ರೆನಾಲ್ಟ್ ಫ್ಲೂಯೆನ್ಸ್ ಡೀಸೆಲ್ ಫೆಸ್ಟಿವಲ್ ಧಮಾಕ!!

ರೆನಾಲ್ಟ್ ಫ್ಲೂಯೆನ್ಸ್ ದರ 12.99 ಲಕ್ಷ ರು.ನಿಂದ ಆರಂಭವಾಗುತ್ತದೆ. ಫೆಸ್ಟಿವಲ್ ಅಡಿಷನ್ ಫ್ಲೂಯೆನ್ಸ್ ಕಾರಿನಲ್ಲಿ ರಿಯರ್ ಪಾರ್ಕಿಂಗ್ ಅಸಿಸ್ಟ್ ಸೇರಿದಂತೆ ಹಲವು ಆಕರ್ಷಕ ಫೀಚರುಗಳಿವೆ. ಕಂಪನಿಯು ಈ ಕಾರಿಗೆ 2+2 ವರ್ಷ ವಾರೆಂಟಿ ನೀಡುತ್ತದೆ.
ಹಳೆಯ ರೆನಾಲ್ಟ್ ಫ್ಲೂಯೆನ್ಸ್ ಕುರಿತು: ರೆನಾಲ್ಟ್ ಇಂಡಿಯಾ ಪರಿಚಯಿಸಿದ ಹಳೆಯ ಫ್ಲೂಯೆನ್ಸ್ ಕಾರು ಪೆಟ್ರೊಲ್ ಮತ್ತು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತದೆ. ಫ್ಲೂಯೆನ್ಸ್ ಕಾರಿನ ಪೆಟ್ರೊಲ್ ಆವೃತ್ತಿಗೆ ಸುಮಾರು 12.99 ಲಕ್ಷ ರು. ಮತ್ತು ಡೀಸಲ್ ಆವೃತ್ತಿಗೆ 14.40 ಲಕ್ಷ ರು. ಇದೆ.
ಫ್ಲೂಯೆನ್ಸ್ ಕಾರು 1.5 ಲೀಟರ್ ವಿ4 ಡೀಸಲ್ ಎಂಜಿನ್ ಎಂಜಿನ್ ಮತ್ತು 2.0 ಮಲ್ಟಿ ಪಾಯಿಂಟ್ ಪೆಟ್ರೊಲ್ ಇಂಜೆಕ್ಷನ್ ಎಂಜಿನ್ ನಲ್ಲಿ ದೊರಕುತ್ತಿದೆ. ಡೀಸಲ್ ಆವೃತ್ತಿಯಲ್ಲಿ 6 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಮತ್ತು ಪೆಟ್ರೊಲ್ ಆವೃತ್ತಿಯಲ್ಲಿ 6 ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇದೆ.


Click it and Unblock the Notifications








