ಪ್ರೀಮಿಯಂ ಸೆಗ್ಮೆಂಟ್‌ಗೆ ನೊ ಎಂದ ಮಾರುತಿ

By Nagaraja

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ ಸಣ್ಣ ಕಾರು ವಿಭಾಗದಲ್ಲಿ ಅಧಿಪತ್ಯ ಮುಂದುವರಿಸಿರುವುದು ನಮಗೆಲ್ಲರಿಗೂ ತಿಳಿದ ವಿಚಾರ. ಇದರಂತೆ ಪ್ರೀಮಿಯಂ ಕಾರು ಸೆಗ್ಮೆಂಟ್‌ಗೂ ಪ್ರವೇಶಿಸುವ ಬಗ್ಗೆ ಊಹಾಪೋಹಾಗಳಿದ್ದವು.

ಆದರೆ ಇವೆಲ್ಲವನ್ನು ನಿರಾಕರಿಸಿರುವ ಮಾರುತಿ ಸುಜುಕಿ ಮುಖ್ಯಸ್ಥ ಆರ್‌ಸಿ ಭಾರ್ಗವ, ತಮ್ಮ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸಿದ್ದು ಸಣ್ಣ ಕಾರು ವಿಭಾಗದಲ್ಲೇ ಹೆಚ್ಚಿನ ಗಮನ ಕೇಂದ್ರಿಕರಿಸುವುದಾಗಿ ತಿಳಿಸಿದ್ದಾರೆ.

ದೇಶದಲ್ಲಿ ಸಣ್ಣ ಕಾರು ವಿಭಾಗಕ್ಕೆ ಭಾರಿ ಬೇಡಿಕೆ ಮುಂದುವರಿದಿರುವುದನ್ನು ಗಮನಿಸಿರುವ ಮಾರುತಿ ಇದನ್ನೇ ಮುಂದುವರಿಸಲು ಯೋಜನೆ ಹೊಂದಿದೆ. ಅಲ್ಲದೆ ಕಿಜಾಶಿ ಪ್ರೀಮಿಯಂ ಸೆಡಾನ್ ಕಾರುಗಳಿಗೂ ಯಾವುದೇ ಉತ್ತಮ ಪ್ರತಿಕ್ರಿಯೆ ಕಂಡುಬಂದಿಲ್ಲ.

ಸಣ್ಣ ಕಾರು ವಿಭಾಗದಲ್ಲಿ ಭಾರತ ಸೇರಿದಂತೆ ವಿದೇಶದಲ್ಲೂ ಮಾರುತಿ ಸುಜುಕಿ ಉತ್ತಮ ಮಾರುಕಟ್ಟೆಯನ್ನು ಕಾಯ್ದುಕೊಂಡಿದೆ. ಇದರ ನೆಚ್ಚಿನ ಆಲ್ಟೊ ಪರಿಷ್ಕೃತ ಈಗಾಗಲೇ ದೇಶದಲ್ಲಿ ಭಾರಿ ಜನಪ್ರಿಯತೆಗೆ ಕಾರಣವಾಗಿದೆ.

ಪ್ರಸ್ತುತ ಏಷಿಯಾ ಹಾಗೂ ಆಫ್ರಿಕಾ ಖಂಡಗಳಲ್ಲೂ ಕಡಿಮೆ ಬಜೆಟ್ ಸಣ್ಣ ಕಾರುಗಳನ್ನು ಲಾಂಚ್ ಮಾಡಲು ಮಾರುತಿ ಗುರಿ ಹೊಂದಿದೆ.

Most Read Articles

Kannada
English summary
Maruti Suzuki Will Only Build Small Cars Maruti Suzuki, the leading Indian carmaker has stated that it will continue to focus on small cars and will not enter the premium car segment any time soon
Story first published: Friday, December 28, 2012, 16:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X