ಮಾರುತಿ ಸುಜುಕಿ ನೌಕರರ ವೇತನ ಶೇ. 75ರಷ್ಟು ಹೆಚ್ಚಳ

ನವದೆಹಲಿ, ಸೆ 26: ಮಾರುತಿ ಸುಜುಕಿ ಕಂಪನಿಯು ತನ್ನ 30 ವರ್ಷಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಗುರ್ ಗಾಂವ್ ಘಟಕದ ನೌಕರರ ವೇತನವನ್ನು ಶೇಕಡ 75ರಷ್ಟು ಹೆಚ್ಚಿಸುವುದಾಗಿ ಪ್ರಕಟಿಸಿದೆ. ದೇಶದ ತಯಾರಿಕಾ ವಲಯದಲ್ಲಿ ಇದು ಪ್ರಪ್ರಥಮ ಅತ್ಯಧಿಕ ವೇತನ ಹೆಚ್ಚಳವಾಗಲಿದೆ.

ವೇತನ ಹೆಚ್ಚಳದ ನಂತರ 14 ಸಾವಿರ ರು. ಸಂಬಳ ಪಡೆಯುತ್ತಿದ್ದ ಮಾರುತಿ ನೌಕರರ ವೇತನ 22 ಸಾವಿರ ರು.ಗೆ ತಲುಪಲಿದೆ. ಮಾರುತಿ ಸುಜುಕಿ ನೌಕರರ ಸರಾಸರಿ ವೇತನ 18 ಸಾವಿರ ರು.ಗೆ ತಲುಪಲಿದೆ ಎಂದು ಮೂಲಗಳು ಹೇಳಿವೆ.

ಕೇವಲ ವೇತನ ಹೆಚ್ಚಳ ಮಾತ್ರವಲ್ಲದೇ ನೌಕರರಿಗೆ ಹಲವು ಹೆಚ್ಚುವರಿ ಸೌಲಭ್ಯಗಳನ್ನೂ ಕಂಪನಿ ನೀಡಲಿದೆ. ಬಡ್ಡಿರಹಿತ ಸಾಲ, ತಾಂತ್ರಿಕ ಸಿಬ್ಬಂದಿಗಳ ಪ್ರೊಬೆಷನರಿ ಅವಧಿ ಕಡಿತ, ವೈದ್ಯಕೀಯ ಸೌಲಭ್ಯ ಹೆಚ್ಚಳ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ನೌಕರರು ಪಡೆಯಲಿದ್ದಾರೆ.

ಮಾರುತಿ ಸುಜುಕಿಯ 30 ವರ್ಷದ ಇತಿಹಾಸದಲ್ಲಿಯೇ ಇದು ಅತ್ಯಧಿಕ ವೇತನ ಹೆಚ್ಚಳವಾಗಿದೆ. 2009ರಲ್ಲಿ ಕಂಪನಿಯು ನೌಕರರ ವೇತನವನ್ನು ಕೇವಲ ಶೇಕಡ 6ರಷ್ಟು ಹೆಚ್ಚಿಸಿತ್ತು.

ನೌಕರರು ಮತ್ತು ಆಡಳಿತ ಮಂಡಳಿಯ ಕಿತ್ತಾಟವು ನೂತನ ವೇತನ ಹೆಚ್ಚಳದಿಂದ ಕಡಿಮೆಯಾಗುವ ನಿರೀಕ್ಷೆಯಿದೆ. ಒಂದು ವರ್ಷದಲ್ಲಿ ಕಂಪನಿಯು ನಾಲ್ಕು ಪ್ರತಿಭಟನೆಗಳನ್ನು ಕಂಡಿದ್ದು, ಹಲವು ಕೋಟಿ ರು.ಗಳಷ್ಟು ನಷ್ಟ ಅನುಭವಿಸಿದೆ.

ದೇಶದ ಅತ್ಯಧಿಕ ವೇತನ ಪಡೆಯುವ ಅಗ್ರ ಹತ್ತು ಜನರಲ್ಲಿ ಮಾರುತಿ ಸುಜುಕಿ ವ್ಯವಸ್ಥಾಪಕ ಮತ್ತು ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶಿನೊ ನಕನಿಶಿಯೂ ಇದ್ದಾರೆ. ಇವರ ವಾರ್ಷಿಕ ವೇತನ 28 ಕೋಟಿ 14 ಲಕ್ಷ ರುಪಾಯಿ. ಹೀರೊ ಮೊಟೊಕಾರ್ಪ್ ಸಿಇಒ ಮತ್ತು ಎಂಡಿ ಪವನ್ ಮುಂಜಾಲ್ ವಾರ್ಷಿಕ ವೇತನ 34 ಕೋಟಿ 47 ಲಕ್ಷ ರುಪಾಯಿ ಇದೆ.

Most Read Articles

Kannada
English summary
Leading Indian carmaker Maruti Suzuki has increased the salaries of its workers by as much as 75% per month as per the new wage settlement in Gurgaon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X