್ ಕ್ರೋಮ್ ಮಾದರಿಯ ಲೆದರ್ ಕಾಂಬಿನೇಷನ್ ಡಿಸೈನ್ ಪಡೆದುಕೊಂಡಿರಲಿವೆ. ಜೊತೆಗೆ ಕಪ್ ಹೋಲ್ಡರ್ ಸಹ ಕಾರಿನ ಇಂಟಿರಿಯರ್ ವಿನ್ಯಾಸಕ್ಕೆ ಮೆರಗು ತಂದಿವೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಇದಲ್ಲದೇ ಯಾರಿಸ್ ಕಾರುಗಳ ತ್ರಿ ಸ್ಪೋಕ್ ಸ್ಟಿರಿಂಗ್ ವೀಲ್ಹ್‌ಗಳ ಆಕರ್ಷಕವಾಗಿರುವುದಲ್ಲದೇ ಕೈ ಹಿಡಿಕೆಯ ಭಾಗದಲ್ಲಿ ಕಂಟ್ರೊಲ್ ಬಟನ್ ಹೊಂದಿದ್ದು, ಸ್ಪೋಕ್ ವೀಲ್ಹ್‌ನಲ್ಲಿ ಸಿಲ್ವರ್ ಗಾರ್ನಿಷ್ ಸೇರಿಸಲಾಗಿದೆ. ಇದರಲ್ಲಿ ಆಟೋಮ್ಯಾಟಿಕ್ ಕಾರುಗಳು ಸಿಲ್ವರ್ ಪೆಡಲ್ ಸಿಫ್ಟರ್ ಪಡೆದುಕೊಂಡಿರಲಿವೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಯಾರಿಸ್ ಕಾರುಗಳಲ್ಲಿ ಒದಗಿಸಲಾಗಿರುವ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಳು ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ಅನ್‌ಲಾಗ್ ಪ್ಲಸ್ ಡಿಜಿಟಲ್ ಕಾಂಬಿನೇಷನ್ ಪಡೆದಿದ್ದು, ಇವುಗಳು ಚಾಲನೆ ಸಂದರ್ಭದಲ್ಲಿ ಕಾರಿನ ರಿಯಲ್ ಟೈಮ್ ಡೆಟಾ ಮಾಹಿತಿಯನ್ನು ಒದಗಿಸಲಿದೆ. ಜೊತೆಗೆ ಗೇರ್ ಶಿಫ್ಟರ್ ಇಂಡಿಕೇಟರ್ ಕೂಡಾ ಇದರಲ್ಲಿದೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಯಾರಿಸ್ ಕಾರುಗಳ ಸೀಟುಗಳ ಬಗ್ಗೆ ಹೇಳುವುದಾರರೇ, ಸುಸಜ್ಜಿತ ಮಾದರಿಯ ಸೀಟುಗಳನ್ನು ಹೊಂದಿರುವ ಹೊಸ ಕಾರುಗಳಲ್ಲಿ ರಿಯರ್ ಆರ್ಮ್‍ರೆಸ್ಟ್, ಎಂಟು ಹಂತದ ಸೀಟ್ ಅಡ್ಜಸ್ಟ್ ಮೆಂಟ್ ಸೌಲಭ್ಯವಿದ್ದು, ರೂಫ್ ಮೌಟೆಂಡ್ ಏರ್ ಕಂಡೀಷನರ್, ಅರಾಮದಾಯಕ ಕುಳಿತುಕೊಳ್ಳಬಹುದಾದ ಮಿಡಲ್ ಸೀಟ್ ವಿನ್ಯಾಸ ಹೊಂದಿದೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಎಂಜಿನ್ ಸಾಮರ್ಥ್ಯ

ಸದ್ಯಕ್ಕೆ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರ ಲಭ್ಯವಿರುವ ಯಾರಿಸ್ ಕಾರುಗಳು 1.5-ಲೀಟರ್ ಇನ್ ಲೈನ್ ಫೌರ್ ಸಿಲಿಂಡರ್ ವಿವಿಟಿ-ಐ ಎಂಜಿನ್ ಹೊಂದಿರಲಿದ್ದು, 105-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಗುಣಹೊಂದಿವೆ.

