ಕಪ್ಪು ಬಣ್ಣದ ಕಾರು ಅಪಶಕುನ ಅಂದ್ರೆ ನಂಬ್ತಿರಾ?

ಕಪ್ಪು ಬಣ್ಣದ ಕಾರು ಖರೀದಿಸುವ ಯೋಚನೆ ಇದ್ರೆ ಇನ್ನೊಮ್ಮೆ ಯೋಚನೆ ಮಾಡಿ. ಯಾಕೆಂದರೆ ಕಪ್ಪು ಬಣ್ಣದ ಕಾರುಗಳು ಅಪಘಾತವಾಗುವ ಸಂಭಾವ್ಯತೆ ಹೆಚ್ಚಾಗಿದೆ. ತಪ್ಪುತಿಳಿದುಕೊಳ್ಳಬೇಡಿ. ಈ ಮಾಹಿತಿ ನೀಡಿದ್ದು ಯಾವುದೇ ಬಣ್ಣಾಂಡ ಜ್ಯೋತಿಷಿಯಲ್ಲ. ಆಸ್ಟ್ರೇಲಿಯಾದ ರಸ್ತೆ ಅಪಘಾತ ನಿರ್ವಹಣಾ ಸಂಸ್ಥೆಯ ಅಧ್ಯಯನ "ಕಪ್ಪು ಕಾರು ಡೇಂಜರ್" ಎಂದಿದೆ.

ಯಾಕೆ ಡೇಂಜರ್ ಎನ್ನುವ ಪ್ರಶ್ನೆ ಸಹಜ. ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನಿಸಲು ಹೋಗೋದು ಅಪಾಯ. ಯಾಕೆಂದ್ರೆ ಕರಡಿ ಮತ್ತು ಕತ್ತಲಿನ ಬಣ್ಣವೆರಡೂ ಕಪ್ಪು. ಅದೇ ರೀತಿ ಕತ್ಲಲ್ಲಿ ಕಾರು ಚಲಾಯಿಸುವುದು ಕೂಡ ಅಪಾಯ. ಯಾಕೆಂದರೆ ಕಪ್ಪು ಕಾರುಗಳು ರಸ್ತೆಯಲ್ಲಿ ಸ್ಪಷ್ಟವಾಗಿ ಕಾಣಿಸದ ಕಾರಣ ಅಪಾಯ ಜಾಸ್ತಿ.

""1987ರಿಂದ 2004ರವರೆಗಿನ ಅಪಘಾತಗಳನ್ನು ಪರಿಶೀಲಿಸಿದಾಗ ಕಪ್ಪು ಬಣ್ಣದ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತವಾಗಿವೆ" ಎಂದು ಸಾರಿಗೆ ಸಚಿವಾಲಯ, ಪೊಲೀಸ್ ಮತ್ತು ಹೆದ್ದಾರಿ ಸುರಕ್ಷತೆ ವಿಭಾಗಗಳಿಂದ ಸಂಗ್ರಹಿಸಿದ ಮಾಹಿತಿಗಳನ್ನು ಅಧ್ಯಯನ ಮಾಡಿ ಆರ್‌ಎಡಿಎಂಎಸ್ ರಸ್ತೆ ಅಪಘಾತ ನಿರ್ವಹಣಾ ವ್ಯವಸ್ಥೆ(ಆರ್‌ಎಡಿಎಂಎಸ್) ತಿಳಿಸಿದೆ.

ಹಾಗಾದ್ರೆ ಯಾವ ಬಣ್ಣದ ಕಾರು ಹೆಚ್ಚು ಸುರಕ್ಷಿತವೆನ್ನುವ ಪ್ರಶ್ನೆ ನಿಮ್ಮ ಮನದಲ್ಲಿರಬಹುದು. "ಅಧ್ಯಯನಗಳ ಪ್ರಕಾರ ಬಿಳಿಬಣ್ಣದ ಕಾರುಗಳು ಹೆಚ್ಚು ಸುರಕ್ಷಿತ. ಸರಕಾರಿ ಕಾರುಗಳು ಬಿಳಿಬಣ್ಣದಾಗಿರುತ್ತವೆ. ಸರಕಾರಿ ಕಾರುಗಳು ಬಿಳಿಬಣ್ಣದಾಗಿರುವುದರಿಂದ ಹೆಚ್ಚು ಜನರು ಬಿಳಿಬಣ್ಣದ ಕಾರುಗಳನ್ನು ಖರೀದಿಸುವುದು ಕಡಿಮೆ" ಎಂದು ಮಾರುತಿ ಸುಜುಕಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕಪ್ಪು ಬಣ್ಣದ ನಂತರದ ಸ್ಥಾನಗಳನ್ನು ಕ್ರಮವಾಗಿ ಸಿಲ್ವರ್ ಮತ್ತು ಕಂದು ಬಣ್ಣದ ಕಾರುಗಳು ಪಡೆದಿವೆ. ಇವೆರಡು ಬಣ್ಣಗಳು ಕಾರುಗಳಿಗೆ ಲಗ್ಷುರಿ ಲುಕ್ ನೀಡುವ ಕಾರಣ ಭಾರತೀಯರು ಹೆಚ್ಚಾಗಿ ಈ ಬಣ್ಣಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇವು ಅಪಾಯಕಾರಿ" ಎಂದು ವಿಶ್ಲೇಷಕರು ಹೇಳುತ್ತಾರೆ.

ಕಾರಿನ ಬಣ್ಣಕ್ಕೂ ಅಪಘಾತಗಳಿಗೂ ಸಂಬಂಧವಿದೆಯೆಂದು ಹೆಚ್ಚಿನ ಜನರಿಗೆ ಅರಿವಿಲ್ಲ. ರಾತ್ರಿಯಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣುವ ಕಾರುಗಳನ್ನು ಆಯ್ಕೆ ಮಾಡಿ ಎಂದು ಅಧ್ಯಯನದಲ್ಲಿ ಕಿವಿಮಾತು ಹೇಳಿದೆ. ನಿಮ್ಮ ಮತ್ತು ನಿಮ್ಮ ಕಾರಿನ ಬಣ್ಣದ ಜ್ಯೋತಿಷ್ಯ ಓದಲು ಇಲ್ಲಿಗೆ ಬನ್ನಿ. ಅಥವಾ ಬೂಕನಕೆರೆ ಯಡಿಯೂರಪ್ಪರ ಬಣ್ಣದ ಜ್ಯೋತಿಷ್ಯ ಸ್ಟೋರಿ ಕಡೆಗೊಮ್ಮೆ ಗಮನಹರಿಸಬಹುದು.

More from DriveSpark

Article Published On: Monday, April 23, 2012, 16:20 [IST]
English summary
A research in Australia has revealed that bright coloured cars tend to be involved in lesser accidents when compared with black coloured cars. Cars painted in colours such as white, red, yellow and orange are more visible than darker colours such as Black, Grey, dark blue or green.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+