ಮಾರುತಿಯಿಂದ ಬರಲಿದೆ ಸಣ್ಣ ಡೀಸೆಲ್ ಕಾರು?

Written By:

ವಿಶೇಷವಾಗಿಯೂ ಭಾರತೀಯ ಗ್ರಾಹಕರಿಗಾಗಿ ಮಾರುತಿ ಸುಜುಕಿ ನೂತನ ಡೀಸೆಲ್ ಕಾರು ತಯಾರಿಸುವ ಇರಾದೆಯಲ್ಲಿದೆ. ಈ ಹಿಂದೆ ಡೀಸೆಲ್ ಆವೃತ್ತಿಗಳ ಕೊರತೆಯಿಂದಾಗಿ ಭಾರತದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಶೇರುಗಳು ಹಿನ್ನಡೆ ಅನುಭವಿಸಿರುವುದನ್ನು ನಾವು ಗಮನಿಸಿರಬಹುದು. ಆದರೆ ಆ ಬಳಿಕ ಸ್ವಿಫ್ಟ್, ರಿಟ್ಸ್ ಹಾಗೂ ಸ್ವಿಫ್ಟ್ ಡಿಜೈರ್ ಡೀಸೆಲ್ ಆವೃತ್ತಿಯಗಳ ಮೂಲಕ ಮಾರುಕಟ್ಟೆಯಲ್ಲಿ ಭರ್ಜರಿ ಬೇಟೆ ನಡೆಸಿತ್ತು.

ಮಾರುತಿಯ ಎಲ್ಲ ಡೀಸೆಲ್ ಕಾರುಗಳು ಕಾಂಪಾಕ್ಟ್ ಕಾರು ಸೆಗ್ಮೆಂಟ್‌ನಿಂದಲೇ ಆರಂಭವಾಗುತ್ತಿದೆ. ಅಂದರೆ ಮಾರುತಿ ಸುಜುಕಿಯಿಂದ ಯಾವುದೇ ಸಣ್ಣ ಡೀಸೆಲ್ ಕಾರುಗಳು ಬಂದಿರಲಿಲ್ಲ. ಆದರೆ ಇದೀಗ ಫಿಯೆಟ್‌ನಿಂದ ಅಭಿವೃದ್ಧಿಪಡಿಸಲಾದ ನೂತನ ಡೀಸೆಲ್ ಎಂಜಿನ್ ಬಳಸಿ ಸಣ್ಣ ಕಾರು ಬಿಡುಗಡೆ ಮಾಡಲು ಯೋಜನೆ ಹೊಂದಿದೆ.

ಮಾರುತಿಯಿಂದ ಬರಲಿದೆ ಸಣ್ಣ ಡೀಸೆಲ್ ಕಾರು?

ವಿಶೇಷವಾಗಿಯೂ ಮಾರುತಿ ಸುಜುಕಿ ಬೇಡಿಕೆಗಳನ್ನು ಪೂರೈಸಲು ಕಾರ್ಯಪ್ರವೃತವಾಗಿರುವ ಫಿಯೆಟ್, 1000ಸಿಸಿ ಡೀಸೆಲ್ ಎಂಜಿನ್ ತಯಾರಿಸುವ ಸನ್ನದ್ಧದಲ್ಲಿದೆ.

ಮಾರುತಿಯಿಂದ ಬರಲಿದೆ ಸಣ್ಣ ಡೀಸೆಲ್ ಕಾರು?

ಮಾರುತಿ ಸುಜುಕಿಯ ಸಣ್ಣ ಕಾರು ಸೆಗ್ಮೆಂಟ್, ವಾಗನ್ ಆರ್ ಮಾದರಿಯಲ್ಲಿ ಇಂತಹ ಎಂಜಿನ್‌ಗಳನ್ನು ಆಳವಡಿಸುವ ಸಾಧ್ಯತೆಯಿದೆ.

ಮಾರುತಿಯಿಂದ ಬರಲಿದೆ ಸಣ್ಣ ಡೀಸೆಲ್ ಕಾರು?

ಒಂದು ವೇಳೆ ವಾಗನ್ ಆರ್‌ಗೆ ಡೀಸೆಲ್ ಎಂಜಿನ್ ಆಳವಡಿಸಿದ್ದಲ್ಲಿ ಅದು ಮಾರುತಿ ಸುಜುಕಿ ಮತ್ತವರ ಗ್ರಾಹಕರಿಗೆ ಅತ್ಯುತ್ತಮವೆನಿಸಲಿದೆ. ಯಾಕೆಂದರೆ ಸಣ್ಣ ಕಾರುಗಳಿಗೆ ಸಮರ್ಥವೆನಿಸಿರುವ ವಾಗನ್ ಆರ್ ಉತ್ತಮ ಸ್ಥಳಾವಕಾಶ, ಆಗೈಲ್ ನಿರ್ವಹಣೆ ಹಾಗೂ ಕಡಿಮೆ ನಿರ್ವಹಣೆ ವೆಚ್ಚವನ್ನು ಹೊಂದಿದೆ.

ಮಾರುತಿಯಿಂದ ಬರಲಿದೆ ಸಣ್ಣ ಡೀಸೆಲ್ ಕಾರು?

