ಸಮಾಧಿಯಾಗಲಿರುವ ಹೋಂಡಾದ 1400 ಕಾರುಗಳು!

Posted By:
Honda To Destroy 1400 City Sedans And Brio
ಥೈಲ್ಯಾಂಡ್ ನಲ್ಲಿ ಅಬ್ಬರಿಸಿದ ಪ್ರವಾಹದಿಂದಾಗಿ ಹೋಂಡ ಕಾರು ಕಂಪನಿ ಭಾರೀ ನಷ್ಟವನ್ನು ಅನುಭವಿಸುತ್ತಿದೆ. ಏಕೆಂದರೆ ಈ ಪ್ರವಾಹದಲ್ಲಿ ಮಾರಾಟಕ್ಕೆ ತಯಾರಾಗಿ ನಿಂತಿದ್ದ ನೂರಾರು ಕಾರುಗಳು ಪ್ರವಾಹದಿಂದಾಗಿ ಹಾಳಾಗಿದ್ದವು.

ಇದರಿಂದಾಗಿ ಹೋಂಡಾ, ಭಾರತ ಸೇರಿದಂತೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ನಷ್ಟವನ್ನು ಅನುಭವಿಸುತ್ತಿದೆ. ಇದೀಗ, ಪ್ರವಾಹದಲ್ಲಿ ಹಾಳಾಗಿದ್ದ ಆ ನೂರಾರು ಕಾರುಗಳನ್ನು ನಾಶ ಪಡಿಸುವ ತೀರ್ಮಾನಕ್ಕೆ ಈ ಕಂಪನಿ ಬಂದಿದೆ

ಹೋಂಡಾ ಕಂಪನಿಯೆ ಹೇಳಿರುವ ಪ್ರಕಾರ ಕಂಪನಿ ಬೆಲೆ ಬಾಳುವ ಕಾರುಗಳಾದ ಸಿಟಿ ಸೆಡಾನ್ ಅಲ್ಲದೆ ಬ್ರಿಯೊ ಹ್ಯಾಚ್ ಬ್ಯಾಕ್ ಸೇರಿದಂತೆ 1,400 ಕಾರುಗಳನ್ನು ನಾಶ ಪಡಿಸಲಿದೆ. ಈ ಎಲ್ಲಾ ಕಾರುಗಳನ್ನು ತಯಾರಿಸಿ ಥೈಲ್ಯಾಂಡ್ ನಲ್ಲಿರುವ ಇದರ 'ಆಯುತ್ತಾಯ' ಸ್ಥಾವರದಲ್ಲಿ ಇಡಲಾಗಿತ್ತು.

ಈ ಹಾಳಾದ ಕಾರುಗಳನ್ನು ಪುನಃ ಹೋಂಡಾ ತಯಾರಿಸುವ ಕಂಪನಿಗೆ ಕಳುಹಿಸಿ ಸರಿಪಡಿಸಿ ಮರುಬಳಕೆ ಮಾಡಬಹುದು ಎಂದು ಊಹಿಸಲಾಗಿತ್ತು. ಆದರೆ ಒಂದು ವೇಳೆ ಈ ಕಾರುಗಳನ್ನು ಮರು ಬಳಕೆ ಮಾಡಿದರೆ ಇದರಲ್ಲಿ ಅನೇಕ ಲೋಪ ದೋಷಗಳು ಕಂಡು ಬರಬಹುದು.  ಅಲ್ಲದೆ ಈ ಕಾರು ಮರುಬಳಕೆ ಮಾಡಲು ಅಷ್ಟು ಸುರಕ್ಷತೆಯಲ್ಲ ಎಂಬ ಭಯ ಕಾರು ಕೊಳ್ಳುವ ಕಂಪನಿಯವರಿಗೆ ಮತ್ತು ಗ್ರಾಹಕರಲ್ಲಿ ಕಾಣಿಸಿಕೊಂಡಿತ್ತು. ಆದ್ದರಿಂದ ಈ ಕಾರುಗಳನ್ನು ನಾಶ ಮಾಡಲು ತೀರ್ಮಾನಿಸಿದೆ.

ಹೋಂಡಾ ಕಂಪನಿಯ ಈ 1400 ಕಾರುಗಳನ್ನು ಪರಿಸರ ಸ್ನೇಹಿಯಾಗಿ ನಾಶ ಪಡಿಸಲಾಗುವುದು ಎಂಬ ಭರವಸೆಯನ್ನು ನೀಡಿದೆ.

English summary
According to Honda's announcement, it will be destroying 1,400 cars which will include the new City sedan as well as the recently launched Brio hatchback.
Story first published: Monday, December 26, 2011, 15:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark