ಏಪ್ರಿಲ್ ಗೆ ಟೋಯೋಟಾ ಇಟಿಯೋಸ್ ಸಣ್ಣ ಕಾರು ಲಿವಾ

ಜಾಗತಿಕ ಮಾರುಕಟ್ಟೆಯಲ್ಲಿ ಟೋಯೋಟಾ ಚಾಲ್ತಿಯಲ್ಲಿರುವ ಹೆಸರು. ಆದರೆ, ಭಾರತದ ಸಣ್ಣ ಕಾರುಗಳ ಮಾರುಕಟ್ಟೆಯಲ್ಲಿ ಪೈಫೋಟಿ ನೀಡುವುದು ಕಷ್ಟ ಎಂಬ ಅರಿವು ಸಂಸ್ಥೆಗಿದೆ. ಹ್ಯಾಚ್ ಬ್ಯಾಕ್ ಮಾದರಿಯ ಲಿವಾ ಪರಿಚಯಿಸುವ ಮೂಲಕ ಮಾರುತಿ, ಹ್ಯುಂಡೈ ಜೊತೆಗೆ ಸ್ಪರ್ಧೆಗಿಳಿಯಲಿ ಟೋಯೋಟಾ ನಿರ್ಧರಿಸಿದೆ. ಬೆಂಗಳೂರಿನ ಬಿಡದಿ ಘಟಕದಲ್ಲಿ ಬಿರುಸಿನ ಚಟುವಟಿಕೆ ನಡೆದಿದ್ದು, ಸೆಡಾನ್ ಮಾದರಿ ಇಟಿಯೋಸ್ ಜೊತೆಗೆ ಸಣ್ಣಕಾರು ಕೂಡಾ ಉತ್ಪಾದನೆಯಾಗಲಿದೆ.
ಸೆಡಾನ್ ಮಾದರಿ ಆರಂಭಿಕ ಬೆಲೆ ರೂ 4,96 ಲಕ್ಷ (ದೆಹಲಿ ಎಕ್ಸ್‌ಷೋರೂಂ ಬೆಲೆ) ಇದ್ದು, ಉನ್ನತ ಶ್ರೇಣಿಯ ಬೆಲೆ ರೂ 6.86 ಲಕ್ಷ ಮೀರುತ್ತದೆ. ಆದರೆ, ಅಂತಿಮ ಬೆಲೆ ಸದ್ಯಕ್ಕೆ ನಿರ್ಧಾರವಾಗಿಲ್ಲ ಎಂದು ಸಂಸ್ಥೆ ಹೇಳಿದೆ.
ಸದ್ಯಕ್ಕೆ ಟೋಯೋಟಾ ಇನ್ನೋವಾ(MUV), ಕೊರೊಲ್ಲಾ ಹಾಗೂ ಕಾಮ್ರೆ ಐಷಾರಾಮಿ ಕಾರು, ಫಾರ್ಚ್ಯೂನರ್ SUV ಮಾರಾಟದಲ್ಲಿ ಉತ್ತಮ ಸ್ಥಿತಿ ಕಾಯ್ದುಕೊಂಡಿದೆ. ಬಿಡದಿ ಎರಡನೇ ಘಟಕದಲ್ಲಿ ವಾರ್ಷಿಕವಾಗಿ 70,000 ವಾಹನಗಳನ್ನು ತಯಾರಿಸಿ ಹೊರ ಬಿಡಲಾಗುತ್ತದೆ. ಇಟಿಯೋಸ್ ಗೆ ಭದ್ರ ನೆಲೆ ಸಿಗುವ ತನಕ ಸಣ್ಣ ಕಾರು ಲಿವಾ ಹೊರ ತರುವುದು ಅನುಮಾನ ಎಂಬ ಮಾತಿದ್ದರೂ, 1.2 ಲಿ ಇಂಜಿನ್ ಸಾಮರ್ಥ್ಯದೊಂದಿಗೆ ಹೊರ ಬರಲಿರುವ ಲಿವಾ ಮಾರುಕಟ್ಟೆಗೆ ಏನು ಹಾನಿ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications








