ಮಿನಿ ಕಾರುಗಳ ಸ್ಥಳೀಯ ಉತ್ಪಾದನೆಗೆ ಬಿಎಂಡಬ್ಲ್ಯು ಚಿಂತನೆ

Posted By:

ಬಿಎಂಡಬ್ಲ್ಯು ಕಂಪನಿಯು ಐಕಾನಿಕ್ ಮಿನಿ ಬ್ರಾಂಡ್ ಕಾರುಗಳನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ದೇಶಕ್ಕೆ ಪರಿಚಯಿಸಿತ್ತು. ಈ ಸಣ್ಣ ಅದ್ದೂರಿ ಕಾರು ಖರೀದಿಗೆ ದುಬಾರಿ ದರವೇ ಇಲ್ಲಿ ಪ್ರಮುಖ ತೊಡಕಾಗಿತ್ತು. ಮಿನಿ ಬ್ರಾಂಡ್ ಕಾರುಗಳು ದುಬಾರಿಯಾಗಿರುವುದರಿಂದ ಹೆಚ್ಚಿನ ಗ್ರಾಹಕರು ಮಿನಿ ಕಾರು ಖರೀದಿಯಿಂದ ಹಿಂದೆ ಸರಿದಿದ್ದರು.

ಆದರೆ ಇದೀಗ ಬಿಎಂಡಬ್ಲ್ಯು ಕಂಪನಿಯು ಮಿನಿ ಕಾರುಗಳನ್ನು ದೇಶದಲ್ಲೇ ಉತ್ಪಾದಿಸುವ ಕುರಿತು ಆಲೋಚಿಸುತ್ತಿದೆ. ಮುಂದಿನ ವರ್ಷದ ಮಧ್ಯಾವದಿ ನಂತರ ಕಂಪನಿಯು ಚೆನ್ನೈ ಘಟಕದಲ್ಲಿ ಮಿನಿ ಕಾರು ಉತ್ಪಾದನೆ ಆರಂಭಿಸಲಿದೆ ಎಂದು ವರದಿಗಳು ಹೇಳಿವೆ.

BMW Planning To Assemble Mini Locally

ಮಿನಿ ಕಾರುಗಳನ್ನು ಬಿಎಂಡಬ್ಲ್ಯು ಸಿಬಿಯು ಹಾದಿ ಮೂಲಕ ಆಮದು ಮಾಡಿಕೊಳ್ಳುತ್ತದೆ. ಇದರ ದರ 30 ಲಕ್ಷ ರುಪಾಯಿಗಿಂತ ಹೆಚ್ಚಿದೆ. ಮಿನಿ ಕೂಪರ್ ದರ 32,57,060 ರು. ಇದೆ. ಮಿನಿ ಕೂಪರ್ ಎಸ್ ದರ 36,51,210 ರುಪಾಯಿ ಮತ್ತು ಮಿನಿ ಕೂಪರ್ ಕನ್ವರ್ಟಿಬಲ್ ದರ 39,31,210 ರು. ಇದೆ. ಕೂಪರ್ ಕಂಟ್ರಿಮ್ಯಾನ್ ದರ 41,98,210 ರುಪಾಯಿ ಇದೆ. (ಇವೆಲ್ಲ ಮುಂಬೈ ಆನ್ ರೋಡ್ ದರ).

ಇಷ್ಟು ದುಬಾರಿ ದರಕ್ಕೆ ಬಿಎಂಡಬ್ಲ್ಯು 3 ಸೀರಿಸ್ ಕಾರುಗಳನ್ನು, ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಮತ್ತು ಆಡಿ ಎ4 ಕಾರುಗಳಲ್ಲಿ ಯಾವುದಾದರೂ ಆವೃತ್ತಿಯನ್ನು ಖರೀದಿಸಬಹುದಾಗಿದೆ. ಬಿಎಂಡಬ್ಲ್ಯು ಕಂಪನಿಯು ಮಿನಿ ಬ್ರಾಂಡ್ ಕಾರುಗಳನ್ನು ದೇಶದಲ್ಲೇ ಉತ್ಪಾದಿಸಿದರೆ ದರ ಕಡಿಮೆಯಾಗಬಹುದು.

English summary
BMW is now planning to manufacture Mini cars locally. Reports are that the German carmaker is contemplating local assembling of the cars at its south India plant of Chennai from mid 2013.
Story first published: Saturday, July 14, 2012, 15:00 [IST]
Please Wait while comments are loading...

Latest Photos