ಒಂದು ವೇಳೆ ಅಗ್ಗದ ಡೀಸೆಲ್ ಎಂಜಿನ್ ಜತೆ ಉತ್ತಮ ಇಂಧನ ದಕ್ಷತೆ ನೀಡುವಲ್ಲಿ ಯಶಸ್ವಿಯಾಗಿದ್ದಲ್ಲಿ ಖಂಡಿತವಾಗಿಯೂ ಈ ನೂತನ ವಾಗನ್ ಆರ್ ಆವಿಷ್ಕಾರ ಮಾರುತಿಯ ಅತಿ ಬೇಡಿಕೆಯ ಕಾರು ಎನಿಸಲಿರುವುದರಲ್ಲಿ ಎರಡು ಮಾತಿಲ್ಲ.

ಮಾರುತಿಯಿಂದ ಬರಲಿದೆ ಸಣ್ಣ ಡೀಸೆಲ್ ಕಾರು?

ಒಂದು ವೇಳೆ ಇದೀಗ ಬಂದಿರುವ ಮಾಹಿತಿಗಳು ನಿಜಾಂಶವಾದ್ದಲ್ಲಿ ಮುಂದಿನ ವರ್ಷದ ಮಧ್ಯಂತರ ಅವಧಿಯಲ್ಲಿ ವಾಗನ್ ಆರ್ ಡೀಸೆಲ್ ಕಾರು ರಸ್ತೆಗೆ ಪ್ರವೇಶಿಸಲಿದೆ.

ಮಾರುತಿಯಿಂದ ಬರಲಿದೆ ಸಣ್ಣ ಡೀಸೆಲ್ ಕಾರು?

ಮೂಲಗಳ ಪ್ರಕಾರ ವಾಗನ್ ಆರ್ ಡೀಸೆಲ್ ಎಂಜಿನ್ ಪ್ರತಿ ಲೀಟರ್‌ಗೆ 25 ಕೀ. ಮೀ. ಮೈಲೇಜ್ ನೀಡಲಿದೆ. ಈ ಮೂಲಕ ಷೆವರ್ಲೆ ಬೀಟ್ ಲಿಸ್ಟ್‌ನಲ್ಲಿ ವಾಗನ್ ಆರ್ ಸೇರಿಕೊಳ್ಳಲಿದೆ. ಪ್ರಸ್ತುತ ಸಣ್ಣ ಕಾರು ಡೀಸೆಲ್ ಎಂಜಿನ್ ಪಟ್ಟಿಯಲ್ಲಿ ಷೆವರ್ಲೆ ಬೀಟ್ ಮಾತ್ರವಿದೆ.

ಮಾರುತಿಯಿಂದ ಬರಲಿದೆ ಸಣ್ಣ ಡೀಸೆಲ್ ಕಾರು?

ಈ ಮೂಲಕ ತಮ್ಮ ಸ್ಪರ್ಧಾಳುಗಳಿಗೆ ಮಾರುತಿ ಸುಜುಕಿ ಪ್ರಬಲ ಪೈಪೋಟಿ ನೀಡಲು ಗುರಿಯಾಗಿರಿಸಿಕೊಂಡಿದೆ. ಏತನ್ಮಧ್ಯೆ ಮಾರುತಿ ಪೆಟ್ರೋಲ್ ಆವೃತ್ತಿಗಳಿಗೂ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.

ಮಾರುತಿಯಿಂದ ಬರಲಿದೆ ಸಣ್ಣ ಡೀಸೆಲ್ ಕಾರು?

ಮಾರುತಿ ಸುಜುಕಿ ಸಣ್ಣ ಕಾರು ಸೆಗ್ಮೆಂಟ್‌ನಲ್ಲಿ 1000ಸಿಸಿ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಅಂತೆಯೇ ಬಹುತೇಕ ಮಾರುತಿ ಸುಜುಕಿ ಆವೃತ್ತಿಗಳು ಡೀಸೆಲ್ ವೆರಿಯಂಟ್‌ಗಳಲ್ಲಿ ಬಂದ್ದಲ್ಲಿ ಯಾವುದೇ ಅಚ್ಚರಿಪಡಬೇಕಾಗಿಲ್ಲ.

ಮಾರುತಿಯಿಂದ ಬರಲಿದೆ ಸಣ್ಣ ಡೀಸೆಲ್ ಕಾರು?

ಮಾರುತಿ ಸುಜುಕಿ ಈಗಾಗಲೇ ಆಲ್ಟೊ ಕೆ10 ಹಾಗೂ ನೂತನ ವಾಗನ್ ಆರ್ ಆವೃತ್ತಿಗಾಗಿ ಫೇಸ್ ಲಿಫ್ಟ್ ಪ್ರಯೋಗಿಸುತ್ತಿದೆ. ಇವೆರಡು ಡೀಸೆಲ್ ಆವೃತ್ತಿಯಲ್ಲಿ ಬಿಡುಗಡೆಯಾದರೆ ಮಾರುಕಟ್ಟೆಯಲ್ಲಿ ದೊಡ್ಡ ಸದ್ದು ಮಾಡಲಿದೆ.

English summary
Maruti Suzuki is slowly picking up speed in developing new diesel cars for the Indian car buyers. Maruti Suzuki decides to use a new diesel engine being developed by Fiat.
Story first published: Saturday, November 17, 2012, 12:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark