ಸೀಟ್ ಬೆಲ್ಟ್ ತೊಡದಿರುವುದೇ ಜಸ್ಪಾಲ್ ಸಾವಿಗೆ ಕಾರಣ

Posted By:

ಸುಖ-ದು:ಖಗಳ ಕಥಾವಸ್ತುಗಳನ್ನೇ ಆಧಾರವಾಗಿರಿಸಿಕೊಂಡು ಜನರನ್ನು ನಗೆಪಾಟಲಿಯಲ್ಲಿ ತೇಲಿಸಿದ್ದ ಹಾಸ್ಯ ಚಕ್ರವರ್ತಿ ಜಸ್ಪಾಲ್ ಭಟ್ಟಿ ಇತ್ತೀಚೆಗಷ್ಟೇ ಕಾರು ಅಪಘಾತವೊಂದರಲ್ಲಿ ಸಾವಿಗೀಡಾಗಿರುವ ವಾರ್ತೆಯನ್ನು ನಾವೆಲ್ಲರು ಪತ್ರಿಕೆಗಳಲ್ಲಿ ಓದಿರುತ್ತೇವೆ.

ಈ ನಡುವೆ ಜಸ್ಪಾಲ್ ಮರಣೋತ್ತರ ವೈದ್ಯಕೀಯ ಪರೀಕ್ಷೆಯಲ್ಲಿ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದ್ದು, ಕಾರಿನ ಸೀಟ್ ಬೆಲ್ಟ್ ತೊಡದಿರುವುದೇ ಕಿರುತೆರೆಯ ಹಾಸ್ಯ ಚಕ್ರವರ್ತಿ ಜಸ್ಪಾಲ್ ಸಾವಿಗೆ ಕಾರಣವಾಗಿದೆ ಎಂದು ವೈದ್ಯರು ವರದಿ ಮಾಡಿದ್ದಾರೆ.

ಅಕ್ಟೋಬರ್ 25ರಂದು ಮಧ್ಯರಾತ್ರಿ ನಡೆದ ಕಾರು ಅಪಘಾತವೊಂದರಲ್ಲಿ ಜಸ್ಪಾಲ್ ಕೊನೆಯುಸಿರೆಳೆದಿದ್ದರು. ಪಂಜಾಬಿ ಚಿತ್ರ 'ಪವರ್‌ಕಟ್' ಬಗ್ಗೆ ಪ್ರಚಾರ ನಡೆಸಲು ಹೋಗುತ್ತಿದ್ದ ವೇಳೆ ಜಲಂಧರ್ ಜಿಲ್ಲೆಯ ಶಾಹಕೋಟ್ ಸಮೀಪದ ನಾಕೋಡರ್ ಸಮೀಪ ರಸ್ತೆ ಬದಿಯ ಮರಕ್ಕೆ ನಸುಕಿನ 1.30ರ ಸುಮಾರಿಗೆ ಕಾರು ಢಿಕ್ಕಿ ಹೊಡೆದು ದುರಂತ ಸಂಭವಿಸಿತ್ತು.

ತಲೆಗೆ ತೀವ್ರ ತರಹದ ಗಾಯಗೊಂಡಿದ್ದ ಭಟ್ಟಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಗಿತ್ತಾದರೂ ಈ ವೇಳೆಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಒಂದು ವೇಳೆ ಕಾರಿನ ರಿಯರ್ ಸೀಟ್‌ನಲ್ಲಿ ಕುಳಿತುಕೊಂಡಿದ್ದ ಭಟ್ಟಿ ಸೀಟ್ ಬೆಲ್ಟ್ ತೊಡುತ್ತಿದ್ದರೆ ಬದುಕಿಳಿಯುವ ಸಾಧ್ಯತೆಗಳು ಹೆಚ್ಚಿದ್ದವು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಅಚ್ಚರಿಯ ಸಂಗತಿಯೆಂದರೆ ಮುಂದಿನ ಸೀಟ್‌ನಲ್ಲಿ ಡ್ರೈವಿಂಗ್ ಮಾಡುತ್ತಿದ್ದ ಜಸ್ಪಾಲ್ ಪುತ್ರ ಬಸ್‌ರಾಜ್ ಹಾಗೂ ನಾಯಕಿ ಸುರೀಲಿ ಗೌತಮ್ ದುರಂತದಿಂದ ಪಾರಾಗಿದ್ದರು. ಮುಂದಿನ ಸೀಟಿನಲ್ಲಿ ಕೂಳಿತಿದ್ದವರು ಸೀಟ್‌ ಬೆಲ್ಟ್ ತೊಟ್ಟಿದ್ದರಿಂದ ಅಪಘಾತದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸೀಟ್ ಬೆಲ್ಟ್ ಧರಿಸುವುದರಿಂತ ಸಡನ್ ಬ್ರೇಕ್ ಅಥವಾ ಅಪಘಾತಗಳಂತಹ ಸಂದರ್ಭದಲ್ಲಿ ಪ್ರಯಾಣಿಕರ ರಕ್ಷಣೆಗೆ ನೆರವಾಗುತ್ತದೆ. ಕಾರುಗಳು ಢಿಕ್ಕಿಯಾದ ಅಥವಾ ಸಡನ್ ಬ್ರೇಕ್ ಹಾಕಿದ ಸಂದರ್ಭದಲ್ಲಿ ಸೀಟ್ ಬೆಲ್ಟ್‌ಗಳು, ವಾಹನದ ಇಂಟಿರಿಯರ್ ಭಾಗಗಳು ಪ್ರಯಾಣಿಕರಿಗೆ ಜೋರಾಗಿ ಪೆಟ್ಟಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಗಾಯಗಳಾಗುವ ಸಾಧ್ಯತೆ ಹಾಗೂ ತೀವ್ರತೆ ತಗ್ಗುತ್ತದೆ. ಹಾಗಾಗಿ ಕಾರಿನಲ್ಲಿ ಸಂಚರಿಸುವ ಸಂದರ್ಭದಲ್ಲಿ ಮುಂಭಾಗದ ಸೇರಿದಂತೆ ಹಿಂಭಾಗದ ಪ್ರಯಾಣಿಕನೂ ಸೀಟ್ ಬೆಲ್ಟ್ ಧರಿಸುವುದು ಅತಿ ಮುಖ್ಯವಾಗಿದೆ.

