ನಮ್ಮ ಓದುಗರು ಬರೆದ ಅತ್ಯುತ್ತಮ ಪತ್ರಗಳು

ಕನ್ನಡದಲ್ಲಿ ವಾಹನ ಸುದ್ದಿ, ಮಾಹಿತಿ, ವಿಮರ್ಶೆ, ಸಲಹೆಗಳನ್ನು ಓದುವ ಒಂದು ವರ್ಗವೇ ಸೃಷ್ಟಿಯಾಗಿದೆ ಎನ್ನುವುದಕ್ಕೆ ಓದುಗರು ದಿನನಿತ್ಯ ಬರೆಯೋ ಪತ್ರಗಳೇ ಸಾಕ್ಷಿ. ಕೆಲವು ಓದುಗರು ಕಾಮೆಂಟ್ ವಿಭಾಗದಲ್ಲಿ ಪತ್ರ ಬರೆದರೆ ಇನ್ನು ಕೆಲವರು ನಮಗೆ ನೇರವಾಗಿ ಇಮೇಲ್ ಬರೆದು ಮಾಹಿತಿ ಪಡೆಯುತ್ತಾರೆ. ಅಥವಾ ಮಾಹಿತಿ ನೀಡುತ್ತಾರೆ.

ಆದರೆ ಕನ್ನಡದ ಪ್ರಪ್ರಥಮ ವಾಹನ ವೆಬ್ ತಾಣ ಕನ್ನಡ ಡ್ರೈವ್ ಸ್ಪಾರ್ಕಿಗೆ ಬರೆಯೋ ಪತ್ರಗಳು ಮಾಹಿತಿಪೂರ್ಣವಾಗಿರಲಿ. ಅದು ಮತ್ತೊಬ್ಬ ಓದುಗರಿಗೆ ಅನುಕೂಲವಾಗಿರಲಿ. ಕಾರು, ಬೈಕು ಖರೀದಿ ಮಾರಾಟಕ್ಕೆ ನೆರವಾಗಲಿ ಎನ್ನುವುದು ನಮ್ಮ ಕಳಕಳಿ.

ಆಗಾಗ ಬರುವ ಓದುಗರ ಒಳ್ಳೆಯ ಪತ್ರಗಳು ನಮಗೆ ಇನ್ನಷ್ಟು ಹಾರ್ಸ್ ಪವರ್ ನೀಡುತ್ತದೆ ಎನ್ನುವುದು ಸುಳ್ಳಲ್ಲ. ಉದಾಹರಣೆಯಾಗಿ ಇತ್ತೀಚೆಗೆ ಬೈಕ್ ಮೈಲೇಜ್ ಕುರಿತಾದ ಲೇಖನಕ್ಕೆ ಹಲವು ಓದುಗರು ತಮ್ಮ ಪ್ರೀತಿಯ ಬೈಕುಗಳ ಮೈಲೇಜ್ ಮಾಹಿತಿ ಹಂಚಿಕೊಂಡಿದ್ದರು. ಇದು ಉಳಿದ ಎಷ್ಟೋ ಓದುಗರಿಗೆ ಅನುಕೂಲವಾಗಿದೆಯಂತೆ.

ಈಗಷ್ಟೇ ಬಂದ ಒಂದು ಓಲೆ ಗಮನಿಸಿ. ನಾಗವೇಣಿ ಎಂಬ ಓದುಗರು, "ಕಾರು ಚಾಲನೆ ಮಾಡುವಾಗ ಎದುರುಗಡೆ ವಾಹನ ಬಂದಾಗ ಬರಿ ಬ್ರೇಕ್ ಹಾಕಬೇಕೆ? ಅಥವಾ ಕ್ಲಚ್ ಅದುಮಿಕೊಂಡು ಬ್ರೇಕ್ ಹಾಕಬೇಕೆ? ಎಂದು ಪ್ರಶ್ನಿಸಿದ್ದರು. ಅದಕ್ಕೆ ಮಗದೊಬ್ಬ ಓದುಗರು ಸೂಕ್ತ ಉತ್ತರ ನೀಡಿ ನಮ್ಮ ಭಾರ ಹಗುರ ಮಾಡಿದ್ದರು. (ಓದಿ: ಕಾರು ಚಾಲನೆ ಹೇಗೆ?)

