ಮಹೀಂದ್ರ ಎಸಿ ಥಾರ್ ಜೀಪ್ ರಸ್ತೆಗೆ, ದರ 6.75 ಲಕ್ಷ

Posted By:

ಮುಂಬೈ, ಮೇ 17: ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ನೂತನ ಏರ್ ಕಂಡಿಷನ್ ಆವೃತ್ತಿಯ ನಾಲ್ಕು ವೀಲ್ ಡ್ರೈವ್ ಸಾಮರ್ಥ್ಯದ ಥಾರ್ ಜೀಪನ್ನು ಪರಿಚಯಿಸಿದೆ. ಇದರ ಬೇಸ್ ಆವೃತ್ತಿ ದರ ಸುಮಾರು 6.77 ಲಕ್ಷ ರುಪಾಯಿ.

ಇಲ್ಲಿವರೆಗೆ ಕಂಪನಿಯು ಆಫ್ ರೋಡ್ ಜೀಪಿಗೆ ಏರ್ ಕಂಡಿಷನ್ ಸೌಲಭ್ಯ ನೀಡಿರಲಿಲ್ಲ. ಆದರೆ ಹೆಚ್ಚಿನ ಗ್ರಾಹಕರ ಬಹುಬೇಡಿಕೆಗೆ ಮಣಿದು ಕೊನೆಗೂ ಎಸಿ ಅಳವಡಿಸಿದೆ. ಈ ಜೀಪಿಗೆ ಏರ್ ಕಂಡಿಷನ್ ಇದ್ರೆ ಹೆಚ್ಚು ಆರಾಮದಾಯಕವೆಂಬ ಗ್ರಾಹಕರ ಬೇಡಿಕೆಗೆ ತಕ್ಕಂತೆ ನೂತನ ಆವೃತ್ತಿ ಹೊರತಂದಿರುವುದಾಗಿ ಕಂಪನಿಯ ವಾಹನ ವಿಭಾಗದ ಉಪಾಧ್ಯಕ್ಷರಾದ ವಿವೇಕ್ ನಾಯರ್ ಹೇಳಿದ್ದಾರೆ.

ನೂತನ ಏರ್ ಕಂಡಿಷನ್ ಥಾರ್ ಕಾರು ಭಾರತ್ ಸ್ಟೇಜ್ ಇಂಗಾಲ ಹೊರಸೂಸುವಿಕೆ ಮಾನದಂಡ(ಬಿಎಸ್-4)ಕ್ಕೆ ಪೂರಕವಾಗಿದೆ ಎಂದು ಕಂಪ0ನಿ ಹೇಳಿದೆ. ಕಂಪನಿಯ ಎರಡನೇ ಸುತ್ತಿನ ಮಹೀಂದ್ರ ಅಡ್ವೆಂಚರ್ ಶೀಘ್ರದಲ್ಲಿ ಆರಂಭವಾಗುವ ಸೂಚನೆಯನ್ನು ಅವರು ನೀಡಿದ್ದಾರೆ.

ನೋಡಲು ಜೀಪಿನಂತೆ ಕಾಣುವ ಥಾರ್ ಎಸ್‌ಯುವಿ ರಸ್ತೆಗಿಳಿದಾಗಲೇ ಹೆಚ್ಚು ಪ್ರಶಂಸೆಗೆ ಪಾತ್ರವಾಗಿತ್ತು. ಕಚ್ಚಾ ರಸ್ತೆ ಮಾತ್ರವಲ್ಲದೇ ಆಫ್ ರೋಡ್‌ನಲ್ಲೂ ನಿರುಮ್ಮಳವಾಗಿ ಸಾಗುವ ಇದರ ಶಕ್ತಿ ಹೆಚ್ಚು ಜನರಿಗೆ ಇಷ್ಟವಾಗಿತ್ತು.

ನೂತನ ಥಾರ್ ಎರಡು ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. 2.5 ಲೀಟರಿನ ಡಿಐ ಟರ್ಬೊ ಡೀಸೆಲ್ ಎಂಜಿನ್ ಮತ್ತು ಶಕ್ತಿಶಾಲಿ, ಸ್ವಚ್ಛ ಸಿಆರ್‌ಡಿಇ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಸಿಆರ್‌ಡಿಒ ಎಂಜಿನ್ 105 ಹಾರ್ಸ್ ಪವರ್ ಮತ್ತು 247ಎನ್ಎಂ ಟಾರ್ಕ್ ಪವರ್ ನೀಡುತ್ತದೆ. 2.5 ಲೀಟರ್‌ನ ಕಾಮನ್ ರೈಲ್ ಟರ್ಬೊ ಡೀಸೆಲ್ ಎಂಜಿನ್ 5 ಸ್ಪೀಡಿನ ಮ್ಯಾನುಯಲ್ ಟ್ರಾನ್ಷ್‌ಮಿಷನ್ ಹೊಂದಿದೆ.

English summary
Mahindra & Mahindra launched air-conditioned Thar. Four-wheel drive jeep Thar base Variant price of Rs 6.75 lakh.
Story first published: Thursday, May 17, 2012, 12:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark