ಭೋಗ್ಯಕ್ಕೆ, ಸಾಲಕ್ಕೆ, ವಿಮೆಗೆ ಆಡಿ ಕಾರ್‌ಲೈಫ್

Posted By:
To Follow DriveSpark On Facebook, Click The Like Button
ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಆಡಿ ಫೈನಾನ್ಸ್ ನೂತನ ಕಾರ್‌ಲೈಫ್ ಅಡ್ವಾನ್ಸ್ ಸೇವೆಯನ್ನು ದೇಶದಲ್ಲಿ ಆರಂಭಿಸಿದೆ. ನೂತನ ಕಾರ್‌ಲೈಫ್ ಮೂಲಕ ಗ್ರಾಹಕರು ಕಾರು ಸಾಲ, ವಿಮೆ, ಸರ್ವಿಸ್ ಪ್ಲಾನ್ ಮತ್ತು ವಾರೆಂಟಿ ವಿಸ್ತರಣೆ ಇತ್ಯಾದಿ ಸೇವೆಗಳನ್ನು ಆಡಿ ಎ4, ಆಡಿ ಎ6 ಮತ್ತು ಆಡಿ ಕ್ಯೂ5 ಕಾರುಗಳಿಗೆ ಪಡೆದುಕೊಳ್ಳಬಹುದು.

"ಆಡಿ ಎ4, ಆಡಿ ಎ6 ಮತ್ತು ಆಡಿ ಕ್ಯೂ5 ಗ್ರಾಹಕರು ಪ್ರಥಮ ಬಾರಿಗೆ ಕಡಿಮೆ ದರದ ಇಎಂಐ, ಅಪಘಾತ ವಿಮೆ, ಸೇವಾ ಯೋಜನೆಗಳು ಮತ್ತು ವಾರೆಂಟಿ ವಿಸ್ತರಣೆ ಇತ್ಯಾದಿ ಸೇವೆಗಳನ್ನು ಪಡೆದುಕೊಳ್ಳಬಹುದು. ಇವೆಲ್ಲ ಅನುಕೂಲಗಳು ಆಡಿ ಕಾರ್ ಲೈಫ್ ಅಡ್ವಾನ್ಸ್ ಪ್ಯಾಕೇಜಿನಲ್ಲಿ ದೊರಕುತ್ತದೆ. ಜೊತೆಗೆ ಲೀಸಿಂಗ್ ಸರ್ವಿಸ್ ಅಥವಾ ಕಾರು ಭೋಗ್ಯ ಸೇವೆಗೂ ಅನುಕೂಲವಾಗುವಂತಹ ಸೌಲಭ್ಯಗಳು ಈ ಪ್ಯಾಕೇಜಿನಲ್ಲಿವೆ" ಎಂದು ಆಡಿ ಇಂಡಿಯಾ ಮುಖ್ಯಸ್ಥ ಮೈಕೆಲ್ ಪಾರ್ಷ್ಕೆ ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಸಮೀಪದ ಆಡಿ ಡೀಲರ್ಷಿಪ್ ಸಂಪರ್ಕಿಸಬಹುದು. ಕಂಪನಿಯು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 2,831 ಕಾರುಗಳನ್ನು ಮಾರಾಟ ಮಾಡಿದ್ದು, ಶೇಕಡ 43ರಷ್ಟು ಪ್ರಗತಿ ದಾಖಲಿಸಿದೆ.

English summary
Audi, the German luxury car manufacturer, with Audi Finance announced the launch of Audi CarLife-Advance in India. The brand with the four rings now offers a comprehensive package on the Audi A4, Audi A6 and Audi Q5, that covers car financing, insurance, service plan and extended warranty.
Story first published: Thursday, May 24, 2012, 11:57 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark