ಹಬ್ಬದ ಆಫರ್: ಕಾರುಗಳಿಗೆ ಭರ್ಜರಿ ಡಿಸ್ಕೌಂಟ್ ಆರಂಭ
ಬೈಕ್ ಖರೀದಿಗೆ ಅಂತಹ ವಿಶೇಷ ಆಫರುಗಳು ಶುರುವಾಗಿಲ್ಲ. ಇದು ಪೆಟ್ರೋಲ್ ಕಾರು ಖರೀದಿಗೆ ಸೂಕ್ತ ಸಮಯ. ಈ ತ್ರೈಮಾಸಿಕದಲ್ಲಿ ಮಾರುತಿ ಪೆಟ್ರೋಲ್ ಕಾರುಗಳಿಗೆ 15 ಸಾವಿರ ರು.ಗಿಂತಲೂ ಹೆಚ್ಚು ಡಿಸ್ಕೌಂಟ್ ಇದೆ.
ಆಲ್ಟೊ ಮತ್ತು ಎಸ್ಟಿಲೊ ಕಾರುಗಳಿಗೆ 62 ಸಾವಿರ ರು.ವರೆಗೆ, ರಿಟ್ಜ್ ಪೆಟ್ರೋಲಿಗೆ 64 ಸಾವಿರ ರು.ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಐ10 ಕಾರಿಗೆ ಹ್ಯುಂಡೈ 44 ಸಾವಿರ ರು. ಮೌಲ್ಯದ ವಿನಾಯಿತಿ ನೀಡುತ್ತಿದೆ. ಐ20ಗೆ 32 ಸಾವಿರ ರು. ಡಿಸ್ಕೌಂಟ್ ನೀಡುತ್ತಿದೆ. ಇಯಾನ್ ಕಾರಿಗೆ 24 ಸಾವಿರ ಡಿಸ್ಕೌಂಟ್ ಆಫರ್ ನೀಡಲಾಗಿದೆ.
ಫೋಕ್ಸ್ ವ್ಯಾಗನ್ ಪೊಲೊ ಪರಿಷ್ಕೃತ ಆವೃತ್ತಿ ದರವೂ 40 ಸಾವಿರ ರು. ಕಡಿಮೆಯಾಗಿದೆ. ಟಾಪ್ ಎಂಡ್ ವೆಂಟೊ ದರವೂ 30 ಸಾವಿರ ರು. ಕಡಿಮೆಯಾಗಿದೆ.
ದ್ವಿಚಕ್ರ ವಾಹನ ಕಂಪನಿಗಳು ಸಹ ಹಬ್ಬ ಹತ್ತಿರ ಬರುತ್ತಿದ್ದಂತೆ ದರ ವಿನಾಯಿತಿ ಪ್ರಕಟಿಸುವ ನಿರೀಕ್ಷೆಯಿದೆ. ಅಂದಹಾಗೆ ಈ ಹಬ್ಬದ ಸಮಯದಲ್ಲಿ ರಸ್ತೆಗಿಳಿಯುವ ಹತ್ತು ಕಾರುಗಳು ಯಾವುದೆಂದು ಗೊತ್ತೆ? ಇಲ್ಲಿದೆ ನೋಡಿ.
ಮಹೀಂದ್ರ ಎಕ್ಸ್ ಯವಿ ಪ್ರತಿಸ್ಪರ್ಧಿ ಫೋರ್ಡ್ ಎಂಡೊವರ್ ಕಾರಿಗೆ ಉಚಿತ ವಿಮೆ ಸೇರಿದಂತೆ ಸುಮಾರು 50 ಸಾವಿರ ರು. ಮೌಲ್ಯದ ಆಕ್ಸೆಸರಿ ಪ್ಯಾಕನ್ನು ಹಬ್ಬದ ವಿನಾಯಿತಿಯಾಗಿ ನೀಡಲಾಗಿದೆ. ಫಿಗೊ ಕಾರಿಗೆ 25-28 ಸಾವಿರ ರು. ಡಿಸ್ಕೌಂಟ್ ಮಾಡಲಾಗಿದೆ.


Click it and Unblock the Notifications









