ಲಿಮೆಟೆಡ್ ಮಾತ್ರ; ಮಾರುತಿ ಎ-ಸ್ಟಾರ್ ಆಕ್ಟಿವ್ ಲಾಂಚ್

By Nagaraja

ಸಣ್ಣ ಕಾರಿನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿರುವ ಮಾರುತಿ ಸುಜುಕಿ ಇಂಡಿಯಾ ಇದೀಗ ಲಿಮಿಟೆಡ್ ಅಡಿಷನ್ ನೂತನ ಎ-ಸ್ಟಾರ್ ಆಕ್ಟಿವ್ ಕಾರನ್ನು ಬಿಡುಗಡೆಗೊಳಿಸಿದೆ. ಆದರೆ ಈ ಟಾಪ್ ಎಂಡ್ ಮಾರುತಿ ಎ-ಸ್ಟಾರ್ ಆಕ್ಟಿವ್ ಕಾರು ಕೇವಲ ಪೆಟ್ರೋಲ್ ವೆರಿಯಂಟ್‌ಗಳಲ್ಲಿ ಮಾತ್ರ ಲಭ್ಯವಿರಲಿದೆ.

ನೂತನ ಲಿಮಿಟೆಡ್ ಅಡಿಷನ್ ಮಾರುತಿ ಎ-ಸ್ಟಾರ್ ಆಕ್ಟಿವ್ ಕಾರು 'ವಿಎಕ್ಸ್‌ಐ' ಹಾಗೂ 'ವಿಎಕ್ಸ್‌ಐ ಆಟೋಮ್ಯಾಟಿಕ್' ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಇದಕ್ಕಾಗಿ ಹೆಚ್ಚುವರಿ 14,990 ರೂಪಾಯಿಗಳನ್ನು ಪಾವತಿಸಬೇಕಾಗಿದೆ.

998ಸಿಸಿ ಕೆ10ಬಿ ಪೆಟ್ರೋಲ್ ಎಂಜಿನ್ 67 ಪಿಸ್ ಉತ್ಪಾದಿಸಲಿದ್ದು, 90 ಎನ್‌ಎಂ ಟರ್ಕ್ಯೂ ಹೊಂದಿರಲಿದೆ. ಹಾಗೆಯೇ ಪ್ರತಿ ಲೀಟರ್‌ಗೆ 19 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಅತಿ ನೂತನ ಕಾಸ್ಮೆಟಿಕ್ ಬದಲಾವಣೆ ಹಾಗೂ ಪರಿಷ್ಕೃತ ಇಂಟಿರಿಯರ್ ವಿನ್ಯಾಸ ಹೆಚ್ಚು ಆಕರ್ಷಣೆಗೆ ಕಾರಣವಾಗಲಿದೆ.

ಹಬ್ಬದ ಸೀಸನ್ ಆಗಿದ್ದರ ಹೊರತಾಗಿಯೂ 2012 ನವೆಂಬರ್ ತಿಂಗಳಲ್ಲಿ ಬಹುತೇಕ ಕಾರು ತಯಾರಕ ಕಂಪನಿಗಳು ಕುಸಿತವನ್ನು ಅನುಭವಿಸಿದ್ದವು. ಈ ಪೈಕಿ ಪೆಟ್ರೋಲ್ ಆವೃತ್ತಿಯ ಕಾರುಗಳಿಗೆ ಭಾರಿ ಹೊಡೆತವುಂಟಾಗಿತ್ತು. ಮತ್ತೊಂದೆಡೆ ಡೀಸೆಲ್ ಕಾರುಗಳ ಬೇಡಿಕೆ ಗಣನೀಯವಾಗಿ ವರ್ಧಿಸಿದ್ದವು.

ಪ್ರಸ್ತುತ 2012 ಅಂತ್ಯಕಾಣುತ್ತಿರುವಂತೆಯೇ ಬಹುತೇಕ ಕಂಪನಿಗಳು ಲಿಮಿಟೆಡ್ ಅಡಿಷನ್ ಕಾರುಗಳನ್ನು ಘೋಷಿಸಲು ಹೊರಟಿದ್ದು, ಹಲವು ವಿಧದ ಆಫರ್‌ಗಳನ್ನು ಮುಂದಿಡುತ್ತಿವೆ. ಮತ್ತೊಂದೆಡೆ ಮುಂದಿನ ವರ್ಷದಿಂದ ಗ್ರಾಹಕರನ್ನು ಬೆಲೆಬೇರಿಕೆ ಬಿಸಿ ಕೂಡಾ ತಟ್ಟಲಿದೆ.