ಜಸ್ಪಾಲ್ ಸಾವಿಗೆ ಸೀಟ್ ಬೆಲ್ಟ್ ಕಾರಣ!

ಜಸ್ಪಾಲ್ ಸಾವಿಗೆ ಸೀಟ್ ಬೆಲ್ಟ್ ಕಾರಣ!

ಮರಣೋತ್ತರ ವೈದ್ಯಕೀಯ ಪರೀಕ್ಷೆಯಲ್ಲಿ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದ್ದು, ಕಾರಿನ ಸೀಟ್ ಬೆಲ್ಟ್ ತೊಡದಿರುವುದೇ ಕಿರುತೆರೆಯ ಹಾಸ್ಯ ಚಕ್ರವರ್ತಿ ಜಸ್ಪಾಲ್ ಸಾವಿಗೆ ಕಾರಣವಾಗಿದೆ ಎಂದು ವೈದ್ಯರು ವರದಿ ಮಾಡಿದ್ದಾರೆ.

ಜಸ್ಪಾಲ್ ಸಾವಿಗೆ ಸೀಟ್ ಬೆಲ್ಟ್ ಕಾರಣ!

ಜಸ್ಪಾಲ್ ಸಾವಿಗೆ ಸೀಟ್ ಬೆಲ್ಟ್ ಕಾರಣ!

ಅಪಘಾತ ಅಥವಾ ಸಡನ್ ಬ್ರೇಕ್ ಸಂದರ್ಭದಲ್ಲಿ ಪ್ರಯಾಣಿಕನು ಸೀಟ್ ಬೆಲ್ಟ್ ಧರಿಸುವುದು ಅತಿ ಮುಖ್ಯವೆನಿಸುತ್ತದೆ.

ಜಸ್ಪಾಲ್ ಸಾವಿಗೆ ಸೀಟ್ ಬೆಲ್ಟ್ ಕಾರಣ!

ಜಸ್ಪಾಲ್ ಸಾವಿಗೆ ಸೀಟ್ ಬೆಲ್ಟ್ ಕಾರಣ!

ಕಾರುಗಳು ಢಿಕ್ಕಿಯಾದ ಅಥವಾ ಸಡನ್ ಬ್ರೇಕ್ ಹಾಕಿದ ಸಂದರ್ಭದಲ್ಲಿ ಸೀಟ್ ಬೆಲ್ಟ್‌ಗಳು, ವಾಹನದ ಇಂಟಿರಿಯರ್ ಭಾಗಗಳು ಪ್ರಯಾಣಿಕರಿಗೆ ಜೋರಾಗಿ ಪೆಟ್ಟಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಗಾಯಗಳಾಗುವ ಸಾಧ್ಯತೆ ಹಾಗೂ ತೀವ್ರತೆ ತಗ್ಗುತ್ತದೆ.

ಜಸ್ಪಾಲ್ ಸಾವಿಗೆ ಸೀಟ್ ಬೆಲ್ಟ್ ಕಾರಣ!

ಜಸ್ಪಾಲ್ ಸಾವಿಗೆ ಸೀಟ್ ಬೆಲ್ಟ್ ಕಾರಣ!

1980 ಹಾಗೂ 90ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರಗೊಂಡ 'ಉಲ್ಟಾ ಪುಲ್ಟಾ' ಹಾಗೂ 'ಫ್ಲಾಪ್ ಶೋ' ಧಾರಾವಾಹಿಗಳ ಮೂಲಕ ಭಟ್ಟಿ ಮನೆಮಾತಾಗಿದ್ದರು.

ಜಸ್ಪಾಲ್ ಸಾವಿಗೆ ಸೀಟ್ ಬೆಲ್ಟ್ ಕಾರಣ!

ಜಸ್ಪಾಲ್ ಸಾವಿಗೆ ಸೀಟ್ ಬೆಲ್ಟ್ ಕಾರಣ!

ಜಸ್ಪಾಲ್ ದುರಂತ ಸಾವು ಮಗದೊಮ್ಮೆ ವಾಹನಗಳ ಸುರಕ್ಷತೆ ಬಗ್ಗೆ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿವೆ. ಹಾಗಿದ್ದರೂ ಕಾರಿನ ಹಿಂದುಗಡೆ ಕುಳಿತುಕೊಳ್ಳುವ ಪ್ರಯಾಣಿಕನು ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮ ಇನ್ನು ಕಡ್ಡಾಯಗೊಳಿಸದಿರುವುದು ವಿಪರ್ಯಾಸವೇ ಸರಿ.

English summary
Jaspal Bhatti car crash has once again brought to fore the gaping flaw in the motor vehicles safety provisions. Doctors of the Civil Hospital, Jalandhar, who performed Bhatti’s autopsy say the impact of injury could have been less had he fastened his rear seat belt.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more