ಸ್ವಿಫ್ಟ್, ರಿಟ್ಜ್, ಡಿಝೈರ್ ಕಾರುಗಳನ್ನು ವಾಪಸ್ಸು ಪಡೆಯಲಿದೆ ಮಾರುತಿ

ಕಳೆದ ವರ್ಷದ ಆರಂಭದಲ್ಲಿ ಕಂಪನಿಯು ಇಂಧನ ಟ್ಯಾಂಕ್ ತೊಂದರೆಗಳನ್ನು ಸರಿಪಡಿಸಲು ಸುಮಾರು ಒಂದು ಲಕ್ಷದಷ್ಟು ಎ-ಸ್ಟಾರ್ ಕಾರುಗಳನ್ನು ಹಿಂಪಡೆದಿತ್ತು. ಈಗ ಕಂಪನಿಯು ಸುಮಾರು ಜಾಗತಿಕವಾಗಿ ಸುಮಾರು 4,505 ಡಿಝೈರ್ ಕಾರುಗಳನ್ನು, 6,811 ಸ್ವಿಫ್ಟ್ ಕಾರುಗಳನ್ನು ಮತ್ತು 1,811 ಯುನಿಟ್ ರಿಟ್ಜ್ ಕಾರುಗಳನ್ನು ಗ್ರಾಹಕರಿಂದ ವಾಪಸ್ಸು ಪಡೆಯಲಿದೆ. ಮಾರುತಿ ಸುಜುಕಿಯ ಇತರ ಯಾವುದೇ ಬ್ರಾಂಡ್ ನ ಕಾರುಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಕಂಪನಿ ಪ್ರಕಟಿಸಿದೆ.
ಹಿಂಪಡೆತ ಎಂಬುದು ಕಂಪನಿಗಳೇ ಗ್ರಾಹಕರಿಗೆ ಭವಿಷ್ಯದಲ್ಲಿ ಕಾರಿನಲ್ಲಿ ತಲೆದೋರಬಹುದಾದ ಸಮಸ್ಯೆ ಪರಿಹರಿಸಲು ಕೈಗೊಂಡ ಕ್ರಮವಾಗಿದೆ. ವಿದೇಶಗಳಲ್ಲಿ ಅಲ್ಲಿನ ಸರಕಾರದ ನೀತಿಗಳೇ ಹಿಂಪಡೆತಕ್ಕೆ ಪೂರಕವಾಗಿವೆ. ವಾಹನದಲ್ಲಿ ಸಣ್ಣ ಸಮಸ್ಯೆ ಬಂದರೂ ಲಕ್ಷಗಟ್ಟಲೆ ವಾಹನಗಳನ್ನು ವಾಪಸ್ಸು ಪಡೆಯುವಂತೆ ಕಂಪನಿಗಳಿಗೆ ಸರಕಾರ ಆದೇಶಿಸುತ್ತದೆ. ಆದರೆ ಭಾರತ ಸರಕಾರದಲ್ಲಿ ಇದಕ್ಕೆ ಸೂಕ್ತವಾದ ನೀತಿಗಳಿಲ್ಲ. ಆದರೂ ಕೆಲವು ಕಂಪನಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸ್ವಇಚ್ಛೆಯಿಂದ ಇಂತಹ ನಿರ್ಧಾರ ಕೈಗೊಳ್ಳುತ್ತವೆ.


Click it and Unblock the Notifications