ಎಂಎಂ540ಗೆ ಹೋಲಿಸಿದರೆ ಥಾರ್ ಪೂರ್ತಿ ವೇಸ್ಟ್. ಸ್ಟೆಬಲಿಟಿ ಇಲ್ಲ. 30 ಕಿ.ಮೀ. ಸ್ಪೀಡ್ ತಲುಪುವ ತನಕ 4ನೇ ಗೇರ್ ಹಾಕಲಾಗುವುದಿಲ್ಲ. ನೆನೆದ ಘಾಟ್ ರಸ್ತೆಯಲ್ಲಿ ಮಗುಚಿಕೊಳ್ಳುತ್ತೆ ಎಂದು ಮಹೀಂದ್ರ ಥಾರ್ ಬಗ್ಗೆ ಪಣೀಂದ್ರ ನಾಡೀಗ್ ಪ್ರತಿಕ್ರಿಯಿಸಿದ್ದರು. (ಓದಿ: ಮಹೀಂದ್ರ ಥಾರ್ ಜೀಪಿನ ಪುಟ್ಟ ವಿಮರ್ಶೆ)

ಪಾಕಿಸ್ತಾನ ಎಂಜಿನಿಯರ್ ಅಭಿವೃದ್ಧಿಪಡಿಸಿದ ವಾಟರ್ ಕಾರ್ ಗೆ ಸಾಕಷ್ಟು ಮೆಚ್ಚುಗೆಯ ಪತ್ರಗಳು ಬಂದಿವೆ. ಜೈ ಎಂಬವರು ಈ ಲೇಖನಕ್ಕೆ "ಈ ಟೆಕ್ನಾಲಜಿ ಹಳೆಯದು, ನಾನು 7 ವರ್ಷಗಳಿಂದ ವಾಟರ್ ಇಂಧನ ಕಿಟ್ ಗಳನ್ನು ಅಮೆರಿಕದಲ್ಲಿ ನೋಡುತ್ತಿದ್ದೇನೆ. ಇದು ಪ್ರಾಕ್ಟಿಕಲ್ ತಂತ್ರಜ್ಞಾನವಲ್ಲ"ವೆಂದು ಅಭಿಪ್ರಾಯಪಟ್ಟಿದ್ದರು.

ಇನ್ಮುಂದೆ ಬರುವ ಎಸ್‌ಯುವಿ ಯಾವುದು ಎನ್ನುವ ಪ್ರಶ್ನೆಗೆ ಓದುಗರಾದ ಸಚಿನ್ ಸೂಕ್ತ ಉತ್ತರವೊಂದನ್ನು ನೀಡಿದ್ದರು. ಮಾರುತಿ ಮಾನೆಸರ್ ಘಟಕದಲ್ಲಿ ಇತ್ತೀಚೆಗೆ ನಡೆದ ಗಲಭೆಯಲ್ಲಿ ಸಾವು ನೋವು ಸಂಭವಿಸಿರುವುದರ ಕುರಿತು ಓದುಗರು ಖೇದ ವ್ಯಕ್ತಪಡಿಸಿದ್ದರು. ವಿಐಪಿಗಳು ಟಿಂಟೆಡ್ ಗ್ಲಾಸ್ ತೆಗೆಯದರ ಕುರಿತು ಹಲವು ಓದುಗರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು.

ಶೌಚಾಲಯ ಮತ್ತು ಅಡುಗೆಮನೆ ಇರುವ ಬಸ್ ಕಲ್ಪಿಸಿದ ಕೆಎಸ್ಆರ್ಟಿಸಿಗೆ ಅಭಿನಂದನೆ ಸಲ್ಲಿಸಿ ಸಾಕಷ್ಟು ಓದುಗರು ಪತ್ರಬರೆದಿದ್ದಾರೆ. ಇವಿಷ್ಟು ಇತ್ತೀಚೆಗೆ ನಮಗೆ ಬಂದ ಕೆಲವು ಉತ್ತಮ ಪತ್ರಗಳು. ಉಳಿದ ಪತ್ರಗಳು ಉತ್ತಮವಾಗಿಲ್ಲವೆಂದಲ್ಲ.

ಓದುಗರ ಪ್ರೋತ್ಸಾಹವೇ ಕನ್ನಡ ಡ್ರೈವ್ ಸ್ಪಾರ್ಕಿಗೆ ಅಶ್ವಶಕ್ತಿ. ಲೇಖನ ಓದಿ ಪತ್ರ ಬರೆಯೋ ನಿಮ್ಮ ಪ್ರೀತಿ ಮುಂದುವರೆಯಲಿ. ಧನ್ಯವಾದಗಳು.

More from DriveSpark

Article Published On: Tuesday, July 31, 2012, 13:40 [IST]
English summary
Readers of Drivespark.com have been continuously providing feedback and information through the comments section as well as through emails. Here are some interesting comments on kannada.drivespark.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+