ಜೊತೆಗೆ ಹೊಸ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದ್ದು, ಉತ್ತಮ ಇಂಧನ ಕಾರ್ಯಕ್ಷಮತೆಯೊಂದಿಗೆ ಮಾಲಿನ್ಯ ತಡೆಗೆ ಸಹಕಾರಿಯಾಗಿರಲಿವೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಈ ಮೂಲಕ ಯಾರಿಸ್ ಕಾರಿನ ಚಾಲನೆಗೆ ಹೊಸ ತಂತ್ರಜ್ಞಾನಗಳು ಪೂರಕವಾಗಿದ್ದು, ಓವರ್‌ಟೆಕಿಂಗ್ ಕೌಶಲ್ಯತೆಯಲ್ಲಿ ಕೊಂಚ ಹಿನ್ನಡೆ ಅನುಭವಿಸುತ್ತವೆ. ಆದರೂ ಎಂಜಿನ್ ವಿಭಾಗದಲ್ಲಿನ ಶಬ್ದಗಳು ಮತ್ತು ಬಾಹ್ಯ ಶಬ್ದಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು, ದೂರದ ಪ್ರಯಾಣವನ್ನು ಆರಾಮದಾಯಕ ಎನ್ನಿಸುತ್ತವೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಎಂಜಿನ್ ರೆಸ್ಪಾನ್ಸ್‌ ವಿಚಾರದಲ್ಲಿ ಮ್ಯಾನ್ಯುಯಲ್ ಅವತರಣಿಕೆಯ ಯಾರಿಸ್ ಉತ್ತಮವಾಗಿದೆ. ಸಿವಿಟಿ ಮತ್ತು ಮ್ಯಾನ್ಯುಯಲ್ ಎರಡೂ ಅವತರಣಿಕೆಗಳಲ್ಲೂ ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಇರುವುದರಿಂದ ವೇಗದ ಚಾಲನೆಯಲ್ಲಿ ಜಿಗ್‌ಜಾಗ್ ಮಾಡಿದರೂ ಕಾರು ಅತ್ತಿತ್ತ ಸರಿದಾಡದೆ ಚಾಲಕ ಹೇಳಿದಂತೆಯೇ ಕೇಳುತ್ತದೆ.

ಇನ್ನು ಇಬಿಡಿ ಮತ್ತು ಬ್ರೇಕ್‌ ಅಸಿಸ್ಟ್‌ ಇರುವ ಎಬಿಎಸ್‌ ಇದ್ದು ಬ್ರೇಕಿಂಗ್‌ ಅನ್ನು ಸುಲಭವಾಗಿಸುತ್ತದೆ. ನಾಲ್ಕೂ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ ನೀಡಿರುವುದರಿಂದ ಯಾರಿಸ್‌ನ ಬ್ರೇಕಿಂಗ್ ಡಿಸ್ಟೆನ್ಸ್ ಉತ್ತಮವಾಗಿದೆ. ಯಾವುದೇ ವೇಗದಲ್ಲೂ ಗಕ್ಕನೆ ಬ್ರೇಕ್‌ ಒತ್ತಲು ಹೆದರುವ ಅವಶ್ಯಕತೆಯಿಲ್ಲ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಖರೀದಿಗೆ ಲಭ್ಯವಿರುವ ಬಣ್ಣಗಳು ಮತ್ತು ಮೈಲೇಜ್

