ಅಂದವಾದ ಷೆವರ್ಲೆ ಬೀಟ್ ಆರ್ಮಿ ಕಾರು ನೋಡಿದ್ರಾ?

Written By:

ತಮ್ಮ ಬ್ರಾಂಡ್‌ ಕಾರುಗಳನ್ನು ಸೈನ್ಯ ಬಳಕೆ ಮಾಡುತ್ತಿದ್ದಲ್ಲಿ ಆಟೋ ಅಭಿಮಾನಿಗಳ ನಡುವೆ ಅತ್ಯುನ್ನತ್ತ ಸ್ಥಾನಮಾನ ಗಿಟ್ಟಿಸಲು ವಾಹನ ತಯಾರಕ ಕಂಪನಿಗಳಿಗೆ ಸಾಧ್ಯವಾಗುತ್ತದೆ. ದೇಶದಲ್ಲಿ ಮಾರುತಿ ಜಿಪ್ಸಿ ಕೂಡಾ ಇಂತಹುದೇ ಹಿರಿಮೆಗೆ ಪಾತ್ರವಾಗಿತ್ತು. ಇದೀಗ ಷೆವರ್ಲೆ ಬೀಟ್ ಕೂಡಾ ಇಂತಹದೊಂದು ಸೈನ್ಯದ ಕಾರನ್ನು ಬಿಡುಗಡೆಗೊಳಿಸುತ್ತಿದೆ. ಆದರೆ ಈ ಬಾರಿ ಅಮೆರಿಕದಲ್ಲಿ ಇಂತಹ ಕುತೂಹಲಕಾರಿ ಘಟನೆ ಕಂಡುಬಂದಿದೆ.

ಅಮೆರಿಕ ಮೂಲದ ಕಂಪನಿಯು ಷೆವರ್ಲೆ ಸ್ಪಾರ್ಕ್ (ಭಾರತದ ಬೀಟ್ ಆವೃತ್ತಿ) ಆವೃತ್ತಿಯನ್ನು ಆರ್ಮಿ ಕಾರಿನ ರೀತಿಯಲ್ಲಿ ಪರಿಷ್ಕೃತಗೊಳಿಸಿದೆ. ಕಾರಿನ ಹೊರಭಾಗವು ಫಾರೆಸ್ಟ್ ಕಾಮೊಫ್ಲ್ಯಾಗ್ ಪೈಂಟ್ ಹೊಂದಿದ್ದು, ಒಳಭಾಗದ ಬಿಡಿಭಾಗಗಳನ್ನು ವಿಂಟೇಜ್ ಸೇನಾ ಮೆಟಿರಿಯಲ್ ಬಳಸಿ ತಯಾರಿಸಲಾಗಿದೆ. ಅಲ್ಲದೆ ಸೈನ್ಯಕ್ಕೆ ನೆರವಾಗುವ ರೀತಿಯಲ್ಲಿ ಹಲವು ಆಧುನಿಕ ಫೀಚರ್‌ಗಳನ್ನು ಷೆವರ್ಲೆ ಬೀಟ್‌ನಲ್ಲಿ ಆಳವಡಿಸಲಾಗಿದೆ.

ಷೆವರ್ಲೆ ಬೀಟ್ ಆರ್ಮಿ ಕಾರು

ಷೆವರ್ಲೆ ಬೀಟ್ ಆರ್ಮಿ ಕಾರು

ಎನಿಮಿ ಟು ಫ್ಯಾಶನ್ ಕಾರನ್ನು ಅನೇಕ ಸೈನ್ಯ ಮೆಟಿರಿಯಲ್ ಬಳಸಿ ತಯಾರಿಸಲಾಗಿದೆ. ಮೇಲಿನ ಇಮೇಜ್‌ನಲ್ಲಿರುವಂತೆಯೇ ಕಾರಿನ ಹೊರಂಗಣ ಬಣ್ಣವೇ ಆಕರ್ಷಕ ಲುಕ್‌ಗೆ ಕಾರಣವಾಗಿದೆ.