ಟಾರ್ಗೆಟ್: ಯುವ ಜನಾಂಗ

ಟಾರ್ಗೆಟ್: ಯುವ ಜನಾಂಗ

ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿಯಿರಿಸಿಕೊಂಡು ಮಾರುತಿ ಸುಜುಕಿ ಇಂಡಿಯಾ ಎ-ಸ್ಟಾರ್ ಆಕ್ಟಿವ್ ಕಾರುಗಳನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಈ ಮೂಲಕ ಮಾರುಕಟ್ಟೆಗೆ ಹೆಚ್ಚು ಸ್ಪಂದನ ಹಾಗೂ ಸಂಭ್ರಮವನ್ನು ತರಲು ಗುರಿಯಿರಿಸಿಕೊಂಡಿದೆ.

ವ್ಯಕ್ತಿತ್ವಕ್ಕೆ ಪೂರಕ

ವ್ಯಕ್ತಿತ್ವಕ್ಕೆ ಪೂರಕ

ಸರ್ವೋಚ್ಚ ಆರಾಮ, ಶೈಲಿ ಹಾಗೂ ಉಪಯೋಗಗಳಂತಹ ಅತಿ ನೂತನ ಸೌಲಭ್ಯಗಳು

ಯುವ ಗ್ರಾಹಕರ ವ್ಯಕಿತ್ವಕ್ಕೆ ಪೂರಕವಾಗಿರಲಿದೆ.

ಸ್ಪೋರ್ಟಿ ಪ್ಯಾಕೇಜ್

ಸ್ಪೋರ್ಟಿ ಪ್ಯಾಕೇಜ್

ಎಕ್ಸ್‌ಟೀರಿಯರ್ ಕಾಸ್ಮೆಟಿಕ್ ಬದಲಾವಣೆ ಹಾಗೂ ಪರಿಷ್ಕೃತ ಇಂಟಿರಿಯರ್ ಹೊಸ ವಿನ್ಯಾಸಕ್ಕೆ ಕಾರಣವಾಗಿದೆ. ಅಲ್ಲದೆ ಚಾಲಕರಿಗೆ ಟ್ರೆಂಡಿ ಹಾಗೂ ಸ್ಪೋರ್ಟಿ ಪ್ಯಾಕೇಜ್ ಒದಗಿಸುತ್ತಿದೆ.

ಸ್ಫೋರ್ಟಿ ಲುಕ್

ಸ್ಫೋರ್ಟಿ ಲುಕ್

ಎರಡು ಬದಿಯ ಬಾಡಿ ಗ್ರಾಫಿಕ್ಸ್, ಫ್ರಂಟ್, ರಿಯರ್ ಆಂಡ್ ರೂಫ್ ಗ್ರಾಫಿಕ್ಸ್, ಎ-ಸ್ಟಾರ್ ಲೊಗೊ, ರೆಡ್ ORVM, ರೆಡ್ ಸ್ಪಾಯ್ಲರ್, ರೆಡ್ ಬಂಪರ್, ಬಿ ಪಿಲ್ಲರ್‌ನಲ್ಲಿ ಬೋಲ್ಡ್ ಬ್ಯಾಕ್ ಔಟ್ ಫಿಲ್ಮ್, ಬ್ರೈಟ್ ರೆಡ್ ಫಾಗ್ ಲ್ಯಾಂಪೊವರ್ ಪ್ಲೇಟ್ ಹೆಚ್ಚು ಸ್ಪೋರ್ಟಿ ಲುಕ್‌ಗೆ ಕಾರಣವಾಗಲಿದೆ.

ಸ್ಟೈಲಿಷ್ ಕ್ಯಾಬಿನ್

ಸ್ಟೈಲಿಷ್ ಕ್ಯಾಬಿನ್

ಕ್ಯಾಬಿನ್ ಪ್ರದೇಶದಲ್ಲಿ ನೂತನ ಸ್ಟೈಲಿಷ್ ಸೀಟ್ ಕವರ್, ಸ್ಲೀಕ್ ಸ್ಟೀರಿಂಗ್ ವೀಲ್ ಕವರ್, ಕ್ಲಾಸಿ ಪ್ಲೋರ್ ಮ್ಯಾಟ್ಸ್, ಹ್ಯಾಂಡಿ ರಿಯರ್ ಪಾರ್ಸೆಲ್ ಟ್ರೇ, ಡೋರ್ ಸಿಲ್ ಗಾರ್ಡ್ ಮತ್ತು ಕೀಲೆಸ್ ಸೆಕ್ಯೂರಿಟಿ ಸಿಸ್ಟಂ ಹೊಂದಿರಲಿದೆ.