ಸೂಪರ್ ವೈಟ್, ಪರ್ಲ್ ವೈಟ್, ಸಿಲ್ವರ್, ವೈಲ್ಡ್‌ಫೈರ್ ರೆಡ್, ಫ್ಯಾಂತಮ್ ಬ್ರೌನ್ ಮತ್ತು ಗ್ರೇ ಬಣ್ಣಗಳಲ್ಲಿ ಲಭ್ಯವಿರುವ ಯಾರಿಸ್ ಕಾರುಗಳು 42 ಲೀಟರ್ ಇಂಧನ ಟ್ಯಾಂಕ್ ಸೌಲಭ್ಯದೊಂದಿಗೆ ಸಿವಿಟಿ ಆವೃತ್ತಿಯು 17.8 ಕಿ.ಮೀ ಮತ್ತು ಮ್ಯಾನುವಲ್ ಆವೃತ್ತಿಯು 17.1 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಇನ್ನು ಯಾರಿಸ್ ಕಾರುಗಳು ಪ್ರಮುಖ ನಾಲ್ಕು ವೆರಿಯೆಂಟ್ ಲಭ್ಯವಿರಲಿದ್ದು, ವೆರಿಯೆಂಟ್ ಅನುಗುಣವಾಗಿ ಬೆಲೆ ಹೊಂದಿವೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಟೊಯೊಟಾ ಯಾರಿಸ್ ಕಾರುಗಳು ಜೆ, ಜಿ, ವಿ ಹಾಗೂ ವಿಎಕ್ಸ್ ವೇರಿಯಂಟ್‍‍ಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಕೇವಲ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಖರೀದಿಗೆ ಲಭ್ಯವಿದೆ. ಹೀಗಾಗಿ ಲಭ್ಯವಿರುವ ಪ್ರತಿ ವೆರಿಯೆಂಟ್‌ನಲ್ಲೂ ಬೆಲೆಗೆ ಅನುಗುಣವಾಗಿ ಕೆಲವು ತಾಂತ್ರಿಕ ಅಂಶಗಳಲ್ಲಿ ಬದಲಾವಣೆ ಹೊಂದಿವೆ.

ಕಾರು ಮಾದರಿಗಳು -ಮ್ಯಾನುವಲ್ ಆವೃತ್ತಿ -ಆಟೋಮ್ಯಾಟಿಕ್ ಆವೃತ್ತಿ

ಜೆ - ರೂ. 8,75,000 -ರೂ. 9,95,000

ಜಿ - ರೂ. 10,56,000 -ರೂ. 11,76,000

ವಿ -ರೂ. 11,70,000 -ರೂ. 12,90,000

ವಿಎಕ್ಸ್ - ರೂ. 12,85,000 - ರೂ. 14,07,000

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಸುರಕ್ಷಾ ಸಾಧನಗಳು ಉನ್ನತ ಮಾದರಿಯಲ್ಲಿ 7 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲರ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಎಲ್ಲಾ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೊಲ್, ರಿವರ್ಸ್ ಕ್ಯಾಮೆರಾ ಬಳಕೆ ಮಾಡಲಾಗಿದೆ.

ರಿವ್ಯೂ: ಸೆಡಾನ್ ಕಾರು ವಿಭಾಗದಲ್ಲಿ ಹೊಸ ಟೊಯೊಟಾ ಯಾರಿಸ್ ಹೊಸ ಅಧ್ಯಾಯ..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ವಿಶೇಷ ವಿನ್ಯಾಸಗಳನ್ನು ಹೊಂದಿರುವ ಯಾರಿಸ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಸಿಯಾಜ್, ಸ್ಕೋಡಾ ರ‍್ಯಾಪಿಡ್, ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಇದು ತೀವ್ರ ಪೈಪೋಟಿ ನೀಡುತ್ತಿದ್ದು, ಈ ಮೂಲಕ ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ವಿಶ್ವಾಸದಲ್ಲಿದೆ.

Most Read Articles

Kannada
Read more on toyota car review
English summary
Toyota Yaris CVT Review — The Sensible Choice For The Less-Concerned
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X