ಷೆವರ್ಲೆ ಬೀಟ್ ಆರ್ಮಿ ಕಾರು

ಷೆವರ್ಲೆ ಬೀಟ್ ಆರ್ಮಿ ಕಾರು

ವಿಂಟೇಜ್ ಆರ್ಮಿ ಮೆಟಿರಿಯಲ್ ಬಳಸಿ ಕಾರಿನ ಇಂಟಿರಿಯರ್ ಭಾಗಗಳನ್ನು ಸಂಪೂರ್ಣವಾಗಿ ಪರಿಷ್ಕೃತಗೊಳಿಸಲಾಗಿದೆ.

ಷೆವರ್ಲೆ ಬೀಟ್ ಆರ್ಮಿ ಕಾರು

ಷೆವರ್ಲೆ ಬೀಟ್ ಆರ್ಮಿ ಕಾರು

ಈ ಆರ್ಮಿ ಕಾರು ಆಧುನಿಕ ಫೀಚರ್‌ಗಳನ್ನು ಒಳಗೊಂಡಿದ್ದು, ರೆಕಾರೊ ಸೀಟ್‌ಗಳನ್ನು ಬಳಸಲಾಗಿದೆ.

ಷೆವರ್ಲೆ ಬೀಟ್ ಆರ್ಮಿ ಕಾರು

ಷೆವರ್ಲೆ ಬೀಟ್ ಆರ್ಮಿ ಕಾರು

ಎನಿಮಿ ಟು ಫ್ಯಾಶನ್ ಕಾರು ಬಾಡಿ ಕಿಟ್, ಕಿಕ್ಕರ್ ಆಡಿಯೋ ಸಿಸ್ಟಂ ಹಾಗೂ ಎಲ್‌ಇಡಿ ಲೈಟ್‌ಗಳಂತಹ ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿದೆ.

ಷೆವರ್ಲೆ ಬೀಟ್ ಆರ್ಮಿ ಕಾರು

ಷೆವರ್ಲೆ ಬೀಟ್ ಆರ್ಮಿ ಕಾರು

ವೆನೊಮ್ ನೈಟ್ರಸ್ ಸಿಸ್ಟಂ ಬಳಕೆಯಿಂದ ಕಸ್ಟಮೈಸ್ ಬೀಟ್ ಕಾರಿನ ನಿರ್ವಹಣೆಯು ಅಧಿಕವಾಗಿದೆ.

ಷೆವರ್ಲೆ ಬೀಟ್ ಆರ್ಮಿ ಕಾರು

ಷೆವರ್ಲೆ ಬೀಟ್ ಆರ್ಮಿ ಕಾರು

ಈ ನೂತನ ಷೆವರ್ಲೆ ಬೀಟ್ ಆರ್ಮಿ ಕಾರು 15 ಇಂಚು ಅಲೋಯ್ ವೀಲ್ ಹಾಗೂ ಫಾಲ್ಕನ್ ಟಯರ್‌ಗಳನ್ನು ಹೊಂದಿದೆ.

ಷೆವರ್ಲೆ ಬೀಟ್ ಆರ್ಮಿ ಕಾರು

ಷೆವರ್ಲೆ ಬೀಟ್ ಆರ್ಮಿ ಕಾರು

ಎನಿಮಿ ಟು ಫ್ಯಾಶನ್ ವಿನ್ಯಾಸವು ಆರ್ಮಿಗೆ ನೆರವಾಗುವುದರಿಂದ ಯುದ್ಧತಂತ್ರಕ್ಕೆ ಅನುಗುಣವಾಗಿದೆ. ನಗರ ಅರಣ್ಯ ಹಾಗೂ ತೆರೆದ ಪ್ರದೇಶಗಳಲ್ಲಿ ಉಪಕಾರಿಯೆನಿಸಲಿದೆ.

English summary
Cars used by the army gain an iconic status among auto fans. The Maruti Gypsy has gained a cult status not only for its performance on all rugged terrains but also for its heritage as an army vehicles in India. Now the Chevrolet Beat is all set to become another army car, although in the US market.
Story first published: Wednesday, November 7, 2012, 16:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark