ದಕ್ಷಿಣ ಭಾರತದ ಮೊದಲ ರೋಲ್ಸ್ ರಾಯ್ಸ್ ಅಂಗಡಿ!

ಕಂಪನಿಯು ಹೈದರಾಬಾದಿನಲ್ಲಿ ಕುನ್ ಮೋಟರಿಯನ್ ನ್ನು ತನ್ನ ಡೀಲರ್ ಕಂಪನಿಯಾಗಿ ನೇಮಕ ಮಾಡಿಕೊಂಡಿದೆ. ಕಂಪನಿಯು ಇತ್ತೀಚೆಗೆ ದೇಶದಲ್ಲಿ ನೂತನ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಬಿಡುಗಡೆ ಮಾಡಿತ್ತು.
ಈ ರಾಜ್ಯದ ಇತಿಹಾಸಕ್ಕೂ ರೋಲ್ಸ್ ರಾಯ್ಸ್ ಗೂ ಕೊಂಚ ಸಂಬಂಧವಿದೆ. ಅಂದರೆ ಹೈದರಾಬಾದಿನ ಏಳನೇ ರಾಜ ಒಸ್ಮಾನ್ ಆಲಿ ಖಾನ್ ಬಳಿ ರೋಲ್ಸ್ ರಾಯ್ಸ್ ಕಾರಿತ್ತು. ಭಾರತಕ್ಕೆ ರೋಲ್ಸ್ ರಾಯ್ಸ್ 2005ರಲ್ಲಿ ಬಂದಿದ್ದರೂ ದೆಹಲಿ ಮತ್ತು ಮುಂಬೈನಲ್ಲಿ ಮಾತ್ರ ಡೀಲರ್ಷಿಪ್ ಕೇಂದ್ರಗಳನ್ನು ಹೊಂದಿತ್ತು.
ಕಂಪನಿಯು ಇನ್ನೂ ಎರಡು ಡೀಲರ್ಷಿಪ್ ಕೇಂದ್ರಗಳನ್ನು ತೆರೆಯಲಿದೆಯಂತೆ. ಅದರಲ್ಲಿ ಬೆಂಗಳೂರು ಸೇರಿದೆಯೇ ಎಂದು ಕಂಪನಿ ಇನ್ನೂ ಮಾಹಿತಿ ನೀಡಿಲ್ಲ. ಕರ್ನಾಟಕದಲ್ಲೂ ಕುಬೇರರು ಇರುವುದರಿಂದ ಶೀಘ್ರದಲ್ಲಿ ಇಲ್ಲೂ ಮಳಿಗೆ ತೆರೆಯುವ ನಿರೀಕ್ಷೆಯಲ್ಲಿ ನಾವಿರೋಣ.


Click it and Unblock the Notifications








