ಮಾರುತಿ 800 ಬದಲಿ ಆವೃತ್ತಿ ಚಿತ್ರ ಲೀಕ್! ಬನ್ನಿನೋಡಿ

Posted By:
ಮಾರುತಿ ಸುಜುಕಿ ಕಂಪನಿಯ ಬಹುನಿರೀಕ್ಷಿತ ಮಾರುತಿ 800 ಬದಲಿ ಆವೃತ್ತಿ "ಆಲ್ಟೊ 800" ಇನ್ನು ಕೆಲವೇ ತಿಂಗಳಲ್ಲಿ ದೇಶದ ರಸ್ತೆಗೆ ಆಗಮಿಸಲಿದೆ. ಇದೀಗ ಈ ಕಾರಿನ ಚಿತ್ರಗಳು ಕನ್ನಡ ಡ್ರೈವ್ ಸ್ಪಾರ್ಕಿಗೆ ಲಭಿಸಿವೆ.

ಇಲ್ಲಿವರೆಗೆ ಮಾರುತಿ ಹೊಸ 800 ಕಾರಿನ ನಿಖರ ಚಿತ್ರಗಳು ಯಾರಿಗೂ ಲಭಿಸಿರಲಿಲ್ಲ. ಹೀಗಾಗಿ ಹೊಸ ಕಾರು ಹಾಗಿರಲಿದೆ, ಹೀಗಿರಲಿದೆ ಎಂದು ಕಲ್ಪಿಸಲಾಗುತ್ತಿತ್ತು. ಅಂದಹಾಗೆ ಈ ಚಿತ್ರಗಳು ಎಲ್ಲಿಂದ ದೊರಕಿದವು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಇದು ಚೀನಾದಲ್ಲಿ ಬಹಿರಂಗವಾದ ನೂತನ 800ಸಿಸಿ ಕಾರು. ಇದೇ ಕಾರು ದೇಶದ ರಸ್ತೆಗೂ ಆಗಮಿಸುವ ನಿರೀಕ್ಷೆಯಿದೆ.

ಆದರೆ ಇದೇ ಕಾರು ದೇಶದ ರಸ್ತೆಗೆ ಆಗಮಿಸುವುದೇ? ಅಥವಾ ಇದು ಬೇರೆ ಯಾವುದೋ ಆವೃತ್ತಿಯೋ ಎಂಬ ಚರ್ಚೆ ಈಗ ಆರಂಭವಾಗಿದೆ. ಖಚಿತ ಮಾಹಿತಿಯನ್ನು ಶೀಘ್ರದಲ್ಲಿ ನಿಮ್ಮ ಮುಂದಿಡಲಿದ್ದೇವೆ.

ಚೀನಾದ ಮಾರುತಿ 800 ಆವೃತ್ತಿಯು 1.0 ಲೀಟರಿನ 67 ಅಶ್ವಶಕ್ತಿಯ ಎಂಜಿನ್ ಹೊಂದಿದೆ. ಆದರೆ ದೇಶದ ರಸ್ತೆಗೆ ಆಗಮಿಸುವ ಕಾರು 0.8 ಲೀಟರಿನ, 45 ಅಶ್ವಶಕ್ತಿಯ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ.

ನೂತನ ಆಲ್ಟೊ 800 ಕಾರು ಹ್ಯುಂಡೈ ಇಯಾನ್, ಟಾಟಾ ನ್ಯಾನೊ ಸೇರಿದಂತೆ ಹಲವು ಸಣ್ಣಕಾರುಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಸುಜುಕಿ ಕಂಪನಿಯು ಎರಡು ಸಿಲಿಂಡರಿನ 800ಸಿಸಿ ಡೀಸೆಲ್ ಎಂಜಿನ್ ಕೂಡ ಅಭಿವೃದ್ಧಿಪಡಿಸಲು ಆರಂಭಿಸಿದೆ.

ಎಲ್ಲಾದರೂ ಡೀಸೆಲ್ ಎಂಜಿನ್ ಆಲ್ಟೊ 800 ಬಂದ್ರೆ ಈ ಕಾರಿನ ಬೇಡಿಕೆ ಆಕಾಶಕ್ಕೆ ನೆಗೆಯುವುದು ಖಂಡಿತಾ. ಬನ್ನಿ ನಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿರುವ ಆಲ್ಟೊ 800 ಫೋಟೊಗಳನ್ನು ನೋಡಿರಿ. ನೀವು ಫೇಸ್ಬುಕ್ ಪುಟ ಲೈಕ್ ಮಾಡದಿದ್ದರೆ, ಈಗಲೇ ಲೈಕ್ ಮಾಡಲು ಮರೆಯದಿರಿ.

ಅಂದಹಾಗೆ ನಿಮಗೆ ಹೊಸ ಮಾರುತಿ ಆಲ್ಟೊ 800 ಕಾರಿನ ವಿನ್ಯಾಸ ಇಷ್ಟವಾಯಿತೇ? ನಮ್ಮೊಂದಿಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

English summary
These are first ever clear images of the New Maruti Suzuki Alto / Maruti 800. The images have been spied in China however we expect the similar models to be launched in India this Diwali.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark