ವರ್ತಮಾನದಲ್ಲಿ ಕಾಡುವ ಭವಿಷ್ಯದ ವಿಸ್ಮಯ ಕಾರುಗಳು
ಭೂಕಂಪ, ಸುನಾಮಿ ಅಥವಾ ಪ್ರಳಯಕ್ಕೆ ಸಿಲುಕದೆ ಜಗತ್ತು ಅವಿನಾಶಿಯಾಗಿ ಉಳಿದರೆ ತಂತ್ರಜ್ಞಾನ, ವಿಜ್ಞಾನ ಮತ್ತು ಆವಿಷ್ಕಾರಗಳ ಅಚ್ಚರಿಗಳನ್ನು ಜನರು ನೋಡಲಿದ್ದಾರೆ. ಭವಿಷ್ಯದಲ್ಲಿ ಆಗಮಿಸಲಿರುವ ವಿಶೇಷ ಕಾರುಗಳು ವರ್ತಮಾನದಲ್ಲಿ ಅಚ್ಚರಿ ಹುಟ್ಟಿಸುತ್ತವೆ. ಅಂತಹ ಅಚ್ಚರಿಯ ಕಾರು ಜಗತ್ತಿನಲ್ಲಿ ಒಂದು ಸುತ್ತು ಹೊಡೆಯೋಣ ಬನ್ನಿ.
ಹಾರುವ ಕಾರು: ಕಾರುಗಳು ಬರೀ ರಸ್ತೆಗೆ ಮಾತ್ರ ಸೀಮಿತವಲ್ಲ. ಭವಿಷ್ಯದಲ್ಲಿ ಕಾರುಗಳು ಹಕ್ಕಿಗಳಂತೆ ರೆಕ್ಕೆಬಿಚ್ಚಿ ಹಾರಲಿವೆ. ಈಗಾಗಲೇ ಎರಡು ಹಾರುವ ಕಾರುಗಳು ಯಶಸ್ವಿಯಾಗಿ ಹಾರಾಟ ನಡೆಸಿವೆ. ಅಗೋ ಆಕಾಶದಲ್ಲಿ ಕಾರು ಹೋಗುತ್ತಿದೆ ನೋಡು ಎನ್ನುವ ದಿನಗಳು ದೂರವಿಲ್ಲ.
ಟೆರ್ರಫುಗಿಯಾ ಟ್ರಾನ್ಸಿಷನ್: ಇತ್ತೀಚೆಗೆ ಎಲ್ಲರನ್ನೂ ಅಚ್ಚರಿಗೊಳಿಸಿದ ಹಾರುವ ಕಾರಿನ ಹೆಸರು ಟೆರ್ರಫುಗಿಯಾ ಟ್ರಾನ್ಸಿಷನ್. ಮಾರ್ಚ್ 23ರಂದು ಈ ಕಾರು ಪರಿಕ್ಷಾರ್ಥವಾಗಿ ಯಶಸ್ವಿಯಾಗಿ ಹಾರಾಟ ನಡೆಸಿತ್ತು. ಏಪ್ರಿಲ್ ಐದರಂದು ನ್ಯೂಯಾರ್ಕ್ ವಾಹನ ಪ್ರದರ್ಶನದಲ್ಲಿ ಇದು ಪ್ರದರ್ಶನಗೊಂಡಿತ್ತು.
ಈ ಕಾರಿಗೆ ಹಾರಲು ಫೆಡರಲ್ ಏವಿಯೇಷನ್ ಆಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಚಾರ ಅಡಳಿತ ಅನುಮತಿಯನ್ನೂ ನೀಡಿರುವುದು ವಿಶೇಷ. ಈ ಹಾರುವ ಕಾರು ಮಾರಾಟ ಆರಂಭವಾಗಲು ಹೆಚ್ಚು ವರ್ಷ ಕಾಯಬೇಕಿಲ್ಲ. ಪ್ರಾಯಶಃ ಮುಂದಿನ ವರ್ಷವೇ ಈ ಕಾರಿನ ಮಾರಾಟ ಆರಂಭವಾಗಲಿದೆ.
ಪಾಲ್ ವಿ ಹಾರುವ ಕಾರು: ಭವಿಷ್ಯದ ಹಾರುವ ಕಾರು ಕುಟುಂಬಕ್ಕೆ ಪ್ರವೇಶಿಸಿರುವ ಇನ್ನೊಂದು ಕಂಪನಿ ನೆದರ್‌ಲ್ಯಾಂಡಿನ ಪಾಲ್-ವಿ ಯುರೋಪ್ ಎನ್‌ವಿ. ಕಂಪನಿಯು ಇತ್ತೀಚೆಗೆ ಪಾಲ್ ವಿ ಹಾರುವ ಕಾರಿನ ಪ್ರಾಯೋಗಿಕ ಹಾರಾಟ ನಡೆಸಿ ಯಶಸ್ವಿಯಾಗಿದೆ. (ಸಂಪೂರ್ಣ ಸುದ್ದಿ ಓದಿರಿ )


Click it and Unblock the Notifications