14 ಫೀಚರ್ಸ್

14 ಫೀಚರ್ಸ್

ಮೇಲೆ ಕೊಡಲಾದ ಈ ಎಲ್ಲ 14 ನೂತನ ಫೀಚರ್ಸ್‌ಗಳಿಗಾಗಿ ಗ್ರಾಹಕನು ಹೆಚ್ಚುವರಿ 14,990 ರುಪಾಯಿಗಳನ್ನು ಪಾವತಿಸಬೇಕಾಗಿದೆ.

ಪ್ರಶಸ್ತಿ ಪುರಸ್ಕಾರ

ಪ್ರಶಸ್ತಿ ಪುರಸ್ಕಾರ

ಮಾರುತಿ ಸುಜುಕಿ ಎ-ಸ್ಟಾರ್ ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಮುಂಚೂಣಿಯ ಆಟೋ ನಿಯತಕಾಲಿಕರಾದ ಟಾಪ್‌ಗೇರ್, ಜಿಗ್‌ವೀಲ್ಸ್ ಹಾಗೂ ಆಟೋಕಾರುಗಳಿಂದ 'ವರ್ಷದ ಕಾರೆಂಬ' ಹೆಗ್ಗಳಿಕೆಗೂ ಪಾತ್ರವಾಗಿದೆ. ಅಲ್ಲದೆ ಗ್ಲೋಬಲ್ ಗ್ರೀನ್ ಚಾಲೆಂಜ್ ಆಸ್ಟ್ರೇಲಿಯಾದಿಂದ 'ಹೆಚ್ಚು ಇಂಧನ ದಕ್ಷತೆ ಹೊಂದಿರುವ ಕಾರು' ಎಂಬ ಗೌರವಕ್ಕೂ ಪಾತ್ರವಾಗಿದೆ.

ಎ-ಸ್ಟಾರ್ ರಫ್ತು

ಎ-ಸ್ಟಾರ್ ರಫ್ತು

ಯುರೋಪ್‌ ಖಂಡದ ಜನಪ್ರಿಯ ಮಾಡೆಲ್ ಆಗಿರುವ ಎ-ಸ್ಟಾರ್ ಹಾಲೆಂಡ್, ಇಟಲಿ, ಬ್ರಿಟನ್, ಸ್ಪೇನ್ ಹಾಗೂ ಜರ್ಮನಿಯಲ್ಲಿ ಮನ್ನಣೆಗೆ ಪಾತ್ರವಾಗಿದೆ. ಅಲ್ಲದೆ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದಲೂ ಉತ್ತಮ ಇಂಧನ ದಕ್ಷತೆ ಶಭಾಷ್‌ಗಿರಿ ಗಿಟ್ಟಿಸಿಕೊಂಡಿರುವ ಎ-ಸ್ಟಾರ್ 130 ವೆರಿಯಂಟ್‌ಗಳಲ್ಲಿ ರಫ್ತಾಗಿದೆ.

ದರ ಮಾಹಿತಿ

ದರ ಮಾಹಿತಿ

ಮಾರುತಿ ಸುಜುಕಿ ಎ-ಸ್ಟಾರ್ ಕಾರಿನ ವಿಎಕ್‌ಐ ಹಾಗೂ ವಿಎಕ್ಸ್‌ಐ ಆಟೋಮ್ಯಾಟಿಕ್ ಕಾರುಗಳ ಎಕ್ಸ್ ಶೋ ರೂಂ ಬೆಲೆ 4 ಲಕ್ಷ ಅಸುಪಾಸಿನಲ್ಲಿದೆ. ಅಲ್ಲದೆ ಈ ಸ್ಪೆಷಲ್ ಅಡಿಷನ್‌ಗಳಿಗಾಗಿ ಹೆಚ್ಚುವರಿ 14 ಸಾವಿರ ಪಾವತಿಸಬೇಕಾಗಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

67 ಪಿಎಸ್ 1 ಲೀಟರ್ ಕೆ10ಬಿ ಪೆಟ್ರೋಲ್ ಮೋಟಾರ್‌ನಿಂದ ಚಾಲನೆಯಾಗಲಿರುವ ಮಾರುತಿ ಸುಜುಕಿ ಎ-ಸ್ಟಾರ್ ಕಾರು ಐದು ಸ್ಪೇಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ.

Most Read Articles

Kannada
English summary
Maruti Suzuki India Limited, has introduced limited edition of A-Star, christened as A-Star Aktiv. The limited edition A-Star Aktiv is available in Vxi & Vxi AT variants.
Story first published: Monday, December 10, 2012, 17:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X